ಜಿ7 ಶೃಂಗಸಭೆಯಲ್ಲಿ ಪಿಎಂ ಮೋದಿಯವರು ಒಂದೇ ಸಾರಿ-ಬಳಸುವ ಪ್ಲಾಸ್ಟಿಕ್ ಅನ್ನು ತೆಗೆದುಹಾಕುವ ಭಾರತದ ದೊಡ್ಡ ಪ್ರಮಾಣದ ಪ್ರಯತ್ನಗಳನ್ನು ಎತ್ತಿ ತೋರಿಸಿದ್ದಾರೆ

ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆ ಮತ್ತು ಸರಿಯಾದ ನಿರ್ವಹಣೆಯಾಗದ ಕಾರಣ, ಭಾರತ ಸೇರಿದಂತೆ ವಿಶ್ವದಾದ್ಯಂತ ಅನೇಕ ರಾಷ್ಟ್ರಗಳು ಒಂದೇ ಸಾರಿ-ಬಳಸುವ ಪ್ಲಾಸ್ಟಿಕ್ ಅನ್ನು ತೊಡೆದುಹಾಕುವ ಹೊಣೆ ಹೊತ್ತಿವೆ.

ಜಿ7 ಶೃಂಗಸಭೆಯಲ್ಲಿ ಪಿಎಂ ಮೋದಿಯವರು ಒಂದೇ ಸಾರಿ-ಬಳಸುವ ಪ್ಲಾಸ್ಟಿಕ್ ಅನ್ನು ತೆಗೆದುಹಾಕುವ ಭಾರತದ ದೊಡ್ಡ ಪ್ರಮಾಣದ ಪ್ರಯತ್ನಗಳನ್ನು ಎತ್ತಿ ತೋರಿಸಿದ್ದಾರೆ

Tuesday August 27, 2019,

2 min Read

ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ಸಾರಿ-ಬಳಸುವ ಪ್ಲಾಸ್ಟಿಕ್ ತೆಗೆದುಹಾಕುವುದರ ಜೊತೆ, ನೀರಿನ ಸಂರಕ್ಷಣೆಯ ಬಗ್ಗೆ, ಸೌರಶಕ್ತಿಯನ್ನು ಉತ್ಪಾದಿಸುದರ ಬಗ್ಗೆ ಮತ್ತು ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನು ಭವಿಷ್ಯದಲ್ಲಿ ರಕ್ಷಿಸುವ ನಿಟ್ಟಿನಲ್ಲಿ ಭಾರತದ ದೊಡ್ಡ ಪ್ರಮಾಣದ ಪ್ರಯತ್ನಗಳ ಮೇಲೆ ಜಿ7 ಪರಿಸರದ ಶೃಂಗಸಭೆಯ ಅಧಿವೇಶನದಲ್ಲಿ ಮಾತನಾಡಿದ್ದಾರೆ.


ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ವಿಶೇಷ ಆಹ್ವಾನದ ಮೇರೆಗೆ ಮೋದಿಯವರು ಫ್ರೆಂಚ್ ಪಟ್ಟಣದ ಬಿಯರಿಟ್ಜ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.


ನರೇಂದ್ರ ಮೋದಿ

"ಪ್ರಧಾನಮಂತ್ರಿ @ನರೇಂದ್ರಮೋದಿ ಯವರು ಪರಿಸರದ ಜೀವವೈವಿಧ್ಯ, ಸಾಗರಗಳು, ಹವಾಮಾನದ ಕುರಿತ #ಜಿ7 ಬಿಯರಿಟ್ಜ್ ಶೃಂಗಸಭೆಯ ಅಧಿವೇಶನದಲ್ಲಿ ಭಾಗವಹಿಸಿದಾಗ ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತದ ಬದ್ಧತೆಯನ್ನು ಒತ್ತಿಹೇಳುತ್ತಾ ಜೀವವೈವಿಧ್ಯತೆ, ಹವಾಮಾನ ಬದಲಾವಣೆ, ನೀರಿನ ಒತ್ತಡ ಮತ್ತು ಸಮುದ್ರ ಮಾಲಿನ್ಯವನ್ನು ಕಡಿಮೆ ಮಾಡಲು ಭಾರತದ ಕೊಡುಗೆಯ ಬಗ್ಗೆ ಮಾತನಾಡಿದ್ದಾರೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.


ಕಳೆದ ವಾರ ಪ್ಯಾರಿಸ್‌ನ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಮೋದಿಯವರು, ಮುಂದಿನ ಒಂದೂವರೆ ವರ್ಷದಲ್ಲಿ 2030 ಕ್ಕೆ ಸಿಓಪಿ 21(ಕಾನ್ಫರನ್ಸ್ ಆಫ್ ಪಾರ್ಟಿಸ್) ನಿಗದಿಪಡಿಸಿರುವ ಹವಾಮಾನ ಬದಲಾವಣೆಯ ಗುರಿಯನ್ನು ಭಾರತ ಸಾಧಿಸಲಿದೆ ಎಂದು ಹೇಳಿದರು.


ಯುನೈಟೆಡ್ ನೇಷನ್ಸ್ ಫ್ರೇಮ್ ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ (ಯುಎನ್ಎಫ್ಸಿಸಿ) ಪಕ್ಷಗಳ ಸಮ್ಮೇಳನದ (ಸಿಒಪಿ 21) 21 ನೇ ಅಧಿವೇಶನವು ಪ್ಯಾರಿಸ್ ನಲ್ಲಿ ನವೆಂಬರ್ 30 ರಿಂದ ಡಿಸೆಂಬರ್ 12 ರವರೆಗೆ ನಡೆಯಿತು, ಇದರಲ್ಲಿ ಒಟ್ಟು 195 ರಾಷ್ಟ್ರಗಳು ಭಾಗವಹಿಸಿದ್ದವು.


ಪ್ಯಾರಿಸ್ ಒಪ್ಪಂದವನ್ನು ರಾಷ್ಟ್ರಗಳು ಮಾತುಕತೆಯ ಮೂಲಕ ಒಪ್ಪಿಕೊಂಡವು, ಇದರಲ್ಲಿ ಭಾರತವು ತನ್ನ ಜಿಡಿಪಿಯ ಹಸಿರುಮನೆ ಅನಿಲ ಹೊರಸೂಸುವಿಕೆಯ ತೀವ್ರತೆಯನ್ನು 2030 ರ ವೇಳೆಗೆ 2005 ರ ಮಟ್ಟಕ್ಕಿಂತ 33-35 ಪ್ರತಿಶತದಷ್ಟು ಕಡಿಮೆಗೊಳಿಸುವುದು ಸೇರಿದಂತೆ ನಾಲ್ಕು ಬದ್ಧತೆಗಳನ್ನು ನ್ಯಾಷನಲಿ ಡಿಟರಮೈನ್ಡ್ ಕಾಂಟ್ರಿಬ್ಯುಶನ್'ಸ್ ಕೊಡುಗೆಗಳ (ಎನ್‌ಡಿಸಿ) ಅಡಿಯಲ್ಲಿ ಒಪ್ಪಿಕೊಂಡಿತು.


"ಭಾರತದ ಶೇಕಡಾ 40 ರಷ್ಟು ವಿದ್ಯುತ್ ಸಾಮರ್ಥ್ಯವು ಪಳೆಯುಳಿಕೆ ರಹಿತ ಇಂಧನ ಮೂಲಗಳ ಮೇಲೆ ಆಧಾರಿತವಾಗಿದೆ ಮತ್ತು 2030 ರ ವೇಳೆಗೆ ಹೆಚ್ಚುವರಿ ಅರಣ್ಯ ಮತ್ತು ಮರಗಳ ಬೆಳೆಸುವುದರ ಮೂಲಕ 2.5 ರಿಂದ 3 ಬಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳಲು ಸಮಾನವಾದ 'ಕಾರ್ಬನ್ ಸಿಂಕ್' ಅನ್ನು ದೇಶವು ಸೃಷ್ಟಿಸುತ್ತದೆ ಎಂದು ಪ್ರತಿಜ್ಞೆ ಮಾಡಿದೆ."


ಹವಾಮಾನ ಬದಲಾವಣೆಗೆ ಗುರಿಯಾಗುವ ಕ್ಷೇತ್ರಗಳಲ್ಲಿ ವಿಶೇಷವಾಗಿ ಕೃಷಿ, ಜಲ ಸಂಪನ್ಮೂಲಗಳು, ಹಿಮಾಲಯದ ಪ್ರದೇಶಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಆರೋಗ್ಯ ಮತ್ತು ವಿಪತ್ತು ನಿರ್ವಹಣೆಗೆ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಹಣ ಹೂಡಿಕೆಯನ್ನು ಹೆಚ್ಚಿಸುವ ಮೂಲಕ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ದೇಶವು ನಿರ್ಧರಿಸಿದೆ.


ಹವಾಮಾನ ಬದಲಾವಣೆಯ ಕುರಿತಾದ ಪ್ಯಾರಿಸ್ ಒಪ್ಪಂದವನ್ನು ಭಾರತವು 2016 ರಲ್ಲಿ ಅಂಗೀಕರಿಸಿತು, ಈ ಒಪ್ಪಂದಕ್ಕೆ ಸೇರಿದ 62 ನೇ ರಾಷ್ಟ್ರವಾಯಿತು.