ಶೇರ್‌ಇಟ್‌, ಕ್ಸೆಂಡರ್‌ಗೆ ದೇಶಿ ಪರ್ಯಾಯ ಈ ಭಾರತ್‌ಶೇರ್‌ ಆ್ಯಪ್

ಶೇರ್‌ಇಟ್‌, ಕ್ಸೆಂಡರ್‌ ನಂತಹ ಆ್ಯಪ್‌ಗಳಿಗೆ ಪರ್ಯಾಯವಾದ ಭಾರತಶೇರ್‌ ಫೈಲ್‌ ಹಂಚಿಕೊಳ್ಳುವ ಆ್ಯಪ್ ಆಗಿದ್ದು, ಇಂಟರ್ನೆಟ್‌ನ ಅಗತ್ಯವಿಲ್ಲದೆ ಬಳಕೆದಾರರಿಗೆ ಫೈಲ್‌ ಶೇರ್‌ ಮಾಡಲು ಅನುವುಮಾಡಿಕೊಡುತ್ತದೆ.

ಶೇರ್‌ಇಟ್‌, ಕ್ಸೆಂಡರ್‌ಗೆ ದೇಶಿ ಪರ್ಯಾಯ ಈ ಭಾರತ್‌ಶೇರ್‌ ಆ್ಯಪ್

Thursday August 06, 2020,

1 min Read

ಬಳಕೆದಾರರ ದತ್ತಾಂಶದ ರಕ್ಷಣಾ ದೃಷ್ಠಿಯಿಂದ ಭಾರತ ಸರ್ಕಾರ ಚೀನಿ ಆ್ಯಪ್ಗಳ ಮೇಲೆ ನಿಷೇಧ ಹೇರುತ್ತಿರುವುದು ಭಾರತದಲ್ಲಿ ಸಿದ್ಧವಾದ ಆ್ಯಪ್ಗಳಿಗೆ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದ ಕನಸಿಗೆ ಈ ನಡೆ ಪೂರಕವಾಗಿ ಪರಿಣಮಿಸಲಿದೆ.


ಟಿಕ್‌ಟಾಕ್‌, ವೀಚಾಟ್‌, ಹೆಲೋ ಮತ್ತು ಯುಸಿ ಬ್ರೌಸರ್‌ ನಂತಹ ಆ್ಯಪ್ಗಳಿಗೆ ಮೇಡ್‌ ಇನ್‌ ಇಂಡಿಯಾ ಆ್ಯಪ್ಗಳು ಪರ್ಯಾಯವಾಗುತ್ತಿದ್ದು, ಅವುಗಳ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ.


ಅಂತಹ ಆ್ಯಪ್ಗಳ ಪಟ್ಟಿಯಲ್ಲಿದೆ ಶೇರ್‌ಇಟ್‌, ಕ್ಸೆಂಡರ್‌ ನಂತಹ ಆ್ಯಪ್‌ಗಳಿಗೆ ಪರ್ಯಾಯವಾದ ಭಾರತಶೇರ್‌, ಇದೊಂದು ಫೈಲ್‌ ಹಂಚಿಕೊಳ್ಳುವ ಆ್ಯಪ್ ಆಗಿದ್ದು, ಇಂಟರ್ನೆಟ್‌ನ ಅಗತ್ಯವಿಲ್ಲದೆ ಬಳಕೆದಾರರಿಗೆ ಫೈಲ್‌ ಶೇರ್‌ ಮಾಡಲು ಅನುವುಮಾಡಿಕೊಡುತ್ತದೆ.




ಭಾರತ್‌ಶೇರ್‌ ಹೇಗೆ ಕೆಲಸ ಮಾಡುತ್ತೆ?

zಪ್ರಸ್ತುತ ಅಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸುವ ಆ್ಯಪ್ ಕೇವಲ 6 ಎಮ್‌.ಬಿ. ಗಾತ್ರಹೊಂದಿದ್ದು, ದೊಡ್ಡ ಗಾತ್ರದ ಬೃಹತ್‌ ಫೈಲ್‌ಗಳನ್ನು ಹಂಚಿಕೊಳ್ಳಲು ಸಹಾಯಮಾಡುತ್ತದೆ.


ಫೈಲ್‌, ಫೋಟೊ ಮತ್ತು ವಿಡಿಯೋಗಳ ವರ್ಗಾವಣೆಗೆ ವೈಫೈ ಆಧರಿಸಿರುವ ಭಾರತ್‌ಶೇರ್‌ “ಇದು ಬ್ಲೂಟೂತ್‌ ತಂತ್ರಜ್ಞಾನಕ್ಕಿಂತ 200 ಪಟ್ಟು ವೇಗವಾಗಿದೆ,” ಎನ್ನುತ್ತದೆ.


ಈ ಕೆಲಸ ಮಾಡುವ ಇತರ ಆ್ಯಪ್‌ಗಳ ನಡುವೆ ಭಾರತ್‌ಶೇರ್‌ ತನ್ನ ಸರಳವಾದ ವಿನ್ಯಾಸ, ವೇಗವಾಗಿ ಫೈಲ್‌ ಹಂಚಿಕೊಳ್ಳುವ ಸಾಮರ್ಥ್ಯ, ಸುಲಭವಾದ ಬಳಕೆ ಮತ್ತು ವಿಷೇಶವಾಗಿ ತನ್ನಿಂದ ಕಳುಹಿಸಿದ ಯಾವ ಡೇಟಾವನ್ನು ಸಂಗ್ರಹಿಸದೆ ಕೆಲಸ ಮಾಡುವ ಗೌಪ್ಯತಾ ನೀತಿಗಳಿಂದ ಭಿನ್ನವಾಗಿ ನಿಲ್ಲುತ್ತದೆ.


ಈ ಆ್ಯಪ್‌ ಕನ್ನಡ, ಹಿಂದಿ, ತೆಲಗು, ತಮಿಳು, ಮರಾಠಿ, ಗುಜರಾತಿ, ಪಂಜಾಬಿ, ಬೆಂಗಾಲಿ ಮತ್ತು ಇತರ ಭಾಷೆಗಳಲ್ಲಿ ಲಭ್ಯವಿದೆ.


“ಬಳಕೆದಾರರಿಂದ ನಮಗೆ ಬಂದಿರುವ ಅಭಿಪ್ರಾಯಗಳನ್ನು ನೋಡಿ ಹೇಳಬೇಕೆಂದರೆ ಭಾರತ್‌ಶೇರ್‌ ಪೋನ್‌ಗೆ ಕನೆಕ್ಟ್‌ ಆಗಲು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ,” ಎಂದರು ಭಾರತ್‌ಶೇರ್‌ನ ಸಂಸ್ಥಾಪಕರಾದ ಉತ್ಕರ್ಶ್‌ ರಾಯ್‌.