ಐಐಟಿ ಹೈದರಾಬಾದ್ ತಂಡವು ಹೃದ್ರೋಗಗಳನ್ನು ಆರಂಭದಲ್ಲೇ ಪತ್ತೆಹಚ್ಚುವ ಬಯೋಸೆನ್ಸರ್ ಒಂದನ್ನು ಅಭಿವೃದ್ಧಿಪಡಿಸುತ್ತಿದೆ

ಈ ಸಾಧನಗಳು ಮೈಕ್ರೋಫ್ಲೂಯಿಡ್ ಆಧಾರಿತ ಸೆನ್ಸರ್‌ಗಳಾಗಿದ್ದು ಸಣ್ಣ ಪ್ರಮಾಣದ ದ್ರವಗಳನ್ನು ಒಂದು ಲೀಟರ್ ಚತುರ್ಭುಜ ವ್ಯಾಪ್ತಿಯಲ್ಲಿ ನಿಭಾಯಿಸಬಲ್ಲದು, ಜೀವರಾಸಾಯನಿಕ ಕ್ರಿಯೆಯನ್ನು ಆಫ್ಟಿಕಲ್‌ ಅಥವಾ ವಿದ್ಯುತ್ ಸಂಕೇತವಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.

ಐಐಟಿ ಹೈದರಾಬಾದ್ ತಂಡವು ಹೃದ್ರೋಗಗಳನ್ನು ಆರಂಭದಲ್ಲೇ ಪತ್ತೆಹಚ್ಚುವ ಬಯೋಸೆನ್ಸರ್ ಒಂದನ್ನು ಅಭಿವೃದ್ಧಿಪಡಿಸುತ್ತಿದೆ

Thursday August 22, 2019,

2 min Read

ಭಾರತದಲ್ಲಿ ಆರೋಗ್ಯದ ರಕ್ಷಣೆ ಯಾವಾಗಲೂ ಕಳವಳಕಾರಿ ವಿಷಯವೇ ಆಗಿದೆ. ಅಂದಾಜು 1.3 ಶತಕೋಟಿ ಜನಸಂಖ್ಯೆ ಹೊಂದಿದ್ದು ಮೂಲಭೂತ ಸೇವೆ ಒದಗಿಸುವುವದು ಒಂದು ಸವಾಲಾಗಿದೆ.


ದತ್ತಾಂಶದ ಪ್ರಕಾರ ಭಾರತದಲ್ಲಿ ಹೃದಯಾಘಾತದಿಂದ 2015ರಲ್ಲಿ 2.1 ದಶಲಕ್ಷ ಸಾವು ಸಂಭವಿಸಿದೆ. ಇದರಲ್ಲಿ ಸಿವಿಡಿ ಅಥವಾ ಹೃದಯ ರಕ್ತನಾಳದ ಖಾಯಿಲೆಯು ಜನರಿಗೆ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದ್ದು, ಆರಂಭಿಕ ಹಂತದಲ್ಲಿ ಪತ್ತೆಯಾದರೆ ಅದನ್ನು ಗುಣಪಡಿಸಬಹುದಾಗಿದೆ.


ಸಾಂದರ್ಭಿಕ ಚಿತ್ರ


ಸಮಸ್ಯೆಯನ್ನು ನಿಭಾಯಿಸಲು ಮತ್ತು ಸಿವಿಡಿ ಮತ್ತು ಹೃದಯ ಸಂಬಂಧಿತ ಇತರ ಸಮಸ್ಯೆಗಳ ಆರಂಭಿಕ ಹಂತಗಳನ್ನು ಪರಿಹರಿಸಲು, ಐಐಟಿ ಹೈದರಾಬಾದ್ ಹೆಚ್ಚಿನ ವೇಗ, ಸೂಕ್ಷ್ಮತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಹೃದ್ರೋಗವನ್ನು ಕಂಡುಹಿಡಿಯಲು ಬಯೋಸೆನ್ಸರ್ ಸಾಧನವನ್ನು ಅಭಿವೃದ್ಧಿಪಡಿಸಿದೆ.


ಜಗತ್ತಿನಲ್ಲಿರುವ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಸಂಶೋಧನೆ ನಡೆಸಲಾಯಿತು. ಐಐಟಿ ಹೈದರಾಬಾದ್‌ನ ಬಯೋಮೆಡಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ರೇಣು ಜಾನ್ ನೇತೃತ್ವದಲ್ಲಿ, ಇತರ ರೋಗಗಳ ಪತ್ತೆಗೂ ಸಂಶೋಧನೆಯನ್ನು ವಿಸ್ತರಿಸಬಹುದು.


ಇದನ್ನು ಜೈವಿಕ ಸೆಸ್ಸಾರ್‌ಗಳಲ್ಲಿ ಜೋಡಿಸಲ್ಪಟ್ಟಿರುವ ನ್ಯಾನೋಫಿಲ್ಟರ್‌ಗಳಲ್ಲಿ ಸಂಯೋಜಿಸಲ್ಪಟ್ಟಿರುವ ಬಯೋಮಾರ್ಕರ್‌ ಅಥವಾ ಪ್ರತಿಕಾಯವನ್ನು ಬದಲಿಸುವ ಮೂಲಕ ಮಾಡಬಹುದಾಗಿದೆ.


ಸಂಶೋಧನೆಯ ಕುರಿತು ಮಾತನಾಡಿದ ಪ್ರೊಫೆಸರ್ ರೇಣುರವರು ಹೀಗೆ ಹೇಳುತ್ತಾರೆ,


"ಬಯೋಮಾರ್ಕರ್‌ಗಳು ಆರೋಗ್ಯ ಮತ್ತು ರೋಗಸ್ಥಿತಿಗಳನ್ನು ಪ್ರತಿನಿಧಿಸುವ ಜೈವಿಕ ಅಣುಗಳಾಗಿವೆ. ಅವುಗಳು ಕೆಲವು ಶಾರೀರಿಕ ಪರಿಸ್ಥಿತಿಗಳಿಗೆ ಪ್ರತಿಕ್ರಿಯೆಯಾಗಿ ಬಿಡುಗಡೆಯಾಗುವ ರಾಸಾಯನಿಕಗಳಾಗಿವೆ. ಕಾರ್ಡಿಯಾಕ್‌ ಟ್ರೋಫೋನಿನ್‌ಗಳು ಅಥವಾ ಸಿಟಿಎನ್ಸ್‌ಗಳು ಉದಾಹರಣೆಗೆ, ಇವುಗಳು ಹೃದ್ರೋಗಗಳ ಬಯೋಮಾರ್ಕರ್‌ಗಳಾಗಿದ್ದು ಅವುಗಳು ಸಾಂಪ್ರದಾಯಿಕವಾಗಿ ರಕ್ತಪ್ರವಾಹದಲ್ಲಿ ಪ್ರತಿಕಾಯಗಳನ್ನು ಬಳಸಿಕೊಂಡು ಅವುಗಳನ್ನು ನಿರ್ಧಿಷ್ಟವಾಗಿ ಬಂಧಿಸುತ್ತದೆ."


ಅವರು ಮುಂದುವರಿದು ಹೇಳುತ್ತಾರೆ,


"ಬಯೋಸೆನ್ಸಾರ್‌ಗಳು ಸಂವೇದಕ ಅಂಶವನ್ನು ಸಂಜ್ಞಾಪರಿವರ್ತಕದೊಂದಿಗೆ ಸಂಯೋಜಿಸುವ ಸಾಧನಗಳಾಗಿವೆ, ಅದು ಪ್ರತಿಕಾಯದ ಪರಸ್ಪರ ಕ್ರಿಯೆಯನ್ನು ವಿದ್ಯುತ್ ಅಥವಾ ಆಪ್ಟಿಕಲ್‌ ಆಗಿ ಪರಿವರ್ತಿಸಬಹುದು. ಸಾಂಪ್ರದಾಯಿಕ ಬಯೋಸೆನ್ಸಿಂಗ್‌ನಲ್ಲಿ ಎಲಿಸಾ, ಕೆಮಿಲುಮಿನೆಸೆಂಟ್ ಇಮ್ಯುನೊಅಸ್ಸೇ, ಮತ್ತು ರೇಡಿಯೊ ಇಮ್ಯುನೊಅಸ್ಸೇ ಮುಂತಾದ ತಂತ್ರಗಳು ಸೇರಿವೆ. ”


ಒಳನೋಟಕ್ಕಾಗಿ, ಈ ಬಯೋಸೆನ್ಸಾರ್‌ಗಳು ನಮ್ಮ ದೈನಂದಿನ ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ ಸಂಯೋಜಿಸಲ್ಪಟ್ಟ ಸಾಂಪ್ರದಾಯಿಕ ಸಂವೇದಕಗಳಲ್ಲ. ಬದಲಾಗಿ, ಇವು ಜೈವಿಕ ಸೆನ್ಸಾರ್‌ಗಳಾಗಿವೆ, ಇದು ಸಣ್ಣ ಪ್ರಮಾಣದ ದ್ರವವನ್ನು ಒಂದು ಲೀಟರ್ ಚತುರ್ಭುಜ ವ್ಯಾಪ್ತಿಯಲ್ಲಿ ನಿಭಾಯಿಸಬಲ್ಲದು.


ಈ ಮೈಕ್ರೋಫ್ಲೂಯಿಡ್ ಆಧಾರಿತ ಬಯೋಸೆನ್ಸರ್‌ಗಳು ಮಾನವನ ಒಂದು ಕೂದಲಿನ ದಪ್ಪಕ್ಕಿಂತ ನೂರು ಸಾವಿರ ಪಟ್ಟು ಚಿಕ್ಕದಾಗಿರುವ ನ್ಯಾನೊ ವಸ್ತುಗಳೊಂದಿಗೆ ಸಂಯೋಜಿಸಲ್ಪಟ್ಟಿವೆ. ಈ ನ್ಯಾನೊ ವಸ್ತುಗಳು ಜೈವಿಕ ರಾಸಾಯನಿಕ ಕ್ರಿಯೆಯನ್ನು ಆಪ್ಟಿಕಲ್ ಅಥವಾ ವಿದ್ಯುತ್ ಸಂಕೇತವಾಗಿ ಪರಿವರ್ತಿಸಲು ಜೈವಿಕ ಸೆನ್ಸರ್‌ಗಳನ್ನು ಶಕ್ತಗೊಳಿಸುತ್ತದೆ, ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆಹಚ್ಚಲು ಪರಿಣಾಮಕಾರಿ ಸಾಧನವಾಗಿದೆ.