ಆರ್.ಜೆ. ಕೆಲಸವನ್ನು ತ್ಯಜಿಸಿ ತಮ್ಮ ಪಾನೀಯ ಮಳಿಗೆ‌ ನಡೆಸುತ್ತಿರುವ ಈ ವ್ಯಾಪಾರಿ ಸುಸ್ಥಿರತೆ ಮತ್ತು ಶೂನ್ಯ ತ್ಯಾಜ್ಯದ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ.

ಒಂದು ಬಾರಿಗೆ ಉಪಯೋಗಿಸುವ ಪ್ಲ್ಯಾಸ್ಟಿಕ್ ಲೋಟಗಳನ್ನು ಉಪಯೋಗಿಸುವುದನ್ನು ನಿಲ್ಲಿಸಿ ಶೂನ್ಯ ತ್ಯಾಜ್ಯದ ಅಭ್ಯಾಸವನ್ನು ಪ್ರಚಾರ ಮಾಡಿ ಪರಿಸರ ಸ್ನೇಹಿ ಕೆಲಸವನ್ನು ಮಾಡುತ್ತಿದೆ ಬೆಂಗಳೂರಿನ ಆನಂದ್ ರಾಜ್ ಅವರ ಜ್ಯೂಸ್ ಕಾರ್ನರ್.

ಆರ್.ಜೆ. ಕೆಲಸವನ್ನು ತ್ಯಜಿಸಿ ತಮ್ಮ ಪಾನೀಯ ಮಳಿಗೆ‌ ನಡೆಸುತ್ತಿರುವ ಈ ವ್ಯಾಪಾರಿ ಸುಸ್ಥಿರತೆ ಮತ್ತು ಶೂನ್ಯ ತ್ಯಾಜ್ಯದ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ.

Wednesday July 24, 2019,

2 min Read

ಇಂದು ಘನ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನಿರ್ವಹಿಸುವುದು ಪ್ರಪಂಚದ ಎಲ್ಲ ನಗರ ಪ್ರದೇಶಗಳು ಎದುರಿಸುತ್ತಿರುವ ಮುಖ್ಯ ಸವಾಲು.


ಬೆಂಗಳೂರೊಂದರಲ್ಲೇ ದಿನಕ್ಕೆ ಬರೋಬ್ಬರಿ 3,000 ದಿಂದ 5,000 ಟನ್ ಗಳಷ್ಟು ಘನತ್ಯಾಜ್ಯ ಉತ್ಪತ್ತಿಯಾಗುತ್ತದೆ. ಈ ಅಷ್ಟೂ ತ್ಯಾಜ್ಯ ಉತ್ಪತ್ತಿಯಾಗೋದು ಮನೆ, ಹೋಟೆಲ್‌ ಅಥವ ಚಿಕ್ಕ ಆಹಾರ ಮಳಿಗೆಗಳಲ್ಲಿ.


ಹಾಗೆಯೇ ತ್ಯಾಜ್ಯವನ್ನು ಪ್ರತ್ಯೇಕಿಸುವುದು ಬಹುಮುಖ್ಯ. ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಅದನ್ನು ಪಾಲಿಸುತ್ತಾರೆ ಮತ್ತು ಈ ವಿಷಯದಲ್ಲಿ ಬೆಂಗಳೂರಿನ ಮಲ್ಲೇಶ್ವರಂನ ವ್ಯಾಪಾರಸ್ತರಾಗಿ ರೂಪುಗೊಂಡ ರೇಡಿಯೋ ಜಾಕಿ ಆನಂದ್ ರಾಜ್ ಹೊಸ ಉದಾಹರಣೆಯಾಗಿದ್ದಾರೆ.


ತಮ್ಮ ಕುಟುಂಬದ ವ್ಯವಹಾರವಾದ ಪಾನೀಯ ಮಳಿಗೆಯೊಂದನ್ನು ನಡೆಸುತ್ತಿರುವ 45 ವರ್ಷದ ಈ ವ್ಯಕ್ತಿ ತಮ್ಮ ಅಂಗಡಿಯಲ್ಲಿ ಶೇಖರಣೆಗೊಳ್ಳುವ ತ್ಯಾಜ್ಯವನ್ನು ದಿನದಿಂದ ದಿನಕ್ಕೆ ಕಡಿಮೆಗೊಳಿಸುತ್ತ, ತಮ್ಮ ವ್ಯಾಪಾರವನ್ನು ತ್ಯಾಜ್ಯ ರಹಿತವಾಗಿ ಮಾಡುವ ಉದ್ದೇಶವನ್ನು ಹೊಂದಿದ್ದಾರೆ‌.


q

ಆನಂದ್, ಪೂರ್ಣ ಬಲಕ್ಕೆ (ಚಿತ್ರ:ಫೇಸ್ ಬುಕ್)

ಎನ್.ಡಿ.ಟಿ.ವಿ.ಯೊಂದಿಗೆ ಮಾತನಾಡುತ್ತಾ, ಅವರು


"ದಿನನಿತ್ಯ ಅಂಗಡಿಯಲ್ಲಿ ಬಳಕೆಯಾಗುವ ಈ ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ಕಸದ ಬುಟ್ಟಿಗೆ ಹಾಕುವುದು ನನಗೆ ಸಾಧ್ಯವಾಗಲಿಲ್ಲ. ಹಾಗಾಗಿ, ಮೊದಲ ಹೆಜ್ಜೆ ಎಂಬಂತೆ ಎಲ್ಲ ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ಬೆಂಗಳೂರಿನ ಒಣ ಕಸ ಸಂಗ್ರಹಣ ಕೇಂದ್ರಕ್ಕೆ ಕೊಡಲು‌ ನಿರ್ಧರಿಸಿದೆ.‌ ಅವರು ಅವನ್ನು ಮರುಬಳಕೆ ಮಾಡುತ್ತಾರೆ.


ತಮ್ಮ ಆದಾಯದ ಮುಖ್ಯ ಮೂಲದಂತಿದ್ದ ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲ್ ಗಳನ್ನು ಮಾರುವುದನ್ನೇ ನಿಲ್ಲಿಸಿದೆವು ಎನ್ನುತ್ತಾರೆ ಆನಂದ್‌. ಕಾರ್ಬೋನೇಟೆಡ್ ಪಾನೀಯಗಳ ಬದಲು ತಾಜಾ ಹಣ್ಣುಗಳಿಂದ ಮಾಡಿದ ಪಾನೀಯ ನೀಡುವುದು ಸೂಕ್ತವೆಂದು ಅವುಗಳನ್ನು ಸ್ಟೀಲ್ ಹಾಗೂ ಗಾಜಿನ ಲೋಟದಲ್ಲಿಯೇ ನೀಡಲು ಆರಂಭಿಸಿದರು. ಗ್ರಾಹಕರು ಸ್ಟ್ರಾ ಕೇಳಿದರೆ ಅವರಿಗೆ ಸ್ಟೀಲ್ ಸ್ಟ್ರಾ ನೀಡಲಾಗುತ್ತದೆ


ಆನಂದ್ ಅವರ 'ಈಟ್ ರಾಜ' ಜ್ಯೂಸ್ ಮಳಿಗೆ, ಮನೆಯಲ್ಲಿ ತಯಾರಾದ ತಿಂಡಿಗಳನ್ನು ಬಡಿಸುತ್ತಾರೆ. ಈ ವ್ಯವಹಾರಕ್ಕೆ ಅವರ ತಾಯಿ ಅವರಿಗೆ ನೆರವಾಗಿದ್ದಾರೆ.


ಎನ್.ಡಿ.ಟಿ.ವಿ.ಯೊಂದಿಗೆ ಮಾತನಾಡುತ್ತಾ, ಆನಂದ್


" ನಾನು 'ಈಟ್ ರಾಜ' ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸುವುದಾಗಿ ನಿರ್ಧರಿಸಿದೆ. ಇಲ್ಲಿ ನಿಮಗೆ ಸಿಗುವುದೆಲ್ಲವೂ ಮನೆಯಲ್ಲಿ ತಯಾರಾದದ್ದೇ. ಕಪ್ಪುಗಳಿಂದ, ಸ್ಟ್ರಾ, ಬಾಟಲಿ, ಕೈಚೀಲಗಳಿಂದಾಗಿ ಮೊದಲೆಲ್ಲ ಬಹಳಷ್ಟು ತ್ಯಾಜ್ಯವಾಗುತ್ತಿತ್ತು. ನಾನು ಇದರ‌ ನಿರ್ವಹಣೆ ಹೊತ್ತ ನಂತರ, ಈ ಕಸದ, ತ್ಯಾಜ್ಯದ ಪರಂಪರೆಯಿಂದ ಮುಕ್ತಗೊಳ್ಳುವ ನಿರ್ಧಾರ ತೆಗೆದುಕೊಂಡೆ. ಬೆಂಗಳೂರಿನ ಮೊದಲ ತ್ಯಾಜ್ಯ ರಹಿತ ಜ್ಯೂಸ್ ಕಾರ್ನರ್ ಜನ್ಮ ತಾಳಿದ್ದು ಹೀಗೆ."


ಶೂನ್ಯ ತ್ಯಾಜ್ಯದ ಜ್ಯೂಸ್‌ಮಳಿಗೆಯ ಹೊರತಾಗಿ ಇನ್ನೂ ಅನನ್ಯವೆನಿಸೋದು ಅವರ ಪರಿಸರ ಸ್ನೇಹಿ ಪ್ಯಾಕೇಜಿಂಗ್ ಶೈಲಿ. ನ್ಯೂ ಇಂಡಿಯಾ ಎಕ್ಸ್ಪ್ರೆಸ್ ಗೆ ಮಾತನಾಡುತ್ತಾ, ಆನಂದ್ "ಮೊದಲೆಲ್ಲ ನಾವು ಬಿಯರ್ ಮತ್ತು ಬ್ರೀಝರ್ ಬಾಟಲಿಗಳನ್ನು ಸಂಗ್ರಹಿಸಿ, ಅವಕ್ಕೆ ಬಾಳೆ ಗಿಡದ ಕಾಂಡವನ್ನು ಸುತ್ತಿ ಅದರಲ್ಲಿ ಶೇಖರಿಸಲಾದ ಪಾನೀಯ ಚೆಲ್ಲದಂತೆ ಮಾಡುತ್ತಿದ್ದೆವು. ನಾವೀಗ ಕಲ್ಲಂಗಡಿ ಹಣ್ಣಿನ ಚಿಪ್ಪೆಯಲ್ಲಿ ಕೊಡುತ್ತೇವೆ. ಅದೂ ಸ್ಟ್ರಾ ಇಲ್ಲದೆ.


ಸುಸ್ಥಿರ ಅಭ್ಯಾಸಗಳ ಬಗ್ಗೆ ಮಾತನಾಡುತ್ತಾ,


"ತ್ಯಾಜ್ಯವನ್ನು ಪ್ರತ್ಯೇಕಿಸುವಾಗ ನಾವು ಕಿತ್ತಳೆ, ನಿಂಬೆ ಹಣ್ಣಿನಂತ ಸಿಟ್ರಸ್ ತ್ಯಾಜ್ಯವನ್ನು ಒಂದು ಡಬ್ಬಿಯಲ್ಲಿ, ಹಣ್ಣಿನ ತ್ಯಾಜ್ಯವನ್ನು ಮತ್ತೊಂದರಲ್ಲಿ ಶೇಖರಿಸುತ್ತೇವೆ. ನಾವು ಸಿಟ್ರಸ್ ತ್ಯಾಜ್ಯದಿಂದ ಜೈವಿಕ ಕಿಣ್ವಗಳನ್ನು ಮಾಡುತ್ತೇವೆ, ಅದು ಕೇವಲ ಸ್ಟೀಲ್ ಸ್ಟ್ರಾವನ್ನು ತೊಳೆಯುವುದಕ್ಕೆ ಮಾತ್ರವಲ್ಲದೆ ಫಿನಾಯಿಲ್, ಡಿಟರ್ಜೆಂಟ್ಗಳನ್ನು ತಯಾರಿಸುವಲ್ಲಿ ಬಳಕೆಯಾಗುತ್ತದೆ."


ಈಗ ಆನಂದ್ ಮರು ರೂಪಿಸಲಾದ ಬಾಟಲಿಗಳಲ್ಲಿ ಜೈವಿಕ ಕಿಣ್ವಗಳನ್ನು ಶೇಖರಿಸಿ ಲೀಟರಿಗೆ 100 ರೂಪಾಯಿ ಯಂತೆ ಮಾರುತ್ತಾರೆ.


ಆನಂದ್, ಪರಿಸರವಾದಿಗಳು ಹಾಗೂ ತ್ಯಾಜ್ಯ ಯೋಧರಾದ ವಾಣಿ ಮೂರ್ತಿ ಮತ್ತು ಮೀನಾಕ್ಷಿ ಭಾರತ್ ಅವರಿಗೆ ಇದೆಲ್ಲವನ್ನೂ ಸಮರ್ಪಿಸಿದ್ದಾರೆ. ಕಾರಣ, ಈ ತ್ಯಾಜ್ಯ ನಿರ್ವಹಣೆ ಹಾಗೂ ಜೈವಿಕ ಕಿಣ್ವಗಳ ತಾಯಾರಿಯ ವಿಧಾನವನ್ನು ತಿಳಿಸಿಕೊಟ್ಟವರೇ ಇವರು.


ಕ

'ಈಟ್ ರಾಜ' ದಲ್ಲಿ ತಯಾರಾದ ಜೈವಿಕ ಕಿಣ್ವಗಳು(ಎಂಜೈಮ್)

(ಚಿತ್ರ: ಡೆಕ್ಕನ್ ಕ್ರೊನಿಕಲ್)

ಆನಂದ್, ಪ್ಲ್ಯಾಸ್ಟಿಕ್ ಚೀಲಗಳನ್ನು ಬಳಸುವುದನ್ನು ನಿಲ್ಲಿಸಿ, ಗ್ರಾಹಕರಿಗೆ ಮನೆಯಿಂದಲೇ ಚೀಲ ತರುವಂತೆ ಕೇಳಿಕೊಳ್ಳುತ್ತಾರೆ.


ಈಗ ನಗರದೆಲ್ಲೆಡೆ ನೀರಿನ ಅಭಾವವಿರುವುದರಿಂದ, ಆನಂದ್, ಹಣ್ಣಿನ ಚಿಪ್ಪುಗಳಲ್ಲಿ ಜ್ಯೂಸ್‌‌ ಕೊಡುವ ಹೊಸ ವಿಧಾನ ಮಾಡಿಕೊಂಡಿದ್ದಾರೆ. ಇದು ಲೋಟಗಳನ್ನು ತೊಳೆಯುವುದಕ್ಕೆ ನೀರು ಪೋಲು ಮಾಡುವುದನ್ನು ತಡೆಯುತ್ತದೆ ಹಾಗೂ ತ್ಯಾಜ್ಯ ನಿರ್ವಹಣೆಗೆ ಸಹಕಾರಿಯಾಗುತ್ತದೆ.