ಕೋವಿಡ್-19 ಮುಕ್ತ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ತೆರವಿಗೊಳಿಸುವ ಯೋಚನೆ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಕೋವಿಡ್-19 ಸೋಂಕಿನಿಂದ ಮುಕ್ತವಾಗಿರುವ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಲಾಕ್‌ಡೌನ್‌ನ್ನು ತೆಗೆದುಹಾಕಲು ಕರ್ನಾಟಕ ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕೋವಿಡ್-19 ಮುಕ್ತ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ತೆರವಿಗೊಳಿಸುವ ಯೋಚನೆ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

Thursday April 09, 2020,

2 min Read

ಕೇಂದ್ರ ಸರ್ಕಾರದ ಅನುಮೋದನೆಯ ಮೇರೆಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿರದ ಜಿಲ್ಲೆಗಳನ್ನು ಲಾಕ್‌ಡೌನ್‌ನಿಂದ ತೆರವುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.


ರಾಜ್ಯದ ಆದಾಯ ಸಂಗ್ರಹಣೆ ಸ್ಥಗಿತಗೊಂಡಿರುವುರಿಂದ, ಶಾಸಕರ ವೇತನದಲ್ಲಿ 30 ಪ್ರತಿಶತದಷ್ಟು ಕಡಿತವನ್ನು ಮಾಡಲಾಗುವುದು ಹಾಗೂ ಪ್ರಮುಖ ಬಜೆಟ್ ಪ್ರಸ್ತಾಪಗಳನ್ನು ಮಾತ್ರ ಜಾರಿಗೆ ತರಲಾಗುವುದು ಎಂದು ಹೇಳಿದರು.


ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ರಾಜ್ಯವು ಮದ್ಯ ಮಾರಾಟದ ಮೇಲೆ ಹೇರಿದ್ದ ನಿಷೇಧವನ್ನು ಸಡಿಲಿಸಲು ಉದ್ದೇಶಿಸಿದೆ ಎಂದು ಹೇಳಿದರು. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು 21 ದಿನ ಲಾಕ್‌ಡೌನ್ ವಿಧಿಲಾಗಿರುವುದರಿಂದ ಮದ್ಯ ಮಾರಾಟ ನಿಲ್ಲಿಸಲಾಗಿದೆ. ಏಪ್ರಿಲ್ 14ರ ನಂತರ ರಾಜ್ಯ ಆದಾಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿದೆ.


ಅಧಿಕಾರಿಗಳ ಪ್ರಕಾರ, ರಾಜ್ಯದ ಒಟ್ಟು 30 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಯಾವುದೇ ಕೊರೊನಾ ವೈರಸ್ ಪ್ರಕರಣಗಳು ಕಂಡುಬಂದಿಲ್ಲ.


ಎಪ್ರಿಲ್ 8ರ ವೇಳೆಗೆ, ರಾಜ್ಯದಲ್ಲಿ 181 ಪಾಸಿಟಿವ್ ಕೋವಿಡ್-19 ಪ್ರಕರಣಗಳಿದ್ದು, ಐದು ಸಾವುಗಳಾಗಿದ್ದು 28 ಜನ ಕೊರೊನಾ ಸೋಂಕಿನಿಂದ ಸಂಪೂರ್ಣ ಮುಕ್ತವಾಗಿದ್ದಾರೆ.


"ಆಯಾ ರಾಜ್ಯಗಳಲ್ಲಿನ ಪರಿಸ್ಥಿತಿಯ ಅನುಗುಣವಾಗಿ ಲಾಕ್‌ಡೌನ್ ತೆರವುಗೊಳಿಸುವ ನಿರ್ಧಾರ ತೆಗೆದುಕೊಳ್ಳಲು ರಾಜ್ಯಗಳಿಗೆ ಪ್ರಧಾನಿ ಸೂಚಿಸಿದರೆ, ಕೋವಿಡ್-19 ನಿಂದ ಮುಕ್ತವಾಗಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ತೆರೆವುಗೊಳಿಸುವುದು ನನ್ನ ನಿಲುವಾಗಿರುತ್ತದೆ," ಎಂದು ಯಡಿಯೂರಪ್ಪ ಹೇಳಿದರು.


“ಪ್ರಧಾನ ಮಂತ್ರಿಯ ಅನುಮೋದನೆ ಪಡೆದು, ಏಪ್ರಿಲ್ 14 ರ ನಂತರ ಜನರು ತಮ್ಮ ಕೆಲಸಗಳಿಗೆ ಹೋಗಲು ಜಿಲ್ಲೆಗಳ ಒಳಗೆ ತಿರುಗಾಡಲು ಅವಕಾಶ ಮಾಡಿಕೊಡಲಾಗುವುದು," ಎಂದು ಅವರು ಹೇಳಿದರು.


ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ಇರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಅನ್ನು ತೆಗೆದುಹಾಕಿದರೆ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತದೆ ಎಂಬ ಭಯ ಸರ್ಕಾರದಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದರು.


ಲಾಕ್‌ಡೌನ್ ನಂತರ ಎಲ್ಲಾ ರೀತಿಯ ಆದಾಯ ಸಂಗ್ರಹಣೆಗಳು ಸಂಪೂರ್ಣವಾಗಿ ನಿಂತುಹೋಗಿವೆ, ಆರ್ಥಿಕತೆಯ ಮೇಲೆ ಕೋವಿಡ್-19ರ ಪರಿಣಾಮವನ್ನು ತಗ್ಗಿಸಲು ರಾಜ್ಯದ ಮಾರ್ಗಸೂಚಿಯಲ್ಲಿ ತಜ್ಞರು ಮತ್ತು ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.


"ಅಗತ್ಯ ಮತ್ತು ಅನಿವಾರ್ಯ" ಪ್ರಸ್ತಾಪಗಳನ್ನು ಮಾತ್ರ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.


ಇತರ ವಿಷಯಗಳು ಮುಂದಿನ 5-6 ತಿಂಗಳುಗಳವರೆಗೆ ನಾವು ನಿಲ್ಲಿಸಬೇಕಾಗಿದೆ. ಇದು ಅನಿವಾರ್ಯ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಹಣದ ಕೊರತೆ ಇದೆ.


"ರಾಜ್ಯದಲ್ಲಿ ಲಾಕ್‌ಡೌನ್ ಅನುಷ್ಠಾನವು 85-90ರಷ್ಟಿದೆ ಎಂದು ಮುಖ್ಯಮಂತ್ರಿ ಹೇಳಿದರು. ಆದಾಯ ಸಂಗ್ರಹಣೆಯನ್ನು ಹೆಚ್ಚಿಸಲು ಸರ್ಕಾರವು ಮಧ್ಯ ಮಾರಾಟ ಪುನಾರಾರಂಭಿಸಿ ವಿಶ್ರಾಂತಿ ಪಡೆಯಲು ಬಯಸಿದೆ ಎಂದು ಅವರು ಹೇಳಿದರು.


"ಮದ್ಯ ವ್ಯಸನಿಗಳನ್ನು ನಿಯಂತ್ರಿಸುವುದು ಸಹ ಕಷ್ಟ," ಎಂದು ಯಡಿಯೂರಪ್ಪ ಟೀಕಿಸಿದರು.


ಲಾಕ್‌ಡೌನ್ ಹಾಕಿದ ನಂತರ ಬೆಂಗಳೂರು ನಿರ್ಜನವಾಗಿದ್ದರಿಂದ ನಗರದಲ್ಲಿ ರಸ್ತೆ ಕೆಲಸಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.


ಶಾಸಕರ ವೇತನವನ್ನು ಕಡಿತಗೊಳಿಸುವ ಕ್ರಮದಲ್ಲಿ ಯಡಿಯೂರಪ್ಪ ಅವರು ಗುರುವಾರ ಕ್ಯಾಬಿನೆಟ್ ಸಭೆ ಕರೆಯಲಾಗಿದ್ದು, ಅಲ್ಲಿ ಶೇಕಡಾ 30 ರಷ್ಟು ಕಡಿತಕ್ಕೆ ಔಪಚಾರಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು


ಸರ್ಕಾರಿ ನೌಕರರು ಸಹ ವೇತನ ಕಡಿತ ತೆಗೆದುಕೊಳ್ಳುತ್ತಾರೆಯೇ ಎಂದು ಕೇಳಿದಾಗ,


"ನಾವು ಯೋಚನೆ ಮಾಡಿಲ್ಲ. ನೋಡೋಣ, ಪರಿಸ್ಥಿತಿಗೆ ಅನುಗುಣವಾಗಿ ನಾವು ಕ್ಯಾಬಿನೆಟ್ನಲ್ಲಿ ಚರ್ಚಿಸುತ್ತೇವೆ. ಈ ತಿಂಗಳು ನಾವು ಸರ್ಕಾರಿ ನೌಕರರಿಗೆ ಸಂಬಳ ನೀಡಿದ್ದೇವೆ. ಮುಂಬರುವ ತಿಂಗಳು ನಾವು ಯಾವ ಪರಿಸ್ಥಿತಿಯನ್ನು ಎದುರಿಸುತ್ತೇವೆಯೋ, ಕಾದು ನೋಡೋಣ," ಎಂದರು


ಸರ್ಕಾರಿ ನೌಕರರ ವೇತನವನ್ನು ಕಡಿತಗೊಳಿಸುವ ಕ್ರಮವನ್ನು ಕರ್ನಾಟಕ ಕಾಂಗ್ರೆಸ್ ಮಂಗಳವಾರ ತೀವ್ರವಾಗಿ ವಿರೋಧಿಸಿತು.


ಕೊರೊನಾ ವೈರಸ್ ಕಾರಣದಿಂದಾಗಿ ಲಾಕ್‌ಡೌನ್ ಮಾಡಿದ ನಂತರ ರಾಜ್ಯದ ಅನಿಶ್ಚಿತ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿ ಎಂ ಯಡಿಯೂರಪ್ಪ ಈ ಹಿಂದೆ ಸರ್ಕಾರಿ ನೌಕರರ ವೇತನವನ್ನು ಕಡಿತಗೊಳಿಸಲು ಸೂಚಿಸಿದ್ದರು.