ಹಿಮಾಲಯದ ಮಹಿಳೆಯರಿಗೆ ಆತ್ಮ ರಕ್ಷಣಾ ಕಲೆ ಕಲಿಸುತ್ತಿದ್ದಾರೆ ಈ ಕುಂಗ್‌ ಫು ಸನ್ಯಾಸಿನಿಯರು

ಡ್ರುಕ್ಪಾ ವಂಶದ ಕುಂಗ್‌ ಪು ಸನ್ಯಾಸಿನಿಯರು ಇತರ ಮಹಿಳೆಯರಿಗೆ ಆತ್ಮರಕ್ಷಣೆ ತರಬೇತಿ ನೀಡುತ್ತಾರೆ. ಅವರಲ್ಲಿಬ್ಬರಾದ ಜಿಜ್ಮೆ ರೂಪಾ ಲಾವೋ ಮತ್ತು ಜಿಗ್ಮೆ ಮಿಗ್ಯೂರ್‌ ಪಾವೋರವರು ಕುಂಗ್‌ ಫು ಸನ್ಯಾಸಿಗಳಾಗಿ ತಮ್ಮ ಜೀವನದ ಬಗ್ಗೆ ಮತ್ತವರು ಸಾಮಾಜಿಕ ಮತ್ತು ಮಾನವೀಯ ಕಾರ್ಯಗಳ ಮೂಲಕ ಹೇಗೆ ಬದಲಾವಣೆ ತರುವ ಕೆಲಸ ಮಾಡುತ್ತಿದ್ದಾರೆಂದು ನಮಗೆ ತಿಳಿಸುತ್ತಾರೆ.

ಹಿಮಾಲಯದ ಮಹಿಳೆಯರಿಗೆ ಆತ್ಮ ರಕ್ಷಣಾ ಕಲೆ ಕಲಿಸುತ್ತಿದ್ದಾರೆ ಈ ಕುಂಗ್‌ ಫು ಸನ್ಯಾಸಿನಿಯರು

Friday October 25, 2019,

4 min Read

ಆಧ್ಯಾತ್ಮಿಕತೆ ಮತ್ತು ಕುಂಗ್‌ ಫು ಅಸಂಭವನೀಯ ಸಂಯೋಜನೆಯಾಗಬಹುದು, ಆದರೆ ಹಿಮಾಲಯ ಪ್ರದೇಶಗಳಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಉತ್ತೇಜಿಸಲು ಸಮರ ಕಲೆ ನೆರವಾಗುತ್ತದೆ ಎಂದು ಡ್ರುಕ್ಪಾ ಕುಂಗ್‌ ಫು ಸನ್ಯಾಸಿನಿಯರು ಸಾಬೀತುಪಡಿಸುತ್ತಾರೆ.


ಇಪ್ಪತ್ತಾರರ ಹರೆಯದ ಜಿಗ್ಮೆ ರೂಪಾ ಲಾವೊ ಮತ್ತು ಇಪ್ಪಂತೆಂಟರ ಹರೆಯದ ಜಿಗ್ಮೆ ಮಿಗ್ಯೂರ್‌ ಪಾವೋರವರು ಕಾಣುವಂತೆಯೇ ಉತ್ಸುಕರಾಗಿದ್ದಾರೆ. ಈ ಕುಂಗ್‌ ಫು ಸನ್ಯಾಸಿನಿಯರು ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಿದ್ದರು, ಅಲ್ಲಿ ಅವರ ವಿಶಿಷ್ಟ ಪ್ರಯತ್ನಗಳ ಮೂಲಕ ಏಷ್ಯಾದಲ್ಲಿ ಅವರು ಮಾಡುತ್ತಿರುವ ಪರಿವರ್ತನಕಾರಿ ಪರಿಣಾಮಕ್ಕಾಗಿ ಅಕ್ಟೋಬರ್‌ 24ರಂದು ಏಷ್ಯಾ ಸೊಸೈಟಿಯ ಗೇಮ್‌ ಚೇಂಬರ್‌ ಪ್ರಶಸ್ತಿಯನ್ನು ನೀಡಿದೆ.


ಜಿಗ್ಮೆ ರೂಪಾ ಲಾವೊ ಮತ್ತು ಜಿಗ್ಮೆ ಮಿಗ್ಯೂರ್‌ ಪಾವೋ


ಈ ಇಪ್ಪತ್ತಕ್ಕೂ ಹೆಚ್ಚು ಸನ್ಯಾಸಿಗಳು ಕುಂಗ್‌ ಫು ಶಕ್ತಿಯನ್ನು ಬಳಸಿಕೊಂಡು ಬಾಲಕೀಯರ ಮನೋಭಾವದಲ್ಲಿ ಬದಲಾವಣೆ ತರಲು ಅವರಿಗೆ ಸಮರ ಕಲೆ ಕಲಿಸುವುದರ ಜತೆಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಶಕ್ತಿಯನ್ನು ಬೆಳೆಸುತ್ತಿದ್ದಾರೆ.

ಲಿಂಗ ಸಮಾನತೆಗಾಗಿ ಆಧ್ಯಾತ್ಮಿಕತೆ

ಕುಂಗ್‌ ಫು ಸನ್ಯಾಸಿನಿಯರು ಹಿಮಾಲಯದಲ್ಲಿ 1,000 ವರ್ಷಗಳ ಹಳೆಯ ಬೌದ್ಧ ಸಂಪ್ರದಾಯವಾದ ಡ್ರುಕ್ಪಾ ವಂಶಸ್ಥರು. ದಂತ ಕಥೆಯ ಪ್ರಕಾರ ಗ್ಯಾಲ್ವಾಂಗ್‌ ಡ್ರುಕ್ಪಾರವರು ಇದರ ಸಂಸ್ಥಾಪಕರು, ಆಕಾಶದಲ್ಲಿ 9 ಡ್ರ್ಯಾಗನ್‌ಗಳ ಅದ್ಭುತ ಹೋರಾಟಕ್ಕೆ ಸಾಕ್ಷಿಯಾದರು. ಇಂದು, 700ಕ್ಕೂ ಹೆಚ್ಚು ಕುಂಗ್‌ ಫು ಸನ್ಯಾಸಿನಿಯರು ಅವರಲ್ಲಿದ್ದಾರೆ ಮತ್ತು ಕುಂಗ್‌ ಫು ತರಬೇತಿ ಪಡೆಯುವ ವಿಶ್ವದ ಏಕೈಕ ಬೌದ್ಧ ಸನ್ಯಾಸಿನಿಯರು ಅವರಾಗಿದ್ದಾರೆ.


ಡ್ರುಕ್ಪಾ ಕುಂಗ್‌ ಫು ಸನ್ಯಾಸಿನಿಯರು ತಮ್ಮ ಆಧ್ಯಾತ್ಮಿಕತೆಯ ಮೂಲಕ ಲಿಂಗ ಸಮಾನತೆ, ದೈಹಿಕ ಸಾಮರ್ಥ್ಯ, ಪರಿಸರ ಸ್ನೇಹಿ ಜೀವನ ಮತ್ತು ಎಲ್ಲಾ ಜೀವಿಗಳನ್ನು ಗೌರವದಿಂದ ಕಾಣುವಂತೆ ಮಾಡಲು ಬಳಸುತ್ತಾರೆ.


ಈ ಸನ್ಯಾಸಿನಿಯರಲ್ಲಿ ಹಲವರು ಹಿಮಾಲಯದವರು, ಹೆಚ್ಚಾಗಿ ಲಡಾಖ್, ಮತ್ತು ನೇಪಾಳದ ಡ್ರುಕ್ ಅಮಿತಾಭಾ ಪರ್ವತ ಸನ್ಯಾಸಿಗಳಿಂದ ತರಬೇತಿ ಪಡೆದಿರುತ್ತಾರೆ. ಅವರ ಸಾಮಾನ್ಯ ಗುರಿ ಇತರರಿಗೆ ಸಹಾಯ ಮಾಡುವುದು, ಮತ್ತು ಅವರ ನೆರೆಹೊರೆಯ ಜಗತ್ತಿನಲ್ಲಿ ಉತ್ತಮ ಬದಲಾವಣೆ ಉಂಟುಮಾಡುವುದು.

ವಿಶಿಷ್ಟ ಕಥೆಗಳು

ಹೆಣ್ಣುಮಕ್ಕಳಿಗೆ ಆತ್ಮರಕ್ಷಣಾ ತರಬೇತಿ ನೀಡುವುದರ ಹೊರತಾಗಿ, ಅವರು ಹಲವಾರು ಸಾಮಾಜಿಕ ಮತ್ತು ಮಾನವೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. 2015 ರಲ್ಲಿ ನೇಪಾಳವನ್ನು ನಡುಗಿಸಿದ ಭೂಕಂಪದ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು, ಆಗಾಗ್ಗೆ ಬೈಸಿಕಲ್ ಯಾತ್ರೆಗಳು ಮತ್ತು ‘ಪಾದಯಾತ್ರಗಳು’ ಮಾನವ ಕಳ್ಳಸಾಗಣೆ ವಿರುದ್ಧ ಧ್ವನಿಯೆತ್ತಲು, ಆರೋಗ್ಯ ಚಿಕಿತ್ಸಾಲಯಗಳನ್ನು ನಡೆಸಲು ಮತ್ತು ಪ್ರಾಣಿಗಳನ್ನು ರಕ್ಷಿಸಲು ತೊಡಗುತ್ತಾರೆ.


ಈ ಸನ್ಯಾಸಿನಿಯರಲ್ಲಿ ಪ್ರತಿಯೊಬ್ಬರೂ ತಾವು ಸನ್ಯಾಸಿನಿಯರಾಗಲು ಏಕೆ ಬಯಸಿದ್ದರು ಮತ್ತು ಅವರ ಪ್ರಯಾಣ ಅವರನ್ನು ಅನೇಕ ರೀತಿಯಲ್ಲಿ ಹೇಗೆ ಶ್ರೀಮಂತಗೊಳಿಸಿದೆ ಎಂಬುದರ ಬಗ್ಗೆ ಒಂದು ವಿಶಿಷ್ಟ ಕಥೆಯನ್ನು ಹೊಂದಿದ್ದಾರೆ.


ಜಿಗ್ಮೆ ರೂಪಾ ಲಾಮೋರವರು ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆಯವರಾಗಿದ್ದು, ಅವರು 13 ವರ್ಷದವರಿದ್ದಾಗ ಇಲ್ಲಿ ಸೇರಿದರು.


"ಅವರ ಪವಿತ್ರತೆಯು ನಮ್ಮ ಸಣ್ಣ ಹಳ್ಳಿಗೆ ಭೇಟಿ ನೀಡಿತು ಮತ್ತು ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅವರ ಯೋಜನೆಗಳ ಬಗ್ಗೆ ಮಾತನಾಡಿದರು. ಒಬ್ಬ ಪುರುಷ ಮಾಡಬಹುದಾದದ್ದನ್ನು ಒಬ್ಬ ಮಹಿಳೆ ಕೂಡ ಮಾಡಬಹುದು ಎಂದು ಅವರು ನಂಬಿದ್ದರು. ನಾನು ಅವರ ಮಾತಿನಿಂದ ಪ್ರೇರಿತಳಾಗಿ ಸನ್ಯಾಸಿನಿಯಾಗಲು ನಿರ್ಧರಿಸಿದೆ ”ಎಂದು ಜಿಗ್ಮೆ ರೂಪಾ ಲಾಮೋರವರು ವಿವರಿಸುತ್ತಾರೆ.


ಯುವತಿಯಾಗಿರುವ ರೂಪಾರವರು ಗ್ರಾಮದಿಂದ ಹೊರಹೋಗುವ ಕಲ್ಪನೆಗೆ ಆಕೆಯ ಕುಟುಂಬವು ಮೊದಲಿಗೆ ವಿರೋಧಿಸಿದ್ದರೂ, ಒಂದು ವರ್ಷದ ನಂತರ ಅವರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಯಿತು, ನಂತರ ಅವರು ನೇಪಾಳದ ಸನ್ಯಾಸಿನಿಯರ ತರಬೇತಿಗೆ ಸೇರಿಕೊಂಡರು.


ನಾನು ಮಾತನಾಡಿದ ಇತರ ಕುಂಗ್ ಫು ಸನ್ಯಾಸಿನಿಯರಿಗೆ ಹೋಲಿಸಿದರೆ, ಜಿಗ್ಮೆ ಮಿಗ್ಯೂರ್ ಪಾಮೋರವರು, ಲಡಾಖ್‌ನ ಲೇಹ್‌ನಿಂದ 100 ಕಿ.ಮೀ ದೂರದಲ್ಲಿರುವ ಸಣ್ಣ ಹಳ್ಳಿಯ ಕುಟುಂಬದಿಂದ ಬಂದಿದ್ದಾರೆ, ಅದು ಡ್ರುಕ್ಪಾ ಆದರ್ಶಗಳನ್ನು ಬಲವಾಗಿ ನಂಬುತ್ತದೆ. “ಮಹಿಳೆಯರಿಗೆ ಎಷ್ಟು ಪ್ರಾಮುಖ್ಯತೆ ಮತ್ತು ಅವಕಾಶಗಳನ್ನು ನೀಡಲಾಗಿದೆ ಎಂಬುದನ್ನು ನನ್ನ ತಂದೆ ಇಷ್ಟಪಟ್ಟಿದ್ದಾರೆ. ನಾನು ಆದೇಶಕ್ಕೆ ಸೇರಲು ಮತ್ತು ಸಮಾನತೆಯ ಸಂದೇಶವನ್ನು ರವಾನಿಸಲು ಅವರು ಬಯಸಿದರು," ಎಂದು ಅವರು ಹೇಳುತ್ತಾರೆ.


ಕುಂಗ್ ಫು ಸನ್ಯಾಸಿನಿಯರ ಬಳಿ ಬರುವ ಮೊದಲು ಈ ಇಬ್ಬರೂ ಹುಡುಗಿಯರು ನಾಚಿಕೆ ಮತ್ತು ಅಂತರ್ಮುಖಿಯಾಗಿದ್ದರು. ತರಬೇತಿಯ ವರ್ಷಗಳ ನಂತರ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ ಮತ್ತು ಸಬಲ ಯುವತಿಯರನ್ನಾಗಿ ರೂಪಿಸಿದೆ.


"ನಾನು ವಿವಿಧ ರಾಷ್ಟ್ರೀಯತೆಯ ಹುಡುಗಿಯರೊಂದಿಗೆ ಸಂವಹನ ನಡೆಸಬೇಕಾಗಿರುವುದರಿಂದ ಆರಂಭದಲ್ಲಿ ಕಷ್ಟವಾಯಿತು. ನಿಧಾನವಾಗಿ, ನನ್ನ ವರ್ತನೆ ಬದಲಾಯಿತು ಮತ್ತು ನಾನು ಈ ಸ್ನೇಹವನ್ನು ಇಷ್ಟಪಡಲು ಪ್ರಾರಂಭಿಸಿದೆ,” ಎಂದು ರೂಪಾರವರು ಹೇಳುತ್ತಾರೆ.

ಆತ್ಮರಕ್ಷಣೆಗಾಗಿ ಸಮರ ಕಲೆ

ನಾನು ಯಾವಾಗಲೂ ತನ್ನಷ್ಟಕ್ಕೆ ತಾನೇ ಇರಬೇಕೆಂದು ಬಯಸುತ್ತಿದ್ದ ಶಾಂತ ಹುಡುಗಿಯೊಬ್ಬಳಿಂದ ಸ್ವರಕ್ಷಣೆಗಾಗಿ ಇತರ ಹುಡುಗಿಯರಿಗೆ ತರಬೇತಿ ನೀಡುವ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಪ್ರಯಾಣಿಸಿದವರಾಗಿ ಬದಲಾಗಿದ್ದಾರೆಂದು ಮಿಗ್ಯೂರ್‌ರವರು ಹೇಳುತ್ತಾರೆ.


ಈ ಇಬ್ಬರು ಮಹಿಳೆಯರು ಕುಂಗ್ ಫು ಅನ್ನು ತಮ್ಮ ದೀಕ್ಷಾ ಕ್ರಮದಲ್ಲಿ ಒಂದೆರಡು ವರ್ಷ ಕಲಿಯಲು ಪ್ರಾರಂಭಿಸಿದರು.


ಮಿಗ್ಯೂರ್‌ರವರು ನಗುತ್ತಾ ಹೀಗೆ ಹೇಳುತ್ತಾರೆ, “ಹೆಚ್ಚಿನ ಸನ್ಯಾಸಿಗಳ ಚಿತ್ರಣವೆಂದರೆ ಅವರು ಹೊರಗಿನ ಪ್ರಪಂಚದೊಂದಿಗೆ ಬಹಳ ಕಡಿಮೆ ಸಂಪರ್ಕ ಹೊಂದಿದ್ದಾರೆ, ಗುಹೆಯಲ್ಲಿ ಅಥವಾ ಮಠದಲ್ಲಿ ಸಹಕರಿಸುತ್ತಾರೆ ಮತ್ತು ನಿರಂತರ ಧ್ಯಾನದಲ್ಲಿರುತ್ತಾರೆ. ಡ್ರುಕ್ಪಾ ಕುಂಗ್ ಫು ಸನ್ಯಾಸಿಗಳಾದ ನಾವು ಈ ಕಲ್ಪನೆಯನ್ನು ದೊಡ್ಡ ಪ್ರಮಾಣದಲ್ಲಿ ಖಂಡಿಸುತ್ತೇವೆ.”


ಇಲ್ಲಿ, ಕುಂಗ್ ಫು, ಸಮರ ಕಲೆಯನ್ನು ಕಲಿಸುವಾಗ, ಧ್ಯಾನದತ್ತ ಗಮನಹರಿಸಲು ಮತ್ತು ಇತರ ಯುವತಿಯರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದನ್ನು ಕಲಿಸಲಾಗುತ್ತದೆ.


“ನಾವು ಹುಡುಗಿಯರಿಗೆ ಕುಂಗ್ ಫು ಕಲಿಸಲು ಹಿಮಾಲಯ ಪ್ರದೇಶದಿಂದ ದೂರದ ಪ್ರದೇಶಗಳಿಗೆ ಪ್ರಯಾಣಿಸುತ್ತೇವೆ. ಈ ಹುಡುಗಿಯರು ಕಲಿಯಲು ಮತ್ತು ಅವರನ್ನು ವ್ಯಕ್ತಪಡಿಸಿಕೊಳ್ಳಲು ಕಡಿಮೆ ಅವಕಾಶ ಹೊಂದಿದವರಾಗಿರುತ್ತಾರೆ. ನಾವು ಅವರಿಗೆ ಒಂದು ವಾರ ಕುಂಗ್ ಫು ತಂತ್ರಗಳನ್ನು ಕಲಿಸುತ್ತೇವೆ ಮತ್ತು ಅವರು ಏನೇ ಮಾಡಿದರೂ ಅದರಲ್ಲಿ ವಿಶ್ವಾಸವಿಡಲು ಸಲಹೆ ನೀಡುತ್ತೇವೆ” ಎಂದು ರೂಪಾರವರು ಹೇಳುತ್ತಾರೆ.


ಹುಡುಗಿಯರು ಮುಂದಿನ ವರ್ಷವೂ ಎರಡನೇ ಸೆಷನ್‌ಗಳಿಗೆ ಹಿಂತಿರುಗಿರುವುದನ್ನು ನೋಡಿದ ಅನೇಕ ಉದಾಹರಣೆಗಳ ಬಗ್ಗೆ ಮಿಗ್ಯೂರ್ ಮಾತನಾಡುತ್ತಾರೆ. “ಇದು ಅಗತ್ಯವಿದ್ದಾಗ ಅವರು ಬಳಸಬಹುದಾದ ಆಯುಧ ಎಂದು ಅವರ ಅರಿವಿಗೆ ಬಂದಿದೆ. ನಿಧಾನವಾಗಿ, ನಾವು ಭಾರತದ ಉಳಿದ ಭಾಗಗಳನ್ನು ಮತ್ತು ಪ್ರಪಂಚವನ್ನು ತಲುಪಲು ಬಯಸುತ್ತೇವೆ.”

ಉದ್ದೇಶದಿಂದ ತುಂಬಿದ ಜೀವನ

ಈ ಕುಂಗ್ ಫು ತರಬೇತಿ ಅವಧಿಯು ಈ ಸನ್ಯಾಸಿನಿಯರ ಜೀವನದ ಒಂದು ಭಾಗವಾಗಿದೆ. ಅವರು ಹಲವಾರು ಸಾಮಾಜಿಕ ಮತ್ತು ಮಾನವೀಯ ಪ್ರಯತ್ನಗಳನ್ನು ಕೈಗೊಳ್ಳುತ್ತಾರೆ, ಬೈಸಿಕಲ್ ಯಾತ್ರೆ, ಮತ್ತು ಆಗ್ಗಾಗೆ ಪಾದಯಾತ್ರೆಗಳನ್ನು ಮಾಡುವುದನ್ನು ನೋಡಬಹುದು.


ಕಠ್ಮಂಡುವಿನಿಂದ ಲಡಾಖ್‌ವರೆಗಿನ 4,500 ಕಿ.ಮೀ. ಬೈಸಿಕಲ್ ಯಾತ್ರೆಯ ಬಗ್ಗೆ ರೂಪಾರವರು ನಮಗೆ ಮಾಹಿತಿ ನೀಡುತ್ತಾರೆ, "ನಾವು ಕೆಲವು ದುರ್ಗಮ ಭೂಪ್ರದೇಶಗಳ ಮೂಲಕ ಸಂಚರಿಸಿದ್ದೇವೆ ಮತ್ತು ಹವಾಮಾನದಲ್ಲಿ ಬದಲಾವಣೆಗಳನ್ನು ಎದುರಿಸಿದ್ದೇವೆ, ಬಿಸಿಯ ಉರಿಯಿಂದ ಹಿಡಿದು ಮಳೆಯವರೆಗೆ, ಮಹಿಳೆಯರ ಸಬಲೀಕರಣದ ಸಂದೇಶವನ್ನು ದಾರಿಯುದ್ದಕ್ಕೂ ರವಾನಿಸುತ್ತೇವೆ" ಎಂದು ಅವರು ಹೇಳುತ್ತಾರೆ.


“ಪರ್ವತಗಳಲ್ಲಿರುವ ಕಸವನ್ನು ಸಂಗ್ರಹಿಸಿ ಪರಿಸರವನ್ನು ಶುಚಿಯಾಗಿಡಲು ನಾವು ಪಾದಯಾತ್ರೆಗಳನ್ನು ಏರ್ಪಡಿಸುತ್ತೇವೆ. ಅಷ್ಟೇ ಅಲ್ಲದೆ ನೇತ್ರ ಶಿಬಿರಗಳನ್ನು ಏರ್ಪಡಿಸಲು ಮತ್ತು ಈ ಗಾಯಗೊಂಡ ಪ್ರಾಣಿಗಳನ್ನು ರಕ್ಷಿಸಲು ಸಹಾಯ ಮಾಡುತ್ತೇವೆ,” ಎನ್ನುತ್ತಾರೆ ಮಿಗ್ಯೂರ್.


ಕುಂಗ್ ಫು ಸನ್ಯಾಸಿನಿಯರ ದಿನವು ಮುಂಜಾನೆ 3 ಗಂಟೆಗೆ ಪ್ರಾರಂಭವಾಗಿ ರಾತ್ರಿ 10ಕ್ಕೆ ಕೊನೆಗೊಳ್ಳುತ್ತದೆ ಮತ್ತು ಧ್ಯಾನ, ಪೂಜೆ, ತರಗತಿಗಳು ಮತ್ತು ಕುಂಗ್ ಫು ಅಭ್ಯಾಸವನ್ನು ಇದು ಒಳಗೊಂಡಿದೆ.


ಸನ್ಯಾಸಿನಿಯರು ತಮ್ಮದೇ ಆದ ಆಧ್ಯಾತ್ಮಿಕ ಸಂಗೀತ ರಚಿಸುವುದನ್ನು ಆನಂದಿಸುತ್ತಾರೆ ಮತ್ತು ಪಿಯಾನೋ ಮತ್ತು ಗಿಟಾರ್ ನುಡಿಸುತ್ತಾರೆ. ಇವರ ಜೀವನವು ಒಂದು ಉದ್ದೇಶ ಮತ್ತು ವಿಭಿನ್ನ ಆಸಕ್ತಿಗಳಿಂದ ತುಂಬಿದೆ!


“ಮಹಿಳೆಯರು ಸಕಾರಾತ್ಮಕ ರೀತಿಯಲ್ಲಿ ದೈರ್ಯವಾಗಿರಬೇಕು. ಮುಂಚೆ, ನಾನು ದುರ್ಬಲ ಮನಸ್ಸಿನ ವ್ಯಕ್ತಿಯಾಗಿದ್ದೆ, ಸುಲಭವಾಗಿ ಬಿಟ್ಟುಕೊಡಲು ಸಿದ್ಧವಾಗಿದ್ದೆ. ಈಗ ಕುಂಗ್ ಫು ಸನ್ಯಾಸಿಯಾದಮೇಲೆ, ಒಂದು ವೇಳೆ ನಾನು ವಿಫಲವಾದರೂ, ನಾನು ಮತ್ತೆ ಮೇಲಕ್ಕೆದ್ದು ಹೋರಾಡುತ್ತೇನೆ”ಎಂದು ಮಿಗ್ಯೂರ್‌ರವರು ಹೇಳುತ್ತಾರೆ.


"ನೀವು ಏನಾಗಲು ಬಯಸುತ್ತೀರಾ ಅದೇ ಆಗಿ, ಯಾವುದನ್ನೂ ದುರ್ಬಲ ಅಥವಾ ಕಠಿಣ ಎಂದು ಭಾವಿಸಬೇಡಿ," ಎಂದು ರೂಪಾರವರು ಹೇಳುತ್ತಾರೆ.