ರೈಲ್ವೆ ಸ್ಟಾಲ್‌ಗಳಲ್ಲಿ ಕೆಲಸ ಮಾಡಿ, ಎನ್‌ಜಿಒಗಳು ಮತ್ತು ಸಮಾಜದಲ್ಲಿ ಬದಲಾವಣೆ ತರುವವರಿಗಾಗಿ ಸಮುದಾಯ ವೇದಿಕೆಯನ್ನು ನಿರ್ಮಿಸಿದ ಈ ವ್ಯಕ್ತಿ

ಮನೋಜ್ ಪಚೌರಿ ಎಂಬ ವ್ಯಕ್ತಿಯು, ಸಾಮಾಜಿಕ ಪ್ರಭಾವವನ್ನು ಉಂಟುಮಾಡುವ ವಿಚಾರಗಳು, ಜನರು ಮತ್ತು ಕಥೆಗಳಿಗಾಗಿ ನೋಯ್ಡಾ ಮೂಲದ ಸೋಷಿಯೋ ಸ್ಟೋರಿ ಎಂಬ ಸಮುದಾಯ ವೇದಿಕೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆ ಎನ್‌ಜಿಒಗಳು ಮತ್ತು ವ್ಯಕ್ತಿಗಳು ತಮ್ಮ ಅದ್ಭುತ ಆಲೋಚನೆಗಳ ಮೇಲೆ ಕೆಲಸ ಮಾಡಲು ಮತ್ತು ಅವರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಹಾಯ ಮಾಡುತ್ತದೆ.

ರೈಲ್ವೆ ಸ್ಟಾಲ್‌ಗಳಲ್ಲಿ ಕೆಲಸ ಮಾಡಿ, ಎನ್‌ಜಿಒಗಳು ಮತ್ತು ಸಮಾಜದಲ್ಲಿ ಬದಲಾವಣೆ ತರುವವರಿಗಾಗಿ ಸಮುದಾಯ ವೇದಿಕೆಯನ್ನು ನಿರ್ಮಿಸಿದ ಈ ವ್ಯಕ್ತಿ

Monday October 28, 2019,

5 min Read

14 ನೇ ವಯಸ್ಸಿನಲ್ಲಿ, ಹೆಚ್ಚಿನ ಹದಿಹರೆಯದವರು ಯಾವ ಆಟ ಅಥವಾ ಚಟುವಟಿಕೆಯ ಬಗ್ಗೆ ಗಮನಹರಿಸಬೇಕು ಎಂದು ಯೋಚಿಸುತ್ತಿದ್ದಾರೆ. ಆದರೆ ಮನೋಜ್ ಪಚೌರಿ ಜೀವನೋಪಾಯಕ್ಕಾಗಿ, ಅವರ ಕುಟುಂಬಕ್ಕೆ ಸಹಾಯ ಮಾಡಲು ಮತ್ತು ಅವರ ಶಿಕ್ಷಣದ ಧನಸಹಾಯಕ್ಕಾಗಿ ಟಾಪ್-ಅಪ್ ಕಾರ್ಡ್‌ಗಳನ್ನು ಮಾರಾಟ ಮಾಡುತ್ತಿದ್ದರು. ಅಲಿಘರ್ ಜಿಲ್ಲೆಯ ಪೊಹಿನಾ ಎಂಬ ಸಣ್ಣ ಹಳ್ಳಿಯಿಂದ ಬಂದ ಮನೋಜ್‌ ರವರ ಬಾಲ್ಯ ಕಷ್ಟಕರವಾಗಿತ್ತು. ಅವರ ಕುಟುಂಬಕ್ಕೆ ಸಹಾಯ ಮಾಡುವುದು ಮತ್ತು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸುವುದು ಅವರ ಉದ್ದೇಶವಾಗಿತ್ತು. ಇಂಗ್ಲಿಷ್‌ನಲ್ಲಿ ಮಾತನಾಡುವುದು ಎಂದರೆ ಅವರಿಗೆ ಅಸಾಧ್ಯವಾದ ಕನಸಿನಂತಾಗಿತ್ತು.


ಇಂಗ್ಲಿಷ್ ಅನ್ನು ಮರೆತುಬಿಡಿ, ನಾನು ಹಿಂದಿ ಮಾತನಾಡಲು ಸಾಧ್ಯವಾಗುತ್ತದೆ ಎಂದು ಯೋಚಿಸಲು ಸಹ ಸಾಧ್ಯವಾಗದ ಸಮಯವಿತ್ತು” ಎಂದು ಈಗ 27 ವರ್ಷ ವಯಸ್ಸಿನ ಮನೋಜ್ ಹೇಳುತ್ತಾರೆ.


ಅಂದಿನಿಂದ ಅವರು ಬಹಳ ದೂರ ಸಾಗಿ ಬಂದಿದ್ದಾರೆ. 2018 ರಲ್ಲಿ ಮನೋಜ್ ಸಾಮಾಜಿಕ ಸಮುದಾಯ ವೇದಿಕೆಯಾದ ಸೋಷಿಯೊ ಸ್ಟೋರಿಯನ್ನು ಸ್ಥಾಪಿಸಿದರು, ಇದು ಸಾಮಾಜಿಕ ಪ್ರಭಾವವನ್ನು ಉಂಟುಮಾಡುವ ವಿಚಾರಗಳಿಗೆ, ಕಥೆಗಳಿಗೆ ಮತ್ತು ಜನರಿಗೆ ಧ್ವನಿ ಮತ್ತು ವೇದಿಕೆಯನ್ನು ಒದಗಿಸುತ್ತದೆ.


ಮನೋಜ್ ಪಚೌರಿ (ಎಡ) ಸಾಮಾಜಿಕ ವಲಯದ ಉದ್ಯಮಗಳಲ್ಲಿ ಜ್ಞಾನ ಮತ್ತು ಕೌಶಲ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾರೆ


ಜಗತ್ತನ್ನು ಉತ್ತಮವಾಗಿ ನಿರ್ಮಿಸಲು ಹೋರಾಡುತ್ತಿರುವ ವಿಶ್ವದಾದ್ಯಂತದ ಸಾಮಾಜಿಕ ಕಾರ್ಯಕರ್ತರು ಮತ್ತು ಎನ್‌ಜಿಒಗಳ ಪ್ರಯಾಣವನ್ನು ಜನರಿಗೆ ತಿಳಿಸುವುದರ ಹೊರತಾಗಿ, ವೇದಿಕೆಯು ಅವರ ಆಲೋಚನೆಗಳನ್ನು ಕಾರ್ಯಗತಗೊಳಿಸಲು ತಜ್ಞರು ಮತ್ತು ಇತರ ಸಾಮಾಜಿಕ ಪ್ರಭಾವ ಬೀರುವ ವ್ಯಕ್ತಿಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ.


ಇಲ್ಲಿಯವರೆಗೆ, ಸೊಷಿಯೊ ಸ್ಟೋರಿ ಎಂಟು ಎನ್ ಜಿ ಒಗಳಿಗೆ ಮಾರ್ಗದರ್ಶನ ನೀಡಿದೆ ಮತ್ತು 1,000 ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ಪ್ರಸ್ತುತ, ದೆಹಲಿ-ಎನ್‌ಸಿಆರ್ ಪ್ರದೇಶ, ಹರಿಯಾಣ, ಪಶ್ಚಿಮ ಬಂಗಾಳ, ಮತ್ತು ಈಶಾನ್ಯ ರಾಜ್ಯಗಳಲ್ಲಿ 5,00,000 ಮಹಿಳೆಯರಿಗೆ ಸಹಾಯ ಮಾಡಿದ ಮನೆ ಮನೆಗೆ ತೆರಳಿ ಆರೋಗ್ಯ ಸೌಲಭ್ಯ ನೀಡುವ ಆರೋಗ್ಯ ಎಂಬ ಸಂಸ್ಥೆಗೆ ಮಾರ್ಗದರ್ಶನ ನೀಡುತ್ತಿದೆ.

ಆರಂಭದ ದಿನಗಳು

ಆದಾಗ್ಯೂ, ಬಲವಾದ ಆರ್ಥಿಕ ಹಿನ್ನೆಲೆಯನ್ನು ಹೊಂದಿರದ ಮನೋಜ್‌ಗೆ ಇದು ಸುಲಭವಾಗಿರಲಿಲ್ಲ “ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಕಠಿಣವಾಗಿತ್ತು. ನನ್ನ ತಂದೆ ರೈತ ಮತ್ತು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ನನಗೆ ಆಹಾರವನ್ನು ನೀಡಲು ನನ್ನ ತಾಯಿ ಪ್ರತಿದಿನವೂ ಕೆಲಸ ಮಾಡುತ್ತಿದ್ದರು,” ಎಂದು ಅವರು ಹೇಳುತ್ತಾರೆ.


ಮನೋಜ್ ಗೆ 14 ವರ್ಷ ತುಂಬಿ ಒಂಬತ್ತನೇ ತರಗತಿಗೆ ಬಂದಾಗ, ಮನೆಯ ಜವಾಬ್ದಾರಿಯನ್ನು ತಮ್ಮ ಕೈಗೆ ತೆಗೆದುಕೊಳ್ಳಲು ನಿರ್ಧರಿಸಿದರು. ಅವರು 5 ಮತ್ತು 10 ರೂ ಮೌಲ್ಯದ ಟಾಪ್-ಅಪ್ ಕಾರ್ಡ್‌ಗಳನ್ನು ಖರೀದಿಸಲು ಹತ್ತಿರದ ನಗರಕ್ಕೆ ಪ್ರಯಾಣಿಸುತ್ತಿದ್ದರು, ಅದನ್ನು ಅವರು ತಮ್ಮ ಹಳ್ಳಿಗೆ ತಂದು 6 ಮತ್ತು 11 ರೂಗಳಿಗೆ ಮಾರಾಟ ಮಾಡುತ್ತಿದ್ದರು. ಇದು ಅವರಿಗೆ ತಿಂಗಳಿಗೆ 5,000 ರೂ. ಗಳಿಸಲು ಸಹಾಯ ಮಾಡಿತು, ಇದು ಅವರ ಶಿಕ್ಷಣಕ್ಕೆ ಹಣ ಮತ್ತು ಅವರ ಕುಟುಂಬವನ್ನು ಪೋಷಿಸಿಲು ಸಹಾಯ ಮಾಡಿತು.


ಡಿಂಪಲ್ ಪಾರ್ಮಾನ, ಲವ್ ಹೀಲ್ಸ್ ನ ಸ್ಥಾಪಕಿ

ಅವರು ತಮ್ಮ ರಾಜ್ಯ ಮಂಡಳಿ ಪರೀಕ್ಷೆಗಳನ್ನು ಪಾಸ್ ಮಾಡಿದರು, ಮತ್ತು 2008 ರಲ್ಲಿ, ಅಲಿಘರ್ ನ ಮಂಗಲಾಯತನ್ ವಿಶ್ವವಿದ್ಯಾಲಯದ ಹತ್ತಿರದ ಕಾಲೇಜಿನಲ್ಲಿ ವ್ಯವಹಾರ ಆಡಳಿತ ಕೋರ್ಸ್‌ನಲ್ಲಿ ಪದವಿ ಪಡೆದರು ಆದರೆ ಸೆಮಿಸ್ಟರ್ ಶುಲ್ಕವು ಮುಂದಿನ ದೊಡ್ಡ ಅಡಚಣೆಯಾಗಿತ್ತು.


“ನನ್ನ ಸೆಮಿಸ್ಟರ್ ಶುಲ್ಕವನ್ನು ಪಾವತಿಸಲು ನನ್ನ ಪೋಷಕರು ಸಾಲ ವ್ಯವಹಾರ ಮಾಡುವವರ ಬಳಿ ಮತ್ತು ಸಂಬಂಧಿಕರಿಂದ ಹಣವನ್ನು ಎರವಲು ಪಡೆಯುತ್ತಿದ್ದರು. ಹಣವನ್ನು ಹಿಂತಿರುಗಿಸಲು ನನ್ನ ಪೋಷಕರು ತಿಂಗಳುಗಟ್ಟಲೆ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ನಾನು ಪದವಿ ಪಡೆಯುವವರೆಗೂ ಇದು ಸುಗಮವಾದ ಹಾದಿಯಾಗಿರಲಿಲ್ಲ, ಮತ್ತು ನಾನು ನನ್ನ ಚಿಕ್ಕಪ್ಪನ ಮನೆಯಲ್ಲಿಯೇ ಇರುತ್ತಿದ್ದೆ.”


ಪದವಿಯ ನಂತರ, 2011 ರಲ್ಲಿ, ಮನೋಜ್ ಅವರು ಉದ್ಯೋಗವನ್ನು ಹುಡುಕತೊಡಗಿದರು, ಮತ್ತು ಸಂದರ್ಶನಗಳಿಗಾಗಿ 25 ಕ್ಕೂ ಹೆಚ್ಚು ಕಂಪನಿಗಳಿಗೆ ಹೋದರು, ಆದರೆ ಅದೃಷ್ಟವು ಒದಗಿ ಬರಲಿಲ್ಲ. ಕೆಲವು ಹೋರಾಟಗಳ ನಂತರ, ಅವರು ನೋಯ್ಡಾಕ್ಕೆ ಹೋಗಿ ಫೀಲ್ಡ್ ಬಾಯ್ ಆಗಿ ಕೆಲಸ ಕೈಗೊಂಡರು, ತಿಂಗಳಿಗೆ 2,000 ರೂ. ಸಂಬಳ ಸಿಗುತ್ತಿತ್ತು.


ಇದು ಮನೋಜ್ ಮಾಡಲು ಬಯಸಿದ ಕೆಲಸವಾಗಿರಲಿಲ್ಲ. “ನಾನು ರೈಲ್ವೆ ನಿಲ್ದಾಣದಲ್ಲಿದ್ದೆ ಮತ್ತು ನನ್ನ ಬಳಿ ಹಣವಿರಲಿಲ್ಲ. ಆದ್ದರಿಂದ, ನಾನು ಸ್ಟಾಲ್ ಮಾಲೀಕರಿಗಾಗಿ ಕೆಲಸ ಮಾಡಿದ್ದೇನೆ, ಅವರ ಸ್ಟಾಕ್ ಅನ್ನು ತುಂಬಲು ವಸ್ತುಗಳನ್ನು ತಲುಪಿಸುತ್ತೇನೆ ಮತ್ತು ಸ್ವಲ್ಪ ಹಣವನ್ನು ಪಡೆಯುತ್ತೇನೆ. ಕೆಲವು ದಿನಗಳ ನಂತರ, ನನ್ನ ಬಳಿ ಸ್ವಲ್ಪ ಹಣವಿದ್ದಾಗ, ಉತ್ತಮ ಜೀವನವನ್ನು ನಡೆಸಲು ಮತ್ತು ನನ್ನ ಕುಟುಂಬಕ್ಕೆ ಸಹಾಯ ಮಾಡಬಹುದು ಎಂದು ಎಂಬಿಎ ವ್ಯಾಸಂಗ ಮಾಡಲು ನಾನು ಮನಸ್ಸು ಮಾಡಿದೆ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಬದಲಾದ ವಿಷಯಗಳು

ಈ ಸಮಯದಲ್ಲಿ, ಮನೋಜ್ ಅವರು ಕಾಲೇಜು ಶುಲ್ಕಕ್ಕೆ ಸ್ವತಃ ಹಣವನ್ನು ವ್ಯವಸ್ಥೆ ಮಾಡಬೇಕಾಗಿತ್ತು, ಆದ್ದರಿಂದ ಅವರು ಒಂದೆರಡು ಬ್ಯಾಂಕುಗಳನ್ನು ಸಂಪರ್ಕಿಸಿದರು.


ವ್ಯವಸ್ಥಾಪಕರು ಆರಂಭದಲ್ಲಿ ಸಾಲ ನೀಡಲು ಒಪ್ಪಲಿಲ್ಲ, ಆದರೆ ನಾನು ಒಂದು ತಿಂಗಳು ಸತತವಾಗಿ ಬ್ಯಾಂಕ್‌ಗೆ ಬರುತ್ತಿರುವುದನ್ನು ನೋಡಿ, ಅವರು ನನ್ನ ಶಿಕ್ಷಣ ಸಾಲವನ್ನು ಅನುಮೋದಿಸಿದರು, ಇದಕ್ಕಾಗಿ ನಾನು ನನ್ನ ಕುಟುಂಬದ ಭೂಮಿಯನ್ನು ಮೇಲಾಧಾರವಾಗಿ ಸಲ್ಲಿಸಿದ್ದೇನೆ,” ಎಂದು ಮನೋಜ್ ಹೇಳುತ್ತಾರೆ.


2014 ರಲ್ಲಿ ಎಂಬಿಎ ಕೋರ್ಸ್ ಮುಗಿಸಿದ ನಂತರ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಕೆಲಸ ಪಡೆದರು. ಮಾರಾಟ ಮತ್ತು ಮಾರುಕಟ್ಟೆ ವಲಯದಲ್ಲಿನ ಕೆಲಸವು ಅವರಿಗೆ ಯೋಗ್ಯವಾದ ಗಳಿಕೆಯನ್ನು ನೀಡಿತು, ಆದರೆ ಮನೋಜ್ ಗೆ ಅದು ತೃಪ್ತಿ ನೀಡಲಿಲ್ಲ. ಅವರು ಒಂದೆರಡು ಉದ್ಯೋಗಗಳನ್ನು ಬದಲಾಯಿಸಿದರು ಮತ್ತು 2016 ರಲ್ಲಿ ದೆಹಲಿಗೆ ತೆರಳಿದರು.


ಮನೋಜ್ ಪಚೌರಿ ಸಾಮಾಜಿಕ ವಲಯದಲ್ಲಿ ಸಾಮರ್ಥ್ಯಗಳನ್ನು ಹೆಚ್ಚಿಸುವ ಬೋಧಕ ಕಾರ್ಯಾಗಾರಗಳು ಮತ್ತು ವೆಬ್‌ನಾರ್‌ಗಳನ್ನು ನೀಡುತ್ತಾರೆ


ಅವರ ಉದ್ಯೋಗಗಳು ಮತ್ತು ಅನುಭವವು ಅನೇಕ ಜನರು ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಬಯಸುತ್ತಾರೆ ಎಂಬುದನ್ನು ಅರಿತುಕೊಳ್ಳಲು ಸಾಧ್ಯವಾಯಿತು. ದುರದೃಷ್ಟವಶಾತ್, ಯಾವುದೇ ಸಂಪನ್ಮೂಲಗಳು ಮತ್ತು ಬೆಂಬಲವಿಲ್ಲದ ಕಾರಣ, ಅನೇಕ ವ್ಯಕ್ತಿಗಳು ಮತ್ತು ಎನ್‌ಜಿಒಗಳು ತಮ್ಮ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಅಥವಾ ಕಾರ್ಯಾಚರಣೆಯನ್ನು ಹೆಚ್ಚಿಸಲು ಸಾಧ್ಯವಾಗುತಿಲ್ಲ.


ಅವರು ಹೇಳುತ್ತಾರೆ, “ನಾನು ನನ್ನ ಹಳ್ಳಿಗೆ ಹಿಂತಿರುಗುತ್ತಿದ್ದಾಗಲೆಲ್ಲಾ, ಅನೇಕ ಯುವಕರನ್ನು ನಾನು ನೋಡಿದ್ದೇನೆ, ಅವರಲ್ಲಿ ಉತ್ಸಾಹವಿದ್ದರು ಅವರಿಗೆ ಬೆಂಬಲವಿರಲಿಲ್ಲ. ಅವರ ಪೋಷಕರು ದಿನದಲ್ಲಿ ಒಂದು ಹೊತ್ತಿನ ಊಟ ಪಡೆಯಲು ಹೆಣಗಾಡುತ್ತಿರುವುದರಿಂದ ಮೂಲಭೂತ ಶಿಕ್ಷಣ ಪಡೆಯುವುದು ಕೂಡ ಸಾಧ್ಯವಾಗುತ್ತಿರಲಿಲ್ಲ.”

ಸಹಾಯ ಹಸ್ತ

ಸಾವಯವ ಕೃಷಿ ಮತ್ತು ಇತರ ಸುಸ್ಥಿರ ಯೋಜನೆಗಳಲ್ಲಿ ಕೆಲಸ ಮಾಡುವ ಜನರಿಗೆ ಸಹಾಯ ಮಾಡಬೇಕಾಗಿದೆ ಎಂಬುದನ್ನು ಮನೋಜ್ ಗಮನಿಸಿದರು. 2017 ರಲ್ಲಿ, ಅವರು ನೋಯ್ಡಾದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಾರಂಭಿಸಿದರು, ಅಲ್ಲಿ ಸಮಾಜಕ್ಕಾಗಿ ಕೆಲಸ ಮಾಡಿದ ಜನರು ವೇದಿಕೆಯಲ್ಲಿ ಬಂದು ತಮ್ಮ ಕಥೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದನ್ನು ಮನೋಜ್ ಅವರ ಕೆಲಸದ ಜೊತೆಗೆ ಮಾಡುತ್ತಿದ್ದರು, ಮತ್ತು ಅವರು ಸ್ಥಳೀಯ ಎನ್‌ಜಿಒಗಳು ಮತ್ತು ವ್ಯಕ್ತಿಗಳಿಗೆ ಸಣ್ಣ-ಪ್ರಮಾಣದ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಿದ್ದರು.


ಇದು ಕೇವಲ ಅನೌಪಚಾರಿಕವಾಗಿತ್ತು. ಅದನ್ನು ಹೇಗೆ ಅಯೋಜಿಸಬೇಕು ಎಂಬುದರ ಕುರಿತು ನನಗೆ ಯಾವುದೇ ಕಲ್ಪನೆ ಇರಲಿಲ್ಲ. ನನ್ನ ಆಲೋಚನೆಯನ್ನು ಹೇಗೆ ಕಾರ್ಯಗತಗೊಳಿಸಬೇಕು ಮತ್ತು ಅದಕ್ಕೆ ಆಕಾರವನ್ನು ನೀಡುವುದು ಹೇಗೆ ಎಂದು ನಾನು 2018 ರಲ್ಲಿ ಕಲಿತಾಗ ಈ ಯೋಜನೆಗಳು ಪ್ರಾರಂಭವಾದವು,” ಎಂದು ಅವರು ಹೇಳುತ್ತಾರೆ.


ಮನೋಜ್ ಅವರು ಸತತವಾಗಿ ಏಳರಿಂದ ಎಂಟು ಕಾರ್ಯಕ್ರಮಗಳನ್ನು ಆಯೋಜಿಸಿದರು, ಮತ್ತು ಉದ್ಯಮದಲ್ಲಿ ಅವರು ಹೊಂದಿದ್ದ ಸಂಪರ್ಕಗಳೊಂದಿಗೆ ಅವರು ಸಿಎಸ್ಆರ್ ಮುಖ್ಯಸ್ಥರನ್ನು ಕರೆಯಲು ಪ್ರಾರಂಭಿಸಿದರು. ಮತ್ತು ಅದು ಸೋಷಿಯೋ ಸ್ಟೋರಿ ಯೋಜನೆಯ ಉದಯಕ್ಕೆ ಕಾರಣವಾಯಿತು.


ಸೊಷಿಯೋ ಸ್ಟೋರಿಯ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಭಾಗವಹಿಸಿದ ಎನ್‌ಜಿಒಗಳಲ್ಲಿ ಕ್ಲೌನ್‌ಸೆಲರ್‌ಗಳು, ಆರೂಗ್ಯಾ, ಲವ್ ಹೀಲ್ಸ್ ಮತ್ತು ಇತರರು ಸೇರಿದ್ದಾರೆ.


ಮನೋಜ್ ಶೀಘ್ರದಲ್ಲೇ ತಮ್ಮ ಕೆಲಸವನ್ನು ಬಿಟ್ಟು ಸೊಷಿಯೋ ಸ್ಟೋರಿ ನಿರ್ಮಿಸಲು ನಿರ್ಧರಿಸಿದರು.


ಸಿಎಸ್ಆರ್ ಯೋಜನೆಗಳನ್ನು ಪಡೆಯುವಲ್ಲಿ, ಅಥವಾ ಅವರ ವೆಬ್‌ಸೈಟ್‌ಗಳನ್ನು ನಿರ್ಮಿಸಲು ಅಥವಾ ಕಡಿಮೆ ಶುಲ್ಕದಲ್ಲಿ ಕೆಲವು ಕಾನೂನು ನೆರವನ್ನು ನೀಡಲು ನಾವು ಎನ್ ಜಿ ಒ ಗಳಿಗೆ ಆರಂಭಿಕ ಹಂತದ ಸಹಾಯವನ್ನು ಒದಗಿಸುತ್ತೇವೆ,” ಎಂದು ಮನೋಜ್ ಹೇಳುತ್ತಾರೆ.


ಸೊಷಿಯೋ ಸ್ಟೋರಿಯು ಸೊಷಿಯೋ ಸ್ಟೋರಿ ಅಕಾಡೆಮಿ ಎಂಬ ಇನ್ನೊಂದು ಸಂಸ್ಥೆಯನ್ನು ಸಹ ಹೊಂದಿದೆ, ಅಲ್ಲಿ ಮನೋಜ್ ಸಮಾಜದಲ್ಲಿ ಬದಲಾವಣೆ ತರುವ ಮನಸ್ಸಿನವರಿಗೆ ಸಾಮಾಜಿಕ ವಲಯದ ಉದ್ಯಮಗಳಲ್ಲಿನ ಜ್ಞಾನ ಮತ್ತು ಕೌಶಲ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಮತ್ತು ಅವರ ಯೋಜನೆ ಯಶಸ್ವಿಯಾಗಲು ಸಹಾಯ ಮಾಡುತ್ತಾರೆ. ಅವರು ಸಾಮಾಜಿಕ ವಲಯದಲ್ಲಿ ಸಾಮರ್ಥ್ಯಗಳನ್ನು ಹೆಚ್ಚಿಸುವ ಬೋಧಕ ಕಾರ್ಯಾಗಾರಗಳು ಮತ್ತು ವೆಬಿನಾರ್‌ಗಳನ್ನು ನೀಡುತ್ತಾರೆ. ಈ ಎಲ್ಲಾ ಚಟುವಟಿಕೆಗಳಿಗೆ ಪ್ರಾಯೋಜಕತ್ವದ ಮೂಲಕ ಹಣವನ್ನು ಹೊಂದಿಸಲಾಗುತ್ತದೆ.


ಸೋಷಿಯೋ ಸ್ಟೋರಿಯಲ್ಲಿ ನಿಮ್ಮ ಕಥೆಯನ್ನು ಹಂಚಿಕೊಳ್ಳಲು, ನೀವು ನಾಮನಿರ್ದೇಶನವನ್ನು ಮಾಡಬೇಕು. ಪ್ರತಿ ತ್ರೈಮಾಸಿಕದಲ್ಲಿ ಸುಮಾರು 500 ನಾಮನಿರ್ದೇಶನಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ಅಶೋಕ ವಿಶ್ವವಿದ್ಯಾಲಯದ ಸದಸ್ಯರು, ಟೆಡ್‌ ಎಕ್ಸ್ ನಲ್ಲಿ ಮಾತನಾಡುವ ವ್ಯಕ್ತಿಗಳು, ಸಮುದಾಯದ ಮುಖಂಡರು ಮತ್ತು ಇನ್ನೂ ಅನೇಕರನ್ನು ಒಳಗೊಂಡ ತಜ್ಞರ ಸಮಿತಿಯು ಅದನ್ನು ಪರಿಶೀಲಿಸುತ್ತದೆ.


ಪರೀಶೀಲನೆಯ ನಂತರ, ಐದು ಜನರನ್ನು ತಮ್ಮ ಕಥೆಗಳನ್ನು ಹಂಚಿಕೊಳ್ಳಲು ಆಯ್ಕೆ ಮಾಡಲಾಗುತ್ತದೆ. ಅವರು ತಮ್ಮ ಕಲ್ಪನೆಯನ್ನು ಹೊರಹಾಕಲು ಮತ್ತು ಸಿಎಸ್ಆರ್ ನಾಯಕರೊಂದಿಗೆ ಸಂವಹನ ನಡೆಸಲು ಅವಕಾಶವನ್ನು ಪಡೆಯುತ್ತಾರೆ.


ಇಲ್ಲಿಯವರೆಗೆ, ಸೊಷಿಯೋ ಸ್ಟೋರಿ 2,400 ಕಥೆಗಳನ್ನು ಹೇಳಿದ್ದಾಗಿ ಹೇಳಿಕೊಂಡಿದೆ ಮತ್ತು ಐದು ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಾಯ ಮಾಡಿದೆ.

ಮುಂದಿನ ಹಾದಿ

ಮನೋಜ್ ಈಗ ಹೂಡಿಕೆದಾರರನ್ನು ಸೇರಿಸಲು ಉತ್ಸುಕನಾಗಿದ್ದಾರೆ, ಮತ್ತು ಭಾರತದಾದ್ಯಂತದ ಎನ್‌ಜಿಒಗಳನ್ನು ಪಡೆದುಕೊಂಡು ಅದರ ಕಾರ್ಯಾಚರಣೆಯನ್ನು ಮಾಡಲು ಧನಸಹಾಯ ಅಥವಾ ಪರ್ಯಾಯ ಬೆಂಬಲವನ್ನು ಪಡೆಯಲು ಯೋಜನೆ ರೂಪಿಸಿದ್ದಾರೆ.


ಪ್ರಪಂಚದಾದ್ಯಂತ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿರುವ ಅನೇಕ ಹೀರೋಗಳ ಕಥೆಗಳನ್ನು ಹೊರ ತರಲು ಅವರು ಬಯಸುತ್ತಾರೆ. ಪ್ರಭಾವ ಬೀರುವ ಉದ್ಯಮವನ್ನು ನಿರ್ಮಿಸಲು ಸಹಾಯ ಮಾಡುವ ಮೂಲಕ ಮತ್ತು ಸರಿಯಾದ ಹೂಡಿಕೆದಾರರು ಮತ್ತು ಮಾಧ್ಯಮ ಮಾನ್ಯತೆ ನೀಡುವ ಮೂಲಕ ಮನೋಜ್ ಅವರಿಗೆ ಸಾಕಷ್ಟು ಬೆಂಬಲವನ್ನು ನೀಡುವ ಗುರಿ ಹೊಂದಿದ್ದಾರೆ.