ಮರುಬಳಕೆಗೆ ಯೋಗ್ಯವಾಗಿಸುವ ಪ್ರಕ್ರಿಯೆಯಿಂದ ಪುನರ್ಬಳಕೆವರೆಗೆ: ಹಳೆ ಪ್ಲಾಸ್ಟಿಕ್‌ ಅನ್ನು ವಸ್ತ್ರವನ್ನಾಗಿಸುವ ಮೂಲಕ ಮುಂಬೈ ಸ್ಟಾರ್ಟ್‌ ಅಪ್‌ ಪರಿಸರ ಸ್ನೇಹಿ ಆದ ಪರಿಯಿದು

ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯವಾದ ಆಹಾರ ಮತ್ತು ಪಾನೀಯ ತಯಾರಿಸುವ ರಾ ಪ್ರೆಸ್ಸರಿ ಸ್ಟಾರ್ಟ್ ಅಪ್ ಪ್ಲಾಸ್ಟಿಕ್ ಅನ್ನು ಸುಂದರ ಬಟ್ಟೆಗಳನ್ನಾಗಿ ಪರಿವರ್ತಿಸುತ್ತಿದೆ.

ಮರುಬಳಕೆಗೆ ಯೋಗ್ಯವಾಗಿಸುವ ಪ್ರಕ್ರಿಯೆಯಿಂದ ಪುನರ್ಬಳಕೆವರೆಗೆ: ಹಳೆ ಪ್ಲಾಸ್ಟಿಕ್‌ ಅನ್ನು ವಸ್ತ್ರವನ್ನಾಗಿಸುವ ಮೂಲಕ ಮುಂಬೈ ಸ್ಟಾರ್ಟ್‌ ಅಪ್‌ ಪರಿಸರ ಸ್ನೇಹಿ ಆದ ಪರಿಯಿದು

Monday July 22, 2019,

4 min Read

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) 2017 ರಲ್ಲಿ ನೀಡಿರುವ ವರದಿಯ ಪ್ರಕಾರ ದೇಶದಲ್ಲಿ ಪ್ರತಿ ನಿತ್ಯ 25,940 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಅಂದರೆ ಪ್ರತಿದಿನ ಸರಾಸರಿ ತಲಾ 11 ಕಿಲೋ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ.


ಈ ತ್ಯಾಜ್ಯದ ಬಹುಪಾಲು ಒಮ್ಮೆ ಮಾತ್ರ ಉಪಯೋಗಿಸಬಹುದಾದ ಅಥವಾ ಎಸೆಯಬಹುದಾದ ಬಾಟಲ್‌ಗಳು, ಬ್ಯಾಗ್‌ಗಳು, ಪ್ಯಾಕಿಂಗ್‌ ಕವರ್‌ಗಳು ಮತ್ತು ಪರ್ಫ್ಯೂಮ್‌ ಬಾಟಲ್‌ಗಳೇ ಆಗಿರುತ್ತವೆ. ಅವುಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ಗಳೇ ಅತ್ಯಂತ ಹಾನಿಕಾರಕ. ಒಂದು ಒಳ್ಳೆಯ ವಿಚಾರವೇನೆಂದರೆ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಪಾಲಿಥಿನ್‌ ಟೆರಿಪ್ಯಾಥ್ಲೇಟ್‌ನಿಂದ(ಪಿಇಟಿ) ತಯಾರಿಸಲಾಗುತ್ತಿದ್ದು, ಜೈವಿಕ ವಿಘಟನೆ ಹೊಂದದಿದ್ದರೂ ಸಂಪೂರ್ಣವಾಗಿ ಪುನರ್ಬಳಕೆ ಮಾಡಬಹುದಾಗಿದೆ.


q

ಭಾರತದ 60 ಮಹಾನಗರಗಳು ಪ್ರತಿನಿತ್ಯ ಅಂದಾಜು 15,000 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಉತ್ಪಾದಿಸುತ್ತಿದೆ.

ಮುಂಬೈ ಮೂಲದ ರಾ ಪ್ರೆಸ್ಸರಿ ಎನ್ನುವ ಫುಡ್‌ ಎಂಡ್‌ ಬೇವರೇಜ್‌ ಸ್ಟಾರ್ಟ್‌ ಅಪ್ ಕಂಪೆನಿಯು ಪ್ಲಾಸ್ಟಿಕ್‌ನಿಂದುಂಟಾಗುವ ಹಾನಿಯನ್ನು ತಡೆಯುವ ಚಿಕ್ಕ ಪ್ರಯತ್ನವನ್ನು ಮಾಡುತ್ತಿದೆ. 2013 ರಲ್ಲಿ ಆರಂಭವಾದ ಈ ಸ್ಟಾರ್ಟ್‌ ಅಪ್‌ ಕಂಪನಿಯು ಉತ್ತಮ ಗುಣ ಮಟ್ಟದ ತಂಪು ಪಾನೀಯಗಳನ್ನು ತಯಾರಿಸುತ್ತಿದ್ದು, ಪ್ಲಾಸ್ಟಿಕ್‌ನಿಂದ ಉಂಟಾಗುವ ಹಾನಿಯನ್ನರಿತು ರಾ ಸೈಕಲ್‌ ಹೆಸರಿನಲ್ಲಿ ಪರಿಸರ ಸ್ನೇಹಿ ಉಪಕ್ರಮವನ್ನು ಪ್ರಾರಂಭಿಸಿದೆ.


ಇದಕ್ಕಾಗಿ ತನ್ನ ಗ್ರಾಹಕರಿಂದ 1.2 ಮಿಲಿಯನ್‌ ಬಾಟಲ್‌ಗಳನ್ನು ಸಂಗ್ರಹಿಸಿ ಅದನ್ನು ಪುನರ್ಬಳಕೆ ಮಾಡಿ ವಸ್ತ್ರಗಳನ್ನು ತಯಾರಿಸಿ 1,500 ಟಿ-ಶರ್ಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.


ಪ್ಲಾಸ್ಟಿಕ್‌ ಬಳಸಿ ಜವಳಿ ತಯಾರಿಸುವ ಉಪಕ್ರಮದ ಪರಿಕಲ್ಪನೆಯ ರೂವಾರಿ ಅತಿಯಾ ರಕ್ಯಾನ್‌, ಅವರು ತಮ್ಮನ್ನು ರಾ ಪ್ರೆಸ್ಸರಿಯ ಚೀಫ್‌ ರಿಸೈಕ್ಲಿಂಗ್‌ ಆಫೀಸರ್‌ (ಸಿಆರ್ ಓ ) ಎಂದು ಕರೆದುಕೊಂಡಿದ್ದಾರೆ.


ಕ

ಪ್ಲಾಸ್ಟಿಕ್‌ ತ್ಯಾಜ್ಯದಿಂದ ತಯಾರಿಸಿದ ಟಿ-ಶರ್ಟ್‌ ಧರಿಸಿರುವ ಅತಿಯಾ ರಕ್ಯಾನ್

ರಾ ಪ್ರೆಸ್ಸರಿ ಸಿಇಓ ಆಗಿರುವ ಅನುಜ್ ರಕ್ಯಾನ್‌ ಹೇಳುತ್ತಾರೆ,


“ಪ್ಲಾಸ್ಟಿಕ್‌ ತ್ಯಾಜ್ಯಗಳ ಅಸಮರ್ಪಕ ವಿಲೇವಾರಿ ಇಡೀ ಪರಿಸರ ವ್ಯವಸ್ಥೆಗೇ ಹಾನಿಕಾರಕವಾಗಿದೆ. ಆದ್ದರಿಂದ ನಮ್ಮ ಸ್ಟಾರ್ಟ್‌ ಅಪ್‌ನಲ್ಲಿ ಬಳಸುವ ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಹಾನಿಯುಂಟಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಈ ದೃಷ್ಟಿಯಿಂದ ಪ್ಲಾಸ್ಟಿಕ್‌ ಪುನರ್ಬಳಕೆಯ ಪರಿಕಲ್ಪನೆ ಅತ್ಯುತ್ತಮ ಮಾರ್ಗವಾಗಿದೆ”


ಸ್ಟ್ರೀಟ್ ಸ್ಟುಡಿಯೋ ಹೆಸರಿನಲ್ಲಿ ಸಂಗ್ರಹಿಸಿ ಪ್ರಾರಂಭಿಸಿರುವ ಟಿ ಶರ್ಟ್‌ಗಳು 95 ಶೇಕಡಾದಷ್ಟು ಮರುಬಳಕೆ ಮಾಡಿದ ಪ್ಲಾಸ್ಟಿಕ್‌ ಮತ್ತು 5 ಶೇಕಡಾ ಸ್ಪ್ಯಾಂಡೆಕ್ಸ್ ನಿಂದ ಮಾಡಲ್ಪಟ್ಟಿದೆ. ಟಿ ಶರ್ಟ್‌ಗಳನ್ನು ಅತಿಯಾ ಸ್ವತಃ ತಾವೇ ವಿನ್ಯಾಸಗೊಳಿಸಿದ್ದು ಸುಕ್ಕು ರಹಿತ, ಆರಾಮದಾಯಕ ಮತ್ತು ಹಿಂದಿರುಗಿಸಬಹುದಾದಂತಹದ್ದಾಗಿದೆ.


ಪ್ಲಾಸ್ಟಿಕ್‌ ತ್ಯಾಜ್ಯದಿಂದ ಅಲಂಕಾರದತ್ತ


2017ರಲ್ಲಿ ರಾ ಪ್ರೆಸ್ಸರಿ ಪ್ರಾಯೋಜಕತ್ವದ ಸುಲಾ ಫೆಸ್ಟಿವಲ್‌ ಎಂಬ ವಾರ್ಷಿಕ ಆಹಾರ ಮತ್ತು ಖರೀದಿ ಮೇಳವನ್ನು ನಾಶಿಕ್‌ನಲ್ಲಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಆ ಪ್ರದೇಶದ ಸುತ್ತ ಮುತ್ತ ಟನ್‌ಗಟ್ಟಲೆ ಪ್ಲಾಸ್ಟಿಕ್‌ ತ್ಯಾಜ್ಯ ಎಸೆದಿರುವುದನ್ನು ಅತಿಯಾ ಗಮನಿಸಿದ್ದಾರೆ. ಅವರು ಅಳವಡಿಸಿದ್ದ ಡಸ್ಟ್‌ಬಿನ್‌ಗಳು ಸಹ ಪ್ಲಾಸ್ಟಿಕ್‌ ಬಾಟಲಿಗಳಿಂದ ತುಂಬಿ ಚೆಲ್ಲಿಹೋಗಿತ್ತೆಂದು ಇವರು ಹೇಳುತ್ತಾರೆ.


“ಆ ಕ್ಷಣದಿಂದ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಗೆ ಪರ್ಯಾಯ ಮಾರ್ಗ ರೂಪಿಸುವ ಬಗ್ಗೆ ಚಿಂತಿಸಲು ಆರಂಭಿಸಿದೆ, ಆರಂಭದಲ್ಲಿ ಪ್ಲಾಸ್ಟಿಕ್‌ ಬಾಟಲ್‌ಗಳ ಬದಲಿಗೆ ಗ್ಲಾಸ್‌ ಬಾಟಲ್‌ಗಳನ್ನು ಬಳಸಲು ನಿರ್ಧರಿಸಿದ್ದೆ. ಆದರೆ ಕೆಲವು ಸಂಶೋಧನೆಯ ನಂತರ ಗಾಜಿನ ಬಾಟಲ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬನ್‌ ಅಂಶ ಇರುವುದು ಗಮನಕ್ಕೆ ಬಂತು. ಆದಾಗ್ಯೂ, ಪ್ಲಾಸ್ಟಿಕ್‌ ಮರುಬಳಕೆ ಸದ್ಯದ ಉತ್ತಮ ಆಯ್ಕೆಯಾಗಿತ್ತು. ಇದರ ಬಗ್ಗೆ ಆಳವಾಗಿ ಯೋಚಿಸಿದಾಗ ಮರುಬಳಕೆ ಮಾಡಲು ಹಲವಾರು ಮಾರ್ಗಗಳಿವೆ ಎನ್ನುವುದನ್ನು ಅರಿತುಕೊಂಡೆ. ಯಾವಾಗಲೂ ಅಲಂಕಾರಿಕ ವಸ್ತುಗಳು ನನ್ನನ್ನು ಸೆಳೆಯುತ್ತಿರುವುದರಿಂದ ಆ ಮಾರ್ಗದಲ್ಲಿ ಹೋಗಲು ನಾನು ನಿರ್ಧರಿಸಿದೆ.” ಎಂದು ಅತಿಯಾ ಯುವರ್‌ಸ್ಟೋರಿಗೆ ವಿವರಿಸುತ್ತಾಳೆ.


ಕ

ರಾ ಪ್ರೆಸ್ಸರಿಯು ಗ್ರಾಹಕರು ಬಳಕೆ ಮಾಡಿದ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಸಂಗ್ರಹಿಸಿ ಜವಳಿ ಉತ್ಪಾದನೆ ಮಾಡುತ್ತಿದೆ.

ಇದನ್ನು ಪ್ರಾರಂಭಿಸಲು “ನೀವು ಮರಳಿಸಿ, ನಾವು ಪುನರ್ಬಳಕೆ ಮಾಡುತ್ತೇವೆ” ಎನ್ನುವ ನೀತಿಯನ್ನು ರಾ ಪ್ರೆಸ್ಸರಿ ಅಳವಡಿಸಿಕೊಂಡು, ಲಾಜಿಸ್ಟಿಕ್‌ ಸಂಸ್ಥೆಯ ಸಹಭಾಗಿತ್ವದೊಂದಿಗೆ ತನ್ನ ಸಂಸ್ಥೆಯ ಗ್ರಾಹಕರಿಂದ ಖಾಲಿ ಬಾಟಲಿಗಳನ್ನು ಸಂಗ್ರಹಿಸುವ ಪರಿಕಲ್ಪನೆಯನ್ನು ಅತಿಯಾ ರೂಪಿಸಿದ್ದಾರೆ.


ಗೂಗಲ್‌, ಲಾರೆನ್ಸ್‌ ಎಂಡ್‌ ಟುರ್ಬೋ ಮತ್ತು ಫೆಸ್‌ಬುಕ್‌ಗಳಂತಹ ಹಲವಾರು ಕಂಪೆನಿಗಳು ರಾ ಪ್ರೆಸ್ಸರಿಯ ಜ್ಯೂಸ್‌ ಬಾಟಲ್‌ಗಳನ್ನು ನಿಯಮಿತವಾಗಿ ಖರೀದಿಸಿದರು. ಇದರಿಂದ ರಾ ಪ್ರೆಸ್ಸರಿಯು ಪ್ರತಿ ಬಾರಿ ವಿತರಣೆ ಮಾಡಿದ ನಂತರ ಖಾಲಿ ಬಾಟಲ್‌ಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಿತ್ತು.


ಅಷ್ಟೇ ಅಲ್ಲದೇ ಇಪ್ಪತ್ತಕ್ಕಿಂತ ಹೆಚ್ಚು ಖಾಲಿ ಬಾಟಲ್‌ಗಳನ್ನು ಹೊಂದಿರುವ ಗ್ರಾಹಕರ ಬಳಿ ತಾವೇ ಖುದ್ದಾಗಿ ಹೋಗಿ ಸಂಗ್ರಹಿಸಿಕೊಂಡು ಬರುವ ವ್ಯವಸ್ಥೆಯನ್ನು ಈ ಸ್ಟಾರ್ಟ್‌ ಅಪ್‌ನಿಂದ ಪ್ರಾರಂಭಿಸಲಾಗಿದೆ.


ಕ

ರಾ ಪ್ರೆಸ್ಸರಿಯ ಏಳು ಬಾಟಲ್‌ಗಳನ್ನು ಬಳಸಿಕೊಂಡು ಒಂದು ಟಿ ಶರ್ಟ್‌ ತಯಾರಿಸಲಾಗುತ್ತಿದೆ.

“ಪುನರ್ಬಳಕೆ ಮಾಡಿದ ಏಳು ಪ್ಲಾಸ್ಟಿಕ್‌ ಬಾಟಲ್‌ಗಳಿಂದ ಒಂದು ಟಿ ಶರ್ಟ್ ತಯಾರಿಸುವುದಕ್ಕೆ ಉತ್ಪಾದನಾ ಕಂಪೆನಿಯೊಂದಿಗೆ ನಾವು ಪಾಲುದಾರಿಕೆಯನ್ನು ಹೊಂದಿದ್ದೇವೆ. ಈ ಪ್ರಕ್ರಿಯೆ ತುಂಬಾ ಸರಳವಾದದ್ದಾಗಿದೆ. ಮೊದಲು ಈ ಬಾಟಲ್‌ಗಳನ್ನು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕದಾಗಿ ಕತ್ತರಿಸಲಾಗುತ್ತದೆ. ನಂತರ ಇವುಗಳನ್ನು ಕರಗಿಸಿ ಸಣ್ಣ ಸಣ್ಣ ಚೂರುಗಳಾಗಿ ಮಾಡಿ ಅದನ್ನು ನೂಲನ್ನಾಗಿ ಪರಿವರ್ತಿಸಲಾಗುತ್ತದೆ. ನೂಲನ್ನು ನೇಯ್ದು ಬಟ್ಟೆ ತಯಾರಿಸಲಾಗುತ್ತದೆ, ಅದನ್ನು ಹೊಲಿದ ನಂತರ ಬಣ್ಣ ಬಳಿದು ಟಿ ಶರ್ಟ್‌ ಉತ್ಪಾದಿಸಲಾಗುತ್ತದೆ.” ಎಂದು ಅತಿಯಾ ವಿವರಿಸುತ್ತಾರೆ


ಟಿ ಶರ್ಟ್‌ಗಳು ಸುಕ್ಕು ರಹಿತ, ಆರಾಮದಾಯಕ ಮತ್ತು ಹಿಂದಿರುಗಿಸಬಹುದಾದಂತಹದ್ದಾಗಿದ್ದು ಪ್ಲಾಸ್ಟಿಕ್‌ ಪುನರ್ಬಳಕೆಯ ಮಹತ್ವವನ್ನು ತಿಳಿಸುವ ಬರಹಗಳನ್ನು ಮುದ್ರಿಸಲಾಗುತ್ತದೆ. ಒಂದು ಟಿ ಶರ್ಟ್‌ನ ಬೆಲೆ 1,000 ರೂ ಆಗಿದೆ, ಇದು ಆನ್‌ಲೈನ್‌ನಲ್ಲಿ ಲಭ್ಯವಿದ್ದು ಎಲ್ಲ ಪ್ರದೇಶಗಳಿಗೂ ವಿತರಿಸುವ ಆಯ್ಕೆಯನ್ನು ಹೊಂದಿದೆ.


ಪ್ಲಾಸ್ಟಿಕ್‌ ಮುಕ್ತ ಪರಿಸರಕ್ಕೆ ಕೊಡುಗೆ


ರಾ ಪ್ರೆಸ್ಸರಿಯು ಎಲ್ಲ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಪುನರ್ಬಳಕೆ ಮಾಡುವ ಮೂಲಕ ಇತರೆಲ್ಲ ಸಂಸ್ಥೆಗಳಿಗೆ ಪ್ಲಾಸ್ಟಿಕ್‌ ಬಳಕೆಯನ್ನು ನಿಯಂತ್ರಿಸುವಂತೆ ಪ್ರೇರೇಪಿಸುತ್ತಿದೆ.


ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್‌ ಸಮಂಜಸವಾಗಿ ಹೊಂದಿಕೊಂಡಿರುವುದರಿಂದ, ಕಂಪನಿಗಳಿಗೆ ಅಥವಾ ಕೈಗಾರಿಕೆಗಳಿಗೆ ಸಂಪೂರ್ಣವಾಗಿ ಅದರ ಬಳಕೆ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಅವುಗಳ ಪುನರ್ಬಳಕೆಯ ಮೂಲಕ ಅಡುಗೆ ಮನೆಯ ಸಾಮಗ್ರಿಗಳು, ಬಟ್ಟೆಗಳು ಮತ್ತು ಹೊದಿಕೆಗಳನ್ನು ಉತ್ಪಾದಿಸಿ ಮಾರಾಟ ಮಾಡಬಹುದಾಗಿದೆ. ಇದರಿಂದ ಪರಿಸರ ಸಂರಕ್ಷಣೆಯಷ್ಟೇ ಅಲ್ಲದೇ, ಹಣ ಸಂಪಾದನೆಯ ಮಾರ್ಗವೂ ಆಗಿದೆ,” ಎಂದು ಅತಿಯಾರವರು ಹೇಳುತ್ತಾರೆ.


ಕ

ರಾ ಪ್ರೆಸ್ಸರಿಯು ಪುನರ್ಬಳಕೆಯ ಮೂಲಕ ಬಟ್ಟೆಗಳನ್ನು ತಯಾರಿಸಿ ಪ್ಲಾಸ್ಟಿಕ್‌ ಬಳಕೆಯನ್ನು ನಿಯಂತ್ರಿಸುವತ್ತ ಹೆಜ್ಜೆ ಹಾಕುತ್ತಿದೆ.

ಭಾರತದಲ್ಲಿ ಇಂದು ಶೇಕಡಾ 60 ರಷ್ಟು ಪ್ಲಾಸ್ಟಿಕ್‌ ಮಾತ್ರ ಮರುಬಳಕೆಯಾಗುತ್ತಿದೆ. ಆದಾಗ್ಯೂ, ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಪ್ರೇಮಿಗಳು ಮತ್ತು ಸಂಸ್ಥೆಗಳು ಪ್ಲಾಸ್ಟಿಕ್‌ ಮರುಬಳಕೆಯ ಕೆಲಸದಲ್ಲಿ ಕೈ ಜೋಡಿಸಿದರೆ ಶೇಕಡಾ 100ರಷ್ಟು ಯಶಸ್ಸು ಕಾಣಬಹುದು.


ರಾ ಪ್ರೆಸ್ಸರಿಯ ಕುರಿತು ಒಂದಿಷ್ಟು ಮಾಹಿತಿ


ಅನುಜ್‌ರವರು ಬಹಳ ಕಾಲದವರೆಗೆ ಆರೋಗ್ಯತಜ್ಞರಾಗಿದ್ದರು. ಅಮೆರಿಕದಲ್ಲಿದ್ದಾಗ ಅವರಿಗೆ ತಂಪಾದ ಫ್ರೆಶ್‌ ಜ್ಯೂಸ್‌ನ್ನು ತಯಾರಿಸುವ ಯೋಚನೆ ಹೊಳೆಯಿತು. ಯಾರೊಬ್ಬರ ಸಹಾಯವಿಲ್ಲದೇ ಪ್ರಾರಂಭವಾದ ರಾ ಪ್ರೆಸ್ಸರಿಯು ನಂತರದ ದಿನಗಳಲ್ಲಿ ಚಿಕ್ಕ ಪ್ರಮಾಣದ ಹೂಡಿಕೆಯನ್ನು ಪಡೆಯಲಾರಂಭಿಸಿತು.


ಕ

ರಾ ಪ್ರೆಸ್ಸರಿ ಸ್ಟಾರ್ಟ್‌ ಅಪ್‌ ತಯಾರಿಸುತ್ತಿರುವ ತಂಪಾದ ಹಣ್ಣಿನ ಜ್ಯೂಸ್‌

ಚಿತ್ರ: ರಾ ಪ್ರೆಸ್ಸರಿ

ಈ ದಿಶೆಯಲ್ಲಿ ನಡೆದು ಬಂದ ದಾರಿಯನ್ನು ವಿವರಿಸುತ್ತಾ, ಅವರು ಹೀಗೆ ಹೇಳುತ್ತಾರೆ.

“ನಾನು ಕಾಲೇಜಿನಲ್ಲಿ ಓದುತ್ತಿರುವಾಗ ಮತ್ತು ವಿದೇಶದಲ್ಲಿ ಕೆಲಸ ಮಾಡುತ್ತಿರುವಾಗ, ಭಾರತದಲ್ಲಿ ಫಿಟ್ನೆಸ್‌ಗೆ ಸಂಬಂಧಿಸಿದ ಉತ್ಪನ್ನಗಳ ಕೊರತೆ ಇರುವುದನ್ನು ಗಮನಿಸಿದ್ದೆ. ಮನೆಯಲ್ಲಿ ತಯಾರಿಸಿದ ಆಹಾರಗಳು ಮಾತ್ರ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು. ಇದಲ್ಲದೇ, ಹಲವಾರು ಉತ್ಪನ್ನಗಳು ಕಡಿಮೆ ಕೊಬ್ಬಿನಾಂಶವಿದೆ, ಸಂರಕ್ಷಣೆಗೆ ಯಾವುದೇ ರಾಸಾಯನಿಕ ಬಳಸಿಲ್ಲ ಮತ್ತು ನೋ ಶುಗರ್‌ ಎಂಬ ಸುಳ್ಳುಗಳನ್ನು ಹೇಳಿಕೊಂಡು ಮಾರಾಟವಾಗುತ್ತಿದ್ದವು.