ಶೀಘ್ರದಲ್ಲೆ ಭಾರತದಲ್ಲಿ ಪುನರಾರಂಭಗೊಳ್ಳಲಿರುವ ಪಬ್ಜಿ
ಪಬ್ಜಿ ಕಾರ್ಪೋರೆಷನ್ ಭಾರತೀಯ ಅಂಗಸಂಸ್ಥೆಯನ್ನು ತೆರೆಯುವುದಾಗಿ ಘೋಷಿಸಿದ್ದು, ಅಲ್ಲಿ 100 ಕ್ಕೂ ಹೆಚ್ಚಿನ ಜನರನ್ನು ವ್ಯವಹಾರ, ಇ ಸ್ಪೋರ್ಟ್ಸ್ ಮತ್ತು ಗೇಮ್ ಅಭಿವೃದ್ಧಿಗಾಗಿ ನೇಮಿಸಿಕೊಳ್ಳಲಿದೆ.
ಪಬ್ಜಿ ಗೇಮ್ನ ನಿರ್ಮಾತೃ ಪಬ್ಜಿ ಕಾರ್ಪೋರೆಷನ್ ಮತ್ತು ದಕ್ಷಿಣ ಕೋರಿಯಾದ ಕ್ರಾಫ್ಟನ್ ಹೊಸ ಪಬ್ಜಿ ಮೊಬೈಲ್ ಇಂಡಿಯಾ ಗೇಮ್ ಅನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದು, ಇದನ್ನು ವಿಶೇಷವಾಗಿ ಭಾರತದ ಮಾರುಕಟ್ಟೆಗಾಗಿ ತಯಾರಿಸಲಾಗಿದೆ ಎಂದು ಹೇಳಿಕೊಂಡಿದೆ. ಸುರಕ್ಷತೆ, ಉತ್ತಮ ಗೇಮ್ಪ್ಲೇನೊಂದಿಗೆ ಸ್ಥಳೀಯ ವಿಡಿಯೋ ಗೇಮ್, ಇಸ್ಪೋರ್ಟ್ಸ್, ಎಂಟರ್ಟೈನ್ಮೆಂಟ್ ಮತ್ತು ಐಟಿ ಇಂಡಸ್ಟ್ರೀಸ್ನಲ್ಲಿಯೂ ಕಂಪನಿ ಹೂಡಿಕೆ ಮಾಡಲಿದೆ.
ರಾಷ್ಟ್ರೀಯ ಭದ್ರತೆಗೆ ಅಪಾಯವೆಂದು ಈ ವರ್ಷದ ಸೆಪ್ಟೆಂಬರ್ನಲ್ಲಿ ಹಲವು ಇತರೆ ಚೀನಿ ಆ್ಯಪ್ಗಳೊಂದಿಗೆ ಭಾರತ ಸರ್ಕಾರ ಪಬ್ಜಿಯನ್ನು ನಿಷೇಧಿಸಿತ್ತು.
ಭಾರತೀಯ ಆಟಗಾರರ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ನಿಯಮಿತವಾಗಿ ಆಯವ್ಯಯವನ್ನು ಮತ್ತು ಭಾರತೀಯ ಬಳಕೆದಾರರ ವೈಯಕ್ತಿಕ ವಿವರಗಳಿರುವ ಸಂಗ್ರಹಣಾ ಘಟಕಗಳ ಪರೀಕ್ಷೆಯನ್ನು ನಡೆಸಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆರೋಗ್ಯಕರ ಆಟದ ವಾತಾವರಣವನ್ನು ನಿರ್ಮಿಸಲು ಮತ್ತು ಬೆಳೆಸಲು, ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಗೇಮ್ ಕಂಟೆಂಟ್ ಇರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಆರೋಗ್ಯಕರ ಆಟದ ಅಭ್ಯಾಸವನ್ನು ಉತ್ತೇಜಿಸಲು ಆಟದ ಸಮಯದ ಮೇಲೆ ಕಂಪನಿ ನಿರ್ಬಂಧ ಹೇರಲಿದೆ.
ಪಬ್ಜಿ ಕಾರ್ಪೋರೆಷನ್ ಭಾರತೀಯ ಅಂಗಸಂಸ್ಥೆಯನ್ನು ತೆರೆಯುವುದಾಗಿ ಘೋಷಿಸಿದ್ದು, ಅಲ್ಲಿ 100 ಕ್ಕೂ ಹೆಚ್ಚಿನ ಜನರನ್ನು ವ್ಯವಹಾರ, ಇ ಸ್ಪೋರ್ಟ್ಸ್ ಮತ್ತು ಗೇಮ್ ಅಭಿವೃದ್ಧಿಗಾಗಿ ನೇಮಿಸಿಕೊಳ್ಳಲಿದೆ. ಭಾರತದಲ್ಲಿ ಕಚೇರಿ ಸ್ಥಾಪಿಸುವುದರ ಜತೆಗೆ ಸ್ಥಳೀಯ ಉದ್ಯಮಗಳೊಂದಿಗೆ ಸಕ್ರೀಯವಾಗಿ ಸಹಯೋಗ ಹೊಂದಿ ತನ್ನ ಗೇಮಿಂಗ್ ಸೇವೆಯನ್ನು ಬಲಪಡಿಸಲಿದೆ.
ತನ್ನ ಪೇರೆಂಟ್ ಕಂಪನಿ ಕ್ರಾಫ್ಟನ್ನೊಂದಿಗೆ ಪಬ್ಜಿ ಕಾರ್ಪೋರೇಷನ್ ಸ್ಥಳೀಯ ವಿಡಿಯೋ ಗೇಮ್ಗಳು, ಇಸ್ಪೋರ್ಟ್, ಎಂಟರ್ಟೈನ್ಮೆಂಟ್ ಮತ್ತು ಐಟಿ ಇಂಡಸ್ಟ್ರೀಸ್ನಲ್ಲಿ $100 ಮಿಲಿಯನ್ ಮೌಲ್ಯದ ಹೂಡಿಕೆ ಮಾಡಲಿದೆ.


