ಬಯಲು ಬಹಿರ್ದೆಸೆ ಮುಕ್ತ ಗ್ರಾಮೀಣ ಭಾರತಕ್ಕಾಗಿ ಅತೀ ಕಡಿಮೆ ಬೆಲೆಯ ಶೌಚಾಲಯಗಳನ್ನು ನಿರ್ಮಿಸುತ್ತಿದೆ ಸ್ಯಾಟೋ

ಸ್ವಚ್ಛ ಭಾರತ ಅಭಿಯಾನದ ಹಿನ್ನಲೆಯಲ್ಲಿ ಪರಿಸರಕ್ಕೆ ಪೂರಕವಾದ ಗ್ರೀನ್ ಶೌಚಾಲಯಗಳನ್ನು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ಮಾಡುವ ಗುರಿಯನ್ನು ಸ್ಯಾಟೊ ಹೊಂದಿದೆ.

ಬಯಲು ಬಹಿರ್ದೆಸೆ ಮುಕ್ತ ಗ್ರಾಮೀಣ ಭಾರತಕ್ಕಾಗಿ ಅತೀ ಕಡಿಮೆ ಬೆಲೆಯ ಶೌಚಾಲಯಗಳನ್ನು ನಿರ್ಮಿಸುತ್ತಿದೆ ಸ್ಯಾಟೋ

Saturday December 14, 2019,

4 min Read

ತಮಿಳುನಾಡಿನ ತಿರುಚಿರಾಪಳ್ಳಿಯ ಮರಾಚಿ ಸುಬ್ಬುರಾಮನ್ ಅವರು 1986 ರಿಂದ ತಮ್ಮ ಲಾಭೋದ್ದೇಶವಿಲ್ಲದ ಸಂಸ್ಥೆ ಸ್ಕೋಪ್ (ಸೊಸೈಟಿ ಫಾರ್ ಕಮ್ಯುನಿಟಿ ಆರ್ಗನೈಸೇಶನ್ ಮತ್ತು ಪೀಪಲ್ಸ್ ಎಜುಕೇಶನ್) ಮೂಲಕ ಜನರ ಜೀವನವನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದಾರೆ. ಮಹಿಳೆಯರ ಸಬಲೀಕರಣದಿಂದ ಹಿಡಿದು ಅವರಿಗೆ ಜೀವನೋಪಾಯದ ಮೂಲವನ್ನು ಒದಗಿಸುವುದು ಮತ್ತು ತನ್ಮೂಲಕ, ಅವರಿಗೆ ಆರಾಮದಾಯಕ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ಉದ್ದೇಶ ಅವರದ್ದು.


ಆದರೆ, ಉತ್ತಮ ಆದಾಯವಷ್ಟೇ ಉತ್ತಮ ಜೀವನವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ತಮ್ಮ 69 ನೇ ವಯಸ್ಸಿನಲ್ಲಿ ಅರಿತುಕೊಂಡರು. ಹೆಚ್ಚಿನ ಕುಟುಂಬಗಳು ತಮ್ಮ ಹಣವನ್ನು ವೈದ್ಯಕೀಯ ಬಿಲ್‌ಗಳಿಗಾಗಿ ಖರ್ಚು ಮಾಡುತ್ತಿರುವುದು ಅವರ ಗಮನಕ್ಕೆ ಬಂದಿತು, ಇದಕ್ಕೆ ಮೂಲ ಕಾರಣ ನೈರ್ಮಲ್ಯ ಸೌಲಭ್ಯಗಳ ಕೊರತೆ. ಈ ಹಿನ್ನಲೆಯಲ್ಲಿ ಅವರು 1996 ರಲ್ಲಿ, ಜನರಲ್ಲಿ ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಿದರು.


ಹಳ್ಳಿಗರೊಂದಿಗೆ ಮರಾಚಿ ಗ್ರೀನ್ ಟಾಯ್ಲೆಟ್ ಅನ್ನು ಉದ್ಘಾಟಿಸುತ್ತಿರುವುದು


ಅವರು ಮೊದಲಿಗೆ ಎರಡು ಹೊಂಡಗಳನ್ನು ಹೊಂದಿರುವ ಇಕೋಸನ್ ಎಂಬ ಶೌಚಾಲಯಗಳ ಸರಣಿಯನ್ನು ಅಭಿವೃದ್ಧಿಪಡಿಸಿದರು; ಇದು ಕೃಷಿ ತ್ಯಾಜ್ಯವನ್ನು ವಿಲೇವಾರಿ ಮಾಡುವ ರಚನೆಯನ್ನು ಒಳಗೊಂಡಿತ್ತು. ಆದರೆ ವಿನ್ಯಾಸವು ಬಳಕೆದಾರ ಸ್ನೇಹಿಯಾಗಿರಲಿಲ್ಲ, ಇದೆ ಸಂದರ್ಭದಲ್ಲಿ ಅವರು ನವದೆಹಲಿಯ ಸಾಟೋ ನ ವಿ-ಟ್ರ್ಯಾಪ್ ಶೌಚಾಲಯಗಳನ್ನು ನೋಡಿ ಅದರಿಂದ ಪ್ರೇರಿತರಾದರು.


ವಸತಿ ಮತ್ತು ಕಟ್ಟಡ ಸಾಮಗ್ರಿಗಳನ್ನು ಉತ್ಪಾದಿಸುವ ಜಾಗತಿಕ ಮಟ್ಟದ ಕಂಪನಿ ಲಿಕ್ಸಿಲ್ ಕಾರ್ಪೊರೇಶನ್‌ನ ಭಾಗವಾಗಿರುವ ಸ್ಯಾಟೊ ಪರಿಸರ ಸ್ನೇಹಿ ಮತ್ತು ಕಡಿಮೆ ಬೆಲೆಯ ಶೌಚಾಲಯಗಳ ತಯಾರಿಕೆಯಲ್ಲಿ ತೊಡಗಿದೆ. ಈ ಶೌಚಾಲಯಗಳು ಕಡಿಮೆ ನೀರನ್ನು ಬಳಸಿಕೊಳ್ಳುತ್ತವೆ ಮತ್ತು ಶೌಚಾಲಯಗಳು ಒಂದು ಯುನಿಟ್‌ ಗೆ 700 ರೂ ಯಂತೆ ದೊರೆಯುತ್ತದೆ.


ಇಂದು, ಸುಮಾರು ಮೂರು ದಶಲಕ್ಷ ಯುನಿಟ್ ಸ್ಯಾಟೊ ಶೌಚಾಲಯಗಳನ್ನು 27 ಕ್ಕೂ ಹೆಚ್ಚು ದೇಶಗಳಿಗೆ ರವಾನಿಸುತ್ತಿದ್ದಾರೆ, ಇದು 15 ದಶಲಕ್ಷ ಜನರಿಗೆ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ.


ಬದಲಾವಣೆಯ ತುಡಿತ

ಮರಾಚಿಯ ಪ್ರಕಾರ, ಸ್ಯಾಟೊ ಶೌಚಾಲಯಗಳನ್ನು ವಿಶೇಷವಾಗಿ ಭಾರತಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಹೊಂಡಗಳ ನಡುವೆ ದಿಕ್ಕನ್ನು ಬದಲಾಯಿಸುವ ತೊಂದರೆಯನ್ನು ತೆಗೆದುಹಾಕುತ್ತದೆ. ಇಲ್ಲಿ ಕಾರ್ಯನಿರ್ವಹಣೆಯ ದೃಷ್ಟಿಯಿಂದ, ಮತ್ತು ಧೀರ್ಘ ಕಾಲ ಬಾಳಿಕೆ ಬರುವಹಾಗೆ ಎರಡು ಪ್ಲಾಸ್ಟಿಕ್ ಕೊಳವೆಗಳನ್ನು ಬಳಸುತ್ತಾರೆ. ಮೊದಲ ಪಿಟ್ ತುಂಬಿದ ನಂತರ, ಯಾವುದೇ ಉದ್ದನೆಯ ಕೋಲಿನಂತಹ ವಸ್ತುವನ್ನು ಬಳಸಿಕೊಂಡು ಶೌಚಾಲಯದ ದಿಕ್ಕನ್ನು ಸುಲಭವಾಗಿ ಬದಲಾಯಿಸಬಹುದು.


"ಇದು ತುಂಬಾ ಸುಲಭದ ಕೆಲಸವಾಗಿದ್ದು ಯಾವುದೇ ಹೊಂಡವನ್ನು ಮತ್ತೆ ತೆಗೆಯುವ ಅಗತ್ಯವಿಲ್ಲ, ಕೇವಲ ಒಂದು ಉದ್ದದ ಕೋಲಿನಿಂದ ಶೌಚಾಲಯದ ದಿಕ್ಕನ್ನು ಬಲಾಯಿಸಬಹುದು" ಎಂದೆನ್ನುತ್ತಾರೆ ಅವರು.


ಸಾಂಪ್ರದಾಯಿಕ ಶೌಚಾಲಯಗಳಿಗೆ ಹೋಲಿಸಿದರೆ ಶೌಚಾಲಯಗಳಿಗೆ ಒಂದು ಲೀಟರ್ ಗಿಂತಲೂ ಕಡಿಮೆ ನೀರು ಬೇಕಾಗುತ್ತದೆ, ಸಾಂಪ್ರದಾಯಿಕ ಶೌಚಾಲಯ ಪ್ರತಿ ಫ್ಲಶ್‌ಗೆ ಸುಮಾರು 15 ಲೀಟರ್ ನೀರನ್ನು ಬಳಸುತ್ತದೆ.


ಕಡಿಮೆ ವೆಚ್ಚದ, ಕೈಗೆಟುಕುವ ಪರಿಹಾರ

ಮರಾಚಿ ಮಾತ್ರವಲ್ಲ, ಭಾರತದಾದ್ಯಂತ ಅವರಂತಹ ಅನೇಕರು ಸುಸ್ಥಿರ ಪರಿಹಾರಗಳ ಸಹಾಯದಿಂದ ಅದೇ ಪರಿಣಾಮವನ್ನು ಕಂಡಿದ್ದಾರೆ.


ಒಟ್ಟಾರೆ ರಚನೆಯ ವೆಚ್ಚದ ಕುರಿತು ಸೋಷಿಯಲ್ ಸ್ಟೋರಿಯೊಂದಿಗೆ ಮಾತನಾಡುತ್ತಾ, ಲಿಕ್ಸಿಲ್ ಸ್ಯಾಟೊದ ಮಾರ್ಕೆಟಿಂಗ್ ಮತ್ತು ಟೆಕ್ನಾಲಜಿ ನಿರ್ದೇಶಕ ಡೈಗೊ ಇಶಿಯಾಮಾ ಹೀಗೆ ಹೇಳುತ್ತಾರೆ,


ಭಾರತದಲ್ಲಿ ಸ್ಯಾಟೊ ಶೌಚಾಲಯಗಳ ಮೂಲ ವೆಚ್ಚ 250 ರೂ. ಗಳಿಂದ ಪ್ರಾರಂಭವಾಗುತ್ತದೆ ಮತ್ತು ಫುಟ್‌ರೆಸ್ಟ್ ಮತ್ತು ಇತರ ಆಡ್-ಆನ್‌ಗಳನ್ನು ಅವಲಂಬಿಸಿ ಒಟ್ಟಾರೆ ತಗಲುವ ಖರ್ಚು 500 ರೂ. ಆದರೆ ಆಗಲೂ, ಒಟ್ಟಾರೆ ವೆಚ್ಚ 700 ರೂ. ಗಿಂತ ಹೆಚ್ಚಾಗುವುದಿಲ್ಲ. ಈ ಉತ್ಪನ್ನಗಳು ಸಾಗಿಸಲು ಸುಲಭ, ಮತ್ತು ಇವು ಭಾರತದಾದ್ಯಂತ ಹಾರ್ಡ್‌ವೇರ್ ಅಂಗಡಿಗಳಲ್ಲಿ ಲಭ್ಯವಿದೆ.”


ಸ್ಯಾಟೊ ನ ಡೈಗೊ ಇಶಿಯಾಮಾ, ಸೂಕ್ತ ಪರಿಹಾರವನ್ನು ವಿನ್ಯಾಸಗೊಳಿಸುವ ಮೊದಲು ಸ್ಥಳೀಯ ನಿವಾಸಿಗಳ ಎಲ್ಲಾ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ.


ಲಿಕ್ಸಿಲ್ ತನ್ನ ಹೊಸ 'ಟೈ ಲೋರೆಡ್' ಎಂಬ ಸ್ಯಾಟೊ ಸರಣಿಯ ಶೌಚಾಲಯಗಳನ್ನು ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಹೊರತಂದಿದೆ ಮತ್ತು 2017 ರಿಂದ ಇತರ ಎಂಟು ಭಾರತೀಯ ರಾಜ್ಯಗಳಿಗೆ ಕಾಲಿಟ್ಟಿದೆ. ಇದರ ಹೊಸ ಕಸ್ಟಮೈಸ್ ಮಾಡಿದ ಪರಿಹಾರವೆಂದರೆ ಅವಳಿ-ಪಿಟ್, ಸ್ಥಳೀಯವಾಗಿ ದೊರೆಯುವ ಕಲ್ಲುಗಳನ್ನು ಬಳಸಿಕೊಂಡು ಇದನ್ನು ತಯಾರಿಸಬಹುದು. ಭಾರತದಲ್ಲಿನ ಸವಾಲುಗಳನ್ನು ಎದುರಿಸುವ ಸಲುವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.


ಈ ಶೌಚಾಲಯಗಳು ಸರಳವಾದ ಮತ್ತು ನವೀನವಾದ ಸ್ವಯಂ-ಮುಚ್ಚುವ ಬಾಗಿಲನ್ನು ಹೊಂದಿದೆ, ಇದು ರೋಗದ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ವಾಸನೆಯನ್ನು ಕಡಿಮೆ ಮಾಡುತ್ತದೆ. ಡೈಗೊ ಪ್ರಕಾರ, ಕಂಪನಿಯು ವಿ-ಟ್ರ್ಯಾಪ್ ತಂತ್ರಜ್ಞಾನಕ್ಕೆ ಪೇಟೆಂಟ್ ಹೊಂದಿದೆ.


ಅವಳಿ-ಪಿಟ್ ವ್ಯವಸ್ಥೆಯು ಸಾಮಾನ್ಯವಾಗಿ ಉಂಟಾಗುವ ಅಡಚಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನೀರಿನ ಸಂರಕ್ಷಣೆಗೆ ಅನುವು ಮಾಡಿಕೊಡುತ್ತದೆ, ಏಕೆಂದರೆ ಇದು ಪ್ರತಿ ಫ್ಲಶ್‌ಗೆ ಒಂದು ಲೀಟರ್‌ಗಿಂತ ಕಡಿಮೆ ನೀರನ್ನು ಬಳಸುತ್ತದೆ. ನೇರ ಮತ್ತು ಆಫ್‌ಸೆಟ್ ಪಿಟ್ ಸ್ಥಾಪನೆಗಳು, ಸೆಪ್ಟಿಕ್ ಟ್ಯಾಂಕ್‌ಗಳು, ಒಳಚರಂಡಿ ಸಂಪರ್ಕಗಳು ಮತ್ತು ನೀರು ಆಧಾರಿತ ಧಾರಕ ವ್ಯವಸ್ಥೆಗಳೊಂದಿಗೆ ಬಳಸಲು ಸ್ಯಾಟೊ ಘಟಕಗಳು ಸೂಕ್ತವಾಗಿವೆ ಮತ್ತು ಇವೆಲ್ಲವನ್ನೂ ಮರುಬಳಕೆಯ ಪ್ಲಾಸ್ಟಿಕ್ ವಸ್ತುಗಳಿಂದ ತಯಾರಿಸಲಾಗುತ್ತದೆ.


ವಿ-ಟ್ರ್ಯಾಪ್ ಶೌಚಾಲಯವನ್ನು ಹಳ್ಳಿಯಲ್ಲಿ ಅವಳಿ ಹೊಂಡಗಳ ಜೊತೆಗೆ ಸ್ಥಾಪಿಸಲಾಗುತ್ತಿದೆ.




ಇದನ್ನು ಹೊಸ ನಿರ್ಮಾಣ ತಾಣಗಳಲ್ಲಿ ಸಹ ಬಳಸಬಹುದು ಅಥವಾ ಅದನ್ನು 18 ಕರ್ವ್ ಪ್ಯಾನೆಲ್‌ಗಳಾಗಿ ಸುಲಭವಾಗಿ ಕಿತ್ತುಹಾಕಬಹುದು ಮತ್ತು ನಂತರ ಸುಲಭವಾದ, ಅಗ್ಗದ ನವೀಕರಣವನ್ನು ಈ ಶೌಚಾಲಯಗಳಲ್ಲಿ ಕೈಗೊಳ್ಳಬಹುದು. ಡೈಗೊ ಪ್ರಕಾರ, ಜನರು ಶೌಚಾಲಯದ ನಿರ್ಮಾಣವನ್ನು ಅರ್ಥಮಾಡಿಕೊಳ್ಳಲು ಬಹಳ ಕಡಿಮೆ ಸಮಯ ತೆಗೆದುಕೊಳ್ಳುತ್ತಾರೆ.


ಡೈಗೊ ಹೇಳುತ್ತಾರೆ, “ಪರ್ವತ ಪ್ರದೇಶಗಳಲ್ಲಿ, ನೀವು ಸಿಮೆಂಟ್, ಇಟ್ಟಿಗೆಗಳು ಮತ್ತು ಇತರ ವಸ್ತುಗಳನ್ನು ಸುಲಭವಾಗಿ ತೆಗೆದುಕೊಂಡುಹೋಗಲು ಸಾಧ್ಯವಿಲ್ಲ, ಆದರೆ ನಾವು ಈ ಶೌಚಾಲಯಗಳನ್ನು ಸುಲಭವಾಗಿ ಸಾಗಿಸಿ, ಕಡಿಮೆ ಸಮಯದಲ್ಲಿ ನಿರ್ಮಿಸಬಹುದು.”

ನೈರ್ಮಲ್ಯತೆಯ ಬಗ್ಗೆ ಅರಿವು ಮೂಡಿಸುವುದು

ಜನಸಾಮಾನ್ಯರಿಗೆ ನೈರ್ಮಲ್ಯದ ಕುರಿತು ಅರಿವು ಮೂಡಿಸುವ ಸಲುವಾಗಿ ಡಿಸೆಂಬರ್ 2018 ರಲ್ಲಿ, ಮರಾಚಿಯವಾರ ಸ್ಕೋಪ್ ಇತರ ಎನ್ ಜಿ ಒ ಗಳು ಮತ್ತು ಲಿಕ್ಸಿಲ್ ಜೊತೆ ಸಹಭಾಗಿತ್ವದಲ್ಲಿ ತಮಿಳುನಾಡಿನ ಪಾಗಲವಾಡಿ ಗ್ರಾಮದ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯಲ್ಲಿ ಸ್ಯಾಟೊ ಶೌಚಾಲಯಗಳನ್ನು ಸ್ಥಾಪಿಸಿತು.


ಅಲ್ಲಿ ಶಾಶ್ವತ ಶೌಚಾಲಯವಿದ್ದರೂ ಸಹ, ಶಾಲಾ ಹುಡುಗಿಯರು ಹೆಚ್ಚಾಗಿ ಹುಡುಗರಿಗಾಗಿ ಹೊರಗೆ ಕಾಯಬೇಕಾಗಿತ್ತು. ಮೇಲ್ಚಾವಣಿಯ ಕೊರತೆಯಿಂದಾಗಿ ಮಳೆಗಾಲದಲ್ಲಿ ಶೌಚಾಲಯವನ್ನು ಬಳಸಲಾಗಲಾಗುತ್ತಿರಲಿಲ್ಲ.


ಶೀಘ್ರದಲ್ಲೇ, ಯೋಜನೆಯಡಿಯಲ್ಲಿ, ಬಾಲಕಿಯರಿಗಾಗಿ ಸ್ಯಾಟೊ ಶೌಚಾಲಯಗಳ ಒಂದು ಬ್ಲಾಕ್, ತೊಳೆಯುವ ಕೇಂದ್ರಗಳು, ಉಡುಪುಗಳನ್ನು ನೇತುಹಾಕಲು ಕೊಕ್ಕೆಗಳು ಮತ್ತು ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಧಹಿಸಲು ಯಂತ್ರಗಳನ್ನು ನೀಡಿದೆ.


ಮುಂದಿರುವ ಸವಾಲುಗಳು

ಬಯಲು ಬಹಿರ್ದೆಸೆ ಹಲವು ವರ್ಷಗಳಿಂದ ಭಾರತದಲ್ಲಿ ಪ್ರಮುಖ ಸಮಸ್ಯೆಯಾಗಿದೆ. 2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಕೇವಲ 32 ಪ್ರತಿಶತದಷ್ಟು ಗ್ರಾಮೀಣ ಕುಟುಂಬಗಳಲ್ಲಿ ಮಾತ್ರ ಶೌಚಾಲಯವಿದೆ. ‌


ಈ ಸಮಸ್ಯೆಯನ್ನು ಎದುರಿಸಲು, ಸ್ವಚ್ಚ ಮತ್ತು ಬಯಲು ಬಹಿರ್ದೆಸೆ ಮುಕ್ತ ಭಾರತವನ್ನು ಸಾಧಿಸಲು ಭಾರತ ಸರ್ಕಾರ 2014 ರಲ್ಲಿ ಸ್ವಚ್ಛ ಭಾರತ್ ಮಿಷನ್ (ಎಸ್‌ಬಿಎಂ) ಪ್ರಾರಂಭಿಸಿತು. ಈ ಯೋಜನೆಯ ಭಾಗವಾಗಿ, ಸರ್ಕಾರವು ಕುಟುಂಬಗಳಿಗೆ ತಮ್ಮ ಮನೆಯಲ್ಲಿ ಶೌಚಾಲಯವನ್ನು ನಿರ್ಮಿಸಲು ಸಹಾಯಧನವನ್ನು ಪಾವತಿಸುತ್ತದೆ.


ಕೈಗೆಟುಕುವ ಮತ್ತು ಕಡಿಮೆ-ವೆಚ್ಚದ ಶೌಚಾಲಯಗಳನ್ನು ಒದಗಿಸುವ ಮೂಲಕ ಭಾರತದಲ್ಲಿ ತನ್ನ ನೆಟ್‌ವರ್ಕ್ ವಿಸ್ತರಿಸಲು ಸ್ಯಾಟೊ ತಂಡವು ಈಗಾಗಲೇ ತನ್ನನ್ನು ಇಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಹಳ್ಳಿಗಳು ಮತ್ತು ಶಾಲೆಗಳ ಹೊರತಾಗಿ, ಹೆಚ್ಚು ಅಗತ್ಯವಿರುವ ಕಾಲೇಜುಗಳಲ್ಲಿ ಸ್ಯಾಟೊ ಶೌಚಾಲಯಗಳನ್ನು ಸ್ಥಾಪಿಸುತ್ತಿದೆ.


ಟಾಯ್ಲೆಟ್ ಬೋರ್ಡ್ ಕಾರ್ಪೊರೇಶನ್‌ನ ಮಾರ್ಗದರ್ಶನ ಕಾರ್ಯಕ್ರಮದ ಮೂಲಕ, ಲಿಕ್ಸಿಲ್ ಪ್ರಸ್ತುತ ಲೂಟೆಲ್ (ಭಾರತ) ಗೆ ಮಾರ್ಗದರ್ಶನ ನೀಡುತ್ತಿದೆ, ಇದು ಸ್ಮಾರ್ಟ್ ಟಾಯ್ಲೆಟ್ ಕೆಫೆ ಆಗಿದ್ದು, ವೇತನ, ಬಳಕೆ ಮತ್ತು ರಿಡೀಮ್ ಪರಿಕಲ್ಪನೆಯನ್ನು ಬಳಸಿಕೊಂಡು ಕ್ಲೀನ್ ವಾಶ್‌ರೂಮ್ ಸೇವೆಗಳನ್ನು ಒದಗಿಸುತ್ತದೆ. ಈ ಪರಿಕಲ್ಪನೆಯು ಗ್ರಾಹಕರು ಶೌಚಾಲಯವನ್ನು ಪಾವತಿಸಿ, ಬಳಸಿ ಮತ್ತು ನಂತರ ಲೂಟೆಲ್ ಕೆಫೆಯಲ್ಲಿ ಅದನ್ನು ತೋರಿಸಿ ತಮಗೇನು ಬೇಕೊ ಅದನ್ನು ತೆಗೆದುಕೊಳ್ಳಬಹುದಾಗಿದೆ.


ಭಾರತದ ನೈರ್ಮಲ್ಯ ಸಮಸ್ಯೆಗೆ ಸುಸ್ಥಿರ ಪರಿಹಾರಗಳನ್ನು ತರಲು ತಮ್ಮ ವ್ಯವಹಾರವನ್ನು ಅಳೆಯಲು ತಂತ್ರ, ಉತ್ಪನ್ನ ವಿನ್ಯಾಸ ಮತ್ತು ಗೋಚರತೆಯನ್ನು ಸುಧಾರಿಸುವ ಮೂಲಕ ಲಿಕ್ಸಿಲ್ ಈ ನೂತನ ಕೆಲಸಕ್ಕೆ ಸಾಕ್ಷಿಯಾಗಿದೆ.