ದೆಹಲಿಯಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದ, ಪರಿಸರ ಸ್ನೇಹಿ ಮತ್ತು ಕಡಿಮೆ-ವೆಚ್ಚದ ಮೂತ್ರಾಲಯಗಳನ್ನು ನಿರ್ಮಿಸುತ್ತಿರುವ ಅಶ್ವನಿ ಅಗರ್ವಾಲ್
ಅಶ್ವನಿ ಅಗರ್ವಾಲ್ ಅವರು 2014 ರಲ್ಲಿ ಪ್ರಾರಂಭಿಸಿದ ನೈರ್ಮಲ್ಯ ಯೋಜನೆಯಾದ ಬೇಸಿಕ್ ಶಿಟ್ ಸಂಸ್ಥೆಯು ಜನ ಹೆಚ್ಚಿರುವ ಸ್ಥಳಗಳನ್ನು ಸ್ವಚ್ಚಗೊಳಿಸುತ್ತದೆ ಹಾಗೂ ಮೊಬೈಲ್ ಶೌಚಾಲಯಗಳನ್ನು ನಿರ್ಮಿಸಿ ನೈರ್ಮಲ್ಯ ಸಂಬಂಧಿತ ಜಾಗೃತಿಯನ್ನು ಮೂಡಿಸುತ್ತದೆ.
ಭಾರತದಾದ್ಯಂತ ಮತ್ತು ನವದೆಹಲಿಯಂತಹ ಮಹಾನಗರಗಳಲ್ಲಿಯೂ ಸಹ, ಜನರು ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸುವುದು ಸಾಮಾನ್ಯವಾಗಿದೆ. ಸೌಲಭ್ಯಗಳ ಕೊರತೆಯಿಂದಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಈ ಪರಿಸ್ಥಿತಿ ಉಲ್ಬಣಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳ ಹೊರತಾಗಿಯೂ, ಈ ಪ್ರದೇಶದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬಂದಿಲ್ಲ. ಉದಾಹರಣೆಗೆ, 18.6 ದಶಲಕ್ಷ ಜನಸಂಖ್ಯೆ ಹೊಂದಿರುವ ನವದೆಹಲಿಯಲ್ಲಿ ಪುರುಷರಿಗೆ ಕೇವಲ 3,000 ಶೌಚಾಲಯಗಳು ಮತ್ತು ಮಹಿಳೆಯರಿಗೆ 30 ಶೌಚಾಲಯಗಳಿವೆ.
ಇದರ ನಡುವೆಯೇ, ಅನೇಕ ಎನ್ ಜಿ ಓಗಳು ಮತ್ತು ದೆಹಲಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಲಲಿತಕಲಾ ಪದವೀಧರರಾದ ಅಶ್ವನಿ ಅಗರ್ವಾಲ್ ಅವರಂತಹ ವ್ಯಕ್ತಿಗಳು ಈ ಸಮಸ್ಯೆಯನ್ನು ಪರಿಹರಿಸಲು ಹೊಸ ಪರಿಹಾರಗಳನ್ನು ತರಲು ಪ್ರಯತ್ನಿಸುತ್ತಿದ್ದಾರೆ.
ಅಶ್ವನಿ ಅವರ ತಂಡದ ಸದಸ್ಯರಾದ ಕರಣ್ ಸಿಂಗ್ ಮತ್ತು ಸಂಗೀತಗಾರ ಹಿಮಾಂಶು ಸೈನಿ ಅವರಿಗೆ ಸಾರ್ವಜನಿಕ ಮೂತ್ರ ವಿಸರ್ಜನೆ ಮತ್ತು ಶೌಚಾಲಯಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕ ನೈರ್ಮಲ್ಯಕ್ಕಾಗಿ ಸ್ವಚ್ಚ ಮತ್ತು ಸುರಕ್ಷಿತ ವಾತಾವರಣವನ್ನು ಕಲ್ಪಿಸುವ ಹೊಸ ಕಲ್ಪನೆಯೊಂದು ಸಿಕ್ಕಿತು. ಅವರು 2014 ರಲ್ಲಿ ನವದೆಹಲಿಯ ದ್ವಾರಕಾದಲ್ಲಿ ಬೇಸಿಕ್ ಶಿಟ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು.
ಅಶ್ವನಿ ತಮ್ಮ ಕಾಲೇಜಿನಲ್ಲಿ ನೈರ್ಮಲ್ಯದ ಬಗ್ಗೆ ಕಾಲೇಜು ಯೋಜನೆಯನ್ನು ಕೈಗೆತ್ತಿಕೊಂಡ ಈ ವಿಷಯದ ಕುರಿತಾದ ಸಂಶೋಧನೆಯ ಸಮಯದಲ್ಲಿ, ನಗರದಲ್ಲಿ ನೈರ್ಮಲ್ಯ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂಬದು ಅವರಿಗೆ ಅರಿವಾಯಿತು. ಮೂತ್ರ ವಿಸರ್ಜನೆಗೆ ಶೌಚಾಲಯದ ಕೊರತೆಯಿಂದಾಗಿ, ಜನರು ಸಾರ್ವಜನಿಕ ಸ್ಥಳಗಳಲ್ಲಿಯೇ ಮೂತ್ರ ವಿಸರ್ಜನೆ ಮಾಡುವಂತಾಗಿದೆ ಎಂದು ತಿಳಿದಾಗ ಈ ಯೋಜನೆಯ ಉದಯವಾಯಿತು.
ಅದೇ ವಿಷಯವನ್ನು ಮಾತನಾಡುತ್ತ,
"ನಾನು ವಿಶೇಷವಾಗಿ ನಮ್ಮ ದೈನಂದಿನ ಜೀವನದಲ್ಲಿ ನನ್ನ ಮತ್ತು ನನ್ನ ಸುತ್ತಲಿನ ಇತರ ಜನರ ಮೇಲೆ ಹೆಚ್ಚು ಪರಿಣಾಮ ಬೀರುವ, ಸಾರ್ವಜನಿಕ ಮೂತ್ರ ವಿಸರ್ಜನೆಯ ಸಮಸ್ಯೆಯನ್ನು ಬಗೆಹರಿಸಲು ಬಯಸಿದ್ದೆ. ಬೀದಿಗಳಲ್ಲಿ ಸಾಮಾನ್ಯ ಮೂತ್ರ ವಿಸರ್ಜಿಸುವ ಸ್ಥಳಗಳಲ್ಲಿ ಮೂತ್ರಾಲಯಗಳನ್ನು ಅಳವಡಿಸಿದರೆ, ಜನರು ಅವುಗಳನ್ನು ಬಳಸುತ್ತಾರೆ ಎಂದು ನಾನು ತಿಳಿದುಕೊಂಡೆ. ನನಗೆ ಕಡಿಮೆ ವೆಚ್ಚದ, ಸುಲಭ ಮತ್ತು ಪೋರ್ಟಬಲ್ ಪರಿಹಾರದ ಅಗತ್ಯವಿತ್ತು, ಹಾಗಾಗಿ ನಾನು ಶೌಚಾಲಯವನ್ನು ನಿರ್ಮಿಸಿದೆ. ಸಮಾಜದಲ್ಲಿ ನೈರ್ಮಲ್ಯದ ಮಹತ್ವವನ್ನು ತಿಳಿಸಲು ಸಹಾಯ ಮಾಡಲು ಮತ್ತು ಬದಲಾವಣೆಯನ್ನು ತರಲು ಉದಾರವಾಗಿ ಕೊಡುಗೆ ನೀಡಲು ನಾನು ನಿಮಗೆ ವಿನಂತಿಸುತ್ತೇನೆ” ಎಂದು ಕೇಳಿಕೊಂಡಿದ್ದಾರೆ ಎಂದು ಇಂಡಿಗೊಗೋ ವರದಿ ಮಾಡಿದೆ.
ಇದಲ್ಲದೆ, ಆರಂಭದಲ್ಲಿ ಹಣಕಾಸು ಬೆಂಬಲ ಪಡೆಯುವ ದೃಷ್ಟಿಯಿಂದ, ಅಶ್ವನಿ ಮತ್ತು ಅವರ ತಂಡ ಎಬಿಡಿಯ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಸ್ಪರ್ಧೆಯ ವಿಷಯವು ಈ ಪ್ರದೇಶದಲ್ಲಿ ಸ್ವಚ್ಛತೆಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದರ ಕುರಿತಾಗಿತ್ತು, ಇದರಲ್ಲಿ ಬೇಸಿಕ್ ಶಿಟ್ ಮೊದಲ ಮೂರು ಸ್ಥಾನಗಳಲ್ಲಿ ಒಂದಾಗಿ ಹೊರಹೊಮ್ಮಿತು ಮತ್ತು ಅವರ ಯೋಜನೆಗೆ ಕೆಲವು ಹಣಕಾಸಿನ ನೆರವನ್ನು ಪಡೆದರು.
ಪರಿಸರ ಸ್ನೇಹಿ ಶೌಚಾಲಯ, ಪೀಪಿಯನ್ನು ಖಾಲಿ ಪ್ರದೇಶಗಳಲ್ಲಿ ಕಸವಾಗಿ ಎಸೆಯುವ ಏಕ-ಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಪ್ರತಿ ಪೀಪೀ ಶೌಚಾಲಯವನ್ನು 9,000 ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಲಾಗುತ್ತದೆ, ಇದು ವಾಸನೆ ಬರುವುದಿಲ್ಲ ಹಾಗೂ ಸ್ವಚ್ಛಗೊಳಿಸಲು ನೀರು ಅಥವಾ ಚರಂಡಿ ನೀರಿನ ಅವಶ್ಯಕತೆಯೂ ಇರುವುದಿಲ್ಲ.
ಒಂದು ಶೌಚಾಲಯದ ನಿರ್ಮಾಣಕ್ಕೆ ಸುಮಾರು 12,000 ರೂ ತಗಲುತ್ತದೆ ಮತ್ತು ಎರಡು ಗಂಟೆಗಳಲ್ಲಿ ಅದನ್ನು ಸ್ಥಳದಲ್ಲೇ ಹಾಕಬಹುದು. ಡಿಸೈನರ್ ಮತ್ತು ಒಳಾಂಗಣ ವಿನ್ಯಾಸ ಮತ್ತು ಗ್ರಾಫಿಕ್ ಡಿಸೈನಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಅಶ್ವನಿ, ಕೆಲಸದಿಂದ ಬರುವ ಹಣವನ್ನು ತಮ್ಮ ನೈರ್ಮಲ್ಯ ಯೋಜನೆಗೆ ಬಳಸುತ್ತಾರೆ.
ಶೌಚಾಲಯಗಳು ತಲಾ 200 ಲೀಟರ್ ಸಾಮರ್ಥ್ಯವಿರುವ ಎರಡು ಸಂಯೋಜಿತ ಮೂತ್ರದ ಗಾಡಿಗಳಾಗಿವೆ, ಇದು ಮೂತ್ರವನ್ನು ಸಂಗ್ರಹಿಸುತ್ತದೆ. ಪ್ರತಿ ಕ್ಯಾರೇಜ್ ಪ್ರತಿ ಸ್ಥಾಪನೆಯಿಂದ ದಿನಕ್ಕೆ 150 ಲೀಟರ್ ಮೂತ್ರವನ್ನು ಸಂಗ್ರಹಿಸುತ್ತದೆ, ನಂತರ ಇದನ್ನು ಸಕ್ರಿಯ ಇಂಗಾಲದಿಂದ ಸ್ಥಿರಗೊಳಿಸಿ ಶುದ್ಧೀಕರಿಸಲಾಗುತ್ತದೆ, ಇದು ಮೂತ್ರದಿಂದ ವಿಷಕಾರಿ ಗುಣಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಒಮ್ಮೆ ಶುದ್ಧಿಕರಿಸಿದ ನಂತರ, ಯೂರಿಯಾವನ್ನು ಹೊರತೆಗೆಯಲು ಮತ್ತು ಕೃಷಿ ಉದ್ದೇಶಗಳಿಗಾಗಿ ಮೂತ್ರವನ್ನು ಮರುಬಳಕೆ ಮಾಡಲಾಗುತ್ತದೆ. ಅಲ್ಲದೆ, ದೇಹಗಳಲ್ಲಿನ ಅಮೋನಿಯಾ ತ್ಯಾಜ್ಯಗಳ ಸಂಖ್ಯೆ ಕಡಿಮೆಯಾಗುವುದರಿಂದ ಈ ಪ್ರಕ್ರಿಯೆಯು ಸುತ್ತಮುತ್ತಲಿನ ಪ್ರದೇಶಗಳಿಗೆ ಸಹಾಯ ಮಾಡುತ್ತದೆ ಎಂದು ಎಫರ್ಟ್ಸ್ ಫಾರ್ ಗುಡ್ ವರದಿ ಮಾಡಿದೆ.
ಸದ್ಯಕ್ಕೆ, ಅಶ್ವನಿ 100 ಪೀಪಿ ಮೂತ್ರಾಲಯಗಳನ್ನು ದೆಹಲಿಯ ರಸ್ತೆಗಳಲ್ಲಿ ನಿರ್ಮಿಸುವ ಇರಾದೆಯನ್ನು ಹೊಂದಿದ್ದಾರೆ.