20,000 ರೂಗಳಿಂದ ಪ್ರಾರಂಭಿಸಿದ ಸ್ಟಾರ್ಟಪ್ ಈಗ 2.2 ಕೋಟಿ ರೂಪಾಯಿಗಳನ್ನು ಗಳಿಸುತ್ತಿದೆ

ಫ್ರೀಲಾನ್ಸರ್‌ಗಳು ಮತ್ತು ಕಂಪನಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಜೈಪುರ ಮೂಲದ ಎಕ್ಸ್‌ಪರ್ಟ್‌ರೈಟ್, ಮುಂದಿನ ಮೂರು ವರ್ಷಗಳಲ್ಲಿ ಒಂದು ಮಿಲಿಯನ್ ಫ್ರೀಲಾನ್ಸರ್‌ಗಳಿಗೆ ಸಹಾಯ ಮಾಡಲು ಬಯಸಿದೆ.

14th Jan 2020
  • +0
Share on
close
  • +0
Share on
close
Share on
close
ಜೈಪುರದ ಅಮಿಟಿ ವಿಶ್ವವಿದ್ಯಾಲಯದ ಬಿಟೆಕ್ ಕಂಪ್ಯೂಟರ್ ಸೈನ್ಸ್ ಪದವೀಧರರಾದ ಆಯುಷ್ ಗೋಯಲ್ ತಮ್ಮ ಮೊದಲ ವರ್ಷದ ಕಾಲೇಜಿನಲ್ಲಿ ಫ್ರೀಲಾನ್ಸಿಂಗ್ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಡೇಟಾ ಎಂಟ್ರಿ ಕೆಲಸ ಮಾಡಲು ಆರಂಭಿಸಿದರು ಮತ್ತು ಪ್ರತಿ ಪುಟಕ್ಕೆ 70 ರೂ. ನೀಡಲಾಗುವುದೆಂದು ಹಾಗೂ ಭದ್ರತೆಗಾಗಿ, ಕೆಲಸ ಪ್ರಾರಂಭವಾಗುವ ಮುಂಚೆ ಅವರಿಗೆ 4,000 ರೂಗಳನ್ನು ಡೆಪಾಸಿಟ್ ಮಾಡಿಸಿಕೊಳ್ಳಲಾಗಿತ್ತು. ಸುಮಾರು ಒಂದು ತಿಂಗಳು ಕೆಲಸ ಮಾಡಿದ ನಂತರ, ಆಯುಷ್ ಅವರು ಮೋಸ ಹೋಗಿರುವುದು ತಿಳಿಯಿತು. ಅವರ ಕೆಲಸಕ್ಕೆ ಸಂಬಳವೂ ಇಲ್ಲ, ಭದ್ರತಾ ಠೇವಣಿಯನ್ನು ಸಹ ಅವರು ಮರಳಿ ಪಡೆಯಲಿಲ್ಲ.

ನಿರಾಶೆಗೊಂಡರೂ ಪರಿಸ್ಥಿತಿಯ ಬಗ್ಗೆ ಏನಾದರೂ ಮಾಡಲು ಉತ್ಸುಕರಾಗಿದ್ದ ಆಯುಷ್ ಭಾರತದಲ್ಲಿ ಫ್ರೀಲಾನ್ಸಿಂಗ್ ಬಗ್ಗೆ ಸಂಶೋಧನೆ ಆರಂಭಿಸಿದರು. ತನ್ನ ಮೂರನೇ ವರ್ಷದ ಕಾಲೇಜಿನಲ್ಲಿ, 20,000 ರೂ. ಇಟ್ಟುಕೊಂಡು, 24 ವರ್ಷದ ಆಯುಷ್ ಮಿಷನ್ಕ್ಯಾ.ಕಾಮ್(MissionKya.com) ಅನ್ನು ಪ್ರಾರಂಭಿಸಿದರು.


ಜುಲೈ 2016 ರಲ್ಲಿ ಸ್ಥಾಪನೆಯಾದ ಮಿಷನ್ಕ್ಯಾ.ಕಾಮ್ ಫ್ರೀಲಾನ್ಸರ್‌ಗಳು ಮತ್ತು ಕಂಪನಿಗಳನ್ನು ಸಂಪರ್ಕಿಸುವ ಮಾರುಕಟ್ಟೆಯಾಗಿದೆ. ಇತರ ಫ್ರೀಲಾನ್ಸ್‌ರಗಳಿಗೆ ಅವರಂತೆ ಮೊಸವಾಗಬಾರದಂತೆ, ಆಯುಷ್ ಪ್ರಾಜೆಕ್ಟ್ ಮಾಡರೇಟರ್ ಪರಿಕಲ್ಪನೆಯನ್ನು ಪರಿಚಯಿಸಿದರು. ಪ್ರತಿ ಯೋಜನೆಗೆ ಎಂದೇ ಪ್ರಾಜೆಕ್ಟ್ ಮಾಡರೇಟರ್ ಇದ್ದು, ಅವರು ಸಮಯಕ್ಕೆ ಸರಿಯಾಗಿ ಪಾವತಿಗಳನ್ನು ನೋಡಿಕೊಳ್ಳುತ್ತಾರೆ.


2019 ರಲ್ಲಿ, ಅವರು ಸ್ಟಾರ್ಟ್ಅಪ್ ಅನ್ನು ಎಕ್ಸ್‌ಪರ್ಟ್‌ರೈಟ್‌ ಎಂದು ಮರುಹೆಸರಿಸಿದರು.


“ಮಿಷನ್‌ಕ್ಯಾ ಕೋಚಿಂಗ್ ಕೇಂದ್ರದ ಹೆಸರಿನಂತಿದೆ. ಗಿಗ್ ಆರ್ಥಿಕತೆಗಾಗಿ ಜಾಗತಿಕ ವೇದಿಕೆಯನ್ನು ನಿರ್ಮಿಸಲು ನಾನು ಬಯಸುತ್ತೇನೆ, ಮತ್ತು ಅಲ್ಲಿ ಸಾಮಾನ್ಯ ಭಾರತೀಯ ಹೆಸರು ಕೆಲಸ ಮಾಡುವುದಿಲ್ಲ,” ಎಂದು ಆಯುಷ್ ಹೇಳುತ್ತಾರೆ.

ಇಬ್ಬರ ತಂಡವಾಗಿ ಪ್ರಾರಂಭವಾದದ್ದು ಈಗ 10 ಸದಸ್ಯರ ತಂಡವಾಗಿದೆ. ಜೈಪುರದಲ್ಲಿ ಪ್ರಧಾನ ಕಚೇರಿ ಇದೆ. ಮೊದಲ ತಿಂಗಳಲ್ಲಿ ಎಕ್ಸ್‌ಪರ್ಟ್‌ರೈಟ್‌ನ ಆದಾಯ ಏನು ಇರಲಿಲ್ಲ. ಆದರೆ ಸ್ಟಾರ್ಟ್ಅಪ್ ನ ಈಗಿನವಾರ್ಷಿಕ ಆದಾಯ 2.2 ಕೋಟಿ ರೂ. ವಾಸ್ತವವಾಗಿ, ಇದು ಇಲ್ಲಿಯವರೆಗೆ 500 ಕ್ಲೈಂಟ್‌ಗಳಿಗೆ ಸೇವೆ ಸಲ್ಲಿಸಿದೆ ಮತ್ತು ಪ್ರಾರಂಭದಿಂದಲೂ 18,500 ಕ್ಕೂ ಹೆಚ್ಚು ಫ್ರೀಲಾನ್ಸ್‌ರಗಳೊಂದಿಗೆ ಕೆಲಸ ಮಾಡಿದೆ.


“ಮಹಾನಗರಗಳಿಗೆ ಹೋಲಿಸಿದರೆ ಕಚೇರಿ ಬಾಡಿಗೆ ಮತ್ತು ಪ್ರಯಾಣ ಅಗ್ಗವಾಗಿರುವುದರಿಂದ ನಮ್ಮ ಖರ್ಚುಗಳನ್ನು ಉತ್ತಮವಾಗಿ ನಿರ್ವಹಿಸಲು ಜೈಪುರ ನಮಗೆ ಸಹಾಯ ಮಾಡುತ್ತದೆ ಎಂದು ಆಯುಷ್ ಹೇಳುತ್ತಾರೆ.


ಎಕ್ಸ್‌ಪರ್ಟ್‌ರೈಟ್ ತಂಡ

ಮಾರುಕಟ್ಟೆಯ ರಚನೆ

ಕಂಪನಿಗಳು, ಗ್ರಾಹಕರು ಮತ್ತು ಫ್ರೀಲಾನ್ಸರ್‌ಗಳು ಎಕ್ಸ್‌ಪರ್ಟ್‌ರೈಟ್‌ನ ಪ್ಲಾಟ್‌ಫಾರ್ಮ್‌ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಿದ ನಂತರ, ಕಂಪನಿಗಳು (ಸಾಮಾನ್ಯವಾಗಿ ಸಣ್ಣದಿಂದ ಮಧ್ಯಮ ಗಾತ್ರದವುಗಳು) ವೆಬ್‌ಸೈಟ್‌ನಲ್ಲಿ ವಿವರವಾದ ಅವಶ್ಯಕತೆಗಳನ್ನು ಪೋಸ್ಟ್ ಮಾಡುತ್ತವೆ, ನಂತರ ಫ್ರೀಲಾನ್ಸ್‌ರಗಳಿಗೆ ಅದನ್ನು ಸೂಚಿಸಲಾಗುತ್ತದೆ. ಆಸಕ್ತ ಫ್ರೀಲಾನ್ಸರ್‌ಗಳು ತಮ್ಮ ಪ್ರಸ್ತಾಪಗಳನ್ನು ಕಂಪೆನಿಗಳು ಅಥವಾ ಗ್ರಾಹಕರಿಗೆ ಕಳುಹಿಸುತ್ತಾರೆ, ಅವರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಸರಿಯಾದವರನ್ನು ಆಯ್ಕೆ ಮಾಡುತ್ತಾರೆ.


ದಾಖಲೆಗಳ ಪರಿಶೀಲನೆ ಮತ್ತು ಸಹಿ ಮಾಡಿದ ನಂತರ, ಗ್ರಾಹಕರು ಎಕ್ಸ್‌ಪರ್ಟ್‌ರೈಟ್‌ನ ಎಸ್ಕ್ರೊ ಖಾತೆಯಲ್ಲಿ ಮುಂಗಡ ಪಾವತಿಯನ್ನು ಜಮಾ ಮಾಡುತ್ತಾರೆ. ಫ್ರೀಲಾನ್ಸರ್‌ಗಳು ಯೋಜನೆಯನ್ನು ನಿಗದಿತ ಸಮಯದೊಳಗೆ ತಲುಪಿಸುತ್ತಾರೆ. ಕ್ಲೈಂಟ್‌ನ ಕಡೆಯಿಂದ ಪರಿಶೀಲನೆ ಮತ್ತು ದೃಢೀಕರಣದ ನಂತರ, ಎಕ್ಸ್‌ಪರ್ಟ್‌ರೈಟ್ 10 ಪ್ರತಿಶತದಷ್ಟು ಹಣವನ್ನು ಕಡಿತಗೊಳಿಸಿದ ನಂತರ ಫ್ರೀಲಾನ್ಸ್‌ರಗಳ ಖಾತೆಗೆ ಮುಂಗಡ ಸಂಬಳವನ್ನು ವರ್ಗಾಯಿಸುತ್ತದೆ.


ಎಕ್ಸ್‌ಪರ್ಟ್‌ರೈಟ್‌ನ ಫ್ರೀಲಾನ್ಸರ್‌ಗಳು ವೆಬ್ ಮತ್ತು ಅಪ್ಲಿಕೇಶನ್ ಡೆವಲಪ್‌ಮೆಂಟ್, ಕಂಟೆಂಟ್‌ ಡೆವಲಪ್‌ಮೆಂಟ್, ಸೆಲ್ಸ ಮತ್ತು ಮಾರ್ಕೆಟಿಂಗ್, ಗ್ರಾಫಿಕ್ಸ್ ಡಿಸೈನ್, ಅನಿಮೇಷನ್ ಮತ್ತು ಡೇಟಾ ಎಂಟ್ರಿಯಂತಹ ಸೇವೆಗಳನ್ನು ಒದಗಿಸುತ್ತಾರೆ. "ಶುಲ್ಕಗಳು ಕೆಲಸದ ಪ್ರಕಾರವನ್ನು ಅವಲಂಬಿಸಿರುತ್ತದೆ," ಎಂದು ಆಯುಷ್ ಹೇಳುತ್ತಾರೆ.


ಎಕ್ಸ್‌ಪರ್ಟ್‌ರೈಟ್ನಲ್ಲಿ ಮಾಜಿ ಮೆಟ್‌ಲೈಫ್ ಮತ್ತು ಐಬಿಎಂ ಉದ್ಯೋಗಿ ಜಿತೇಂದ್ರ ಸಿಂಗ್ ಮತ್ತು ರಾಜಸ್ಥಾನ ವಿಶ್ವವಿದ್ಯಾಲಯದ ಎಂಕಾಮ್ ಪದವೀಧರರಾದ ಏಕ್ತಾ ಮಹೇಶ್ವರಿ ಪ್ರಮುಖ ಸದಸ್ಯರಾಗಿದ್ದಾರೆ. ಜಿತೇಂದ್ರ ಪಾಲುದಾರಿಕೆ ಮತ್ತು ಮೈತ್ರಿಗಳನ್ನು ನಿರ್ವಹಿಸುತ್ತಾರೆ, ಮತ್ತು ಏಕ್ತಾ ಇನ್ಸೈಡ್ ಸೆಲ್ಸ್‌ನ ಉಸ್ತುವಾರಿ ನೋಡಿಕೊಳ್ಳುತ್ತಾರೆ.


ಉತ್ತಮ ಸೇವೆಯ ಇವರ ಗುಟ್ಟು

ಮಾಸ್ಟರ್‌ಕಾರ್ಡ್ ಮತ್ತು ಕೈಸರ್ ಅಸೋಸಿಯೇಟ್ಸ್‌ನ ಅಧ್ಯಯನದ ಪ್ರಕಾರ, ದಿ ಗ್ಲೋಬಲ್ ಗಿಗ್ ಎಕಾನಮಿ $ 500 ಬಿಲಿಯನ್‌ನಷ್ಟು ದೊಡ್ಡದಿದೆ. ಗಿಗ್ ಆರ್ಥಿಕತೆಯು ಪ್ರಸ್ತುತ 240 ಬಿಲಿಯನ್ ಉತ್ಪಾದಿಸುತ್ತದೆ, ಮತ್ತು 17 ಪ್ರತಿಶತದಷ್ಟು ಸಿಎಜಿಆರ್ ಬೆಳೆಯುವ ನಿರೀಕ್ಷೆಯಿದೆ, 2023 ರ ಹೊತ್ತಿಗೆ $ 455 ಬಿಲಿಯನ್ ಆಗಬಹುದು.


ಫ್ರೀಲಾನ್ಸರ್‌ಗಳು ಮತ್ತು ಗ್ರಾಹಕರ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರು, ಅಪ್‌ವರ್ಕ್, ಫ್ರೀಲ್ಯಾನ್ಸರ್ ಮತ್ತು ವಿಶಪ್‌ನಂತಹ ವಿವಿಧ ಪ್ಲಾಟ್‌ಫಾರ್ಮ್‌ಗಳು ಮತ್ತು ಮಾರುಕಟ್ಟೆಗಳಿದ್ದರೂ, ಎಕ್ಸ್‌ಪರ್ಟ್‌ರೈಟ್ ಇವುಗಳಿಗಿಂತ ವಿಭಿನ್ನವಾಗಿದೆ ಎಂದು ನಂಬುತ್ತದೆ.


“ಎಕ್ಸ್‌ಪರ್ಟ್‌ರೈಟ್‌ನ ಮೀಸಲಾದ ಪ್ರಾಜೆಕ್ಟ್ ಮಾಡರೇಟರ್ ನಮ್ಮ ಯುಎಸ್‌ಪಿ,” ಎಂದು ಆಯುಷ್ ಹೇಳುತ್ತಾರೆ.


ಪ್ರಾಜೆಕ್ಟ್ ಮಾಡರೇಟರ್‌ಗಳು ಯೋಜನೆಯ ಒಪ್ಪಂದವನ್ನು ಮಾಡುವಾಗ ಫ್ರೀಲಾನ್ಸರ್‌ಗಳು ಗ್ರಾಹಕರೊಂದಿಗೆ ಮಾತುಕತೆ ನಡೆಸಲು ಸಹಾಯ ಮಾಡುತ್ತಾರೆ. ನೇಮಕ ಮಾಡಿದ ನಂತರ, ಎರಡೂ ಕಡೆಗಳಿಂದ ದಾಖಲೆಗಳನ್ನು ಸರಿಯಾಗಿ ಸಹಿ ಮಾಡಲಾಗಿದೆಯೆ ಎಂದು ವ್ಯವಸ್ಥಾಪಕರು ಖಚಿತಪಡಿಸಿಕೊಳ್ಳುತ್ತಾರೆ. "ಡಾಕ್ಯುಮೆಂಟ್ನಲ್ಲಿ ಯಾವುದೇ ಏಕಪಕ್ಷೀಯ ನಿಯಮಗಳು ಮತ್ತು ಷರತ್ತುಗಳಿಲ್ಲ ಎಂದು ಇದು ಖಚಿತಪಡಿಸುತ್ತದೆ," ಎಂದು ಆಯುಷ್ ಹೇಳುತ್ತಾರೆ.


ಇದಲ್ಲದೆ, ಪ್ರಾಜೆಕ್ಟ್ ನಡೆಯುತ್ತಿರುವ ಸಮಯದಲ್ಲಿ, ಪ್ರಾಜೆಕ್ಟ್ ಮಾಡರೇಟರ್ ಫ್ರೀಲಾನ್ಸ್‌ಗಳು ಮಾಡುವ ಕೆಲಸದ ಗುಣಮಟ್ಟವನ್ನು ಗಮನಿಸುತ್ತಾರೆ, ಕ್ಲೈಂಟ್‌ನೊಂದಿಗೆ ಸಂವಹನವನ್ನು ನಡೆಸುತ್ತಾರೆ ಮತ್ತು ಒಂದು ಹಂತದ ವರದಿಯನ್ನು ಒದಗಿಸುತ್ತಾರೆ.


ಯೋಜನೆ ಮುಗಿದ ನಂತರ, ಪಾವತಿಗಳನ್ನು ಸಮಯೋಚಿತವಾಗಿ ಮಾಡಲಾಗಿದೆಯೆ ಎಂದು ಮಾಡರೇಟರ್ ಖಚಿತಪಡಿಸಿಕೊಳ್ಳುತ್ತಾರೆ.


ಆಯುಷ್ ಪ್ರಕಾರ, ಎಕ್ಸ್‌ಪರ್ಟ್‌ರೈಟ್ ತನ್ನ ಹೆಚ್ಚಿನ ಕ್ಲೈಂಟ್‌ಗಳನ್ನು ನಗರಗಳಾದ ಬೆಂಗಳೂರು ಮತ್ತು ದೆಹಲಿಯಿಂದ ಪಡೆಯುತ್ತದೆ. ಇದರ ವಿನ್ಯಾಸಕರು ಮತ್ತು ಬರಹಗಾರರು ಜೈಪುರ ಮತ್ತು ಅಹಮದಾಬಾದ್ ಮೂಲದವರು. ಎಲ್ಲಾ ಆನಿಮೇಟರ್‌ಗಳು ಕೋಲ್ಕತ್ತಾದವರಾಗಿದ್ದಾರೆ.


ಬೆಳೆಯುತ್ತಿರುವ ಸಂಖ್ಯೆಗಳು

ಎಕ್ಸ್‌ಪರ್ಟ್‌ರೈಟ್ ತನ್ನ ಆರಂಭಿಕ ಗ್ರಾಹಕರ ಗುಂಪನ್ನು ಲಿಂಕ್ಡ್‌ಇನ್ ಮತ್ತು ಫೇಸ್‌ಬುಕ್ ಗುಂಪುಗಳ ಮೂಲಕ ಪಡೆದುಕೊಂಡಿದೆ. "ಈಗ ಬಾಯಿ ಮಾತು ಮತ್ತು ಉಲ್ಲೇಖಗಳು ನಮಗೆ ಹೆಚ್ಚಿನ ಗ್ರಾಹಕರನ್ನು ತರುತ್ತವೆ," ಎಂದು ಆಯುಷ್ ಹೇಳುತ್ತಾರೆ.


ಪ್ರಾರಂಭವಾದ ಮೊದಲ ವರ್ಷದಲ್ಲಿ ಕೇವಲ 60 ಕ್ಲೈಂಟ್‌ಗಳನ್ನು ಹೊಂದಿದ್ದ ಈ ಸ್ಟಾರ್ಟ್ಅಪ್‌ನಲ್ಲಿ ಈಗ ಒಯೋ ರೂಮ್ಸ್, ಹಿಂದೂಸ್ತಾನ್ ಟೈಮ್ಸ್, ವೆಟ್ರೋ ಪವರ್, ಟ್ರಾವೆಲ್ ಟ್ರಯಾಂಗಲ್, ಹೋಲಿಸೋಲ್ ಲಾಜಿಸ್ಟಿಕ್ಸ್, ಸಿಸ್ಟೇಮಾ ಬಯೋ, ಕೂವ್ಸ್ ಮತ್ತು ಎನ್‌ಐಐಟಿ ಟೆಕ್ನಾಲಜೀಸ್, ಇತರ ಕ್ಲೈಂಟ್ಗಳನ್ನು ಹೊಂದಿದೆ.


“ಇನ್ನೂ ಪ್ರಾರಂಭಿಸಿರದ ಆರಂಭಿಕ ಉದ್ಯಮಗಳು ತಮ್ಮ ಉತ್ಪನ್ನಗಳಿಗಾಗಿ ಡೆವಲಪರ್‌ಗಳನ್ನು ಮತ್ತು ಅವರ ವೆಬ್‌ಸೈಟ್‌ಗಳಿಗೆ ಕಂಟೆಂಟ್‌ ರೈಟರ್‌ಗಳನ್ನು ನೇಮಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ,” ಎಂದು ಆಯುಷ್ ಹೇಳುತ್ತಾರೆ.


ಭವಿಷ್ಯದ ಯೋಜನೆಗಳು

ಎಕ್ಸ್‌ಪರ್ಟ್‌ರೈಟ್‌ನ ಪ್ರಮುಖ ಸವಾಲು ಫ್ರೀಲಾನ್ಸ್‌ರಗಳ ಆಲೋಚನೆಯನ್ನು ಬದಲಾಯಿಸುವುದಾಗಿದೆ.


ಕಾರ್ಯಕ್ಷಮತೆ ಮತ್ತು ಸಮಯೋಚಿತ ವಿತರಣೆಗಳ ಬಗ್ಗೆ ಕಂಪನಿಗಳು ಬಹಳ ಸಂಶಯ ವ್ಯಕ್ತಪಡಿಸುತ್ತವೆ. ಮತ್ತೊಂದೆಡೆ, ಫ್ರೀಲಾನ್ಸರ್‌ಗಳು ಸಮಯೋಚಿತ ಪಾವತಿಗಳಿಗಾಗಿ ಗ್ರಾಹಕರನ್ನು ನಂಬುವುದು ತುಸು ಕಡಿಮೆ,” ಎಂದು ಆಯುಷ್ ಹೇಳುತ್ತಾರೆ.

ಪ್ರತಿಯೊಂದು ಯೋಜನೆಯನ್ನು ನೋಡಿಕೊಳ್ಳಲು ಮೀಸಲಾದ ಪ್ರಾಜೆಕ್ಟ್ ಮಾಡರೇಟರ್‌ಗಳನ್ನು ನಿಯೋಜಿಸಿ, ವಿತರಣೆಗಳು ಮತ್ತು ಪಾವತಿಗಳಿಗೆ ವೈಯಕ್ತಿಕ ಖಾತರಿ ನೀಡುವ ಮೂಲಕ ತಂಡವು ಇದನ್ನು ಮೀರಿಸಿದೆ.


ಪ್ರಾರಂಭದಿಂದಲೂ ಬೂಟ್ ಸ್ಟ್ರಾಪ್ಡ್ ಆದ ಎಕ್ಸ್‌ಪರ್ಟ್‌ರೈಟ್ 2020 ರ ಮೇ ವೇಳೆಗೆ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಆಟೊಮೇಷನ್ ಸಾಧನವನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಮುಂದುವರಿಯುತ್ತಾ, ಕನಿಷ್ಠ ಮೂರು ದೇಶಗಳಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸಲು ಶೀಘ್ರದಲ್ಲೇ ತನ್ನ ಮೊದಲ ಸುತ್ತಿನ ಹಣವನ್ನು ಸಂಗ್ರಹಿಸಲಿದೆ.

ಮುಂದಿನ ಮೂರು ವರ್ಷಗಳಲ್ಲಿ ನಾವು ಒಂದು ಮಿಲಿಯನ್ ಫ್ರೀಲಾನ್ಸ್‌ರಗಳನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ ಎಂದು ಆಯುಷ್ ಹೇಳುತ್ತಾರೆ.


Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

  • +0
Share on
close
  • +0
Share on
close
Share on
close

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India