ಚಿಂದಿ ಆಯುವವರನ್ನೇ ಉದ್ಯಮಿಗಳನ್ನಾಗಿಸಿಕೊಂಡು ತ್ಯಾಜ್ಯ ನಿರ್ವಹಣಾ ವಲಯದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತಿರುವ ಬೆಂಗಳೂರಿನ ಹಸಿರು ದಳ ಇನ್ನೋವೇಷನ್ಸ್ ಎಂಬ ಸ್ಟಾರ್ಟಪ್ ಸಂಸ್ಥೆಯ ಯಶೋಗಾಥೆ

ಚಿಂದಿ ಆಯುವವರನ್ನೇ ಉದ್ಯಮದ ಹೃದಯಭಾಗವನ್ನಾಗಿಸಿಕೊಂಡು ಹಸಿರುದಳ ಇನ್ನೋವೇಷನ್ಸ್ ಸಂಸ್ಥೆ ತ್ಯಾಜ್ಯ ನಿರ್ವಹಣೆಯ ಹಲವಾರು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಲ್ಲಿ ಸಫಲವಾಗಿರುವ ಯಶೋಗಾಥೆ ಇಲ್ಲಿದೆ.

ಚಿಂದಿ ಆಯುವವರನ್ನೇ ಉದ್ಯಮಿಗಳನ್ನಾಗಿಸಿಕೊಂಡು ತ್ಯಾಜ್ಯ ನಿರ್ವಹಣಾ ವಲಯದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತಿರುವ ಬೆಂಗಳೂರಿನ ಹಸಿರು ದಳ ಇನ್ನೋವೇಷನ್ಸ್ ಎಂಬ ಸ್ಟಾರ್ಟಪ್ ಸಂಸ್ಥೆಯ ಯಶೋಗಾಥೆ

Thursday August 08, 2019,

3 min Read

ಬೆಂಗಳೂರಿನ ಹಸಿರುದಳ ಇನ್ನೋವೇಷನ್ಸ್ ಸಂಸ್ಥೆಯ ಉದ್ಯೋಗಿಯಾಗಿದ್ದುಕೊಂಡು ಇತ್ತೀಚೆಗಷ್ಟೇ ಆದಾಯ ತೆರಿಗೆ ರಿಟರ್ನ್ಸ ಸಲ್ಲಿರುವ ಲೋಪ್ತಾರ್ ಎಂಬುವರ ಮಾತುಗಳನ್ನು ಕೇಳಿರಿ.


‘ನಾನು ದೆಹಲಿಯಿಂದ ಬೆಂಗಳೂರಿಗೆ 10 ವರ್ಷಗಳ ಹಿಂದೆ ಜೀವನೋಪಾಯವನ್ನು ಅರಸಿಕೊಂಡು ಬಂದೆ. ಒಂದು ಸಣ್ಣ ಕಸಸಂಗ್ರಹಿಸುವ ವ್ಯಾಪಾರ ಶುರು ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ಹಗಲಿರುಳು ಶ್ರಮಿಸಿತೊಡಗಿದೆ. ಐದು ವರ್ಷಗಳ ಹಿಂದೆ ಸ್ನೇಹಿತನೊಬ್ಬನ ಸಹಾಯದಿಂದ ಹಸಿರುದಳ ಸೇರಿದೆ. ಕಂಪನಿಯ ಮೊದಲ ಮೂವರು ಕಾರ್ಮಿಕರಲ್ಲಿ ನಾನೂ ಒಬ್ಬನಾಗಿದ್ದೇನೆ. ಮೊದಲದಿನಗಳು ಬಹಳ ಕಷ್ಟದಾಯಕವಾಗಿದ್ದವು. ಕಂಪನಿಯ ಜೊತೆ ಒಳ್ಳೆಯ ಸಂಬಂಧ ಹೊಂದಲು ಮತ್ತು ವಿಶ್ವಾಸವನ್ನು ಗಳಿಸಲು ಶ್ರಮಪಡಬೇಕಾಯಿತು. ಆದರೆ ಮೊದಲ ದಿನಗಳಲ್ಲಿ ಹಾಕಿದ ದೃಢ ಬುನಾದಿಯಿಂದಾಗಿ ಈಗ ಎಲ್ಲಾ ಪ್ರಕ್ರಿಯೆಗಳು ಸರಳಗೊಂಡಿವೆ”.


ಇಂದು ಲೋಫ್ತಾರ್ ಒಂದು ಸ್ಕೂಟರ್, ಎರಡು ಟ್ರಕ್ಕುಗಳ ಮಾಲೀಕ. ಅವರ ಕೈಕೆಳಗೆ 22 ಜನ ಕಾರ್ಮಿಕರು ಕೆಲಸ ಮಾಡಿಕೊಂಡು ಜೀವನೋಪಾಯದ ದಾರಿಯನ್ನು ಕಂಡುಕೊಂಡಿದ್ದಾರೆ. ಹಸಿರುದಳದ ಉದ್ಯೋಗಿಯಾಗಿರುವ ಅಣ್ಣಮ್ಮ ಎಂಬ ಮಹಿಳೆ ಇಬ್ಬರು ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾವಂತೆಯರನ್ನಾಗಿ ಮಾಡಿದ್ದಾಳೆ. ಇವರಲ್ಲಿ ಒಬ್ಬಳು ಪ್ರೌಢಶಾಲೆಯಲ್ಲಿಯೂ ಮತ್ತೊಬ್ಬಳು ಕಾಲೇಜಿನಲ್ಲಿ ಶಿಕ್ಷಣ ಪಡೆಯುತಿದ್ದಾರೆ. ಮತ್ತು ಆಕೆ ಬ್ಯಾಂಕಿನ ಸಾಲಸೌಲಭ್ಯ ಪಡೆದುಕೊಂಡು ಸ್ವಂತ ಮನೆಯೊಂದನ್ನು ಕಟ್ಟಿಕೊಂಡಿರುವುದೇ ಅಲ್ಲದೇ ಟ್ರಕ್ ಒಂದನ್ನು ಖರೀದಿಸಿದ್ದಾಳೆ. ಹಸಿರುದಳದ 23 ಜನ ಉದ್ಯಮಿಗಳಲ್ಲಿ ಬಹಳಷ್ಟು ಮಂದಿ ಹೋದ ಆರ್ಥಿಕ ವರ್ಷದಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆ ರಿಟರ್ನ್ಸ ಸಲ್ಲಿಸಿದ್ದಾರೆ.


ಹಸಿರುದಳದ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ನಳಿನಿ ಶೇಖರ್ ಹೀಗೆ ಹೇಳುತ್ತಾರೆ. “ಬೀದಿಯಿಂದ ಪ್ರತಿದಿನವೂ ಪರಿಶ್ರಮದಿಂದ ಕಸವನ್ನು ಸಂಗ್ರಹಿಸಿ, ಅದನ್ನು ಬೆಲೆಬಾಳುವ ವಸ್ತುವನ್ನಾಗಿಸಿ ತಮ್ಮ ಹೊಟ್ಟೆತುಂಬಿಸಿಕೊಳ್ಳುವ ನಮ್ಮ ಉದ್ಯೋಗಿಗಳ ಛಲ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾದ ಮತ್ತು ಹೆಮ್ಮೆಯ ವಿಷಯವಾಗಿದೆ.” ಸಹ-ಸಂಸ್ಥಾಪಕರಾದ ಶೇಖರ್ ಪ್ರಭಾಕರ್ “ನಮ್ಮ ಜೀವಿತಾವಧಿಯಲ್ಲಿ ನಮ್ಮ ಉದ್ಯೋಗಿಗಳ ಬದುಕಿನಲ್ಲಿ ಸರ್ವಾಂಗೀಣ ಪ್ರಗತಿ ಕಾಣಿಸುತ್ತಿದೆಯೆಂಬ ಆತ್ಮವಿಶ್ವಾಸ ನಮ್ಮನ್ನು ಪ್ರತಿದಿನ ಹುರಿದುಂಬಿಸುತ್ತದೆ” ಎಂದು ಆಶಾಭಾವನೆ ವ್ಯಕ್ತಪಡಿಸುತ್ತಾರೆ.


ಕ

ಹಸಿರುದಳ ಇನ್ನೋವೇಷನ್ಸ್ ಸಂಸ್ಥೆಯ ಮಹಿಳಾ ಘಟಕವು ಸಂಗ್ರಹಣೆ, ಸಾಗಾಣಿಕೆ ಮತ್ತು ತ್ಯಾಜ್ಯ ಪರಿಷ್ಕರಣೆಯಲ್ಲಿ ತೊಡಗಿಕೊಂಡಿರುವ ಚಿತ್ರ.


ಹಸಿರುದಳ ಸಂಸ್ಥೆಯು ಚಿಂದಿ ಆಯುವವರ ಬದುಕನ್ನು ಹಸನುಗೊಳಿಸುವ ಸಮಾಜಸ್ನೇಹಿ ಉದ್ಯಮವಾಗಿದ್ದು ವಾಸಸ್ಥಳ ಮತ್ತು ಇತರೆ ಮೂಲಗಳಿಂದ ಸೃಜಿಸಲ್ಪಡುವ ಪ್ರತಿಯೊಂದೂ ರೀತಿಯ ತ್ಯಾಜ್ಯ ವಸ್ತುಗಳ ನಿರ್ವಹಣೆಯ ಜವಾಬ್ದಾರಿಯ ಜೊತೆಗೆ ಸಾದ್ಯವಾದಷ್ಟು ಅವುಗಳನ್ನು ಮರುಬಳಕೆ ಮಾಡುವ ಉದ್ದೇಶ ಹೊಂದಿದೆ.


ತ್ಯಾಜ್ಯ ವಸ್ತುಗಳ ನಿರ್ವಹಣೆ ಹೇಗೆ?


ಹಸಿರುದಳ ಸಂಸ್ಥೆಯು ಚಿಂದಿ ಆಯುವವರಲ್ಲಿ ಮನೆ ಮಾಡಿರುವ ಉದ್ಯಮಶೀಲತಾ ಗುಣವನ್ನು ಪ್ರೋತ್ಸಾಹಿಸುತ್ತದೆ.


“ಹಸಿರುದಳ ಸಂಸ್ಥೆಯು ಚಿಂದಿ ಆಯುವವರು ಸಂಗ್ರಿಹಿಸುವ ಮರುಬಳಕೆ ಮಾಡಬಹುದಾದ ವಸ್ತುಗಳಿಂದ ಲಾಭ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿಲ್ಲ, ಏಕೆಂದರೆ ಅದು ಸಂಗ್ರಹಿಸಿದ ವ್ಯಕ್ತಿಗೆ ಸೇರಬೇಕಾದ ಸರಕಾಗಿರುತ್ತದೆ ಮತ್ತು ಅದು ಆ ವ್ಯಕ್ತಿಯ ಹಕ್ಕು” ಎಂದು ಸಂಸ್ಥೆಯ ಸಂಸ್ಥಾಪಕ ಶೇಖರ್ ಹೇಳುತ್ತಾರೆ.


ಹೀಗಾಗಿ ಚಿಂದಿ ಆಯುವವರಿಗೆ ಆದಾಯದ ಎರಡು ಮೂಲಗಳಿರುತ್ತವೆ. ಒಂದು, ಕಂಪನಿ ಪ್ರತಿ ತಿಂಗಳು ಸೇವಾ ಒಪ್ಪಂದದಂತೆ ನೀಡುವ ನಿರ್ದಿಷ್ಟ ವೇತನ ಮತ್ತು ಎರಡನೆಯದ್ದು ಅವರು ಸಂಗ್ರಹಿಸಿದ ಮರುಬಳಕೆಯ ವಸ್ತುಗಳಿಂದ ಬರುವ ಆದಾಯ. ಹಸಿರುದಳ ಸಂಸ್ಥೆಯು ತ್ಯಾಜ್ಯವನ್ನು ಸೃಜಿಸುವ ಮೂಲಗಳಿಂದ ತ್ಯಾಜ್ಯದ ಒಟ್ಟು ತೂಕಕ್ಕನುಗುಣವಾಗಿ ಸೇವಾಶುಲ್ಕವನ್ನು ಸಂಗ್ರಹಿಸಿಸುತ್ತದೆ.


ಇಂದು ಹಸಿರುದಳ ಸಂಸ್ಥೆಯು 430 ಬಳಕೆದಾರರನ್ನು (ಇದರಲ್ಲಿ 30,500 ಗೃಹಗಳನ್ನೊಳಗೊಂಡ ವಸತಿ ಸಮುಚ್ಚಯಗಳ 280 ಬಳಕೆದಾರರು ಸೇರಿದ್ದಾರೆ) ಹೊಂದಿದೆ. ಇವರೆಲ್ಲರೂ ಪ್ರತಿ ತಿಂಗಳು 900 ಟನ್ನುಗಳಷ್ಟು ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ ಅದು ಭೂಮಿಯ ಗರ್ಭವನ್ನು ಸೇರುವುದನ್ನು ತಡೆಯುತ್ತಾರೆ.


“ನಮ್ಮ ಬಳಕೆದಾರರ ಸಂಖ್ಯೆಯು ದಿನೇದಿನೇ ಹೆಚ್ಚಾಗುತ್ತಿದೆ. ಪ್ರತಿ ತಿಂಗಳು ವಾಣಿಜ್ಯ ಸಂಕೀರ್ಣಗಳು, ಕಚೇರಿಗಳು, ಶಾಲೆ, ರೆಸ್ಟೋರೆಂಟುಗಳ ತ್ಯಾಜ್ಯ ನಿರ್ವಹಣೆಗಾಗಿ 10 ಹೊಸ ಬಳಕೆದಾರರು ನಮ್ಮ ಜೊತೆ ಸೇರಿಕೊಳ್ಳುತಿದ್ದಾರೆ”


ಹಸಿರುದಳ ಮಾದರಿಯನ್ನು ಜೆಮಶೆಡ್ಪುರದ ಟಾಟಾ ಕಂಪೆನಿಯಾದ ಜುಸ್ಕೋದಲ್ಲಿ ಬಳಸಲಾಗುತ್ತಿದೆ.


ಮುಖ್ಯವಾದ ಸಮಸ್ಯೆಗಳನ್ನು ಬಗೆಹರಿಸುವುದು


ಕ

ತ್ಯಾಜ್ಯ ಸಂಗ್ರಹಣೆಗಾಗಿ ಬಳಸುವ ಟ್ರಕ್ಕುಗಳು ಅಂತಿಮವಾಗಿ ನಾಲ್ಕು ವರ್ಷಗಳ ನಂತರ ತ್ಯಾಜ್ಯ ಸಂಗ್ರಹಿಸಿವ ವ್ಯಕ್ತಿಗಳ ಸ್ವಂತ ವಾಹನಗಳಾಗುತ್ತವೆ.


ಚಿಂದಿ ಆಯುವವರನ್ನು ತಮ್ಮ ಉದ್ಯಮದ ಹೃದಯಭಾಗವನ್ನಾಗಿಸಿಕೊಂಡಿರುವ ಹಸಿರುದಳ ಸಂಸ್ಥೆಯ ತ್ಯಾಜ್ಯ ನಿರ್ವಹಣೆಯ ಈ ಕೆಳಕಂಡ ಎರಡು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತಿದೆ. ಹೆಚ್ಚಿನ ಭೌತಿಕ ಶ್ರಮ ಮತ್ತು ವೃತ್ತಿಯ ಕ್ಲಿಷ್ಠ ಪರಿಸ್ಥಿತಿಗಳಿಂದ ಉಂಟಾಗುವ ಗೈರುಹಾಜರಿ ಮತ್ತು ಸಾಗಾಹಿಣಿಕೆ ಸೌಲಭ್ಯಗಳ ನಿರ್ವಹಣೆ.


ಸ್ವತಃ ಉದ್ಯಮಿಯಾಗಿರುವ ಚಿಂದಿ ಆಯಯುವವರು ತಮ್ಮ ನೆರೆಹೊರೆಯ ವ್ಯಕ್ತಿಗಳನ್ನು ತೊಡಗಿಸಿಕೊಂಡು ಗೈರುಹಾಜರಿಯ ಸಂಕಷ್ಟಗಳನ್ನು ಕಡಿಮೆಗೊಳಿಸಿ ಸೇವಾ ವ್ಯತ್ಯಯಗಳನ್ನು ತಪ್ಪಿಸಿದ್ದಾರೆ. ಮತ್ತು ಸಾಗಾಣಿಕೆಗೆ ಬಳಸುವ ಟ್ರಕ್ಕುಗಳು ನಾಲ್ಕು ವರ್ಷಗಳ ನಂತರ ಅವರ ಸ್ವಂತದ್ದಾಗುವುದರಿಂದ ಅವುಗಳನ್ನು ಕಂಪೆನಿಯ ಆಸ್ತಿಯೆಂದು ಪರಿಗಣಿಸದ ತಮ್ಮದೇ ಆಸ್ತಿಯಂತೆ ನೋಡಿಕೊಳ್ಳುತ್ತಾರೆ.


ಇದರಿಂದಾಗಿ ಕಂಪೆನಿಯ ಸೇವೆಯನ್ನು ಪಡೆಯುತ್ತಿರುವ ಬಳಕೆದಾರರಿಗೆ ಕಂಪೆನಿಯು ಯಾವುದೇ ಅಡತಡಯಿಲ್ಲದ ನಿರಂತರ ಸೇವೆಯನ್ನು ಒದಗಿಸುವುದು ಸಾಧ್ಯವಾಗಿದೆ.


ತ್ಯಾಜ್ಯ ನಿರ್ವಹಣೆಯಲ್ಲಿ ಯಶಸ್ವಿಯಾಗಿರುವ ಹಸಿರುದಳ ಸಂಸ್ಥೆ


ನಾಗರೀಕರಿಗೆ ತಾವು ಸೃಜಿಸುತ್ತಿರುವ ತ್ಯಾಜ್ಯ ನಿರ್ವಹಣೆಯಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಉತ್ಸಾಹಗಳಿವೆ ಎಂಬುದನ್ನು ಮನಗಂಡಿರುವ ಹಸಿರುದಳ ಸಂಸ್ಥೆ ಹೆಚ್ಚಿನ ಗುಣಮಟ್ಟದ ಸೇವೆಯನ್ನು ನೀಡುವ ಉದ್ದೇಶದಿಂದ ವಾರಪೂರ್ತಿ ಕೆಲಸ ಮಾಡುವ ಸಹಾಯವಾಣಿಯನ್ನು ಸ್ಥಾಪಿಸಿದೆ.


ಚಿಂದಿ ಆಯುವವರ ಬದುಕನ್ನು ಹಸನುಗೊಳಿಸುವುದೇ ಅಲ್ಲದೆ, ಈ ವಲಯದಲ್ಲಿ ಯಶಸ್ಸಿಗಾಗಿ ಚಿಂದಿ ಆಯುವವರು, ನಾಗರೀಕರು, ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳು, ಅಧಿಕಾರಿಗಳು, ಕೇಂದ್ರ ಮತ್ತು ರಾಜ್ಯದ ಯೋಜನೆಗಳನ್ನು ಸೃಷ್ಟಿಸುವ ಎಲ್ಲರನ್ನೂ ಅವಲಂಬಿಸಬೇಕಾಗಿದೆ.


ಎಲ್ಸಿಟಾದ ಸಿಇಓ ರಾಮ ಹೇಳುತ್ತಾರೆ, “ನಾಲ್ಕು ವರ್ಷಗಳ ಹಿಂದೆ ನಮ್ಮಲ್ಲಿ ತ್ಯಾಜ್ಯ ನಿರ್ವಹಣೆಯ ಸೌಲಭ್ಯವಿರಲಿಲ್ಲ. ಈಗ ಸುಮಾರು ಹತ್ತು ಟನ್ನುಗಳಷ್ಟು ತ್ಯಾಜ್ಯವು ಹೋಟೇಲು ಮತ್ತು ಖಾಸಗಿ ಕಂಪನಿಗಳಿಂದ ಸೃಜಿಸಲ್ಪಡುತ್ತಿದೆ. ನಾವು ಹಸಿರುದಳ ಸಂಸ್ಥೆಯ ಸಹಯೋಗದಿಂದ ಇದಕ್ಕೆ ಪರಿಹಾರ ಕಂಡುಕೊಂಡಿದ್ದೇವೆ. ಕಳೆದ ವರ್ಷದಲ್ಲಿ ಹಸಿರುದಳ ಸಂಸ್ಥೆಯು ತಾಂತ್ರಿಕ ಮತ್ತು ವಾಣಿಜ್ಯದ ದೃಷ್ಟಿಯಲ್ಲಿ ಉತ್ತಮ ಬಲವನ್ನು ಪ್ರದರ್ಶಿಸಿದೆ.”