ನಮ್ಮ ತಂದೆ ಒಂದು ವರ್ಷದ ಸಂಬಳ ಖರ್ಚುಮಾಡಿ ಅಮೆರಿಕಕ್ಕೆ ಬರಲು ವಿಮಾನದ ಟಿಕೆಟ್‌ ಕೊಡಿಸಿದ್ದರು: ಸುಂದರ ಪಿಚಾಯಿ

2020 ನೇ ಸಾಲಿನಲ್ಲಿ ಪದವಿಧರರಾಗುತ್ತಿರುವ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸುಂದರ್‌ ಪಿಚಾಯಿ, ಇತಿಹಾಸ ನಮಗೆ ಭರವಸೆ ಇದೇ ಎಂಬುದನ್ನು ತೋರಿಸಿಕೊಟ್ಟ ಹಲವಾರು ನಿದರ್ಶನಗಳಿವೆ, ಹಾಗಾಗಿ ಭರವಸೆಯಿಂದರಿ ಎಂದರು.

ನಮ್ಮ ತಂದೆ ಒಂದು ವರ್ಷದ ಸಂಬಳ ಖರ್ಚುಮಾಡಿ ಅಮೆರಿಕಕ್ಕೆ ಬರಲು ವಿಮಾನದ ಟಿಕೆಟ್‌ ಕೊಡಿಸಿದ್ದರು: ಸುಂದರ ಪಿಚಾಯಿ

Wednesday June 10, 2020,

2 min Read

2020ನೇ ಸಾಲಿನ ಪದವಿ ಸಮಾರಂಭದಲ್ಲಿ ಮಾತನಾಡಿದ ಗೂಗಲ್‌ ಸಿಇಒ ಸುಂದರ್‌ ಪಿಚಾಯಿ ವಿದ್ಯಾರ್ಥಿಗಳಿಗೆ ‘ಯೋಚನೆಗಳಿಗೆ ತೆರೆದುಕೊಳ್ಳಿ, ಭರವೆಸೆಯಿಡಿ ಮತ್ತು ಅಸಹನೆಯಿಂದಿರಿ, ನಿಮಗೆ ಎಲ್ಲವನ್ನೂ ಬದಲಿಸಲು ಒಂದು ಅವಕಾಶ ಸಿಗುತ್ತದೆʼ ಎಂದರು.


ಕೊರೊನಾವೈರಸ್‌ ಮಹಾಮಾರಿ ಸಾಂಪ್ರದಾಯಿಕ ಪದವಿ ಸಮಾರಂಭಗಳಿಗೆ ಅವಕಾಶ ನೀಡದೆ ಆನ್‌ಲೈನ್‌ ಸಮಾರಂಭಗಳಿಗೆ ಮೊರೆಹೋಗುವುದನ್ನು ಅನಿವಾರ್ಯವಾಗಿಸಿದೆ. ಗೂಗಲ್‌ನ ವಿಡಿಯೋ ವೇದಿಕೆಯಾದ ಯೂಟ್ಯೂಬ್‌ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಬಿಳ್ಕೊಡುಗೆ ಸಮಾರಂಭವನ್ನು ಆಯೋಜಿಸಿತ್ತು.


“ನೀವೆಲ್ಲ ಕಲ್ಪಿಸಿಕೊಂಡಿದ್ದ ಪದವಿ ಸಮಾರಂಭ ಇದಲ್ಲ ಎಂದು ನನಗನ್ನಿಸುತ್ತದೆ. ಇಷ್ಟು ವರ್ಷ ನೀವು ಪಡೆದ ಜ್ಞಾನವನ್ನು ಸಂಭ್ರಮಿಸಬೇಕಾದ ಸಮಯದಲ್ಲಿ ನೀವು ಯೋಜಿಸಿಕೊಂಡಿದ್ದ ಹೊಸ ಚಟುವಟಿಕೆಗಳು, ನಿಮಗೆ ಸಿಕ್ಕ ಕೆಲಸಗಳು ಮತ್ತು ನೀವು ಪಡೆಯಬಯಸಿದ್ದ ಹೊಸ ಅನುಭವಗಳು ನಿಮಗೆ ಸಿಗದಂತಾಗಿರುವುದರಿಂದ ಬೇಜಾರು ಪಟ್ಟುಕೊಳ್ಳುವ ಸಂದರ್ಭ ಎದುರಾಗಿದೆ,” ಎಂದರು ಪಿಚಾಯಿ.


ಗೂಗಲ್‌ ಸಿಇಒ ಸುಂದರ್‌ ಪಿಚಾಯಿ




ಹಳೆ ಪೀಳಿಗೆಯ ಸಾಮರ್ಥ್ಯವನ್ನು ಹೊಸಬರು ಹೇಗೆ ಕಡೆಗಣಿಸುತ್ತಾರೆಂಬ ಅಂಶವನ್ನು ಪಿಚಾಯಿ ಎತ್ತಿ ಹಿಡಿದರು.


“ಏಕೆಂದರೆ ಒಂದು ಪೀಳಿಗೆ ಮಾಡಿದ ಸಾಧನೆ ಮುಂದಿನ ಪೀಳಿಗೆಗೆ ಭದ್ರವಾದ ಅಡಿಪಾಯ ಒದಗಿಸುತ್ತದೆ ಎಂಬುದನ್ನೆ ಅವರು ಅರ್ಥಮಾಡಿಕೊಳ್ಳುವುದಿಲ್ಲ. ಹೊಸಬರು ಬಂದು ಸಂಭ್ಯಾವ್ಯ ಅವಕಾಶಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ,” ಎಂದು ವಿವರಿಸಿದರು ಅವರು.


ಈಗಿನ ಮಕ್ಕಳು ಕಂಪ್ಯೂಟರ್‌ಗಳೊಂದಿಗೆ ಬೆಳೆಯುತ್ತಿದ್ದಾರೆ ಆದರೆ ತಾವು ಹೇಗೆ ತಂತ್ರಜ್ಞಾನದ ಜತೆಗೆ ಹೆಚ್ಚು ಸಂಪರ್ಕವಿಲ್ಲದೆ ಬೆಳೆದೆವೆಂಬುದನ್ನು ತುಲನೆ ಮಾಡಿ ಹೇಳಿದರು ಪಿಚಾಯಿ.


ಯುಎಸ್‌ನ ಆರಂಭಿಕ ವರ್ಷಗಳ ಬಗ್ಗೆ ಮತ್ತು ಅಲ್ಲಿ ಎದುರಿಸಿದ ಸವಾಲುಗಳ ಬಗ್ಗೆಯೂ ಅವರು ಮಾತನಾಡಿದರು.


“ನನ್ನ ತಂದೆ ನಾನು ಸ್ಟ್ಯಾನ್‌ಪೊರ್ಡ್‌ ನಲ್ಲಿ ಕಲಿಯಬೇಕೆಂದು ಅವರು ತಮ್ಮ ಒಂದು ವರ್ಷದ ವೇತನವನ್ನು ನೀಡಿ ಯುಎಸ್‌ ಗೆ ಬರಲು ನನಗೆ ವಿಮಾನದ ಟಿಕೆಟ್‌ ಕೊಡಿಸಿದರು. ಅದೇ ಮೊದಲ ಸಾರಿ ನಾನು ವಿಮಾನದಲ್ಲಿ ಕೂತಿದ್ದು,” ಎನ್ನುತ್ತಾ ಪಿಚಾಯಿ ಆಗ ಕಂಪ್ಯೂಟಿಂಗ್‌ ತಮ್ಮ ನೆಚ್ಚಿನ ವಿಷಯವಾಗಿತ್ತು ಎಂದರು.


ಇತಿಹಾಸದಲ್ಲಿ ಹಲವು ಬಾರಿ ವಿದ್ಯಾರ್ಥಿಗಳು ಹೊಸ ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ. ಅದು 1920 ರ ರಕ್ಕಸ ಮಹಾಮಾರಿಯ ಸಮಯದಲ್ಲಿ ಪದವಿ ಪಡೆದುಕೊಂಡ ತರಗತಿಯಾಗಿರಬಹುದು ಅಥವಾ 1970ರ ವಿಯೆಟ್ನಾಮ್‌ ಯುದ್ಧದ ಮಧ್ಯದಲ್ಲಿ ಪದವಿ ಪಡೆದುಕೊಂಡ ತರಗತಿಯಾಗಿರಬಹುದು ಇಲ್ಲವೆ 2001 ರಲ್ಲಿ ಅಮೆರಿಕದ ಮೇಲಾದ 9/11 ದಾಳಿಯಲ್ಲಿ ಪದವಿ ಪಡೆದುಕೊಂಡ ತರಗತಿಯಾಗಿರಬಹುದು.


“ಈ ಎಲ್ಲ ಸಂದರ್ಭಗಳಲ್ಲೂ ಅವರು ಗೆದ್ದಿದ್ದಾರೆ. ನಮ್ಮ ಸುದೀರ್ಘವಾದ ಇತಿಹಾಸ ನಮಗೆ ಭರವೆಸೆ ನೀಡಲು ಹಲವಾರು ಕಾರಣಗಳನ್ನು ನೀಡುತ್ತದೆ. ಹಾಗಾಗಿ ಧೈರ್ಯದಿಂದರಿ,” ಎಂದರು ಅವರು.


ಈ ಸಮಾರಂಭದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಮತ್ತು ಮೊದಲ ಮಹಿಳೆ ಮೈಕಲ್‌ ಒಬಾಮಾ, ಕೊರಿಯನ್‌ ಪಾಪ್‌ ತಂಡ ಬಿಟಿಎಸ್‌, ಹಾಡುಗಾರರಾದ ಬಿಯೊನ್ಸ್‌ ಮತ್ತು ಲೇಡಿ ಗಾಗಾ, ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ರಾಬರ್ಟ್‌ ಎಮ್‌ ಗೇಟ್ಸ್‌, ಮಾಜಿ ಕಾರ್ಯದರ್ಶಿ ಕೊಂಡೊಲೀಜಾ ರೈಸ್‌ ಮತ್ತು ಮಲಾಲಾ ಯೂಸಫ್‌ಜಾಯಿ ರಂತಹ ಗಣ್ಯರು ಉಪಸ್ಥಿತರಿದ್ದರು.