ಕಾಲೇಜು ಡ್ರಾಪೌಟ್ ಆದ‌‌ ಹುಡಗಿಯೊಬ್ಬಳು‌ ಅಂಡಮಾನ್ ದ್ವೀಪವನ್ನು ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಕ್ತಗೊಳಿಸುತ್ತಿದ್ದಾಳೆ

ನವೆಂಬರ್‌ 2018 ರಿಂದ ಗರಿಮಾ ‌ಪೂನಿಯಾ ಎಂಬ ಯುವತಿ ಅಂಡಮಾನ್ ಕಡಲ ತೀರಗಳಿಂದ 250 ಕೆ ಜಿ ಗಿಂತ ಹೆಚ್ಚಿ‌ನ‌ ತ್ಯಾಜ್ಯವನ್ನು ಸಂಗ್ರಹಿಸಿ,‌ ಅದನ್ನು ಬೇರ್ಪಡಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.

ಕಾಲೇಜು ಡ್ರಾಪೌಟ್ ಆದ‌‌ ಹುಡಗಿಯೊಬ್ಬಳು‌ ಅಂಡಮಾನ್ ದ್ವೀಪವನ್ನು ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಕ್ತಗೊಳಿಸುತ್ತಿದ್ದಾಳೆ

Sunday July 28, 2019,

2 min Read

ಪ್ರಪಂಚದಾದ್ಯಂತ ಸಮುದ್ರದ ನೀರಿನ ಮಾಲಿನ್ಯದ ಕುರಿತಾಗಿ ಕಾಳಜಿ ಹೆಚ್ಚುತ್ತಿದೆ. ಕಳಪೆ ತ್ಯಾಜ್ಯ, ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯ ವಸ್ತುಗಳು ಸಾಗರದ ತಳವನ್ನು ಸೇರಿ ಅಲ್ಲಿನ ಜೀವಗಳಿಗೆ ಹಾನಿಯನ್ನುಂಟು ಮಾಡುತ್ತಿವೆ.


ಪ್ರವಾಸಿಗರು ತಮ್ಮ ಪ್ರಯಾಣದಲ್ಲಿ ಪ್ಲಾಸ್ಟಿಕ್ ಬಾಟಲಿ ಹಾಗೂ ಚೀಲಗಳನ್ನು ಜಲಮೂಲಗಳಿಗೆ ಎಸೆಯುವ ಮೂಲಕ ಮತ್ತಷ್ಟು ತೊಂದರೆಗಳನ್ನು ಹೆಚ್ಚಿಸುತ್ತಿದ್ದಾರೆ,‌‌ ಸಾಗರವನ್ನು ಮತ್ತಷ್ಟು ಕಲುಷಿತಗೊಳಿಸಿ ಹಾನಿಯನ್ನುಂಟ ಮಾಡುತ್ತಿದ್ದಾರೆ.


ಕಡಲತೀರ, ರೆಸಾರ್ಟ್‌ಗಳು ಹಾಗೂ ರಸ್ತೆಗಳಲ್ಲಿ ಕಂಡುಬರುವ ತ್ಯಾಜ್ಯ ನಿರ್ವಹಣೆಯ ಕೊರತೆಗೆ ಪ್ರತ್ಯಕ್ಷ ಸಾಕ್ಷಿಯಾದ 26 ವಯಸ್ಸಿನ ಗರಿಮಾ ಪೂನಿಯಾ ತನ್ನ ಸಮಯವನ್ನು ಅಂಡಮಾನ್ ನ ನೇಲ್ ದ್ವೀಪದ ತ್ಯಾಜ್ಯವನ್ನು ತೆರವುಗೊಳಿಸುವ ಪ್ರಯತ್ನಗಳಿಗೆ ವಿನಿಯೋಗಿಸಲು ನಿರ್ಧರಿಸಿದರು.


ಕ

ಗರಿಮಾ‌ ಪೂನಿಯಾ ಸ್ವಚ್ಛಗೊಳಿಸುವ ಪ್ರಕ್ರಿಯೆಯಲ್ಲಿ (ಚಿತ್ರಕೃಪೆ: ಶಿ ದ ಪೀಪಲ್)


ಕಾಲೇಜ್ ಡ್ರಾಪ್ ಔಟ್ ಆದ ಗರಿಮಾ ಈ ಅಪಾಯವನ್ನು ನಿಭಾಯಿಸಲು 2017 ರಲ್ಲಿ ಕಚ್ರೂವಾಲಾ ಎಂಬ ಯೋಜನೆಯೊಂದನ್ನು ಆರಂಭಿಸಿದರು.


ಇಲ್ಲಿಯವರೆಗೆ ಗರಿಮಾರವರು‌ ನೀಲ್‌ ದ್ವೀಪಗಳ ಐದು ‌ಕಡಲತೀರಗಳಿಂದ ಒಟ್ಟು‌ 250 ಕೆಜಿ ಕಸವನ್ನು ಸಂಗ್ರಹಿಸಿ ಅದನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತ್ಯಾಜ್ಯವನ್ನು ಕಡಲತೀರಗಳಿಂದ‌ ಮಾತ್ರವಲ್ಲದೆ ರೆಸಾರ್ಟ್ ಗಳು ಮತ್ತು ರೆಸ್ಟೋರೆಂಟ್ ಗಳಿಂದಲೂ‌ ಸಂಗ್ರಹಿಸಲಾಗುತ್ತದೆ.


ಇದಷ್ಟಲ್ಲದೆ, ಗರಿಮಾ ಮಕ್ಕಳಲ್ಲಿ ಜಾಗೃತಿ ಮೂಡಿಸಲು ತ್ಯಾಜ್ಯ ವಿಭಜನೆಯ ಕುರಿತು ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಈ ಕಾರ್ಯಾಗಾರದಲ್ಲಿ ಪ್ಲಾಸ್ಟಿಕ್ ಮಾಲಿನ್ಯದಿಂದುಂಟಾಗುವ ಭೀಕರ ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಲಾಗುತ್ತದೆ.


'ಸ್ಪೀಕಿಂಗ್ ಟ್ರೀ'ಯೊಂದಿಗೆ ಮಾತನಾಡಿದ ಗರಿಮಾ,


"ಇದು ದೀರ್ಘಾವಧಿಯ ಯೋಜನೆಯಾಗಿದೆ ಎಂದು ನಾನು ಭಾವಿಸಲಿಲ್ಲ.‌ ಏಕೆಂದರೆ, ನಾನು ಕೊನೆಯ ವರ್ಷದಲ್ಲಿ ಸಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅಧ್ಯಯನದಲ್ಲಿ‌ ಪದವಿ ಪಡೆಯಬೇಕಿತ್ತು. ಆದರೆ, ಅಂಡಮಾನ್‌ಗಳ ಕರೆ ತುಂಬಾ ಪ್ರಬಲವಾಗಿತ್ತು. ದ್ವೀಪಗಳು ಅವುಗಳ ಪರಿಸರ ವಿಜ್ಞಾನದ ದೃಷ್ಟಿಯಿಂದ ತುಂಬಾ ವಿಶಿಷ್ಟವಾಗಿವೆ. ಸುಮಾರು‌ ಸಾವಿರ ಸ್ಥಳೀಯ ಜಾತಿಗಳನ್ನು‌ ಹೊಂದಿವೆ.


ಗರಿಮಾ ಒಮ್ಮೆ ತನ್ನ ಕುಟುಂಬದೊಂದಿಗೆ ವಿಹಾರಕ್ಕಾಗಿ ಅಂಡಮಾನ್‌ಗೆ ಬಂದಾಗ ಅವಳು ಸ್ಕೂಬಾ ಡೈವಿಂಗ್ ಪರವಾನಿಗೆ ಪಡೆಯಲು ನೋಡುತ್ತಿದ್ದಳು. ಆದರೆ,‌ಮುಂದೊಂದು ದಿನ‌ ಆ ದ್ವೀಪಗಳಲ್ಲಿನ ನೀರಸ ತ್ಯಾಜ್ಯ ನಿರ್ವಹಣಾ ಕ್ರಮಗಳಿಗೆ ಅವಳು ಸಾಕ್ಷಿಯಾದಳು.


ಕ

(ಚಿತ್ರಕೃಪೆ : ಶಿ‌ ದ್ ಪೀಪಲ್)


ಇದು ದ್ವೀಪಗಳ ಹಾಗೂ ಸಮುದ್ರ ಸಂರಕ್ಷಣೆಗಾಗಿ ಕೆಲಸ‌ ಮಾಡುವ ಎನ್‌ಜಿಒ‌ ರೀಫ್‌ವಾಚ್‌ಗೆ ಸೇರುವ ನಿರ್ಧಾರಕ್ಕೆ‌ ಕಾರಣವಾಯಿತು. ಇಲ್ಲಿ ಗರಿಮಾರವರು ತಂಡಕ್ಕೆ ಘನತ್ಯಾಜ್ಯ ನಿರ್ವಹಣೆಯ ಕುರಿತಾದ‌ ಒಂದು‌ ಯೋಜನೆಯನ್ನು‌‌ ಪ್ರಸ್ತಾಪಿಸಿದರು. ಮತ್ತು ಮತ್ತೊಂದೆಡೆ ಪೋರ್ಟ್ ಬ್ಲೇರ್‌ನಲ್ಲಿ ಅನೌಪಚಾರಿಕ ಮರುಬಳಕೆಯ ಉದ್ಯಮದ ಕುರಿತಾಗಿ ತಿಳಿದುಕೊಳ್ಳಲು ಪ್ರಯತ್ನಸುತ್ತಿದ್ದರು.


ಇದರ ಕುರಿತಾಗಿಯೆ 'ಶಿ‌ ದ್ ಪೀಪಲ್'ನೊಂದಿಗೆ‌ ಮಾತನಾಡಿದ ಗರಿಮಾ,


"ಈ ಯೋಜನೆಗೆ ಧನಸಹಾಯ ನೀಡಲು‌ ಯಾರಾದರೂ ಆಸಕ್ತಿ‌‌ ಹೊಂದಿದ್ದಾರೆಯೇ ಎಂದು‌ ತಿಳಿಯಲು ನಾನು ಖಾಸಗಿ ಉದ್ಯಮದ ಬಹಳಷ್ಟು ಜನರನ್ನು ಭೇಟಿಯಾದೆ. ಆದರೆ ಕೊನೆಯಲ್ಲಿ, ನಾನು ಎರಡು ಉದ್ಯೋಗಳನ್ನು ‌ಪಡೆಯಲು ಸಹಾಯ ಮಾಡಿದ ವ್ಯಕ್ತಿಯನ್ನು ಭೇಟಿಯಾದೆ. ಇದರಿಂದ ನನ್ನನ್ನು ಉಳಿಸಿಕೊಳ್ಳಲು ಹಾಗೂ ನನ್ನ ಯೋಜನೆಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು. ಅವರ ಸಹಯೋಗವು ಮುಖ್ಯವಾದುದರಿಂದ ಅವರು‌ ಸಹಾಯ ಮಾಡಲು‌ ಸಿದ್ಧರಿದ್ದಾರೆಯೇ ಎಂದು ತಿಳಿಯಲು ಆಡಳಿತ ಮಂಡಳಿಯನ್ನು ಭೇಟಿಯಾಗಲಾಯಿತು. ಕಳೆದ ವರ್ಷ ನವೆಂಬರ್‌ನಲ್ಲಿ ನೀಲ್‌ನಲ್ಲಿ ಈ ಯೋಜನೆ ಔಪಚಾರಿಕವಾಗಿ ಪ್ರಾರಂಭವಾಯಿತು".


ಕಳೆದ ವರ್ಷ,ಗರಿಮಾ ಪೋರ್ಟ್ ಬ್ಲೇರ್‌ನ 'ನೇವಿ ಮಕ್ಕಳ ಶಾಲೆ'ಯಲ್ಲಿ ಮಕ್ಕಳಿಗಾಗಿ ತ್ಯಾಜ್ಯ ನಿರ್ವಹಣೆ ಹಾಗೂ ಸಂರಕ್ಷಣೆಯ ಕುರಿತಾಗಿ ಕಾರ್ಯಾಗರವನ್ನು ಆಯೋಜಿಸಿದ್ದರು. ಅದರ‌ ಕುರಿತು ಪ್ರಾಯೋಗಿಕವಾಗಿ ನಡೆದ ಸಮಯದಲ್ಲಿ 33 ಮಕ್ಕಳು‌ 100 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಿದರು.


ಈಗ, ದ್ವೀಪಗಳಲ್ಲಿ ಪ್ರಯಾಣಿಕರು ಹಾಗೂ ಪ್ರವಾಸಿಗರು ತ್ಯಾಜ್ಯ ಬೇರ್ಪಡಿಸುವಿಕೆಯ ಕುರಿತಾಗಿ ವಿವಿಧ ಬಗೆಯ ಭಿತ್ತಿ ಚಿತ್ರಗಳನ್ನು ನೋಡಬಹುದು. ಇದಲ್ಲದೆ, ದ್ವೀಪಕ್ಕೆ ಬರುವ ಪ್ರವಾಸಿಗರನ್ನು ಸಂವೇದನೆಶೀಲಗೊಳಿಸಲು ಪೋಸ್ಟರ್ ಗಳನ್ನು ಪ್ರತಿ ಆಟೋರಿಕ್ಷಾದಲ್ಲಿ ಹಾಕಲು ಗರಿಮಾ ಯೋಚಿಸಿದ್ದಾರೆ.


ತ್ಯಾಜ್ಯ ಸಂಗ್ರಹವನ್ನು ಪರಿಗಣಿಸಿದಂತೆ, ಗರಿಮಾ‌ ಈಗ ಸ್ಥಳೀಯ ಅಧಿಕಾರಿಗಳೊಂದಿಗೆ ದ್ವೀಪದಿಂದ‌ ಪ್ಲಾಸ್ಟಿಕ್ ಸ್ಟ್ರಾಗಳನ್ನು‌ ಹೊರ ಹಾಕಲು‌ ನೋಡುತ್ತಿದ್ದಾರೆ.