ಇಸ್ರೋದ ನ್ಯಾವಿಕ್ ತಂತ್ರಜ್ಞಾನವನ್ನು‌ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ತರಲು ಮುಂದಾದ ಶಿಯೋಮಿ

ಕ್ವಾಲ್ಕಾಮ್ ಟೆಕ್ನಾಲಜೀಸ್‌ ಇಂಕ್ ಅವರ ಹಲವಾರು‌‌ ಮೊಬೈಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯಗೊಳಿಸಲಾಗಿದ್ದು, ಇನ್ನೂ ನ್ಯಾವಿಕ್‌ ಭಾರತದಲ್ಲಿರುವ ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗಲಿದೆ.

ಇಸ್ರೋದ ನ್ಯಾವಿಕ್ ತಂತ್ರಜ್ಞಾನವನ್ನು‌ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ತರಲು ಮುಂದಾದ ಶಿಯೋಮಿ

Wednesday February 26, 2020,

2 min Read

ಚೀನಾದ ಪ್ರಮುಖ ಟೆಕ್ನಾಲಜಿಯಾ ಕಂಪನಿಯಾದ ಶಿಯೋಮಿ ಇಸ್ರೋದ ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್‌, ನ್ಯಾವಿಕ್ ತಂತ್ರಜ್ಞಾನವನ್ನು ತನ್ನ ಸ್ಮಾರ್ಟ್‌ಪೋನ್‌ಗಳಲ್ಲಿ ಅಳವಡಿಸಲು ಮುಂದಾಗಿದೆ ಎಂದು ಮಂಗಳವಾರ ತಿಳಿಸಿದೆ.


ಕ್ವಾಲ್ಕಾಮ್ ಟೆಕ್ನಾಲಜೀಸ್‌ ಇಂಕ್‌ರವರ ಹಲವಾರು ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ ಮೊಬೈಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇದನ್ನು ಅಳವಡಿಸಲಾಗಿದ್ದು, ಭಾರತದ ಅನೇಕ ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ನ್ಯಾವಿಕ್ ಸದ್ಯದಲ್ಲಿಯೇ ಲಭ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ನ್ಯಾವಿಕ್- ನ್ಯಾವಿಗೇಷನ್ ವಿಥ್ ಇಂಡಿಯನ್ ಕನ್ಸ್ಟಲ್ಲೇಷನ್ ಇದು ಭಾರತದಲ್ಲಿ ಮತ್ತು ಭಾರತದ ಮುಖ್ಯ ಭಾಗಗಳ ಸುತ್ತಲಿನ ನಿಖರವಾದ ಭೌಗೋಳಿಕ ಸ್ಥಾನವನ್ನು ತಿಳಿಸುವಂತಹ ಇಸ್ರೋ ವಿನ್ಯಾಸಗೊಳಿಸಿದ ಪ್ರಾದೇಶಿಕ ಜಿಯೋ- ಪೊಸಿಷನಿಂಗ್ ಸಿಸ್ಟಮ್ ಆಗಿದೆ. ಇದು ಯುಎಸ್ ಮೂಲದ ಜಿಪಿಎಸ್, ರಷ್ಯಾದ ಗ್ಲೋನಾಸ್ ಮತ್ತು ಯೂರೋಪ್ ಅಭಿವೃದ್ಧಿ ಪಡಿಸಿದ ಗೆಲಿಲಿಯೊಗೆ ಸಮನಾಗಿದೆ ಎಂದು ಪರಿಗಣಿಸಲಾಗಿದೆ.


"2020ರಲ್ಲಿ ಹಲವಾರು ಶಿಯೋಮಿ ಸ್ಮಾರ್ಟ್‌ಫೋನ್‌ಗಳು ನ್ಯಾವಿಕ್‌ ಅನ್ನು ಬೆಂಬಲಿಸುತ್ತವೆ, ಆರಂಭದಲ್ಲಿ ಕೆಲವು ಸ್ನ್ಯಾಪ್‌ಡ್ರ್ಯಾಗನ್ ಚಿಪ್‌ಸೆಟ್‌ಗಳು ಇದನ್ನು ಹೊಂದಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ."




ಇಸ್ರೋ ಮತ್ತು ಕ್ವಾಲ್ಕಾಮ್‌ ಪ್ರಯತ್ನಗಳೊಂದಿಗೆ ಸಾಫ್ಟ‌ವೇರ್‌ಗಾಗಿ ಶಿಯೋಮಿಯ ಆರ್‌ ಹಾಗೂ ಡಿ ಪ್ರಯತ್ನಗಳ ನಂತರ ಇದರ ಅನುಷ್ಠಾನ ಸಾಧ್ಯವಾಗಿದೆ ಎಂದು ಹೇಳಲಾಗಿದೆ.


"ಶಿಯೋಮಿ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಭಾರತದಲ್ಲಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಮೇಕ್ ಇನ್ ಇಂಡಿಯಾಕ್ಕೆ ತನ್ನ ಬದ್ಧತೆಯನ್ನು ಮತ್ತಷ್ಟು ವಿಸ್ತರಿಸಲು ಈ ಕ್ರಮವನ್ನು ಕೈಗೊಂಡಿದೆ," ಎಂದು ವರದಿಯಲ್ಲಿ ಹೇಳಲಾಗಿದೆ.


ನ್ಯಾವಿಕ್ ಅನ್ನು ಭಾರತದ ಮತ್ತು ಅದರ ಸುತ್ತಲಿನ 1,500 ಕಿ ಮೀ ನ ಭಾರತದ ಮುಖ್ಯ ಭೂಮಿಯ ನಿಖರವಾದ ಭೌಗೋಳಿಕ ಸ್ಥಾನವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಘಟಕದಲ್ಲಿ ಏಳು ಉಪಗ್ರಹಗಳಿವೆ, ಅದರಲ್ಲಿ ಮೂರು ಹಿಂದೂ ಮಹಾಸಾಗರದ ಮೇಲಿನ ಜಿಯೋ ಸ್ಟೇಷನರಿ ಕಕ್ಷೆಯಲ್ಲಿದ್ದರೆ ಉಳಿದ ನಾಲ್ಕು ಜಿಯೋ ಸಿಂಕ್ರೋನಸ್ ಕಕ್ಷೆಯಲ್ಲಿವೆ. ನ್ಯಾವಿಕ್ 20 ಮೀಟರ್‌ಗಿಂತ ಹೆಚ್ಚಿನ ಸ್ಥಳದ ಸ್ಥಾನಿಕ ನಿಖರತೆಯನ್ನು ಒದಗಿಸುವಂತಹ ಸಾಮರ್ಥ್ಯ ಹೊಂದಿದೆ.


ಮೊಬೈಲ್‌ಗಾಗಿ ನ್ಯಾವಿಕ್‌ ಅಪ್ಲಿಕೇಶನ್‌ನ ವೈಶಿಷ್ಟ್ಯಗಳೆಂದರೆ ದೂರದ ಸ್ಥಳಗಳಲ್ಲಿ ಅಥವಾ ಸುಲಭವಾಗಿ ಹೋಗಲಾಗದ ಪ್ರದೇಶಗಳ ನಿಖರವಾದ ಮ್ಯಾಪಿಂಗ್ ನೀಡುವುದು, ನಿಖರವಾದ ಸಮಯ, ಚಾಲಕರಿಗಾಗಿ ದೃಶ್ಯ ಮತ್ತು ಧ್ವನಿ‌ ಸೂಚನೆಗಳು ಎಂದು ಶಿಯೋಮಿ ಹೇಳುತ್ತದೆ.

"ಇಸ್ರೋ ರೂಪಿಸಿರುವ ಅತ್ಯಾಧುನಿಕವಾದಂತಹ ಜಿಯೋ-ಪೊಸಿಷನಿಂಗ್ ತಂತ್ರಜ್ಞಾನದ ಬಗ್ಗೆ ನಾವು ತುಂಬಾ ಹೆಮ್ಮೆ ಪಡುತ್ತೇವೆ ಮತ್ತು ಅದನ್ನು ಹಲವಾರು ಶಿಯೋಮಿ ಸಾಧನಗಳಲ್ಲಿ ಸಂಯೋಜಿಸಲು ಇನ್ನಷ್ಟು ಹೆಮ್ಮೆಯಿದೆ. ಈ ವರ್ಷ ನಾವು ಮೊದಲ ಬಾರಿಗೆ ರೆಡ್ಮಿ ಸ್ಮಾರ್ಟ್‌ಫೋನ್‌ಗಳ ಮೂಲಕ ಇದನ್ನು ಅಳವಡಿಸುವಾಗ ಅವರ ಚಿಪ್‌ಸೆಟ್‌ಗಳ ಮೂಲಕ ಬೆಂಬಲವನ್ನು ಒದಗಿಸಿದಕ್ಕಾಗಿ ನಮ್ಮ ಪಾಲುದಾರರಾದ ಕ್ವಾಲ್ಕಾಮ್ ಟೆಕ್ನಾಲಜೀಸ್‌‌ಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇವೆ,” ಎಂದು ಶಿಯೋಮಿಯ ಜಾಗತಿಕ ಉಪಾಧ್ಯಕ್ಷ ಮತ್ತು ಶಿಯೋಮಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನು ಜೈನ್ ಹೇಳುತ್ತಾರೆ.