ಸಕ್ಕರೆ ಕಾಯಿಲೆ ಬಗ್ಗೆ ಟೆನ್ಷನ್ ಬಿಟ್ಟುಬಿಡಿ- ಸೆಲ್ಫ್ ಮ್ಯಾನೇಜ್ ಡಯಾಬಿಟಿಸ್ ಆ್ಯಪ್ನ್ನು ಡೌನ್ಲೋಡ್ ಮಾಡಿ..!
ಟೀಮ್ ವೈ.ಎಸ್. ಕನ್ನಡ
ಭಾರತದಲ್ಲಿ ಎಲ್ಲರಿಗೂ ತಲೆನೋವಾಗಿ ಕಾಡುತ್ತಿರುವುದು ಸಕ್ಕರೆ ಕಾಯಿಲೆ. ವಿಶ್ವಕ್ಕೆ ಇದು ದೊಡ್ಡ ಸಮಸ್ಯೆಯಾದ್ರು. ಭಾರತದಲ್ಲಿ ಹೆಚ್ಚು ಸಿಹಿ ತಿನ್ನುವವರು ಇರುವುದರಿಂದ ನಮ್ಮಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ವೈದ್ಯರು ಎಷ್ಟೇ ಹೇಳಿದ್ರು ಭಾರತೀಯರು ಮಾತ್ರ ಪಥ್ಯ ಮಾಡುವುದರಲ್ಲಿ ಎಡವುತ್ತಿದ್ದಾರೆ. ಹಾಗಾಗಿಯೇ ಹಲವರಿಗೆ ಇದು ದೊಡ್ಡ ತಲೆನೋವಾಗಿದೆ.
ಕೆಲ ಮಧುಮೇಹಿಗಳು ವೈದ್ಯರ ಸಲಹೆಯಂತೆ ನಡೆದುಕೊಂಡರೆ ಬಹುತೇಕ ಸಕ್ಕರೆ ರೋಗಿಗಳು ಕೆಲಸದ ಒತ್ತಡದಿಂದಾಗಿ ಸಕಾಲಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ. ಜತೆಗೆ ತಮಗೆ ಅರಿವಿಲ್ಲದಂತೆ, ಅಥವಾ ಬಾಯಿ ಚಪಲ ತಡೆಯಲಾಗದೆ ಸಕ್ಕರೆಯ ಅಂಶವಿರುವ ಆಹಾರವನ್ನು ಸೇವಿಸುತ್ತಾರೆ. ಇದರಿಂದ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಾದಂತೆ ಸಕ್ಕರೆ ಕಾಯಿಲೆ ಉಲ್ಬಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಾವು ಕೂಡ ಸಂಭವಿಸಬಹುದು. ನೋಡಲು ಇದು ಸಣ್ಣ ಖಾಯಿಲೆಯಂತೆ ಕಂಡರು, ತುಂಬಾ ಡೇಂಜರಸ್. ಇಂತಹ ಅನಾಹುತಗಳನ್ನು ತಪ್ಪಿಸಲು ಬ್ರಿಟನ್ ವೈದ್ಯರು ಸಕ್ಕರೆ ಕಾಯಿಲೆ ನಿಯಂತ್ರಿಸುವ 'ಡಯಾಬಿಟಿಸ್ ಆ್ಯಪ್' ಅಭಿವೃದ್ಧಿಪಡಿಸಿದ್ದಾರೆ. ಮಧುಮೇಹಿಗಳಿಗೆ ಸಕಾಲದಲ್ಲಿ ಎಚ್ಚರಿಕೆ ನೀಡುವ ಕಾರ್ಯ ಈ ಆ್ಯಪ್ ಮಾಡುತ್ತದೆ.
" ಸಾಮಾನ್ಯವಾಗಿ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದು ಆಹಾರ ಸೇವನೆಯ ಕ್ರಮದಿಂದ. ಬಾಯಿ ಚಪಲಕ್ಕೆ ತಿನ್ನುವ ಸಿಹಿಯುಕ್ತ ತಿಂಡಿ, ಪದಾರ್ಥಗಳು ದೇಹದಲ್ಲಿನ ಗ್ಲುಕೋಸ್ ಪ್ರಮಾಣವನ್ನು ಏರುಪೇರು ಮಾಡುತ್ತದೆ. ರೋಗಿಗಳು ಜಾಗೃತೆ ತಪ್ಪಿಯೇ ಅಥವಾ ನಿರ್ಲಕ್ಷ್ಯತನಗಳಿಂದಲೇ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡುವುದು ಕಷ್ಟವಾಗುತ್ತದೆ."
- ಕೃಷ್ಣಮೂರ್ತಿ, ವೈದ್ಯರು
ಬ್ರಿಟನ್ನ ಕಾರ್ಡಿಫ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮೆಡಿಸನ್ ವಿಭಾಗದ ಸಂಶೋಧನಾ ವೈದ್ಯರು ಮತ್ತು ಸಾಫ್ಟ್ವೇರ್ ತಜ್ಞರು ಸೇರಿ ಮಧುಮೇಹ ನಿಯಂತ್ರಿಸುವ ಡಯಾಬಿಟಿಸ್ ಆ್ಯಪ್ ರೂಪಿಸಿದ್ದಾರೆ. ಸ್ಮಾರ್ಟ್ ಜನರಿಗೆ ಅತ್ಯಂತ ಸಹಾಯಕಾರಿಯಾದ ಆ್ಯಪ್ ಇದಾಗಿದ್ದು. ನಿಮ್ಮ ಮಧುಮೇಹವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ.
ಆ್ಯಪ್ ಇದ್ರೆ ಸಾಲದು...!
ಈ ಆ್ಯಪ್ನ್ನು ಸ್ಮಾರ್ಟ್ ಫೋನ್ನಲ್ಲಿ ಅಳವಡಿಸಿಕೊಂಡರೆ ಸಕ್ಕರೆ ಕಾಯಿಲೆ ತನ್ನಷ್ಟಕ್ಕೆ ನಿಯಂತ್ರಣಕ್ಕೇನೂ ಬರುವುದಿಲ್ಲ. ಆದರೆ ಇದು ಯಾವ ರೀತಿ ಆಹಾರ ಕ್ರಮವೀರಬೇಕೆಂದು ತಿಳಿಸುತ್ತದೆ. ನಮ್ಮ ಆಹಾರ ಪದ್ಧತಿ ಮತ್ತು ತಪಾಸಣೆ ಬಗ್ಗೆ ಪದೇ ಪದೇ ಎಚ್ಚರಿಸುವ ಕೆಲಸ ಮಾಡುತ್ತದೆ. ಇದರಿಂದ ರೋಗಿಗಳು ಸಕಾಲಕ್ಕೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಲು ನೆರವಾಗುತ್ತದೆ. ನಾವು ಯಾವ ಆಹಾರ ಸೇವಿಸಬೇಕೆಂಬುದನ್ನು ತಿಳಿಸುತ್ತದೆ.
" ಸಕ್ಕರೆ ಕಾಯಿಲೆ ಬಗ್ಗೆ ಎಚ್ಚರ ನೀಡುವ ಈ ಆ್ಯಪ್ ನಿಜಕ್ಕೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ನೀಡುತ್ತದೆ. ಈ ಆ್ಯಪ್ ನೀಡುವ ಎಲರ್ಟ್ ಮೆಸೆಜ್ಗಳಿಂದ ನಾವು ಸೇವಿಸಬೇಕಾದ ಆಹಾರ ಮತ್ತು ಅದ್ರಲ್ಲಿರುವ ಸಕ್ಕರೆ ಅಂಶಗಳ ಕುರಿತು ಬೇಗನೆ ತಿಳಿದುಕೊಳ್ಳಬಹುದಾಗಿದೆ."
- ರವಿ, ಆ್ಯಪ್ ಬಳಕೆದಾರ
ಈ ಆ್ಯಪ್ ಬಳಸಬೇಕಾದ್ದಲ್ಲಿ ನೀವು ಮಾಡಬೇಕಾದ್ದು ಇಷ್ಟೆ. ಇದರಲ್ಲಿ ಮಧುಮೇಹಿಗಳು ಸಂಪೂರ್ಣ ಮಾಹಿತಿಯನ್ನು ದಾಖಲಿಸಬೇಕು. ಆಹಾರ ಕ್ರಮ ಮತ್ತು ವೈದ್ಯರು ನೀಡಿರುವ ತಪಾಸಣೆ ದಿನಾಂಕಗಳನ್ನು ಆಗಾಗ ನವೀಕರಿಸುತ್ತಿರಬೇಕು. ಒಂದು ವೇಳೆ ತಪಾಸಣೆ ದಿನಾಂಕವನ್ನು ಮರೆತರೂ ಆ್ಯಪ್ ರೋಗಿಗಳನ್ನು ತಪಾಸಣೆಗೆ ಹೋಗುವಂತೆ ಎಚ್ಚರಿಸುತ್ತದೆ. ಇದು ಆಂಡ್ರಾಯ್ಡ್ ಮತ್ತು ವಿಂಡೋಸ್ ಅಪ್ಲಿಕೇಶನ್ಗಳಲ್ಲಿ ಉಚಿತವಾಗಿ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ self-manage diabetes-appನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
1. 100 ದಿನಗಳಲ್ಲಿ 100 ಡಿಜಿಟಲ್ ಗ್ರಾಮ- ಇದು ಐಸಿಐಸಿಐ ಬ್ಯಾಂಕ್ ಪಣ
2. "ಹಿಮಾಲಯನ್ ಸಾಲ್ಟ್" ಸಖತ್ ಡಿಮ್ಯಾಂಡ್- ಸಿಲಿಕಾನ್ ಸಿಟಿಯಲ್ಲಿ ಸದ್ದು ಮಾಡಿದ ಸ್ಪೆಷಲ್ ಉಪ್ಪು