ಆವೃತ್ತಿಗಳು
Kannada

ಸಾಹಸದ ಹಾದಿಯಲ್ಲಿ ಮೂವರು ಮಹಿಳೆಯರ ಯಶಸ್ವೀ ಯಾನ.. !

ಟೀಮ್​ ವೈ.ಎಸ್​. ಕನ್ನಡ

YourStory Kannada
11th Mar 2016
Add to
Shares
7
Comments
Share This
Add to
Shares
7
Comments
Share

ಭಾರತದಲ್ಲಿ ಯಶಸ್ವೀ ಮಹಿಳಾ ಉದ್ಯಮಿಗಳ ಯಶೋಗಾಥೆಗಳನ್ನ ನಾವು ಆಗಾಗ್ಯೆ ಕೇಳುತ್ತಲೇ ಇರುತ್ತೇವೆ. ಸಾಧಿಸುವ ಗುರಿ ಹಾಗೂ ಸ್ಪಷ್ಟ ಹಾದಿಯೊಂದಿಗೆ ಸಾಗುವ ಮಹಿಳೆಯರು ಅದ್ಭುತಗಳನ್ನ ಸಾಧಿಸಿರೋದಕ್ಕೆ ಹಲವು ಉದಾಹರಣೆಗಳು ಸಿಗುತ್ತಲೇ ಇರುತ್ತವೆ. ಇನ್ನು ಅದೆಷ್ಟೋ ಮಂದಿಗೆ ತಮ್ಮದೇ ಸ್ವಂತದೊಂದು ಕಂಪನಿಯನ್ನ ಶುರುಮಾಡಿ ಸ್ವಾವಲಂಬಿ ಬದುಕು ಕಾಣೋ ತುಡಿತ ಇದ್ದೇ ಇರುತ್ತದೆ. ಇಂತಹ ಆಲೋಚನೆಗಳೇನಾದ್ರೂ ನಿಮ್ಮಲ್ಲಿದ್ರೆ ನಾವೀಗ ಪರಿಚಯ ಮಾಡಿಕೊಡುತ್ತಿರುವ ಈ ಮೂವರನ್ನ ನೋಡಿದ್ರೆ ನೀವೂ ಸ್ಫೂರ್ತಿ ಪಡೆಯುವುದು ಖಚಿತ. ತಮ್ಮ ಕನಸಿನ ಹಾದಿಯನ್ನ ಹುಡುಕುತ್ತಾ ಸಾಗಿದ ತ್ರಿಶಾ ರಾಯ್, ರಿತುಪರ್ಣ ಪಂಡಾ ಹಾಗೂ ಯೋಶಾ ಗುಪ್ತಾ ಕೊನೆಗೆ ಯುಎಸ್ ಎನಲ್ಲಿ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ಮಾರ್ಕೆಟ್ ನಲ್ಲಿ ಭರ್ಜರಿಯಾಗಿ ಮುನ್ನಡೆಯುತ್ತಿರುವ ಈ ತ್ರಿಮೂರ್ತಿಗಳು ಇದೀಗ ಅಲ್ಲಿನ 500ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳ ಕೇಂದ್ರ ಬಿಂದು ಅನ್ನುವುದು ವಿಶೇಷ.

image


ದಿ ಬಾರ್ನ್ & ವಿಲ್ಲೋ ಸ್ಟೋರಿ..

ಇದು ಎರಡು ವರ್ಷಗಳ ಹಿಂದಿನ ಕಥೆ.. ಯುಎಸ್ ನಲ್ಲಿ ನೆಲೆಸಿದ್ದ ತ್ರಿಶಾ ಅಲ್ಲಿ ತಮ್ಮ ಮನೆಯನ್ನ ನವೀಕರಿಸಲು ಮುಂದಾಗಿದ್ರು. ಆದ್ರೆ ಅಲ್ಲಿ ಕುಸುರಿ ಕೆಲಸಗಳನ್ನೊಳಗೊಂಡ ಲಾಂಗ್ ವಿಂಡೋ ಕರ್ಟನ್ ಗಳು ಇನ್ನಿಲ್ಲದ ರೀತಿಯಲ್ಲಿ ದುಬಾರಿಯಾಗಿದ್ವು. ಕೆಲವೊಂದರ ದರ $10,000 ಗಡಿಯನ್ನೂ ದಾಡಿತ್ತು ಅನ್ನೋದು ಅಚ್ಚರಿ. ಇದರಿಂದ ಕೊಂಚ ವಿಚಲಿತರಾದ ತ್ರಿಶಾ ಇದ್ರ ಹಿಂದಿರುವ ಕಾರಣಗಳನ್ನ ಪತ್ತೆ ಹಚ್ಚುವ ಪ್ರಯತ್ನಕ್ಕೆ ಮುಂದಾದ್ರು. ಇದಕ್ಕೆ ಅವರು ದೆಹಲಿ ಹಾಗೂ ಕೊಲ್ಕತ್ತಾದಲ್ಲಿ ಜವಳಿ ಉದ್ಯಮವನ್ನೇ ನಡೆಸುತ್ತಿದ್ದ ತಮ್ಮ ಕುಟುಂಬದವರಿಗೆ ಹಲವು ಬಾರಿ ಫೋನ್ ಕಾಲ್ ಗಳನ್ನೂ ಮಾಡಿದ್ರು. ಯುಎಸ್ ನಲ್ಲಿ ಕಾಟನ್ ಮೇಡ್ ಕರ್ಟನ್ ಗಳು ದುಬಾರಿ ಏಕೆ ಅನ್ನೋದನ್ನ ಪತ್ತೆ ಹಚ್ಚಲು ಶುರುಮಾಡಿದ್ರು. ಆಗ ಕಂಡ ಸತ್ಯ ಸಪ್ಲೈ ಚೈನ್ ಗಿರುವ ಬೇಡಿಕೆ ಹಾಗೂ ಅವರು ವಿಧಿಸುವ ದುಬಾರಿ ದರಗಳು. ಇದನ್ನ ಗಮನದಲ್ಲಿಟ್ಟುಕೊಂಡ ತ್ರಿಶಾ ಇದನ್ನೇ ಬಂಡವಾಳವನ್ನಾಗಿಸಿಕೊಂಡು ಉದ್ದಿಮೆ ಶುರು ಮಾಡಲು ಮನಸ್ಸು ಮಾಡಿದ್ರು. ಕೊನೆಗೆ ತಮ್ಮ ಆತ್ಮೀಯರ ಬೆಂಬಲದೊಂದಿಗೆ ಬಾರ್ನ್ & ವಿಲ್ಲೋವನ್ನ ಶುರು ಮಾಡಿಯೇ ಬಿಟ್ರು. “ ಯುಎಸ್ ಎನಲ್ಲಿ ವಿವಿಧ ರೀತಿಯ ಪೂರೈಕಾ ಟ್ರೇಡರ್ಸ್ ಗಳಿದ್ದಾರೆ. ನೇರವಾಗಿ ಫ್ಯಾಕ್ಟರಿಗಳಿಂದಲೇ ಐಟಂಗಳನ್ನ ತರುವ ಅವರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ದರವನ್ನ ನಿಗದಿಪಡಿಸುತ್ತಾರೆ. ಇದ್ರಿಂದ ಸಹಜವಾಗೇ ದರ ವ್ಯತ್ಯಾಸವಾಗಿತ್ತದೆ ” ಅಂತ ಬಾರ್ನ್ & ವಿಲ್ಲೋದ ಸಂಸ್ಥಾಪಕಿ ತ್ರಿಶಾ ಅಭಿಪ್ರಾಯ ಪಡುತ್ತಾರೆ.

ಇದನ್ನು ಓದಿ: ಆನ್‍ಲೈನ್‍ನಲ್ಲೂ ಸಿಗುತ್ತೆ ಪೂಜೆಗೆ ಬೇಕಾಗುವ ವಸ್ತುಗಳು

ಪೂರೈಕೆಯಲ್ಲಿ ಇರುವ ಮೂರು ಅಥವಾ ನಾಲ್ಕು ಹಂತಗಳಲ್ಲಿ ಕೆಲವನ್ನಾದ್ರೂ ಕಡಿತಗೊಳಿಸಿದ್ರೆ ಯುಎಸ್ ಎನಲ್ಲಿ ಬ್ರೋಕರ್ ಗಳ ಪ್ರಭಾವ ತಗ್ಗಲಿದೆ ಅಂತ ತ್ರಿಶಾ ಅಂದಾಜಿಸಿದ್ರು. ಈ ಮೂಲಕ ದರ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗುವುದನ್ನ ಅವರು ಮನಗಂಡರು. ಜೊತೆಗೆ ತಾವೂ ಒಂದುಷ್ಟು ಲಾಭ ಗಳಿಸಬಹುದು ಅನ್ನೋದನ್ನೂ ತ್ರಿಶಾ ಲೆಕ್ಕಾಚಾರ ಹಾಕಿದ್ರು. ಇದರೊಂದಿಗೆ ಡೋರ್ ಕರ್ಟನ್, ಪಿಲ್ಲೋಗಳು ಹಾಗೂ ಅತ್ಯುತ್ತಮ ವಿನ್ಯಾಸಗಳುಳ್ಳ ಮ್ಯಾಟ್ ಗಳನ್ನೂ ಮಾರಾಟ ಮಾಡಲು ಶುರು ಮಾಡಿದ್ರು. ತಮಿಳುನಾಡಿನ ಫ್ಯಾಕ್ಟರಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ತ್ರಿಶಾ ಕಚ್ಚಾ ವಸ್ತುಗಳನ್ನ ಬೆಲ್ಜಿಯಂ ನಿಂದ ತಂದು ದೆಹಲಿಯಲ್ಲಿ ಅದನ್ನ ತಯಾರಿಸುವ ಕೆಲಸಕ್ಕೆ ಮುಂದಾದ್ರು. ಇದರೊಂದಿಗೆ ಅವರು ಸುಮಾರು ಶೇಕಡಾ 60ರಷ್ಟು ಲಾಭ ಪಡೆಯಲು ಸಾಧ್ಯವಾಯ್ತು. ಡಿಸೆಂಬರ್ 2014ರಲ್ಲಿ ಮೊದಲ ಆರ್ಡರ್ ಪಡೆದ ಇವರ ಬಾರ್ನ್ & ವಿಲ್ಲೋ ಕಂಪನಿ ಇದೀಗ ಶೇಕಡಾ 45ರಷ್ಟು ಲಾಭಗಳಿಸಿದೆ.

ಮೊಬೈಲ್ ಟೆಕ್ನಾಲಜಿಗೆ ರಿತುಪರ್ಣ ಕೊಡುಗೆ

ಯುಎಸ್ ಎನಲ್ಲಿ ಹೊಸ ಉದ್ದಿಮೆ ಶುರುಮಾಡಿ ಅದನ್ನ ಯಶಸ್ಸಿನೆಡೆಗೆ ಕರೆದೊಯ್ದ ಮತ್ತೊಬ್ಬ ಸಾಹಸಿ ಉದ್ಯಮಿ ರಿತುಪರ್ಣ. ಇವರ ಫುಲ್ ಫಿಲ್. ಐಓ ಟೆಕ್ನಾಲಜಿ ಸಣ್ಣ ಮೊಬೈಲ್ ಗಳಿಗೆ ವರದಾನವಾಗಿದೆ. 2012ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ರಿತುಪರ್ಣ ಬಯೋಟೆಕ್ ನಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಶುರುಮಾಡಿದ್ರು. ಆದ್ರೆ 2014ರಲ್ಲಿ ಹೊಸ ಅಧ್ಯಾಯ ಶುರುಮಾಡಿದ ರಿತುಪರ್ಣ ಸಣ್ಣ ಮತ್ತು ಮಧ್ಯಮ ಪ್ರಮಾಣದ ರಿಟೇಲ್ ಗಳಿಗೆ ಇರುವ ಬೇಡಿಕೆಯನ್ನ ಗುರುತಿಸಿದ್ರು. ಅಲ್ಲದೆ ಟ್ಯಾಪ್ ಹಾಗೂ ಮೊಬೈಲ್ ಗಳಿಗೆ ಬೇಕಾಗುವ ಫುಲ್ ಫಿಲ್. ಐಓ ಎಎಂಬಿ ತಂತ್ರಜ್ಞಾನವನ್ನ ಅಭಿವೃದ್ಧಿ ಪಡಿಸಿದ್ರು. ವಾಸ್ತವದಲ್ಲಿ ರಿತುಪರ್ಣ ಈ ಟೆಕ್ನಾಲಜಿ ಕಂಪನಿಯಲ್ಲಿ ಸಹಮಾಲಿಕರಷ್ಟೇ ಆಗಿದ್ರು. ಆದ್ರೆ ಯುಎಸ್ ಎನಲ್ಲಿ ಇದನ್ನ ದೊಡ್ಡ ಮಟ್ಟದಲ್ಲಿ ಆರಂಭಿಸಲು ಮುಂದಾದ್ರು. ಇದಕ್ಕಾಗಿ ಅಲ್ಲಿನ ಮಾರುಕಟ್ಟೆಯನ್ನ ಅಭ್ಯಸಿದ್ರು. ನಂತ್ರ ಮಾರುಕಟ್ಟೆ ಪ್ರವೇಶಿಸಿದ ರಿತುಪರ್ಣ ಭರ್ಜರಿ ಸಕ್ಸಸ್ ಕಂಡಿದ್ದಾರೆ.

ಲಫಾಲಫಾದ ಸಕ್ಸಸ್ ಸ್ಟೋರಿ..

ಇ ಕಾಮರ್ಸ್ ಮಾರ್ಕೆಟ್ ನಲ್ಲಿ ವಿಭಿನ್ನವಾಗಿ ಬೆಳೆದು ಗುರುತಿಸಿಕೊಂಡಿರೋದು ಲಫಾಲಫಾ.ಕಾಮ್..ಹಾಂಗ್ ಕಾಂಗ್ ನಲ್ಲಿ 2014ರಲ್ಲಿ ಶುರುವಾದ ಇ ಕಂಪನಿ ಕೂಪನ್ ದುನಿಯಾದಲ್ಲೇ ಅತ್ಯಂತ ಹೆಚ್ಚು ಯಶಸ್ಸು ಕಂಡ ಕಂಪನಿ. ಕೂಪನ್ ಗಳನ್ನ ಗ್ರಾಹಕರಿಗೆ ವಿತರಿಸುವ ಲಫಾಲಫಾ ಆನ್ ಲೈನ್ ನಲ್ಲಿ ಪ್ರಭುತ್ವ ಸಾಧಿಸಿದೆ. ಆನ್ ಲೈನ್ ಗ್ರಾಹಕರೊಂದಿಗೆ ಸಂಭಾಷಿಸುತ್ತಾ ಅವರನ್ನ ಸಂಭಾಳಿಸುವ ಇ ಕಾಮರ್ಸ್ ಕಂಪನಿ ಇದೀಗ ಭಾರತದ ಮಾರುಕಟ್ಟೆಯತ್ತ ಚಿತ್ತ ನೆಟ್ಟಿದೆ. ಈ ಮೂಲಕ ಇ ಕಾಮರ್ಸ್ ನಲ್ಲಿ ಮುಂದಿನ ವರ್ಷ ಭಾರತದಲ್ಲೇ 100 ಬಿಲಿಯನ್ ಯುಎಸ್ ಡಾಲರ್ ಲಾಭ ಗಳಿಸುವ ಲೆಕ್ಕಾಚಾರದಲ್ಲಿದೆ. ಈಗಾಗಲೇ ಮೈ ಸ್ಮಾರ್ಟ್ ಪ್ರೈಸ್, ಕೂಪನ್ ದುನಿಯಾ, ಕ್ಯಾಶ್ ಕರೋ, ಪೆನ್ನಿಫುಲ್ ನಂತಹ ಇ ಕಾಮರ್ಸ್ ದೈತ್ಯರೊಂದಿಗೆ ಸೆಣೆಸಿಯೂ ಲಾಭದತ್ತ ಮುನ್ನಡೆಯುತ್ತಿರುವುದು ಲಫಲಫ ಕಂಪನಿಯ ಮಾಲಕಿ ಯೊಶೋಳ ಯಶೋಗಾಥೆ.

ಹೀಗೆ ಯಶಸ್ಸಿನ ಹಾದಿ ತುಳಿದಿರುವ ಈ ಮೂವರು ಮಹಿಳಾ ಉದ್ಯಮಿಗಳು ಸರಳ ಸೂತ್ರಗಳನ್ನ ಅನುಸರಿಸಿರುವುದೇ ಇವರ ಸಕ್ಸಸ್ ಗೆ ಮುಖ್ಯ ಕಾರಣವಾಗಿದೆ. ಹೂಡಿಕೆಯಲ್ಲಿನ ಲೆಕ್ಕಾಚಾರ, ಬೆಳವಣಿಗೆ ಬಗ್ಗೆ ತಜ್ಞರೊಂದಿಗೆ ಚರ್ಚೆ, ಮೆಂಟರ್ ಗಳ ಸುಧಾರಣೆ, ಇತರೆ ಸ್ಟಾರ್ಟ್ ಅಪ್ ಗಳ ಬಗ್ಗೆ ಅಧ್ಯಯನ, ಉದ್ಯಮಕ್ಕೆ ಬೇಕಾದ ಟೆಕ್ನಾಲಜಿಗಳ ಪರಾಮರ್ಶೆ, ಹೀಗೆ ವಿವಿಧ ಅಂಶಗಳನ್ನ ಇವರು ಸದಾ ಗಮನದಲ್ಲಿಟ್ಟುಕೊಂಡಿರುತ್ತಾರೆ. ಒಂದೊಮ್ಮೆ ಹೊಸ ಉದ್ಯಮದ ಕನಸಿನಲ್ಲಿರುವ ಮಹಿಳಾ ಉದ್ಯಮಿಗಳೂ ಇವುಗಳನ್ನ ಗಮನದಲ್ಲಿಟ್ಟುಕೊಂಡ್ರೆ ತಮ್ಮ ಉದ್ದೇಶದಲ್ಲಿ ಯಶಸ್ಸು ಸಾಧಿಸುವುದರಲ್ಲಿ ಅನುಮಾನವಿಲ್ಲ.

ಲೇಖಕರು - ವಿಶಾಲ್ ಕೃಷ್ಣ

ಅನುವಾದ – ಸ್ವಾತಿ, ಉಜಿರೆ

ಇದನ್ನು ಓದಿ: 

1. ನಾಲ್ಕು ವರ್ಷಗಳಲ್ಲಿ ಬಹಳಷ್ಟು ಬಾರಿ ಅವಮಾನಿತನಾದೆ, ಏಟು ತಿಂದೆ..ಬಳಿಕ ಸಿಕ್ತು ಯಶಸ್ಸು..! 

2. ಅಂದು ಬಾಲಕಾರ್ಮಿಕ ಪದ್ಧತಿ, ಹಿಂಸಾಚಾರಕ್ಕೆ ಬಲಿಯಾದ ಮಹಿಳೆ - ಇಂದು ಸಾಮಾಜಿಕ ಕ್ರಾಂತಿಯ ನಾಯಕಿ

3. ಮಾರುಕಟ್ಟೆಗೆ ಬಂದಿದೆ ವುಡನ್ ವಾಚ್ ಗಳು...

Add to
Shares
7
Comments
Share This
Add to
Shares
7
Comments
Share
Report an issue
Authors

Related Tags