Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ವಾರ್ಧಾದದಿಂದ ಕಂಗೆಟ್ಟವರಿಗೆ ಹಳೆ ವಿದ್ಯಾರ್ಥಿಗಳ ನೆರವು- ಚೆನ್ನೈ ನಗರವನ್ನು ಉಳಿಸಿಕೊಳ್ಳಲು ಹೋರಾಟ

ಟೀಮ್​ ವೈ.ಎಸ್​. ಕನ್ನಡ

ವಾರ್ಧಾದದಿಂದ ಕಂಗೆಟ್ಟವರಿಗೆ ಹಳೆ ವಿದ್ಯಾರ್ಥಿಗಳ ನೆರವು- ಚೆನ್ನೈ ನಗರವನ್ನು ಉಳಿಸಿಕೊಳ್ಳಲು ಹೋರಾಟ

Friday December 23, 2016 , 2 min Read

ವಾರ್ಧ ಚಂಡ ಮಾರುತ ತಮಿಳುನಾಡಿನಲ್ಲಿ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಚೆನ್ನೈ ನಗರವೇ ವಾರ್ಧ ಚಂಡಮಾರುತಕ್ಕೆ ತತ್ತರಿಸಿ ಹೋಗಿದೆ. 2 ವರ್ಷದ ಹಿಂದೆ "ಹುಡ್ ಹುಡ್" ಚಂಡಮಾರುತ ಆಂಧ್ರಪ್ರದೇಶದ ಕರಾವಳಿ ಭಾಗವನ್ನು ಛಿದ್ರ ಛಿದ್ರ ಮಾಡಿತ್ತು. " ಹುಡ್ ಹುಡ್" ಆರ್ಭಟಕ್ಕೆ ವಿಶಾಖಪಟ್ಟಣಂ ಕಂಗಾಲಾಗಿತ್ತು. ಈಗ ಚೆನ್ನೈ ನಗರಕ್ಕೆ ವಾರ್ಧ ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ. 140 ಕಿಲೋಮೀಟರ್​ಗಿಂತಲೂ ವೇಗವಾಗಿ ಬೀಸಿದ ಗಾಳಿಗೆ ಚೆನ್ನೈ ನಗರದಲ್ಲಿದ್ದ ಮರಗಳೆಲ್ಲವೂ ಧರೆಗುರುಳಿವೆ. 17000ಕ್ಕೂ ಅಧಿಕ ಮರಗಳು ಚಂಡಮಾರುತದ ಪ್ರಭಾವಕ್ಕೆ ಧರೆಗುರುಳಿತ್ತು. ಚೆನ್ನೈ ನಗರ ಪ್ರಮುಖವಾಗಿ ಕಾಲೇಜ್ ಕ್ಯಾಂಪಸ್​ಗಳಲ್ಲಿದ್ದ ಮರಗಳೆಲ್ಲವೂ ಈಗ ನೆಲಸಮವಾಗಿವೆ.

image


ಚಂಡಮಾರುತದಿಂದ ಕಂಗೆಟ್ಟವರಿಗೆ ಸಹಾಯ ಮಾಡಲು ಮದ್ರಾಸ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆ ವಿದ್ಯಾರ್ಥಿಗಳು ಜೊತೆಯಾಗಿದ್ದಾರೆ. ಕಾಲೇಜ್ ಕ್ಯಾಂಪಸ್​ನಲ್ಲಿ ಮತ್ತೆ ಮರಗಳನ್ನು ನೆಡಲು ಶುರುಮಾಡಿದ್ದಾರೆ. ಹಳೆ ವಿದ್ಯಾರ್ಥಿಗಳೆಲ್ಲಾ ಜೊತೆ ಸೇರಿಕೊಂಡು “ ಅಥೇನಿಯಂ” ಅನ್ನುವ ವಿದ್ಯಾರ್ಥಿ ಸಂಘಟನೆಯನ್ನು ಆರಂಭಿಸಿದ್ದಾರೆ. ಚಂಡಮಾರುತ ಪೀಡಿತರಿಗೆ ಸಹಾಯ ಮಾಡಲು ಕೆಟ್ಟೋ ಅನ್ನೋ ವೆಬ್​ಸೈಟ್​ನ್ನು ರಚಿಸಿ, ಆ ಮೂಲಕ ಕ್ರೌಡ್ ಫಂಡಿಂಗ್ ಅನ್ನು ಆರಂಭಿಸಿದ್ದಾರೆ.

“ ವಾರ್ಧ ಚೆನ್ನೈ ನಗರಕ್ಕೆ ಸಾಕಷ್ಟು ಹಾನಿ ಮಾಡಿದೆ. ಎಂಐಟಿಯಲ್ಲಿದ್ದ ಮತ್ತು ನಗರದಲ್ಲಿದ್ದ ಹಲವು ಮರಗಳು ನೆಲಸಮವಾಗಿದೆ. ಸಾಕಷ್ಟು ಹಾನಿ ಆಗಿದೆ. ಈಗಾಗಲೇ ನಾವು ಹಳೇ ವಿದ್ಯಾರ್ಥಿಗಳ ಸಂಘ ಜನಜೀವನವನ್ನು ಸರಿದಾರಿಗೆ ತರಲು ಹಗಲೂ ರಾತ್ರಿ ಕೆಲಸ ಮಾಡುತ್ತಿದೆ. ಹಳೆಯ ಚೆನ್ನೈ ನಗರವನ್ನು ಮತ್ತೆ ಕಾಣಲು ಹಲವು ವರ್ಷವೇ ಬೇಕಾದಿತು. ಆದ್ರೆ ನಾವು ಬೇಗನೆ ಕೆಲಸ ಆರಂಭಿಸಿದ್ರೆ, ಬೇಗನೆ ಹಳೆಯ ಚೆನ್ನೈ ನಗರವನ್ನು ಕಾಣಬಹುದು ”
- ಹಳೆ ವಿದ್ಯಾರ್ಥಿಗಳ ಸಂಘ, ಮದ್ರಾಸ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ

ಎಂಐಟಿಯ ಹಳೆ ವಿದ್ಯಾರ್ಥಿಗಳ ಸಂಘ ಈಗಾಗಲೇ ಸ್ವಯಂ ಸೇವಕರಾಗಿ ಕೆಲಸ ಆರಂಭಿಸಿದೆ. ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ. ಯೂನಿವರ್ಸಿಟಿಯ ಡೀನ್ ಕೂಡ ಹಳೆ ವಿದ್ಯಾರ್ಥಿಗಳ ಕೆಲಸದಿಂದ ಸಂತಸಗೊಂಡಿದ್ದಾರೆ.

ಇದನ್ನು ಓದಿ: ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​

"ಕೆಟ್ಟೋ" ದಿಂದ ಬರುವ ಕ್ರೌಡ್ ಫಂಡಿಂಗ್ ಮೂಲಕ ಹಲವು ಕೆಲಸಗಳನ್ನು ಮಾಡಲಾಗುತ್ತದೆ. ತ್ಯಾಜ್ಯಗಳನ್ನು ಕ್ಲೀನ್ ಮಾಡುವುದು, ಮರಗಳನ್ನು ನೆಡುವುದು ಮತ್ತು ಇತರೆ ಕೆಲಸಗಳನ್ನು ಕ್ರೌಡ್ ಫಂಡಿಂಗ್ ಮೂಲಕ ಬರುವ ಹಣದಿಂದಲೇ ಮಾಡಲಾಗುತ್ತದೆ. ಚಂಡಮಾರುತದಿಂದ ಆಗಿರುವ ನಷ್ಟ ಮತ್ತು ಕಷ್ಟಕ್ಕೆ ಆದಷ್ಟು ಬೇಗನೆ ಪರಿಹಾರ ಒದಗಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. 2017ರ ಜನವರಿ 15ರ ತನಕ ಕ್ಯಾಂಪೈನ್ ಮಾಡಲಾಗುತ್ತದೆ. ಕ್ರೌಂಡ್ ಫಂಡಿಂಗ್​ನಿಂದ 5ಲಕ್ಷಕ್ಕೂ ಹೆಚ್ಚು ಸಹಾಯಧನ ಬರುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ವಾರ್ಧಕ್ಕೆ ಕಂಗೆಟ್ಟ ಚೆನ್ನೈಗೊಂದು ಹೊಸ ದಿಕ್ಕನ್ನು ತೋರಿಸಲು ವಿದ್ಯಾರ್ಥಿ ಸಂಘಟನೆಗಳು ಮುಂದಾಗಿವೆ.

ಇದನ್ನು ಓದಿ:

1. ನಿಮಗಿಷ್ಟವಿರುವ ಕೆಲಸ ಮಾಡಿ- ಕೈ ತುಂಬಾ ಸಂಬಳ ಪಡೆಯಿರಿ

2. ಕಾಡು ರಕ್ಷಿಸಲು ಮರಗಳ ಮೇಲೆ ಕಲಾಕೃತಿ : ನಾರಿಯರ ಕೈಚಳಕದಲ್ಲಿ ಸ್ವರ್ಗವಾಗಿದೆ ಮಧುಬನಿ

3. ಬೀದಿನಾಯಿಗಳ ಪಾಲಿನ “ದೇವರು”- 700ಕ್ಕೂ ಹೆಚ್ಚು ಬೀದಿನಾಯಿಗಳ ಪಾಲಿಗೆ ಆಶ್ರಯದಾತ ಸಾಫ್ಟ್ಎಂಜಿನಿಯರ್..!