Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ನಿರಾಶ್ರಿತರ ಪಾಲಿಗೆ ಸಂಜೀವಿನಿ- 5 ಲಕ್ಷಕ್ಕೂ ಅಧಿಕ ಜನರ ಹಸಿವು ತಣಿಸಿದ "ಯಂಗೀಸ್ತಾನ್"

ಟೀಮ್​ ವೈ.ಎಸ್​. ಕನ್ನಡ

ನಿರಾಶ್ರಿತರ ಪಾಲಿಗೆ ಸಂಜೀವಿನಿ-  5 ಲಕ್ಷಕ್ಕೂ ಅಧಿಕ ಜನರ ಹಸಿವು ತಣಿಸಿದ "ಯಂಗೀಸ್ತಾನ್"

Friday April 14, 2017 , 4 min Read

ಸಮಾಜವನ್ನು ಸಂಪೂರ್ಣವಾಗಿ ಬದಲಿಸಲು ಕಷ್ಟವಾಗಬಹುದು. ಆದ್ರೆ ತಮ್ಮ ದೂರದೃಷ್ಟಿಯಿಂದ, ಪರಿಶ್ರಮದಿಂದ ಮತ್ತು ಸ್ವಚ್ಛ ಮನಸ್ಸಿನಿಂದ ಸಮಾಜದ ಬದಲಾವಣೆಗೆ ತನ್ನ ಕೈಯಿಂದ ಆಗುವ ಸಹಾಯ ಮಾಡಬಹುದು. ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ "ಯಂಗೀಸ್ತಾನ್ ಫೌಂಡೇಷನ್" ಸಂಸ್ಥಾಪಕ ಅರುಣ್​ ಎಲ್ಲಮಟಿ. ಅರುಣ್ ನಿರಾಶ್ರಿತರಿಗೆ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ತನ್ನ ಸಂಸ್ಥೆಯಿಂದ ಕೈಲಾದ ಸಹಾಯ ಮಾಡುತ್ತಿದ್ದಾರೆ. "ಯಂಗೀಸ್ತಾನ್​ ಫೌಂಡೇಷನ್" ಮೂಲಕ ಸಮಾಜದಲ್ಲಿ ಬದಲಾವಣೆ ಮಾಡಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ.

ಬಡವರ ಹಸಿವು ನೀಗಿಸುವಲ್ಲಿಂದ ಮಹಿಳಾ ಸಬಲೀಕರಣದ ತನಕ

ಚಿಕ್ಕವಯಸ್ಸಿನಲ್ಲೇ ಅರುಣ್ ಅಗತ್ಯ ಇರುವವರಿಗೆ ತನ್ನ ಕೈಲಾದ ಸಹಾಯ ಮಾಡುತ್ತಿದ್ದರು. 18ನೇ ವರ್ಷದಲ್ಲೇ ಪಿಜ್ಹಾ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ತನ್ನ ಕಾಲೇಜ್ ಫೀಸ್ ಸೇರಿದಂತೆ ಎಲ್ಲಾ ಖರ್ಚುಗಳನ್ನು ಅರುಣ್ ತಾನೇ ನೋಡಿಕೊಳ್ಳುತ್ತಿದ್ದರು.

image


“ ನಾನು ಅಮ್ಮನ ಕೃಪೆಯಿಂದಲೇ ಬೆಳೆದೆ. ನನ್ನ ಖರ್ಚುಗಳನ್ನು ನೋಡಿಕೊಳ್ಳಲು ಅಮ್ಮ ಹರಸಾಹಸ ಪಡುತ್ತಿದ್ದಳು. ಮೂಲಭೂತ ವಸ್ತುಗಳನ್ನು ಪಡೆಯಲು ಕೂಡ ಕಷ್ಟವಾಗುತ್ತಿತ್ತು. ಈ ಕಾರಣ ನನ್ನನ್ನು ಇವತ್ತು ಸಮಾಜ ಸೇವೆಯಂತಹ ದೇವರ ಕೆಲಸಕ್ಕೆ ದೂಡಿದೆ.”
- ಅರುಣ್ ಎಲ್ಲಮಟಿ, ಯಂಗೀಸ್ತಾನ್ ಪೌಂಡೇಷನ್ ಸಂಸ್ಥಾಪಕ

ಅರುಣ್ ಬ್ಯಾಂಡ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿಯೊಂದು ಪ್ರದರ್ಶನದಲ್ಲೂ ಅರುಣ್ ಎಲ್ಲರಿಗೂ ಸ್ಪೂರ್ತಿ ನೀಡುತ್ತಿದ್ದ, ಇನ್ನೊಬ್ಬರಿಗೆ ಸಹಾಯ ಮಾಡಲು ಸ್ಫೂರ್ತಿ ಕೊಡುವ ಒಂದೆರಡು ವಿಡೀಯೋ ಅಥವಾ ಹಾಡುಗಳನ್ನು ತೋರಿಸುತ್ತಿದ್ದರು. ಹೀಗೆ ಒಂದು ಪ್ರದರ್ಶನವೊಂದರ ಬಳಿಕ ಯುವಕನೊಬ್ಬ ಅರುಣ್ ಬಳಿ ಬಂದು ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡಬೇಕು. ಆದ್ರೆ ಅದಕ್ಕೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಹೇಳಿಕೊಂಡ. ಅರುಣ್​ಗೆ ತನ್ನ ಕೆಲಸದಿಂದ ಇನ್ನೊಬ್ಬರಿಗೆ ಸ್ಪೂರ್ತಿ ಸಿಗುತ್ತಿದೆ ಅನ್ನೋದು ಖಾತ್ರಿ ಆಯಿತು.

ಅರುಣ್ ಆರಂಭದಲ್ಲಿ ಆ ಯುವಕನ ಮಾತುಗಳಿಂದ ಹೆಮ್ಮೆ ಪಟ್ಟುಕೊಂಡಿದ್ದರು. ಆದ್ರೆ ಇನ್ನೊಮ್ಮೆ ಆ ವ್ಯಕ್ತಿಯನ್ನು ಬೇಟಿ ಮಾಡಲು ಆಗಲೇ ಇಲ್ಲ. ಆದ್ರೆ ಅಷ್ಟರಲ್ಲೇ ಅರುಣ್ ಮನಸ್ಸು ಬದಲಾಗಿತ್ತು. ಬಡವರಿಗೆ, ನಿರಾಶ್ರಿತರಿಗೆ ಸಹಾಯ ಮಾಡಲೇಬೇಕು ಅನ್ನುವ ಹಠ ಮತ್ತು ಆಸೆ ಹುಟ್ಟಿಕೊಂಡಿತ್ತು. ಹೀಗಾಗಿ 2010ರಲ್ಲಿ ಅರುಣ್ ತನ್ನ ಗೆಳೆಯರ ಜೊತೆ ಸೇರಿಕೊಂಡು "ಯಂಗೀಸ್ತಾನ್ ಪೌಂಡೇಷನ್" ಅನ್ನು ಆರಂಭಿಸಿದ್ರು. 2014ರಲ್ಲಿ "ಯಂಗೀಸ್ತಾನ್ ಫೌಂಡೇಷನ್" ಅಧಿಕೃತವಾಗಿ ಆರಂಭಗೊಂಡಿತ್ತ. ಈ ಮೂಲಕ ಬಡವರ ಮತ್ತು ನಿರಾಶ್ರಿತರ ಸಹಾಯಕ್ಕೆ ನಿಂತರು.

ಇದನ್ನು ಓದಿ: 10*10 ಚಿಕ್ಕಕೋಣೆಯಿಂದ 1,000 ಕೋಟಿಯ ಮಾಲೀಕನಾದ ತನಕ..!

2010ರಲ್ಲಿ ಆರಂಭವಾದ "ಯಂಗೀಸ್ತಾನ್" ಆರಂಭದಲ್ಲಿ ಐವರು ಸ್ವಯಂ ಸೇವಕರನ್ನು ಹೊಂದಿತ್ತು. 10 ನಿರಾಶ್ರಿತರ ಪಾಲಿಗೆ ಸಂಜೀವಿನಿಯಾಗಿತ್ತು. ಆದ್ರೆ ಈಗ ಯಂಗೀಸ್ತಾನ್ ಒಟ್ಟು 700ಕ್ಕೂ ಅಧಿಕ ಸ್ವಯಂ ಸೇಕರನ್ನು ಹೊಂದಿದೆ. ದೇಶದ ಪ್ರಮುಖ ನಾಲ್ಕು ನಗರಗಳಲ್ಲೂ ಸ್ವಯಂ ಸೇವಕರನ್ನು ಹೊಂದಿದೆ. ಯಂಗೀಸ್ತಾನ್ ಪ್ರತೀ ಭಾನುವಾರ ಸುಮಾರು 1000ಕ್ಕೂ ಹೆಚ್ಚಿನ ನಿರಾಶ್ರಿತರಿಗೆ ಅಡುಗೆ ಮಾಡಿ ಬಡಿಸಿ ಅವರ ಹೊಟ್ಟೆ ತುಂಬಿಸುತ್ತಿದೆ. ಹಸಿವಿನಿಂದ ಬಳಲುತ್ತಿರುವವರಿಗೆ, ನಿರಾಶ್ರಿತರಿಗೆ ಮೂಲಭೂತ ಅಗತ್ಯವಾದ ವಸ್ತುಗಳನ್ನು ಪೂರೈಸುತ್ತಿದ್ದಾರೆ. ಅಷ್ಟೇ ಅಲ್ಲ ಅವರಿಗೆ ಹೇರ್ ಕಟ್ಟಿಂಗ್, ಶೇವಿಂಗ್, ಹೈಜಿನ್ ಕಿಟ್ ಮತ್ತು ಪ್ರಥಮ ಚಿಕಿತ್ಸೆಗಳನ್ನು ಕೂಡ ನೀಡುತ್ತಿದ್ದಾರೆ.

"ಯಂಗೀಸ್ತಾನ್ ಫೌಂಡೇಷನ್" ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುತ್ತಿದೆ. ಅಷ್ಟೇ ಅಲ್ಲ ಮಹಿಳಾ ಸಬಲೀಕರಣಕ್ಕೂ ಕೆಲಸ ಮಾಡುತ್ತಿದೆ. ಈ ಸಂಸ್ಥೆ "ಬ್ರೈಟ್ ಸ್ಪಾರ್ಕ್ ಎಜುಕೇಷನ್ ಪ್ರೋಗ್ರಾಂ" ಮೂಲಕ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. 4 ಅನಾಥಶ್ರಮ, 2 ಸರಕಾರಿ ಶಾಲೆ ಹಾಗೂ ಹೈದ್ರಾಬಾದ್​ನ 2 ಸ್ಲಂಗಳ ಮಕ್ಕಳು ಸೇರಿದಂತೆ ಸುಮಾರು 500 ಆರ್ಥಿಕವಾಗಿ ಸಬಲವಾಗಿಲ್ಲದ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

"ಯಂಗೀಸ್ತಾನ್ ಫೌಂಡೇಷನ್" ಮಹಿಳಾ ಸಬಲೀಕರಣಕ್ಕೂ ಶ್ರಮಿಸುತ್ತಿದೆ. "ವುಮನ್ ಆಫ್ ಕರೇಜ್" ಯೋಜನೆ ಮೂಲಕ ಹೈದ್ರಾಬಾದ್​ನ ಸ್ಲಂ ಒಂದರ ಸುಮಾರು 50 ಮಹಿಳೆಯರ ಕೌಶಲ್ಯಭಿವೃದ್ಧಿಗೆ ಶ್ರಮವಹಿಸುತ್ತಿದೆ.

‘’ ಸವಾಲುಗಳು ನಮ್ಮನ್ನು ಬಲಿಷ್ಠರನ್ನಾಗಿಸುತ್ತದೆ. ಎಲ್ಲಾ ಸಂಸ್ಥೆಗಳಂತೆಯೇ ನಾವು ಕೂಡ ಸವಾಲುಗಳನ್ನು ಎದುರಿಸುತ್ತಿದ್ದೆವು. ಆರಂಭದಲ್ಲಿ ಯಾರೂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ನಂಬಿಕೆ ಅನ್ನುವುದು ದೂರವೇ ಇತ್ತು. ಹಲವರು ನಮಗೆ ಈ ಕೆಲಸ ಬಿಟ್ಟು ಭವಿಷ್ಯದ ಕಡೆಗೆ ಗಮನಕೊಡುವಂತೆ ಸಲಹೆ ಕೂಡ ನೀಡಿದ್ದರು. ನಮ್ಮ ಸಂಸ್ಥೆಯ ಜೊತೆ ಕೈ ಜೋಡಿಸಿಕೊಂಡ ಕೆಲವರು ಅರ್ಧದಲ್ಲೇ ದೂರವಾದ್ರು. ಈ ಎಲ್ಲಾ ಹಿನ್ನಡೆಗಳನ್ನು ನಮ್ಮನ್ನು ಮತ್ತಷ್ಟು ಹೆಚ್ಚು ಶ್ರಮ ಪಡುವಂತೆ ಪ್ರೇರೇಪಿಸಿತು. ಯಾವುದೇ ಯೋಜನೆ ಮಾಡುವ ಮೊದಲು ಹೆಚ್ಚು ಯೋಚನೆ ಮಾಡುವಂತೆ ಮಾಡಿತ್ತು. ’’
- ಅರುಣ್ ಎಲ್ಲಮಟಿ, ಯಂಗೀಸ್ತಾನ್ ಪೌಂಡೇಷನ್ ಸಂಸ್ಥಾಪಕ

"ಯಂಗೀಸ್ತಾನ್" ಸಂಸ್ಥೆ ಆರಂಭವಾಗಿ ಕೇವಲ 4 ವರ್ಷಗಳಷ್ಟೇ ಕಳೆದಿದೆ. ಆದ್ರೆ ಈಗಾಗಲೇ ಸುಮಾರುಸ 5 ಲಕ್ಷಕ್ಕೂ ಅಧಿಕ ಬಡವರ ಹೊಟ್ಟೆ ತುಂಬಿಸಿದೆ. ಅಷ್ಟೇ ಅಲ್ಲ ಸುಮಾರು 3000ಕ್ಕೂ ಅಧಿಕ ನಿರಾಶ್ರಿತರಿಗೆ ಮನೆ ಒದಗಿಸಿದೆ. ಅನಾಥಾಶ್ರಮದ ಮಕ್ಕಳಿಗೆ, ಸ್ಲಂಗಳಲ್ಲಿ ವಾಸಿಸುತ್ತಿರುವ ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಪ್ರಯೋಜಕರ ನೆರವಿನಿಂದ ಶಿಕ್ಷಣ ಸೇರಿದಂತೆ ಹಲವು ನೆರವು ನೀಡಿದೆ.

“ ನಾವು ಸುಮಾರು 500ಕ್ಕೂ ಹೆಚ್ಚು ಅನಾಥ, ಹೆಚ್ಐವಿ ಪೀಡಿತ ಮತ್ತು ನಿರಾಶ್ರಿತ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಅವರಿಗೆ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಿದ್ದೇವೆ. ಬಡ ಮಹಿಳೆಯರಿಗೆ ಕೌಶಲ್ಯಭಿವೃದ್ಧಿ ಟ್ರೈನಿಂಗ್ ಮೂಲಕ ಅವರ ಜೀವನವನ್ನು ಅವರೇ ನೋಡಿಕೊಳ್ಳುವಂತೆ ಯೋಜನೆ ಮಾಡಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಹೆಚ್ಚು ಮಹತ್ವ ನೀಡಿದ್ದೇವೆ ”
- ಯಂಗೀಸ್ತಾನ್ ಪೌಂಡೇಷನ್ ಸಂಸ್ಥಾಪಕ

"ವುಮನ್ ಆಫ್ ಕರೇಜ್" ಯೋಜನೆಯಡಿಯಲ್ಲಿ ಸುಮಾರು 200ಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ವಿವಿಧ ರೀತಿಯ ಟ್ರೈನಿಂಗ್​​ಗಳನ್ನು ನೀಡಲಾಗಿದೆ. ಸಂಸ್ಥೆಯಲ್ಲಿ ಟ್ರೈನಿಂಗ್ ಪಡೆದ ಮಹಿಳೆಯರು ರೈಲ್ವೇ ನಿಲ್ದಾಣ, ಬೀದಿ ಬದಿಯ ಮಕ್ಕಳನ್ನು ರಕ್ಷಿಸಿದ್ದಾರೆ. ಅಷ್ಟೇ ಅಲ್ಲ ಸಂಸ್ಥೆ ಪ್ರತೀವರ್ಷದ ಮಳೆಗಾಲದ ಸಮಯದಲ್ಲಿ ಅವಶ್ಯಕತೆ ಇರುವವರಿಗೆ ರೈನ್ ಕೋಟ್, ಚಳಿಗಾಲದಲ್ಲಿ ಹೊದಿಕೆಗಳನ್ನು ನೀಡಿದೆ. ಊಟ, ತಿಂಡಿಗಳನ್ನು ನೀಡಿ ನಿರಾಶ್ರಿತರ ಪಾಲಿಗೆ ಸಂಜೀವಿನಿಯಾಗಿದೆ. ಯಂಗೀಸ್ತಾನದ ಸಾಧನೆಗಾಗಿ ಏಷ್ಯಾ ಫೆಸಿಫಿಕ್ ಅವಾರ್ಡ್ ಮೂಲಕ ಗೌರವ ಸಿಕ್ಕಿದೆ.

ಭವಿಷ್ಯದ ಯೋಜನೆಗಳು

ಮುಂಬೈ, ಭೋಪಾಲ್, ನೊಯ್ಡಾ ಮತ್ತು ಹೈದ್ರಾಬಾದ್​ನಲ್ಲಿ "ಯಂಗೀಸ್ತಾನ್ ಫೌಂಡೇಷನ್" ಕಾರ್ಯಚರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಗರಗಳಲ್ಲಿ ಕೆಲಸ ಆರಂಭಿಸುವ ಯೋಜನೆಗಳನ್ನು ರೂಪಿಸಲಾಗಿದೆ. ಯಂಗೀಸ್ತಾನ ಸುಮಾರು 10 ಕೋಟಿ ಸದಸ್ಯರು ಮತ್ತು ಸುಮಾರು 300ಕ್ಕೂ ಅಧಿಕ ಸ್ವಯಂ ಸೇವಕರನ್ನು ಹೊಂದಿದೆ. ಭವಿಷ್ಯದ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುವ ಯೋಜನೆಗಳನ್ನು ರೂಪಿಸಿದೆ. ಸುಮಾರು 5 ಲಕ್ಷ ಹೆಣ್ಣುಮಕ್ಕಳನ್ನು ವಿವಿಧ ಕಷ್ಟಗಳಿಂದ ರಕ್ಷಿಸುವ ಪ್ಲಾನ್ ಕೂಡ ಮಾಡಿಕೊಂಡಿದೆ. ಒಟ್ಟಿನಲ್ಲಿ "ಯಂಗೀಸ್ತಾನ್ ಫೌಂಡೇಷನ್" ತನ್ನ ಸಮಾಜಮುಖಿ ಕೆಲಸಗಳಿಂದ ಎಲ್ಲರಿಗೂ ಮಾದರಿ ಆಗಿದೆ.

ಇದನ್ನು ಓದಿ:

1. 13ನೇ ವರ್ಷಕ್ಕೆ ಶಾಲೆ ಬಿಟ್ರೂ ಹಠ ಬಿಡಲಿಲ್ಲ- ಎಲ್ಲಾ ಹೆಣ್ಣುಮಕ್ಕಳಿಗೂ ಮಾದರಿ ಆಶಾ ಕೆಮ್ಕಾ

2. ಫೋಟೋಗಳೇ ಮಾತಾಗಿ ಕಥೆ ಹೇಳುತ್ತವೆ..!

3. ಸೌರಶಕ್ತಿ ಬಳಕೆ ಬಗ್ಗೆ ಹೆಚ್ಚು ಜಾಗೃತಿ- ಪವರ್​ ಕಟ್​ ಪ್ರಾಬ್ಲಂಗೆ ಶೀಘ್ರದಲ್ಲೇ ಸಿಗಲಿದೆ ಮುಕ್ತಿ