Video ಕಾಲ್ ಬಗ್ಗೆ ನೋ ಟೆನ್ಶನ್​- 'ಡುಯೋ'ದಿಂದ ಸಿಕ್ತು ಸೊಲ್ಯುಷನ್​​

ಟೀಮ್​ ವೈ.ಎಸ್​. ಕನ್ನಡ

25th Aug 2016
  • +0
Share on
close
  • +0
Share on
close
Share on
close

ಕಾಲ ಬದಲಾಗಿದೆ. ಜಸ್ಟ್​ ಒಂದು ಫೋನ್​ ಕಾಲ್​ ಎಲ್ಲಾ ಸಮಸ್ಯೆಗಳಿಗೆ ಚಿಟಿಕಿ ಹೊಡೆಯುವಷ್ಟರಲ್ಲಿ ಉತ್ತರ ಕೊಡುತ್ತದೆ. ದಿನದಿಂದ ದಿನಕ್ಕೆ ಈ ಟೆಕ್ನಾಲಜಿ ಬಹಳಷ್ಟು ಬದಲಾವಣೆ ಕಾಣುತ್ತಿದೆ. ವಿ ಚಾಟ್​, ಸ್ಕೈಪ್​ಗಳು ವಿಡಿಯೋ ಚಾಟ್​ಗಳನ್ನು ಮತ್ತಷ್ಟು ಸುಲಭವನ್ನಾಗಿಸಿದೆ. ಆದ್ರೆ ಗೂಗಲ್​ ಎಲ್ಲಕ್ಕಿಂತ ಒಂದು ಹೆಜ್ಜೆಯನ್ನು ಮತ್ತಷ್ಟು ಮುಂದಿಟ್ಟಿದೆ. ವಿಡಿಯೋ ಕಾಲಿಂಗ್​ ಆಪ್ಶನ್​ ಅನ್ನು ಜನರಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಿದೆ.

ವಿಡಿಯೋ ಕಾಲ್ ಇನ್ಮುಂದೆ ಬಹಳ ಸುಲಭವಾಗಲಿದೆ. ಜಗತ್ತಿನಲ್ಲಿರುವ ಬೇರೆಲ್ಲಾ ಆ್ಯಪ್​ಗಳಿಗಿಂತ ಅತ್ಯಂತ ಸರಳವಾಗಿ ವಿಡಿಯೋ ಕಾಲ್ ಮಾಡುವಂತಹ ಹೊಸ ಆ್ಯಪ್​ನ್ನು ಗೂಗಲ್ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಸದ್ಯ ತನ್ನ ವಿನೂತನ ವಿಶೇಷತೆಗಳಿಂದ ಜನರನ್ನು ಆಕರ್ಷಿಸುವಲ್ಲಿ ಗೂಗಲ್ ಮುಂದಾಗಿದೆ. ತನ್ನ ಅನೇಕ ಅದ್ಭುತ ಸೇವೆಗಳಿಂದಾಗಿ ಸುದ್ದಿ ಮಾಡುತ್ತಿದೆ.

ಇದನ್ನು ಓದಿ: ಬೆಂಗಳೂರನ್ನು ಕೈ ಬಿಟ್ಟು ಉದ್ಯಮ ಆರಂಭಿಸಿ- ಸ್ಟಾರ್ಟ್​ಅಪ್​ ಲೋಕದಲ್ಲಿ ಯಶಸ್ಸು ಪಡೆಯಿರಿ

ಸರ್ಚ್ ಇಂಜಿನ್ ದೈತ್ಯ ಕಂಪನಿ ಗೂಗಲ್ ತನ್ನ ಹೊಸ ವಿಡಿಯೋ ಚಾಟಿಂಗ್ ಆ್ಯಪ್ 'ಡುಯೋ' ಬಿಡುಗಡೆ ಮಾಡಿದೆ. ಈ ಆ್ಯಪ್​ ಫೇಸ್ ಟೈಮ್, ಮೈಕ್ರೋಸಾಫ್ಟ್​ನ ಸ್ಕೈಪ್ ಮತ್ತು ಫೇಸ್ ಬುಕ್​ನ ಮೆಸೆಂಜರ್​ಗಳಿಗೆ ತೀವ್ರ ಸ್ಪರ್ಧೆ ಕೊಡಲಿದೆ ಎಂದು ಹೇಳಲಾಗಿದೆ. ಈ ಹೊಸ ಆ್ಯಪ್ ಸಹಾಯದಿಂದ ಗೆಳೆಯರೊಂದಿಗೆ ಮತ್ತು ಪರಿವಾರದವರೊಂದಿಗೆ ಒಬ್ಬರನ್ನೊಬ್ಬರು ನೋಡಿಕೊಂಡು ಮಾತನಾಡುವ ಈ ಸೇವೆ ಬೇರೆಲ್ಲ ಸೇವೆಗಳಿಗಿಂತ ಉತ್ಕೃಷ್ಟವಾಗಿದೆ.

"ಗೂಗಲ್​ನ ಡುಯೋ ಆ್ಯಪ್​ ನಿಜಕ್ಕೂ ಉಳಿದೆಲ್ಲಾ ಆ್ಯಪ್​ಗಳಿಗಿಂತ ಉತ್ತಮ ಸೇವೆಯನ್ನು ನೀಡುತ್ತಿದೆ. ವ್ಯತ್ಯಯ ಇಲ್ಲದ ಸಂಭಾಷಣೆ ಮತ್ತು ಆ್ಯಪ್​ನ ರೀಚಿಂಗ್​ ಟೈಮ್​ ಉತ್ತಮವಾಗಿದೆ. ಗೂಗಲ್​ ಡುಯೋ ಹಳೆಯ ಆ್ಯಪ್​ಗಳನ್ನು ಸದ್ಯದಲ್ಲೇ ಹಿಂದಿಕ್ಕಲಿದೆ. ಹಾಂಗ್​ಔಟ್​ ಎಷ್ಟು ಉಪಯೋಗಕಾರಿ ಆಗಿತ್ತೋ ಅದಕ್ಕಿಂತ ಹೆಚ್ಚಿನ ಉಪಯೋಗ ಡಯೋದಿಲ್ಲಿದೆ "
        - ರವಿ, ಆ್ಯಪ್​ ಬಳಕೆದಾರ

ಈ ನೂತನ ಆ್ಯಪ್ ಉಳಿದ ಆ್ಯಪ್​ಗಳಿಗಿಂತ ಹೆಚ್ಚಿಗೆ ಭಿನ್ನವಾಗಿರದಿದ್ದರೂ ಇದರಲ್ಲಿ ಕರೆ ಮಾಡಿದವರ ಮುಖದ ಭಾವನೆಯನ್ನು ನಾವು ನೋಡಬಹುದಾಗಿದೆ. ಇದರ ವಿಶೇಷತೆಯೆಂನೆಂದರೆ ಫೇಸ್ ಟೈಮ್ ತರಹ ಇದರಲ್ಲಿ ಒಬ್ಬ ವ್ಯಕ್ತಿಯ ಜೊತೆ ಸಂಪರ್ಕಿಸಲು ಆ ವ್ಯಕ್ತಿಯ ನಂಬರ್ ಅಗತ್ಯವಿಲ್ಲ. ಈ ಫೀಚರ್​ಗೆ ಗೂಗಲ್ 'ನಾಕ್ ನಾಕ್' ಎಂದು ಹೆಸರಿಟ್ಟಿದೆ. ಈ ಆಪ್ ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಫೋನ್ ನಲ್ಲಿ ಮತ್ತು ಆ್ಯಪಲ್​ನ ಐಫೋನ್ ಗಳಲ್ಲಿ ಈ ಆಪ್ಲಿಕೇಶನ್ ಲಭ್ಯವಿದೆ.

ಗೂಗಲ್ 2013 ರಿಂದ ಹ್ಯಾಂಗ್ ಔಟ್ ಮೂಲಕ ವಿಡಿಯೋ ಕಾಲಿಂಗ್ ಸೌಲಭ್ಯ ಕೊಡುತ್ತಿತ್ತು. ಕಂಪನಿ ಈಗ ಬಿಸಿನೆಸ್ ಮೀಟಿಂಗ್​ಗಳಿಗೆ ಉಪಯೋಗವಾಗುವಂತೆ ವಿಸ್ತರಿಸುತ್ತಿದೆ. ಇದರೊಂದಿಗೆ ಗೂಗಲ್ ಇನ್ನೂ ಒಂದು ಮೆಸೇಜಿಂಗ್ ಆ್ಯಪ್ ಅನ್ನು ಹೊರತರಲಿದೆ. ಎಲೋಫೀಚರಿಂಗ್ ಹೆಸರಿನ ಈ ಆ್ಯಪ್, ಸಂದೇಶಗಳಿಗೆ ಯಾವ ರೀತಿ ಉತ್ತರಿಸಬೇಕೆಂಬುದರ ಕುರಿತು ಸಲಹೆ ನೀಡುತ್ತದೆಯಂತೆ. ಒಟ್ಟಿನಲ್ಲಿ ಗೂಗಲ್ ತನ್ನ ಅದ್ಭುತ ಸೃಜನಶೀಲ ಆ್ಯಪ್​ಗಳ ಸೌಲಭ್ಯದಿಂದಾಗಿ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದು, ಜನ ಸ್ನೇಹಿಯಾಗುವ ಮೂಲಕ ತಮ್ಮ ಮಾರುಕಟ್ಟೆಯನ್ನ ವಿಸ್ತರಿಸುತ್ತಿದೆ.

ಇದನ್ನು ಓದಿ:

1. ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..!

2. ಬೆಂಗಳೂರಿನಲ್ಲಿ ಏನೂ ಆಗಲ್ಲ ಅನ್ನುವವರು ಇವರನ್ನು ನೋಡಿ ಕಲಿಯಿರಿ..!

3. ಇಂಟರ್​ನೆಟ್ ಇಲ್ಲದೆಯೂ ಮೊಬೈಲ್​ನಲ್ಲಿ ಹಣದ ವರ್ಗಾವಣೆ-ಇನ್ಫೋಸಿಸ್​ನ ಮಾಜಿ ಉದ್ಯೋಗಿಯ ವಿಭಿನ್ನ, ವಿನೂತನ ತಂತ್ರಜ್ಞಾನ

Want to make your startup journey smooth? YS Education brings a comprehensive Funding and Startup Course. Learn from India's top investors and entrepreneurs. Click here to know more.

  • +0
Share on
close
  • +0
Share on
close
Share on
close

Our Partner Events

Hustle across India