ಮೈಸೂರಿನಿಂದ ಮುಂಬೈವರೆಗೆ- ಸ್ಯಾಂಡಲ್ವುಡ್ಗಿಂತಲೂ ಬಾಲಿವುಡ್ನಲ್ಲಿ ಡಿಮ್ಯಾಂಡ್
ಟೀಮ್ ವೈ.ಎಸ್. ಕನ್ನಡ
ಇದು ಎರಡೇಎರಡು ಸ್ಯೂಯಿಂಗ್ ಮೆಷಿನ್ ಇಟ್ಟುಕೊಂಡು ಇಂದು ಬಾಲಿವುಡ್ ಸೆಲೆಬ್ರೆಟಿಗಳನ್ನ ತನ್ನತ್ತ ತಿರುಗಿ ನೋಡುವಂತೆ ಮಾಡಿರೋ ಸಾಧಕಿಯ ಕಥೆ. ಈಕೆ ಮತ್ತಾರು ಅಲ್ಲ ರಾಜ್ಯದ ಫ್ಯಾಷನ್ ಡಿಸೈನರ್ಗಳ ಜೊತೆಯಲ್ಲಿ ಗುರುತಿಸಿಕೊಂಡಿರೋ ಜಯಂತಿ ಬಲ್ಲಾಳ್ ಅವರ ಕಥೆ.
ಜಯಂತಿ ಬಲ್ಲಾಳ್ ಪ್ರತಿ ವರ್ಷ ಮೈಸೂರಿನ ಫ್ಯಾಷನ್ ವೀಕ್ನಲ್ಲಿ ಕೇಳಿ ಬರೋ ಅತೀ ದೊಡ್ಡ ಮತ್ತು ಸುಪ್ರಸಿದ್ಧ ಹೆಸರು. ಬೆಂಗಳೂರಿಗರು ಮಾತ್ರ ಸ್ಟಾರ್ಗಳನ್ನ ರ್ಯಾಂಪ್ ಮೇಲೆ ಹತ್ತಿಸೋದು ಅನ್ನೋದನ್ನ ಸುಳ್ಳು ಮಾಡಿ, ಬಾಲಿವುಡ್ ಸ್ಟಾರ್ಗಳನ್ನ ಸಾಂಸ್ಕೃತಿಕ ನಗರಿ ಮೈಸೂರಿಗೆ ಕರೆಸಿ ಮೈಸೂರಿನವರು ಕೂಡ ಯಾರಿಗೂ ಕಡಿಮೆ ಇಲ್ಲ ಅನ್ನೋದನ್ನ ತೋರಿಸಿಕೊಟ್ಟವರು.
ಟೈಲರಿಂಗ್ನಿಂದ ಫ್ಯಾಷನ್ ಡಿಸೈನರ್ ತನಕ...!
ಜಯಂತಿ ಬಲ್ಲಾಳ್ ಕಥೆ ಎಲ್ಲರಿಗೂ ಸ್ಪೂರ್ತಿದಾಯಕ ಅನ್ನುವುದರಲ್ಲಿ ಎರಡು ಮಾತಿಲ್ಲ. 18 ವರ್ಷದ ಹಿಂದೆ ಜಯಂತಿ ಬಲ್ಲಾಳ್ ಮನೆಯಲ್ಲೇ ಟೈಲರಿಂಗ್ ಮತ್ತು ಡಿಸೈನಿಂಗ್ ಅನ್ನ ಮಾಡುತ್ತಾ ಇದ್ದವರು. ಅಷ್ಟೇಅಲ್ಲದೆ, ತಮ್ಮ ಪತಿಯ ಕೆಲಸಕ್ಕೂ ಆಗಾಗ ನೆರವಾಗ್ತಿದ್ದರು. ಎಷ್ಟು ದಿನ ಇದೇರೀತಿ ಕೆಲಸ ಮಾಡೋದು ಅನ್ನೋದನ್ನ ನಿರ್ಧಾರ ಮಾಡಿದ, ಜಯಂತಿ ಬಲ್ಲಾಳ್, Contemparary ಅನ್ನೋ ಬೂಟಿಕ್ ಅನ್ನ ಸ್ಟಾರ್ಟ್ ಮಾಡಿದ್ರು. ತನ್ನ ಮೊದಲ ಉದ್ದಿಮೆಗೆ ಜಯಂತಿ ಬಲ್ಲಾಳ್ ಹೂಡಿಕೆ ಮಾಡಿದ್ದು ಜಸ್ಟ್ 40,000 ರೂಪಾಯಿಗಳನ್ನ ಮಾತ್ರ. ಆದ್ರೆ ಇಲ್ಲಿ ಜಯಂತಿ ಬಲ್ಲಾಳ್ ಬದುಕಿಗೆ ವಿಶೇಷ ತಿರುವು ಸಿಕ್ಕಿತ್ತು. ಅಷ್ಟೇ ಅಲ್ಲ ಜಯಂತಿ ಇಂದು ಇಡೀ ರಾಜ್ಯವೇ ತನ್ನತ್ತ ತಿರುಗಿ ನೋಡುವಂತಹ ಯಶಸ್ಸನ್ನು ಸಾಧಿಸಿದ್ದಾರೆ. ನೀಡಲ್ ವರ್ಕ್ನಲ್ಲಿ ಫೇಮಸ್ ಆಗಿದ್ದ ಜಯಂತಿ ಬೂಟಿಕ್ ಜೊತೆಯಾಗಿಯೇ ಮೈಸೂರಿನಲ್ಲಿ ಮಾಡೆಲಿಂಗ್ ಸ್ಕೂಲ್ ಅನ್ನು ಕೂಡ ಆರಂಭ ಮಾಡಿದ್ರು. ಇಷ್ಟೆಲ್ಲ ಮಾಡಿದ ನಂತ್ರ ತಾವು ಮಾಡಿದ ಡಿಸೈನ್ಗಳನ್ನು ಡಿಸ್ಪ್ಲೇ ಮಾಡೋ ನಿರ್ಧಾರ ಮಾಡಿ ಮೈಸೂರಿನಲ್ಲೇ ಫ್ಯಾಷನ್ ವೀಕ್ ಮಾಡೋದಕ್ಕೆ ಶುರು ಮಾಡಿದ್ರು ಜಯಂತಿ ಬಲ್ಲಾಳ್.
ಮೈಸೂರಿನಲ್ಲಿ ಶುರುವಾಯ್ತು ಫ್ಯಾಷನ್ ವೀಕ್
ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಫ್ಯಾಷನ್ ವೀಕ್ ಅನ್ನ ಮೈಸೂರಿನಲ್ಲಿ ಮಾಡಿ ಸೈ ಅನ್ನಿಸಿಕೊಂಡ ಕೀರ್ತಿ ಜಯಂತಿ ಅವರಿಗೆ ಸಿಕ್ಕಿದೆ. ಜಯಂತಿ 2014ರಲ್ಲಿ ಮೈಸೂರ್ ಫ್ಯಾಷನ್ ವೀಕ್ಗೆ ಚಾಲನೆ ನೀಡಿದ್ರು. ಇದೇ ರೀತಿ ಜಯಂತಿ ಪ್ರತಿ ವರ್ಷವೂ ಮೈಸೂರು ಫ್ಯಾಷನ್ ವೀಕ್ನ್ನು ನಡೆಸಿಕೊಂಡು ಬರುತ್ತಿದ್ದು ಅದರಲ್ಲಿ ಅದ್ಭುತ ಯಶಸ್ಸನ್ನು ಕೂಡ ಸಾಧಿಸಿದ್ದಾರೆ. ಆರಂಭದಲ್ಲಿ ಕೇವಲ ಮಾಡೆಲ್ಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದ ಫ್ಯಾಷನ್ ವೀಕ್ನಲ್ಲಿ ಕ್ರಮೇಣ ಬಾಲಿವುಡ್ ಹಾಗೂ ಸ್ಯಾಂಡಲ್ವು ನಟ-ನಟಿಯರು ಕೂಡ ಬೆಕ್ಕಿನ ನಡಿಗೆ ಹಾಕಲು ಪ್ರಾರಂಭಿಸಿದ್ರು. ದಸರಾ ತಿಂಗಳಲ್ಲಿ ನಡೆಯೋ ಈ ಫ್ಯಾಷನ್ ವೀಕ್ ನಲ್ಲಿ ದೇಶದ ನಾನಾ ಮೂಲೆಗಳಲ್ಲಿ ಫೇಮಸ್ ಆಗಿರೋ ಡಿಸೈನರ್ಸ್ ತಮ್ಮತಮ್ಮ ಮಾಡೆಲ್ಗಳನ್ನ ಶೋ ಮಾಡಲು ಒಂದು ವೇದಿಕೆಯಾಗಿದೆ. ತಾವು ಫೇಮಸ್ ಆಗುವುದರ ಜೊತೆಯಲ್ಲಿ ತಮ್ಮಂತೆಯೇ ಇರುವ ಡಿಸೈನರ್ಗಳು ಕೂಡ ಯಶಸ್ಸಿನ ಮೆಟ್ಟಿಲು ಏರಲಿ ಅನ್ನೋದು ಜಯಂತಿ ಬಲ್ಲಾಳರ ಹಾರೈಕೆ.
ಗುರು ಇಲ್ಲ ಗುರಿಯೇ ಎಲ್ಲಾ..!
ಜಯಂತಿ ಅವರಿಗೆ ತಮ್ಮ ಲೈಫ್ನಲ್ಲಿ ಗುರು ಅಂತ ಯಾರು ಇಲ್ಲ. ಗುರಿಯನ್ನ ಮಾತ್ರ ಇಟ್ಟುಕೊಂಡು ತಮ್ಮ ಸಾಧನೆಯತ್ತ ನಡೆದುಕೊಂಡು ಬಂದಿದ್ದಾರೆ. ಆರಂಭದಲ್ಲಿಎಲ್ಲವೂ ಟ್ರಯಲ್ ಅಂಡ್ ಎರರ್ ಮಾಡೆಲ್ಗಳ ಮೂಲಕ ಎಲ್ಲವನ್ನು ಮಾಡುತ್ತಾ ಬಂದ ಜಯಂತಿ, ನಂತ್ರ ತಾವಂದುಕೊಂಡಂತಹ ಡಿಸೈನ್ಗಳನ್ನ ಪಡೆದುಕೊಳ್ಳೋದೆಕ್ಕೆ ಶುರು ಮಾಡಿದ್ರು. ಇನ್ನೂ ಮೈಸೂರಿನಲ್ಲಿ ಇಂತಹದೊಂದು ಫ್ಯಾಷನ್ ವೀಕ್ ಮತ್ತು ಮಾಡಲಿಂಗ್ ಸ್ಕೂಲ್ ಸ್ಟಾರ್ಟ್ ಮಾಡೋದು ಒಂದು ಚಾಲೆಂಜಿಗ್ ವಿಚಾರವೇ. ಇನ್ನು ಬೆಳೆಯುತ್ತಿರೋ ಮೈಸೂರಿನಲ್ಲಿ ಪ್ರಾರಂಭದಲ್ಲಿ ಇವೆಲ್ಲವೂ ಕಷ್ಟ ಅನ್ನಿಸೋಕೆ ಶುರುವಾಗಿದೆ. ಆದ್ರೆ ನಂತ್ರದ ದಿನಗಳಲ್ಲಿ ಎಲ್ಲವೂ ಸರಿಯಾಗಿ ಇಂದು ಮೂರನೇ ಫ್ಯಾಷನ್ ವೀಕ್ ಮಾಡಿ ಸಕ್ಸಸ್ ಕಂಡಿದ್ದಾರೆ.
ಸ್ಯಾಂಡಲ್ವುಡ್ ಮತ್ತು ಬಾಲಿವುಡ್ ನಂಟು
ಮೈಸೂರು ಫ್ಯಾಷನ್ ವೀಕ್ ಸದ್ಯ ಬಿಟೌನ್ನಲ್ಲೂ ಸುದ್ದಿಯಾಗಿದ್ದು ಅಲ್ಲಿನ ಸ್ಟಾರ್ಗಳು ಕೂಡ ಇಲ್ಲಿ ಹೆಜ್ಜೆ ಹಾಕಿದ್ದಾರೆ. ಹಲವು ಭಾಷೆಗಳಲ್ಲಿ ತಾರೆಗಳಾಗಿರುವ ಹರಿಪ್ರಿಯ, ಪ್ರಣೀತಾ, ಜೆ.ಕೆ, ಶರ್ಮಿಳಾ ಮಾಂಡ್ರೆ, ರವೀನಾ ಟಂಡನ್, ಸೋಯಾ ಅಲಿ ಖಾನ್ ಹೀಗೆ ಇನ್ನೂ ಅನೇಕರು ಜಯಂತಿ ಬಲ್ಲಾಳ್ ಅವರ ಡಿಸೈನರ್ ವೇರ್ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. 18 ವರ್ಷದ ಸಾಧನೆಯಲ್ಲಿ ಸಾಕಷ್ಟು ಕಷ್ಟಗಳನ್ನ ಎದುರಿಸಿದ್ದು ಹೆಣ್ಣು ಮಕ್ಕಳು ಸಾಧಿಸಲು ಮತ್ತಷ್ಟು ಕಷ್ಟ ಪಡಬೇಕಾಗುತ್ತೆ ಅನ್ನೋದು ಜಯಂತಿ ಅವ್ರ ಅಭಿಪ್ರಾಯ. ಇಷ್ಟೇ ಅಲ್ಲದೆ ಜಯಂತಿ ಅದೆಷ್ಟೋ ಸ್ಟಾರ್ಗಳಿಗೆ ಪರ್ಸನಲ್ ಡಿಸೈನರ್ ಕೂಡ ಆಗಿದ್ದಾರೆ. ಸದ್ಯ ಮೈಸೂರು ಹಾಗೂ ಮುಂಬೈನಲ್ಲಿ ಸುದ್ದಿ ಮಾಡ್ತಿರೋ ಇವರು ಇನ್ನ ಕೆಲವೇ ದಿನಗಳಲ್ಲಿ ರಾಷ್ಟ್ರದಾದ್ಯಂತ ಸುದ್ದಿ ಮಾಡಲಿದ್ದಾರೆ.