ಕುಂಬಾರನ ಕೈಯಲ್ಲಿ ರೆಡಿಯಾಗುತ್ತಿದೆ ಬಡವರ ಫ್ರಿಡ್ಜ್...
ನಿನಾದ
ಬದುಕಿನ ಕೆಲ ಸೋಲುಗಳು ಕೆಲವರನ್ನು ಮತ್ತಷ್ಟು ಕುಗ್ಗಿಸಿದ್ರೆ ಇನ್ನೂ ಕೆಲವರಿಗೆ ಅದೇ ಇನ್ನೊಂದಷ್ಟು ಸಾಧನೆ ಮಾಡೋದಕ್ಕೆ ಪ್ರೇರಣೆ ನೀಡುತ್ತೆ. ಗುಜರಾತ್ ನ ರಾಜ್ ಕೋಟ್ ನ ನಿಚಿಮಂಡಲ್ ಗ್ರಾಮದ ಮನ್ ಸುಖ್ ಭಾಯಿ ಪ್ರಜಾಪತಿ ಅವರದ್ದು ಅದೇ ಕಥೆ. ಗುಜರಾತ್ ನಲ್ಲಿ ಉಂಟಾದ ಭೂಕಂಪ ಮನ್ ಸುಖ್ ಭಾಯಿ ಬದುಕನ್ನೇ ಅಲ್ಲೋ ಕಲ್ಲೋಲ ಮಾಡಿತು. ಜೀವನ ನಡೆಸೋದಕ್ಕೆ ಪರ್ಯಾಯ ದಾರಿ ಹುಡುಕಿಕೊಳ್ಳೋದು ಮನ್ ಸುಖ್ ಭಾಯಿ ಅವರಿಗೆ ಅನಿವಾರ್ಯವಾಗಿತ್ತು.ಆದ್ರೆ ಕೇವಲ ಹತ್ತನೇ ಕ್ಲಾಸ್ ಓದಿದ್ದ ಅವರಿಗೆ ದೊಡ್ಡ ದೊಡ್ಡ ಕೆಲಸಗಳಿಗೆ ಕೈ ಹಾಕುವ ಧೈರ್ಯವಿರಲಿಲ್ಲ. ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದ ಕುಂಬಾರಿಕೆ ಕೆಲಸದಲ್ಲೇ ಹೊಸದೇನಾದ್ರು ಮಾಡಬೇಕು ಮಾಡಿದ್ರೆ ಅನ್ನೋ ಆಲೋಚನೆ ಹುಟ್ಟಿಕೊಂಡಿತ್ತು. ಆಗಲೇ ಅವರು ಯೋಚಿಸಿದ್ದು ನಾನ್ ಯಾಕೆ ಮಣ್ಣಿನ ಫ್ರಿಡ್ಜ್ ತಯಾರಿಸಬಾರದು ಅಂತಾ.
ಅದರಂತೆ ಮನ್ ಸುಖ್ ಭಾಯಿ ಅವರು ತಮ್ಮ ಹೊಸ ಸಾಹಸಕ್ಕೆ ಕೈ ಹಾಕಿದ್ದರು. ಮಿಟ್ಟಿಕೂಲ್ ಅನ್ನೋ ಹೆಸರಿನಲ್ಲಿ ಫ್ರಿಡ್ಜ್ ಗಳನ್ನು ತಯಾರಿಸೋದಕ್ಕೆ ಆರಂಭಿಸಿದ್ರು.ತಮ್ಮದೇ ಆದ ಐಡಿಯಾದಲ್ಲಿ ಮಣ್ಣಿನಿಂದ ಫ್ರಿಡ್ಜ್ ತಯಾರಿಸಿದ್ರು. ಮೊದಲ ಪ್ರಯತ್ನಕ್ಕೆ ಸಿಕ್ಕ ಯಶಸ್ಸಿನಿಂದ ಖುಷಿಯಾದ ಮನ್ ಸುಖ್ ಭಾಯಿ ಮುಂದೆ ಅದನ್ನೇ ಗಂಭೀರವಾಗಿ ತೆಗೆದುಕೊಂಡು ಬ್ಯಾಂಕ್ ನಿಂದ 30 ಸಾವಿರ ರೂಪಾಯಿ ಸಾಲ ಪಡೆದುಕೊಂಡ್ರು. ಪುಟ್ಟದೊಂದು ಫ್ಯಾಕ್ಟರಿ ಆರಂಭಿಸಿದ್ರು. ವಿದ್ಯುತ್ ನ ಅಗತ್ಯವೇ ಇಲ್ಲದೇ ಮಣ್ಣಿನಿಂದಲೇ ನಾನಾ ರೀತಿಯ ಫ್ರಿಡ್ಜ್ ಗಳನ್ನು ತಯಾರಿಸೋದನ್ನು ಆರಂಭಿಸಿದ್ರು. ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.ಮನ್ ಸುಖ್ ಭಾಯಿ ಮುಖ್ಯವಾಗಿ ಬಡವರನ್ನೇ ಗಮನದಲ್ಲಿಟ್ಟುಕೊಂಡು ಈ ಫ್ರಿಡ್ಜ್ ನ್ನು ತಯಾರಿಸಿದ್ದಾರಂತೆ. ಕೇವಲ ಮೂರು ಸಾವಿರ ರೂಪಾಯಿಗೆ ಈ ಫ್ರಿಡ್ಜ್ ಲಭ್ಯವಾಗುತ್ತೆ. ತರಕಾರಿ ಹಣ್ಣುಗಳನ್ನ 5 ರಿಂದ 6 ದಿನಗಳ ಕಾಲ ಈ ಫ್ರಿಡ್ಜ್ ನಲ್ಲಿ ಶೇಖರಿಸಿಡಬಹುದಂತೆ.
ಇದನ್ನು ಓದಿ: ಜನರಲ್ Knowledge ಅಲ್ಲ, ಜನರ Knowledge ಇಂಪಾರ್ಟೆಂಟ್.! - ಆದರ್ಶ್ ಬಸವರಾಜ್
ಕೇವಲ ಹತ್ತನೇ ಕ್ಲಾಸ್ ಓದಿರುವ ಮನ್ ಸುಖ್ ಭಾಯಿ ಇವತ್ತು ತಮ್ಮ ಸಾಧನೆಯ ಮೂಲಕ ದೇಶದಾದ್ಯಂತ ಸುದ್ದಿಯಾಗಿದ್ದಾರೆ.ಅವರ ಸಾಧನೆಗೆ ರಾಷ್ಟ್ರಪ್ರಶಸ್ತಿ ಕೂಡ ದೊರೆತಿದೆ. ಇನ್ನು ಮಾಜಿ ರಾಷ್ಟ್ರಪತಿ ದಿವಂಗತ ಡಾ. ಅಬ್ದುಲ್ ಕಲಾಂ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ರು. ಮನ್ ಸುಖ್ ಭಾಯಿ ತಮ್ಮ ರೆಫ್ರಿರೇಜರೇಟರ್ ತಯಾರಿಕಾ ಕೆಲಸದಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತಿದ್ದಾರಂತೆ.ಅಲ್ಲದೇ 35 ಕ್ಕೂ ಹೆಚ್ಚು ಜನರಿಗೆ ಇವರು ಉದ್ಯೋಗ ನೀಡಿದ್ದಾರೆ.ಇನ್ನು ಕೇವಲ ಫ್ರಿಡ್ಜ್ ಮಾತ್ರವಲ್ಲದೇ ಮನ್ ಸುಖ್ ಭಾಯಿ ಮಣ್ಣಿನಲ್ಲಿ ಇನ್ನೂ ಅನೇಕ ವಸ್ತುಗಳನ್ನು ತಯಾರಿಸಿದ್ದಾರೆ ಮಣ್ಣಿನ ತವಾ, ಫಿಲ್ಟರ್ , ಕುಕ್ಕರ್ ಹೀಗೆ ಅನೇಕ ವಸ್ತುಗಳನ್ನು ತಯಾರಿಸಿದ್ದಾರೆ. ಇನ್ನಷ್ಟು ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ ಮನ ಸುಖ್ ಭಾಯಿ.
ಬದುಕಿನಲ್ಲಿ ಬರೋ ಕಷ್ಟಗಳು ನೆನೆದು ಕೈ ಕಟ್ಟಿ ಕುಳಿತರೆ ಏನೂ ಮಾಡಲು ಸಾಧ್ಯವಿಲ್ಲ.ಆದ್ರೆ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ರೆ ಬದುಕಿನಲ್ಲಿ ಏನ್ ಬೇಕಾದ್ರೂ ಸಾಧಿಸಬಹುದು ಅನ್ನುನ ಮನ್ ಸುಖ್ ಭಾಯಿ ಇಂದಿನ ಅನೇಕ ಕುವಕ ಯುವತಿಯರಿಗೆ ಮಾದರಿಯಾಗಿದ್ದಾರೆ.
1. ಗಂಟೆಗಟ್ಟಲೆ ಮಾತಾಡಬೇಕಾ ಇಲ್ಲಿದೆ 'ನಾನು' ಆ್ಯಪ್!