Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಭಾರತ ಸಿಂಧು ರಶ್ಮಿ " ವಿ. ಕೃ. ಗೋಕಾಕ್"

ಚೈತ್ರ.ಎನ್​​

ಭಾರತ ಸಿಂಧು ರಶ್ಮಿ " ವಿ. ಕೃ. ಗೋಕಾಕ್"

Thursday November 05, 2015 , 2 min Read

ಭಾರತ ಸಿಂಧು ರಶ್ಮಿ ಹೆಸರು ಕೇಳಿದಂತೆ ನಮಗೆ ಥಟ್ಟನೆ ನೆನಪಾಗುವ ಹೆಸರು ಹಿರಿಯ ಸಾಹಿತಿ ಜ್ಞಾನಪೀಠ ಪುರಸ್ಕೃತರಾದ ವಿ ಕೃ ಗೋಕಾಕ್. ಅರ್ಥಾತ್ ಡಾ. ವಿನಾಯಕ ಕೃಷ್ಣ ಗೋಕಾಕ್. ಗೋಕಾಕ್ ಹೆಸರನ್ನು ಕೇಳಿದ ಕೂಡಲೇ ಸಾಹಿತ್ಯದ ಬಗ್ಗೆ ಅರಿವಿರದ ಕನ್ನಡಿಗನಲ್ಲಿ ಕೆಚ್ಚೆದೆ ಮೂಡುತ್ತದೆ. ಗೋಕಾಕ್ ಚಳುವಳಿಯಲ್ಲಿ ಗೋಕಾಕ್ ವರದಿ ಜಾರಿಗೆ ತರಲು ನಡೆದ ಡಾ. ರಾಜ್‍ಕುಮಾರ್ ನೇತೃತ್ವದಲ್ಲಿ ನಡೆದ ಚಳುವಳಿ ಎಲ್ಲ ಕನ್ನಡಿಗರಿಗೂ ವಿ. ಕೃ. ಗೋಕಾಕ್‍ರನ್ನು ಪರಿಚಯಿಸಿತ್ತು.

image


1990ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ವಿ. ಕೃ. ಗೋಕಾಕ್ ಕನ್ನಡಕ್ಕೆ ಹೆಮ್ಮೆ ತಂದಿದ್ದರು. ಆದರೆ ಇದು ಕೆಲವರಿಗೆ ಅರಗಿಸಿಕೊಳ್ಳಲಾಗಲಿಲ್ಲ. ಪ್ರಶಸ್ತಿಯ ಬಗ್ಗೆ ಮೂಗು ಮುರಿದರು. ಸಮರಸವೇ ಜೀವನ - ಇಜ್ಜೋಡು ಮತ್ತು ಏರಿಳಿತ ಭಾಗ 1, ಸಮರಸವೇ ಜೀವನ ಸಮುದ್ರಯಾಣ ಮತ್ತು ನಿರ್ವಾಹನ ಭಾಗ2 ಕಾದಂಬರಿಗಳು ಹೆಚ್ಚು ಸಾಹಿತ್ಯಸಕ್ತರನ್ನು ತಲುಪಿದವು.

image


ಇನ್ನು ನವೋದಯ ಪರಿಕಲ್ಪನೆಯನ್ನು ಆಚ್ಚುಕಟ್ಟಾಗಿ ಅಭಿವ್ಯಕ್ತಿಸಿದ ಕವಿಗಳಲ್ಲಿ ವಿ ಕೃ ಗೋಕಾಕ್ ಅಗ್ರ ಗಣ್ಯರು. 1940 ರಲ್ಲಿ ಪ್ರಕಟವಾದ ಗೋಕಾಕರ " ಸಮುದ್ರ ಗೀತೆಗಳು" ಅದೆಷ್ಟೋ ಹೊಸ ವಿಷಯಗಳನ್ನು ಹೊರ ಚೆಲ್ಲಿದ್ದವು. ವಚನಗಳ ಪ್ರೇರಣೆಯಿಂದ ರೂಪಿತವಾದ ಸಮುದ್ರ ಗೀತೆಗಳಲ್ಲಿ ಚಂಪೂಕಾವ್ಯದ ಹೊಸ ತಂತ್ರವನ್ನು ಹೆಣೆದರು. ಕವಿ ರತ್ನಾಕರ ವರ್ಣಿ ನಂತರ ಸಮುದ್ರದ ಬಗ್ಗೆ ಅದರ ವೈವಿದ್ಯತೆ ಬಗ್ಗೆ ತಿಳಿಸಿದವರು ಗೋಕಾಕ್ ಒಬ್ಬರೇ.

image


ಚಂಪೂ ಕಾವ್ಯದ ವೈಶಿಷ್ಟ್ಯತೆ ಬಗ್ಗೆ ತಿಳಿದುಕೊಳ್ಳಬೇಕೆಂದರೇ "ತ್ರಿವಿಕ್ರಮನ ಆಕಾಶಗಂಗೆ" ಮತ್ತು "ಇಂದಲ್ಲ ನಾಳೆ" ಕೃತಿಗಳನ್ನು ಆಭ್ಯಾಸ ಮಾಡಬೇಕು. ಆಧುನಿಕ ಕಾವ್ಯವನ್ನು ಮನ ಮುಟ್ಟುವಂತೆ ತಮ್ಮ ಸಾಹಿತ್ಯದಲ್ಲಿ ಹಿಡಿದು, ನಮ್ಮ ಸಂಸ್ಕೃತಿಯೊಳಗೆ ಬೀಸಿದ ಆಧುನಿಕ ವಾತಾವರಣವನ್ನು ಮಂತ್ರ ಮುಗ್ಧರಾಗುವಂತೆ ವರ್ಣಿಸಿದ್ದಾರೆ.

ಗೊಕಾಕರು ಹುಟ್ಟಿದ್ದು ಆಗಸ್ಟ್ 9 ರಂದು. ಧಾರಾವಾಡದ ಸವಣೂರು ಹುಟ್ಟೂರು. ಸಮುದ್ರಗೀತೆಗಳು, ಊರ್ಣನಾಭ, ಉಗಮ, ಬಾಳ ದೇಗುಲದಲ್ಲಿ, ದ್ಯಾವಾಪೃಥಿವಿ(ಖಂಡ ಕಾವ್ಯ), ಹಾಗೂ ಅಭುಯದಯ ಎಂಬ 6 ಕವನ ಸಂಕಲನ , ಜನನಾಯಕ, ಯುಗಾಂತರ, ವಿಮರ್ಶಕ ವೈದ್ಯ ಎನ್ನುವ ಮೂರು ನಾಟಕಗಳನ್ನು ಬರೆದಿದ್ದಾರೆ. 4 ವಿಮರ್ಶಾ ಗ್ರಂಥಗಳು, 2 ಪ್ರಬಂಧ, 2 ಪ್ರವಾಸ ಸಾಹಿತ್ಯ, ಒಂದು ಬೃಹತ್ ಕಾದಂಬರಿ ಬರೆದಿರುವ ಗೋಕಾಕರ ಪ್ರಥಮ ಕಾದಂಬರಿ "ಇಜ್ಜೋಡು" ಮುಂದೆ ಇದು ವಿಸ್ತೃತ ತಗೊಂಡಾಗ "ಸಮರಸವೇ ಜೀವನ" ಎಂಬ ಬೃಹತ್ ಕಾದಂಬರಿಯಾಯಿತು.

ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ವಿಭಿನ್ನ ಛಾಪು ಮೂಡಿಸಿರುವ ಗೋಕಾಖರಿಗೆ ಹಲವರು ಪ್ರಶಸ್ತಿಗಳು ಸಂದಿವೆ. ಗೌರವ ಡಾ ಟ್, ಭಾರತ ಸಿಂಧು ರಶ್ಮಿ ಮತ್ತು ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ. 1985 ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬೆಂಳೂರು ವಿಶ್ವ ವಿದ್ಯಾಯಲಯದ ಕುಲಪತಿಗಳಾಗಿ ಶಿಕ್ಷಣದಲ್ಲಿ ಹಲವಾರು ಬದಲಾವಣೆ ತಂದರು. 1992 ರಲ್ಲಿ ಈ ಸಾಹಿತ್ಯ ರತ್ನ ಇಹ ಲೋಕ ತ್ಯಜಿಸಿ ನಡೆದುಬಿಟ್ಟರು. ಆದರೆನಂತೆ ಇಂದಿಗೂ ಕನ್ನಡ ಮತ್ತು ಕನ್ನಡದ ಚಳುವಳಿಯಲ್ಲಿ ಗೋಕಾಕರ ಹೆಜ್ಜೆ ಗುರುತುಗಳು ಜೊತೆ ಜೊತೆಯಲ್ಲೇ ಸಾಗುತ್ತಿವೆ , ಸಾಗುತ್ತವೆ.