ಉದ್ಯಮ ಆರಂಭಿಸುವವರಿಗೆ ಉಚಿತ 7 ಸಲಹೆಗಳು

ಟೀಮ್ ವೈ.ಎಸ್.

25th Sep 2015
  • +0
Share on
close
  • +0
Share on
close
Share on
close

ಯಾವುದೇ ಒಂದು ನೂತನ ಬಿಸಿನೆಸ್ ಆರಂಭಿಸುವ ಯೋಚನೆ ನಿಮ್ಮಲ್ಲಿದ್ದರೆ ಅದಕ್ಕೂ ಮೊದಲು ನೀವು ಪ್ರತಿ ರೂಪಾಯಿಯ ಬೆಲೆಯನ್ನೂ ತಿಳಿದಿರಬೇಕು.. ಈಗಾಗಲೆ ಮಾರುಕಟ್ಟೆಯಲ್ಲಿ ಎಸ್ಟಾಬ್ಲಿಶ್ ಆಗಿರುವ ದೊಡ್ಡ ದೊಡ್ಡ ಸಂಸ್ಥೆಗಳು ತಮ್ಮ ಉತ್ಪನ್ನ ಹಾಗೂ ಸೇವೆಗಳ ಮಾರ್ಕೆಟಿಂಗ್ ಗೆ ಪ್ರತೀ ತಿಂಗಳು ಸಾವಿರಾರು ಡಾಲರ್ ಮೊತ್ತವನ್ನು ವಿನಿಯೋಗಿಸಲು ಸಿದ್ಧವಾಗಿರುತ್ತದೆ.. ಆದರೆ ನೂತನವಾಗಿ ಆರಂಭಿಸಲ್ಪಟ್ಟ ಸಂಸ್ಥೆಗಳಿಗೆ ಅದರ ರಿಟರ್ನ್ ಆಫ್ ಇನ್ ವೆಸ್ಟ್ಮೆಂಟ್ ಅಥವಾ ಹೂಡಿಕೆಯ ವಾಪಾಸಾತಿ ಅನಿವಾರ್ಯವಾಗಿರುತ್ತದೆ..

ಒಂದು ಸಣ್ಣ ಉದ್ಯಮವನ್ನು ಹೊಂದಿರುವ ನಿಮಗೆ ನಯಾಪೈಸೆ ಖರ್ಚಿಲ್ಲದಂತೆ ಮಾರ್ಕೆಟಿಂಗ್ ಸಲಹೆಗಳು ಬೇಕಾ..? ನೀವು ಕೇಳಲು ಸಿದ್ಧರಾಗಿದ್ದರೇ ನಿಮಗೆ ಉಚಿತ ಮಾರ್ಕೆಟಿಂಗ್ ನ 7 ಸಲಹೆಗಳು ಇಲ್ಲಿವೆ..

image


ನಿಮಗೆ ಪೂರ್ತಿ ಓದಲು ಸಮಯವಿಲ್ಲದಿದ್ದರೆ ಇಲ್ಲಿ 7 ಸಲಹೆಗಳ ಸಾರಾಂಶಗಳಿವೆ..

1. ಮೊದಲು ನಿಮ್ಮ ಟಾರ್ಗೆಟ್ ಮಾರುಕಟ್ಟೆ ಹಾಗೂ ಪೈಪೋಟಿಯನ್ನು ಗುರುತಿಸಿಕೊಳ್ಳಿ

2. ನಿಮ್ಮ ವಿಶ್ವಾಸಾರ್ಹ ಗ್ರಾಹಕರೊಂದಿಗೆ ನಿಮ್ಮ ಹೊಸ ಉದ್ಯಮದ ಯೋಜನೆಗಳು ಹಾಗೂ ಜಾಲವನ್ನು ಹಂಚಿಕೊಳ್ಳಿ

3. ನಿಮ್ಮ ಸಂಸ್ಥೆಯದೇ ಒಂದು ಬ್ಲಾಗ್ ಸಿದ್ಧಪಡಿಸಿಕೊಂಡು ಅದರಲ್ಲಿ ನಿಮ್ಮ ಸಂಸ್ಥೆಯ ಯೋಜನೆಯ ಬಗ್ಗೆ ಬರೆಯಲು ಪ್ರಾರಂಭಿಸಿ

4. ಮೇಲ್ ಕ್ಯಾಂಪೇನ್ ಮೂಲಕ ಗ್ರಾಹಕರಿಗೆ ಫ್ರೀ ಈ ಮೇಲ್ ಮಾಡುವುದು

5.ಲಿಂಕ್ಡ್ ಇನ್ ನಂತಹ ವೆಬ್ ಪೇಜ್ ಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ

6. ಟ್ವಿಟರ್ ಅನ್ನು ನಿಮ್ಮ ಆತ್ಮೀಯ ಸ್ನೇಹಿತನನ್ನಾಗಿಸಿಕೊಳ್ಳಿ

7. ಎಸ್ಈಓನ ಉಚಿತ ಟೂಲ್ಗಳನ್ನು ಸಂಶೋಧನಾ ವರದಿಗಳನ್ನು ಅಭ್ಯಾಸಮಾಡಿ

ಈಗ ಈ ಎಲ್ಲಾ ಸಲಹೆಗಳನ್ನು ಒಂದೊಂದಾಗಿ ವಿವರವಾಗಿ ನೋಡೋಣ

1.ಮೊದಲು ನಿಮ್ಮ ಟಾರ್ಗೆಟ್ ಮಾರುಕಟ್ಟೆ ಹಾಗೂ ಪೈಪೋಟಿಯನ್ನು ಗುರುತಿಸಿಕೊಳ್ಳಿ

ಇದು ಅತಿ ಮುಖ್ಯವಾದ ಅಂಶ.. ಮಾರುಕಟ್ಟೆ ಪ್ರವೇಶಿಸುವ ಮುನ್ನ ಪ್ರತಿಯೊಬ್ಬ ಹೊಸ ಉದ್ಯಮಿಯೂ ಈ ಅಂಶವನ್ನು ಖಂಡಿತಾ ಮನದಲ್ಲಿಟ್ಟುಕೊಳ್ಳಬೇಕು.. ಹಿಂದಿನ ತಪ್ಪುಗಳು ಹಾಗೂ ಇತರೆ ಯಶಸ್ವಿ ಉದ್ಯಮಗಳನ್ನು ಗಮನಿಸಿ ಈ ಸಲಹೆ ಬರೆಯುತ್ತಿದ್ದೇವೆ.. ನೀವು ನಿಮ್ಮ ನಿಜವಾದ ಗ್ರಾಹಕ ಯಾರೂ ಅಂತ ತಿಳಿಯದಿದ್ದರೇ ನಿಮಗೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ.. ಜೊತೆಗೆ ನಿಮ್ಮದೇ ಉತ್ಪನ್ನ ಅಥವಾ ಸೇವೆಗಳನ್ನು ಒದಗಿಸುತ್ತಿರುವ ಈಗಾಗಲೆ ಮಾರುಕಟ್ಟೆಯಲ್ಲಿರುವ ನಿಮ್ಮ ಸ್ಫರ್ಧಿಗಳ ಬಗ್ಗೆಯೂ ಗೊತ್ತಿರಬೇಕು..

ನಿಮ್ಮ ಟಾರ್ಗೆಟ್ ಗ್ರಾಹಕರು ಯಾವ ರೀತಿಯವರು, ಯಾವ ಉದ್ಯಮವನ್ನು ಅವರು ಅವಲಂಭಿಸಿದ್ದಾರೆ..? ಅವರ ಅವಶ್ಯಕಥೆಗಳೇನು..? ಅವರ ಬಜೆಟ್ ಎಷ್ಟು ಅನ್ನುವುದು ನಿಮಗೆ ತಿಳಿದಿರಬೇಕು..

ನಿಮ್ಮ ಟಾರ್ಗೆಟ್ ಗ್ರಾಹಕರಿಗೆ ಸಂಬಂಧಿಸಿದ ಪ್ರತಿಯೊಂದು ಅವಕಾಶಗಳಿಗೂ ನೀವು ಯೆಸ್ ಅನ್ನುವಂತಿರಬೇಕು ಜೊತೆಗೇ ನಿಮ್ಮ ಗುರಿಗೆ ಸೇರದ ರಾಂಗ್ ಕಸ್ಟಮರ್ಗೆ ನೋ ಅಂತ ನೇರವಾಗಿ ಹೇಳಿ ಹೊರಗಿಡಬೇಕು..

ಅದೇ ರೀತಿ ನಿಮ್ಮ ಉತ್ಪನ್ನ ಅಥವಾ ಸೇವೆ ಒದಗಿಸುತ್ತಿರುವ ಬೇರೆ ಸಂಸ್ಥೆಯ ಬಿಸಿನೆಸ್ ನೀತಿಗಳ ಬಗ್ಗೆಯೂ ನಿಮಗೆ ಮಾಹಿತಿ ಇರಬೇಕು. ಒಮ್ಮೆ ನೀವು ನಿಮ್ಮ ಗುರಿಯ ಗ್ರಾಹಕರನ್ನು ಸಮರ್ಪಕವಾಗಿ ತಲುಪಿದರೆ ಮಾರುಕಟ್ಟೆಯಲ್ಲಿ ನೀವು ಹೊಸ ಟ್ರೆಂಡ್ ಸೆಟ್ಟರ್ ಆಗುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಸಮಯಾವಕಾಶ ತೆಗೆದುಕೊಂಡು ಆಳವಾಗಿ ಈ ವಿಷಯಗಳನ್ನು ಅಧ್ಯಯನ ಮಾಡಿ. ಇದರಿಂದ ನಿಮಗೆ ಮಾರ್ಕೆಟಿಂಗ್‌ಗೆ ಹಣ ಹೂಡುವುದು ತಪ್ಪುತ್ತದೆ ಜೊತೆಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದ ಸುಳಿವುಗಳು ಲಭಿಸುತ್ತವೆ.

2.ನಿಮ್ಮ ವಿಶ್ವಾಸಾರ್ಹ ಗ್ರಾಹಕರೊಂದಿಗೆ ನಿಮ್ಮ ಹೊಸ ಉದ್ಯಮದ ಯೋಜನೆಗಳು ಹಾಗೂ ಜಾಲವನ್ನು ಹಂಚಿಕೊಳ್ಳಿ

ಒಂದು ನಿರ್ದಿಷ್ಟ ಸ್ಥಳವನ್ನು ಗುರುತಿಸಿಕೊಂಡು ಅಲ್ಲಿ ನಿಯಮಿತವಾಗಿ ನಿಮ್ಮ ಟಾರ್ಗೆಟ್ ಗ್ರಾಹಕರನ್ನು ಭೇಟಿ ಮಾಡಲು ಆರಂಭಿಸಿ. ಕೊನೆಪಕ್ಷ ತಿಂಗಳಿಗೆ ಮೂರು ಬಾರಿಯಾದರೂ ನಿಮ್ಮ ಗ್ರಾಹಕರನ್ನು ಸಂಪರ್ಕಿಸಲು ಪ್ರಯತ್ನಿಸಿ. ಇದಕ್ಕಾಗಿ ಕೆಲವು ಕಿಲೋಮೀಟರ್ ಟ್ರಾವೆಲ್ ಮಾಡಬೇಕಾದರೂ ತೊಂದರೆ ಇಲ್ಲ. ಇದರಿಂದ ಹೊಸ ವ್ಯಕ್ತಿಗಳ ಪರಿಚಯವಾಗುತ್ತದೆ ಹಾಗೂ ನೇರವಾಗಿ ಸಂಪರ್ಕಿಸುವ ಕಾರಣ ಗ್ರಾಹಕರೊಂದಿಗೆ ವಿಶ್ವಾಸ ವೃದ್ಧಿಯಾಗುತ್ತದೆ.

ಪ್ರಾರಂಭಿಕ ಸಂಸ್ಥೆಗಳ ಉತ್ಪನ್ನ ಹಾಗೂ ಸೇವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಗ್ರಾಹಕರ ನೇರ ಭೇಟಿ, ಸಂಪರ್ಕ, ವಿಶ್ವಾಸ, ವ್ಯವಹಾರಗಳಷ್ಟೇ ಅಲ್ಲದೇ ಮಾರುಕಟ್ಟೆಯಲ್ಲಿರುವ ಅದೇ ಮಾದರಿಯ ಉತ್ಪನ್ನಗಳ ಅಥವಾ ಸೇವೆಯ ಸಮಸ್ಯೆಗಳನ್ನು ಗುರುತಿಸುವಲ್ಲಿ ನೆರವಾಗುತ್ತದೆ. ಗ್ರಾಹಕರ ಸಮಸ್ಯೆಗಳನ್ನು ಅರಿತುಕೊಳ್ಳಿ ಅವರ ಪ್ರಶ್ನೆಗಳಿಗೆ ಉತ್ತರಿಸಿ ಹಾಗೂ ಅವರ ಅಸಲು ಸಮಸ್ಯೆಯ ಮೂಲ ಹುಡುಕಿ.

ಇದರ ಜೊತೆಗೆ ನೀವು ಭೇಟಿಯಾಗುವ ವ್ಯಕ್ತಿಗಳ ಅನುಭವ ಹಾಗೂ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ. ಕೆಲವು ಬಾರಿ ಅನುಭವಸ್ಥ ಉದ್ದಿಮೆದಾರರು ಆಗಿರುವ ನಿಮ್ಮ ಕೆಲವು ಗ್ರಾಹಕರಿಂದ ಅಮೂಲ್ಯವಾದ ಐಡಿಯಾಗಳು ನಿಮಗೆ ದೊರಕುವ ಸಾಧ್ಯತೆ ಇರುತ್ತದೆ. ಈ ರೀತಿಯ ಅನುಭವಸ್ಥ ಉದ್ಯಮಿ ಗ್ರಾಹಕರು ಪ್ರತಿಯೊಂದು ನಗರಗಳಲ್ಲೂ ಇರುತ್ತಾರೆ. ಒಂದು ವೇಳೆ ನೀವು ಅವರ ಸಲಹೆಗಳನ್ನು ಗೌರವಿಸುತ್ತಿದ್ದೀರಾ ಅನ್ನುವುದಾದರೆ ನಿಮ್ಮ ಉದ್ಯಮಕ್ಕೆ ಅವರ ಅನುಭವಗಳಷ್ಟೇ ಅಲ್ಲದೇ ಸೂಕ್ತ ಮಾರ್ಗದರ್ಶನವೂ ಸಿಗುತ್ತದೆ.

3.ನಿಮ್ಮ ಸಂಸ್ಥೆಯದೇ ಒಂದು ಬ್ಲಾಗ್ ಸಿದ್ಧಪಡಿಸಿಕೊಂಡು ಅದರಲ್ಲಿ ನಿಮ್ಮ ಸಂಸ್ಥೆಯ ಯೋಜನೆಯ ಬಗ್ಗೆ ಬರೆಯಲು ಪ್ರಾರಂಭಿಸಿ

ನೀವು ಆರಂಭಿಸುವ ಉದ್ಯಮ ಪ್ರತಿದಿನವೂ ನಿಮಗೆ ಹೊಸತನ್ನು ಕಲಿಸುತ್ತಿರುತ್ತದೆ. ನೀವು ಎದುರಿಸುವ ಸವಾಲುಗಳು, ಸಮಸ್ಯೆಗಳು, ತೆಗೆದುಕೊಳ್ಳುವ ನಿರ್ಧಾರ, ಪರಿಹಾರಾಲೋಚನೆಗಳು ಇತ್ಯಾದಿ ನೂರಾರು ಅನುಭವಗಳು ನಿಮಗೆ ಸಿಗುತ್ತದೆ. ಇವುಗಳನ್ನು ಹಂಚಿಕೊಳ್ಳಲು ನಿಮಗೆ ಬ್ಲಾಗ್ ನೆರವಾಗುತ್ತದೆ. ಬ್ಲಾಗ್‌ನಲ್ಲಿ ನಿಮ್ಮ ಉದ್ಯಮದ ಸವಾಲುಗಳು, ಯೋಜನೆಗಳು, ಪರಿಹಾರಗಳು ಹಾಗೂ ಅಂತಿಮವಾಗಿ ನೀವು ಗಳಿಸಿದ ಯಶಸ್ಸು ನಿಮ್ಮ ಬ್ಲಾಗ್‌ನಲ್ಲಿ ನಮೂದಾದರೆ ಅದರಿಂದ ನಿಮ್ಮ ಗ್ರಾಹಕರು ಸಂಸ್ಥೆ ನಡೆದುಬಂದ ಹೆಜ್ಜೆಗುರುತನ್ನು ಗುರುತಿಸಬಹುದಾಗಿದೆ.

ಬ್ಲಾಗ್ ನಿಜಕ್ಕೂ ಸರಳ, ಸುಲಭ ಹಾಗೂ ಉಚಿತ ವ್ಯವಸ್ಥೆ. ಬ್ಲಾಗ್‌ನಲ್ಲಿ ನೀವು ಮಾಡಬೇಕಿರುವುದು ಕೇವಲ ನಿಮ್ಮ ಅನುಭವಗಳನ್ನು ದಾಖಲಿಸುವುದು ಅಷ್ಟೇ. ಬ್ಲಾಗ್ ಬರೆಯುವವರು ಹಾಗೂ ಓದುವವರು ನಿಜಕ್ಕೂ ಪ್ರಾಮಾಣಿಕ ಅನುಭವಗಳನ್ನು ಬರೆಯುವವರು ಹಾಗೂ ಓದುವವರಾಗಿರುತ್ತಾರೆ. ಹಾಗಾಗಿ ನಿಮ್ಮ ಸಂಸ್ಥೆಯ ಸಂಪೂರ್ಣ ಪ್ರಗತಿಯನ್ನು ಅವರು ಓದಿ ಸ್ವಾಗತಿಸುತ್ತಾರೆ. ಇಲ್ಲಿಯೂ ನಿಮಗೆ ವಿಶ್ವಾಸಾರ್ಹ ಟಾರ್ಗೆಟ್ ಗ್ರಾಹಕರು ಸಿಗಬಹುದು.

ಬಹುತೇಕ ಉದ್ಯಮಿಗಳು ಆರಂಭಿಸುವ ಬ್ಲಾಗ್‌ ಬಹುಬೇಗನೇ ಮುಚ್ಚಿಬಿಡುತ್ತದೆ. ಏಕೆಂದರೆ ಆ ಉದ್ಯಮಿಗಳು ರಾತ್ರೋರಾತ್ರಿ ಈ ಬ್ಲಾಗ್‌ಗಳಿಂದ ಕ್ರಾಂತಿಯಾಗಬಹುದು ಎನ್ನುವ ಭ್ರಮಾತ್ಮಕ ನಿರೀಕ್ಷೆ ಹೊಂದಿರುತ್ತಾರೆ. ಆದರೆ ಬ್ಲಾಗ್ ಬರವಣಿಗೆಯ ಮೂಲಕ ನಿಮ್ಮ ಸಂಸ್ಥೆಯ ಉತ್ಪನ್ನ ಅಥವಾ ಸೇವೆ ಮಾರ್ಕೆಟಿಂಗ್ ಮಾಡುವುದರ ಫಲ ನಿಧಾನವಾಗಿ ಲಭಿಸುತ್ತದೆ. ಬ್ಲಾಗಿಂಗ್‌ಗನ್ನು ನಿಮ್ಮ ಪ್ರೊಫೆಶನ್ ಅಂತ ಪರಿಗಣಿಸದೇ ಕೇವಲ ನಿಮ್ಮ ಬಿಸಿನೆಸ್‌ನ ಭಾಗವಾಗಿ ಇಟ್ಟುಕೊಳ್ಳಿ. ಇದರಿಂದ ತಡವಾದರೂ ನಿಮಗೆ ಹೊಸ ಗ್ರಾಹಕರು ಲಭಿಸುತ್ತಾರೆ. ನಿಮ್ಮ ಬಿಸಿನೆಸ್ ಸಂಬಂಧಿ ಬ್ಲಾಗ್‌ ಅನ್ನು ಉಚಿತವಾಗಿ ನೊಂದಾಯಿಸಿಕೊಳ್ಳಬಹುದಾದ ವರ್ಲ್ಡ್ ಪ್ರೆಸ್.ಕಾಮ್‌ನಲ್ಲಿ ರಿಜಿಸ್ಟರ್ ಮಾಡಿ.

4.ಮೇಲ್ ಕ್ಯಾಂಪೇನ್ ಮೂಲಕ ಗ್ರಾಹಕರಿಗೆ ಫ್ರೀ ಈ ಮೇಲ್ ಮಾಡುವುದು

ಮೇಲ್‌ಚಿಂಪ್ ವ್ಯವಸ್ಥೆ ಉಚಿತವಾಗಿ ಸಾಮೂಹಿಕ ಮೇಲ್ ಕಳಿಸಲು ನೆರವಾಗುತ್ತದೆ. ಇಲ್ಲಿ ನೀವು ಒಂದು ಈಮೇಲ್ ಅಕೌಂಟ್ ಸೃಷ್ಟಿಸಿಕೊಂಡರೆ ಅದರಿಂದ ಸುಮಾರು 2000 ಚಂದಾದಾರರು ಅಥವಾ ಗ್ರಾಹಕರಿಗೆ ಸರಿಸುಮಾರು 12,000 ಈಮೇಲ್ ಕಳಿಸಬಹುದು. ಹೊಸದಾಗಿ ಆರಂಭಿಸುವ ಉದ್ಯಮಗಳಿಗೆ ಈ ಮೇಲ್‌ ಚಿಂಪ್ ಬಹು ಉಪಯೋಗಕಾರಿ. ಈ ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಂಡರೆ ನಿಮ್ಮ ನೂತನ ಸಂಸ್ಥೆಯ ಉತ್ಪನ್ನ ಅಥವಾ ಸೇವೆಯ ಮಾಹಿತಿಯನ್ನು ಈಮೇಲ್ ಕ್ಯಾಪೇನ್‌ಗಳ ಮೂಲಕ ಗ್ರಾಹಕರ ಮೇಲ್ ಅಕೌಂಟ್‌ಗೆ ತಲುಪಿಸಬಹುದು. ಮೇಲ್‌ಚಿಂಪ್‌ನಲ್ಲಿ ಕಳಿಸಿದ ಈಮೇಲ್‌ಗಳು ಸ್ಪ್ಯಾಮ್ ಫೋಲ್ಡರ್‌ಗೆ ತಲುಪದೇ ನೇರವಾಗಿ ಇನ್‌ಬಾಕ್ಸ್ ಸೇರಿಕೊಳ್ಳುತ್ತದೆ.

ಜೊತೆಗೆ ಮೇಲ್ ಚಿಂಪ್ ಮೂಲಕ ನೀವು ಕಳಿಸಿದ ಈಮೇಲ್‌ಗಳನ್ನು ಎಷ್ಟು ಗ್ರಾಹಕರು ತೆರೆದು ಓದಿದ್ದಾರೆ ಅನ್ನುವ ವಿಷಯವನ್ನೂ ನೀವು ತಿಳಿದುಕೊಳ್ಳಬಹುದು. ಹಾಗೂ ನಿಮ್ಮ ಸಂಸ್ಥೆಯ ಲಿಂಕ್ ಕ್ಲಿಕ್ ಮಾಡಿದವರೆಷ್ಟು?, ನಿಮ್ಮ ಚಂದಾದಾರಿಕೆಯ ಕೋರಿಕೆಯನ್ನು ಎಷ್ಟು ಜನ ತಿರಸ್ಕರಿಸಿದ್ದಾರೆ? ಎನ್ನುವುದೂ ಇದರಿಂದ ಗೊತ್ತಾಗುತ್ತದೆ. ನಿಮ್ಮ ಸಂಸ್ಥೆಯ ಮಾರ್ಕೆಟಿಂಗ್‌ಗೆ ಈ ಸೇವೆ ಅತ್ಯುತ್ತಮವಾದದ್ದು.

5.ಲಿಂಕ್ಡ್ ಇನ್ ನಂತಹ ವೆಬ್ ಪೇಜ್ ಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ

ಒಬ್ಬ ವೃತ್ತಿಪರ ಉದ್ಯಮಿಯಾಗಿ ನಿಮಗೆ ಲಿಂಕ್ಡ್ ಇನ್ ನಂತಹ ವೆಬ್ ಪೇಜ್ ಗಳ ಬಳಕೆ ಬಗ್ಗೆ ತಿಳಿದರಲೇಬೇಕು. ಲಿಂಕ್ಡ್ ಇನ್ ನಲ್ಲಿ ನಿಮ್ಮ ಸಂಪರ್ಕಕ್ಕೆ ಬಾರದ ಗ್ರಾಹಕರನ್ನು ನೀವು ನೇರವಾಗಿ ಭೇಟಿಯಾಗಲೇಬೇಕಾಗುತ್ತದೆ. ಲಿಂಕ್ಡ್ ಇನ್ ಆರಂಭಿಸಿದ ನಂತರ ನೀವು ನಿಮ್ಮ ಮಾಜಿ ಸಹೋದ್ಯೋಗಿಗಳು, ನಿಮ್ಮ ಉದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳು, ನಿಮ್ಮ ಸ್ನೇಹಿತರು, ಹಿತೈಷಿಗಳು, ಸಂಬಂಧಿಗಳು, ನಿಮ್ಮ ವಿಶ್ವಾಸಾರ್ಹ ಗ್ರಾಹಕರ ಪಟ್ಟಿಗೆ ಸೇರಿದ ವ್ಯಕ್ತಿಗಳನ್ನು ಅದರಲ್ಲಿ ಸೇರಿಸಿ.

ಲಿಂಕ್ಡ್ ಇನ್ ಮೂಲಕ ನಿಮ್ಮ ಗ್ರಾಹಕರು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ. ಇದರಲ್ಲಿ ನಿಮಗೆ ಪರಿಚಯವಿಲ್ಲದ ಮತ್ತಷ್ಟು ಹೊಸ ಗ್ರಾಹಕರು ಸಂಪರ್ಕಕ್ಕೆ ಬರುತ್ತಾರೆ ಹಾಗೂ ನಿಮ್ಮ ಸಂಸ್ಥೆಯ ಸಂಪರ್ಕ ವ್ಯವಸ್ಥೆ ದೃಢ ಹಾಗೂ ಬಲಾಢ್ಯಗೊಳ್ಳುತ್ತದೆ. ಜಗತ್ತಿನ ಸಣ್ಣ ಹಾಗೂ ದೊಡ್ಡ ಉದ್ಯಮಿಗಳು ಮತ್ತು ಬೃಹತ್ ಕಂಪನಿಗಳ ಸಿಇಓಗಳು ಸಹ ಲಿಂಕ್‌ದಿನ್ ಸೌಕರ್ಯ ಹೊಂದಿದ್ದಾರೆ.

ಲಿಂಕ್ಡ್ ಇನ್ ನಲ್ಲಿ ಅಂತಹ ಉದ್ಯಮಿಗಳು ಹಾಗೂ ಸಿಇಓಗಳಿಗೆ ವಿನಂತಿಪೂರ್ವಕವಾಗಿ ನಿಮ್ಮ ಸಂಸ್ಥೆಯ ಉತ್ಪನ್ನ ಅಥವಾ ಸೇವೆ ಕುರಿತಾದ ಮಾಹಿತಿ ನೀಡಿ ಫೀಡ್‌ಬ್ಯಾಕ್ ಕೊಡುವಂತೆ ಪ್ರಾರ್ಥಿಸಿ. ಇದರಿಂದ ಒಂದು ಕಡೆ ನಿಮ್ಮ ಸಂಸ್ಥೆ ಮಾರ್ಕೆಟಿಂಗ್ ಆದರೆ ಇನ್ನೊಂದು ಕಡೆ ನಿಮಗೆ ಮತ್ತಷ್ಟು ಹೊಸ ಗ್ರಾಹಕರನ್ನು ಸೃಷ್ಟಿಸಿಕೊಳ್ಳಬಹುದಾದ ಲಭಿಸುತ್ತದೆ.

6.ಟ್ವಿಟರ್ ಅನ್ನು ನಿಮ್ಮ ಆತ್ಮೀಯ ಸ್ನೇಹಿತನನ್ನಾಗಿಸಿಕೊಳ್ಳಿ

ಈ ಸೂಚನೆಯನ್ನು ಕೊಡುವವರಲ್ಲಿ ನಾವು ಮೊದಲಿಗರಲ್ಲ. ಆದರೆ ಈ ಸಲಹೆಯ ಪರಿಣಾಮ ಚೆನ್ನಾಗಿ ಅರಿತುಕೊಂಡಿದ್ದೇವೆ. ಕೇವಲ 140 ಪದಗಳಲ್ಲಿ ನಿಮ್ಮ ಸಂಸ್ಥೆಯ ಯೋಜನೆಯನ್ನು ವಿವರಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ಬಹುತೇಕ ಗ್ರಾಹಕರು ಟ್ವಿಟರ್‌ನಲ್ಲಿ ಹಾಜರಿರುತ್ತಾರೆ. ಹಾಗಾಗಿ ನಿಮ್ಮ ಗ್ರಾಹಕರ ಗಮನ ಸೆಳೆಯಲು ನೀವು ಸದಾ ಟ್ವಿಟರ್‌ನಲ್ಲಿ ಕ್ರಿಯಾಶೀಲರಾಗಿರಬೇಕಾಗುತ್ತದೆ. ನಿಮ್ಮ ಟ್ವಿಟರ್ ಅಕೌಂಟ್ ಇಲ್ಲದಿದ್ದರೆ ಕೂಡಲೇ ಉಚಿತ ಸೇವೆಯಾದ ಟ್ವಿಟರ್ ಖಾತೆ ತೆರೆಯಿರಿ. ಈ ಟ್ವಿಟರ್‌ನಲ್ಲಿ ಆಕರ್ಷಕ ಟ್ಯಾಗ್‌ಲೈನ್‌ಗಳನ್ನು ಬಳಸಿ ನಿಮ್ಮ ಉತ್ಪನ್ನ ಅಥವಾ ಸೇವೆಯ ಜಾಹೀರಾತು ಮಾಡಿ. ಹೀಗೆ ಟ್ವಿಟರ್‌ನಲ್ಲಿ ನೀವು ಬರೆಯುವ ಸಾಲುಗಳು ನಿಮಗೆ ಹೊಸ ಜಗತ್ತು, ಹೊಸ ಜನಗಳು ಹಾಗೂ ಹೊಸ ಗ್ರಾಹಕರನ್ನು ಪರಿಚಯಿಕೊಡಬಹುದು ಇದರಿಂದ ನಿಮ್ಮ ಸಂಸ್ಥೆಯ ಜಾಲ ಹರಡುತ್ತದೆ.

ನಿಮ್ಮ ಸಂಸ್ಥೆಯ ಉತ್ಪನ್ನ ಅಥವಾ ಸೇವೆಗೆ ಸಂಬಂಧಿಸಿದ ಪ್ರತಿಕ್ರಿಯೆ, ಫೀಡ್‌ಬ್ಯಾಕ್, ಗುಣಾವಗುಣಗಳು, ಸಲಹೆ ಸೂಚನೆಗಳನ್ನು ಟ್ವಿಟರ್‌ನಲ್ಲಿ ಸ್ವಾಗತಿಸಿ ಮುಕ್ತವಾಗಿ ಪ್ರತಿಕ್ರಿಯಿಸಿ. ಇದರಿಂದ ಟ್ವಿಟರ್‌ನಲ್ಲಿ ನಿಮ್ಮನ್ನು ಫಾಲೋ ಮಾಡುವ ನಿಮ್ಮ ಗ್ರಾಹಕರಿಗೆ ಸಂಸ್ಥೆಯ ಕುರಿತು ವಿಶ್ವಾಸ ಮೂಡುತ್ತದೆ.

7.ಎಸ್ಈಓನ ಉಚಿತ ಟೂಲ್ಸ್ ನ್ನು ಸಂಶೋಧನಾ ವರದಿಗಳನ್ನು ಅಭ್ಯಾಸಮಾಡಿ

ಕೊನೆಯದಾಗಿ ಈ ಕ್ಷೇತ್ರವನ್ನು ಬಹುತೇಕ ಉದ್ಯಮಿಗಳು ಪರಿಚಯಿಸಿಕೊಂಡಿಲ್ಲ. ಅವರು ಆನ್‌ಲೈನ್‌ನಲ್ಲಿ ತಮ್ಮ ವೆಬ್‌ಸೈಟ್‌ಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸುವುದು ಹಾಗೂ ಗ್ರಾಹಕರ ಗಮನ ಸೆಳೆಯುವುದು ತಿಳಿದಿಲ್ಲ.

ಒಂದು ವೇಳೆ ನೀವು ವೆಬ್‌ಸೈಟ್‌ ಅನ್ನು ಕಾಲಾನುಕ್ರಮವಾಗಿ ಬಳಸದೇ ಇದ್ದರೆ ಅಥವಾ ಅಪ್‌ಡೇಟ್ ಮಾಡದಿದ್ದರೆ ಆನ್‌ಲೈನ್‌ನಲ್ಲಿ ನಿಮ್ಮ ಸಂಸ್ಥೆಯ ಜಾಹೀರಾತಿನ ಪ್ರಮಾಣ ಕುಂಠಿತಗೊಳ್ಳುತ್ತದೆ. ಜೊತೆಗೆ ನಿಮ್ಮ ಸೇಲ್ಸ್ ಹಾಗೂ ಮಾರ್ಕೆಟಿಂಗ್‌ಗೂ ಹಿನ್ನಡೆಯಾಗುತ್ತದೆ. ಉತ್ತಮ ವಿನ್ಯಾಸ, ಬಳಕೆದಾರರ ಅನುಭವ ಹಾಗೂ ಒಂದು ಸ್ಪಷ್ಟ ನಿರ್ಧಾರ ಜಾರಿ ಮಾಡುವುದು ಇತ್ಯಾದಿ ಕ್ರಮಗಳಿಂದ ಮಾತ್ರ ಇದರಲ್ಲಿ ಯಶಸ್ಸು ಲಭಿಸುತ್ತದೆ. ಆನ್‌ಲೈನ್‌ನಲ್ಲಿ ಸಮರ್ಥವಾಗಿ ಮುಂದುವರೆಯಲು ಅಥವಾ ನಿಲ್ಲಿಸಲು ಕೂಡಲೇ ಸರಿಯಾದ ನಿರ್ಧಾರ ತೆಗೆದುಕೊಳ್ಳಿ.

ಇಲ್ಲಿ ಕೆಲವು ಮುಖ್ಯವಾದ ಟೂಲ್‌ಗಳು ಹಾಗೂ ಉಚಿತ ಸೆಟ್‌ಅಪ್‌ಗಳಿವೆ. ಇವುಗಳನ್ನೇ ನಿಖರವಾಗಿ ನಿಮ್ಮ ಗ್ರಾಹಕರು ಹುಡುಕುತ್ತಿದ್ದಾರೆ. ಒಂದು ವೇಳೆ ನೀವು ಇದನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡಲ್ಲಿ ನಿಮ್ಮ ಭವಿಷ್ಯದ ಸ್ಟ್ರಾಟೆಜಿ ಉತ್ತಮವಾಗಿರುವುದರಲ್ಲಿ ಸಂಶಯವಿಲ್ಲ. ಅವುಗಳಲ್ಲಿ ಕೆಲವು ಟೂಲ್‌ಗಳು ಇಲ್ಲಿವೆ.

1. ಗೂಗಲ್ ಸರ್ಚ್ ಕನ್ಸೋಲ್ - ( ಮುಂಚೆ ಇದನ್ನು ಗೂಗಲ್ ವೆಬ್ ಮಾಸ್ಟರ್ ಟೂಲ್ ಎನ್ನುತ್ತಿದ್ದರು) ಒಂದು ಖಾತೆ ತೆರೆಯಿರಿ. ನೀವು ಏನನ್ನು ಹುಡುಕುತ್ತಿದ್ದೀರೋ ಆ ಅಂಶವನ್ನು ನಿಮ್ಮ ವೆಬ್‌ಸೈಟ್ ಹಾಗೂ ಎಕ್ಸ್ ಪ್ಲೋರ್‌ನಲ್ಲಿ ವೆರಿಫೈ ಮಾಡುತ್ತಿರಿ.

2. ಗೂಗಲ್ ಅನಾಲಿಟಿಕ್ಸ್ -ನಿಮ್ಮ ಅಕೌಂಟ್ ಸೆಟಪ್ ಮಾಡಿಕೊಳ್ಳಿ. ಮತ್ತು ನಿಮ್ಮ ವೆಬ್‌ಸೈಟ್‌ನ ಮೂಲಗಳು, ಉಪಕರಣ, ಬ್ರೌಸರ್, ನಿಮ್ಮ ವೆಬ್‌ಸೈಟ್ ಎಲ್ಲಿಂದ ತೆರೆದಿದೆ ಎನ್ನುವುದು, ನಿಮ್ಮ ವೆಬ್‌ಸೈಟ್ ವೀಕ್ಷಿಸುವ ಗ್ರಾಹಕರ ಲೊಕೇಶನ್ ಇದರಿಂದ ಪತ್ತೆಯಾಗುತ್ತದೆ.

3. ಗೂಗಲ್ ಕೀವರ್ಡ್ ಪ್ಲಾನರ್- ಗೂಗಲ್ ಆಡ್ ವರ್ಡ್ಸ್‌ ಅಥವಾ ಜಾಹೀರಾತು ಫಲಕಗಳಿಗೆ ಮಾತ್ರ ಇದು ಹೆಚ್ಚಿನದಾಗಿ ಬಳಕೆಯಾಗುತ್ತದೆ. ಆದರೆ ಇದನ್ನು ನಿಮ್ಮ ಎಸ್‌ಇಓಗೂ ಬಳಸಿಕೊಳ್ಳಬಹುದಾಗಿದೆ. ಸಮರ್ಥವಾದ ಕೀವರ್ಡ್‌ಗಳನ್ನು ಬಳಸಿ ನಿಮ್ಮ ಯೋಜನೆಯ ನೀತಿಯನ್ನು ಸದೃಢಗೊಳಿಸಿ.

4. ವೂRank- ಉಚಿತ ಅಪ್ಲಿಕೇಶನ್ ಆಗಿದ್ದು ನೀವು ನಿಮ್ಮ ವೆಬ್‌ಸೈಟ್‌ನ ಎಸ್‌ಇಓ ಗಳಿಕೆಯನ್ನು ಹಾಗೂ ಸಲಹೆ ಸೂಚನೆಗಳನ್ನು ಇದರಲ್ಲಿ ಅಧ್ಯಯನ ಮಾಡಬಹುದು ಹಾಗೂ ಅಭಿವೃದ್ಧಿಪಡಿಸಬಹುದು.

ಹೊಸ ಉದ್ಯಮ ಆರಂಭಿಸುವ ಪ್ರತಿಯೊಬ್ಬರಿಗೂ ಈ ಸೂಚನೆಗಳು ಸರಳ ಹಾಗೂ ಅಳವಡಿಸಿಕೊಳ್ಳಬಹುದಾದದ್ದು. ನೀವು ಇದನ್ನು ಬಳಸುವ ಮೂಲಕ ಯಾವುದೇ ಖರ್ಚಿಲ್ಲದೇ ಹೊಸ ಹೊಸ ಪ್ರಯೋಗಗಳನ್ನು ಮಾಡಬಹುದು. ನಿಮ್ಮ ಜ್ಞಾನಕ್ಕೆ ಸವಾಲು ಹಾಕಿ ಕ್ರಿಯಾತ್ಮಕವಾದ ಜಾಹೀರಾತುಗಳನ್ನು ನೀವೇ ಸೃಷ್ಟಿಸಿಕೊಳ್ಳಬಹುದು.

ಸಣ್ಣ ಉದ್ಯಮವೊಂದರ ಮಾಲೀಕರಾಗಿ ನಿಮ್ಮ ಬಿಸಿನೆಸ್ ಅನ್ನು ನಿಮ್ಮದೇ ವ್ಯಾಪ್ತಿಯಲ್ಲಿ ಮಾರುಕಟ್ಟೆಗೆ ತರಲು ಈ ಎಲ್ಲಾ ಸೂಚನೆಗಳು ಹಾಗೂ ಪರಿಣಾಮಕಾರಿ ಅಂಶಗಳು ಮಹತ್ವದ್ದು. ಇದನ್ನು ಸಮರ್ಪಕವಾಗಿ ನೀವು ಕಲಿತದ್ದಾದರೆ ಈ ಅಂಕಣ ನಿಮ್ಮ ಹೊಸ ಉದ್ಯಮಕ್ಕೆ ನೆರವಾಗುತ್ತದೆ ಎನ್ನುವುದು ನಮ್ಮ ಆಶಯ.

  • +0
Share on
close
  • +0
Share on
close
Share on
close
Report an issue
Authors

Related Tags

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India