Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ನನ್ನ ಸ್ಟಾರ್ಟ್‍ಅಪ್ ಸೋತರೂ ನಾನ್ಯಾಕೆ ಸೋಲಲಿಲ್ಲ..?

ಆರ್​​.ಪಿ

ನನ್ನ ಸ್ಟಾರ್ಟ್‍ಅಪ್ ಸೋತರೂ ನಾನ್ಯಾಕೆ ಸೋಲಲಿಲ್ಲ..?

Tuesday October 27, 2015 , 4 min Read

ಐಐಟಿ ಬಾಂಬೆಯವರಾದ ನಾವು, ಪ್ರಾರಂಭಮಾಡಿದ ಹೊಸ ವ್ಯಾಪಾರವನ್ನು ಸಾಂಪ್ರದಾಯಿಕ ಅಥವಾ ಸ್ಟಾರ್ಟ್‍ಅಪ್ ..ಏನೆಂದು ಕರೆಯಬೇಕು ಅನ್ನೋದು ಗೊತ್ತಾಗುತ್ತಿಲ್ಲ. ಅದನ್ನು ಅಳೆಯುವಲ್ಲಿ ವಿಫಲವಾದೆವು. ನಾವು ಲಾಭವನ್ನು ಕಾಣುತ್ತಿದ್ದೆವು. ಹಾಗೆಯೇ ಸಾಕಷ್ಟು ಅನುಭವವನ್ನೂ ಸಂಪಾದಿಸಿದೆವು. ಹಾಗಿದ್ದೂ ಆರಂಭಮಾಡಿದ 8 ತಿಂಗಳಲ್ಲಿ ವ್ಯಾಪಾರವನ್ನು ಮುಚ್ಚಬೇಕಾಯಿತು.

ವಾಲ್ನಟ್: ಡಿಸೆಂಬರ್ 2013 ರಿಂದ ಜುಲೈ 2014- ಯೋಜನೆ: ವಿಜ್ಞಾನ ಮತ್ತು ತಂತ್ರಜ್ಞಾನದ ಬೋಧನೆಯಲ್ಲಿ ನಾವು ಮಾಡಿದ ಪ್ರಾಜೆಕ್ಟ್ ಮತ್ತು ಸಣ್ಣ ಪ್ರಮಾಣದ ಕೋರ್ಸ್‍ಗಳ ಮೂಲಕ ಮೋಜಿನಿಂದ ಕಲಿಸುವುದು ನಮ್ಮ ಯೋಜನೆಯಾಗಿತ್ತು. ಬೇರೆ ಬೇರೆ ಉದ್ಯಮಗಳನ್ನು ಶುರುಮಾಡೋ ನನ್ನ ಸಾಹಸಕ್ಕೆ ಮತ್ತು ನನ್ನ ಜೀವನ ಶೈಲಿಗೆ ಒಗ್ಗುವಂತಹ ಕಡಿಮೆ ಶ್ರಮದಲ್ಲಿ ಸ್ವಯಚಾಲಿತವಾಗಿ ನಡೆಯುವಂತಹ ವ್ಯಾಪಾರವನ್ನು ಬೆಳೆಸುವುದು ನನ್ನ ಉದ್ದೇಶವಾಗಿತ್ತು.

image


ಪ್ರಮಾದ 1: 100% ಬದ್ಧರಾಗಿಲ್ಲದಿದ್ದರೆ ವ್ಯಾಪಾರವನ್ನು ಶುರುಮಾಡಬೇಡಿ. ಅದು ಕಾರ್ಯಗತವಾಗುವುದಿಲ್ಲ. ವ್ಯಾಪಾರ ಬೆಳೆಸೋದಕ್ಕೆ ಸಮಯ, ಪರಿಶ್ರಮ ಮತ್ತು ಉತ್ಸಾಹ ಬೇಕು. ನೀವು ಉದ್ಯಮಿಗಳಾಗೋ ದಾರಿಯಲ್ಲಿದ್ದರೆ ನಿಮ್ಮ ಸರ್ವಸ್ವವನ್ನೂ ಅದಕ್ಕೆ ಧಾರೆ ಎರೆಯಲು ಸಿದ್ಧರಾಗಿರಿ.

ಡಿಸೆಂಬರ್ 2013- ಆರಂಭ: ನಾನು ಆಗ ಮೂರನೇ ವರ್ಷದ ಪದವಿಯಲ್ಲಿದ್ದೆ. ಆಗಲೇ ನನ್ನ ಕಾಲೇಜು ಐಐಟಿಯಲ್ಲಿ ನಡೆಯುತ್ತಿದ್ದ ವ್ಯಾಪಾರ ಯೋಜನೆ ಸ್ಫರ್ಧೆ ‘ಯುರೇಕಾ’ದ ಉಪಾಂತ್ಯವನ್ನು ಪ್ರವೇಶಿಸಿದ್ದೆ. ಆ ಸ್ಪರ್ಧೆಯಲ್ಲಿ ನಮ್ಮನ್ನು ಹೂಡಿಕೆದಾರರಿಗೆ ಮತ್ತು ಮಾರ್ಗದರ್ಶಕರಿಗೆ ಪರಿಚಯ ಮಾಡಿಸಿಕೊಡಲಾಯಿತು. ನನ್ನ ಉದ್ಯಮ ಯೋಜನೆಗೆ ಸ್ಥಳದಲ್ಲಿಯೇ ಸುಮಾರು 20ಲಕ್ಷವನ್ನು ಮೂಲಧನವಾಗಿ ಹೂಡುವುದಕ್ಕೆ ವ್ಯಕ್ತಿಯೊಬ್ಬರು ಸಿದ್ಧವಾದರು. ಹೆಚ್ಚಿನ ತಂತ್ರಜ್ಞಾನ ಮುಖಿ ಮತ್ತು ತಂತ್ರಾಂಶ ಅಭಿವೃದ್ಧಿ ವಿಚಾರದಲ್ಲಿ ಅವರದ್ದು ಕೆಲವೊಂದು ಷರತ್ತುಗಳಿದ್ದವು. ಅದಕ್ಕೆ ನನ್ನ ಒಪ್ಪಿಗೆ ಇರಲಿಲ್ಲ. ಅದೇ ಸಮಯದಲ್ಲಿ ಆಗಷ್ಟೇ ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದಿದ್ದ ಮಾಧ್ಯಮದ ವಲಯದಲ್ಲಿ ಉನ್ನತ ಸ್ಥಾನದಲ್ಲಿದ್ದ ಮಹಿಳೆ ನನ್ನ ಪ್ರಾಜೆಕ್ಟ್​​ಗೆ ಮೂಲಧನವನ್ನು ಕೊಟ್ಟು ಪಾಲುದಾರರಾಗಲು ಒಲವನ್ನು ಸೂಚಿಸಿದ್ದರು.

ಪ್ರಮಾದ 2: ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡದೇ, ಆಫ್‍ಲೈನ್ ಪರಿಹಾರಕ್ಕೆ ಒತ್ತು ಕೊಟ್ಟಿದ್ದು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ತಂತ್ರಜ್ಞಾನವನ್ನು ಬಳಸಬೇಕು. ಉಳಿದ ಸಮಯದಲ್ಲಿ ಮಾತ್ರ ಆಫ್‍ಲೈನ್ ಪರಿಹಾರ ಒದಗಿಸಬೇಕು. ಆಗ ಪರಿಹಾರ ಹೆಚ್ಚು ಮೌಲ್ಯಯುತವಾಗಿರುತ್ತೆ ಮತ್ತು ಕಲಿಕೆ ತೀವ್ರವಾಗಿರುತ್ತದೆ.

ಹೂಡಿಕೆ ಇಲ್ಲದೇ ತಳಮಟ್ಟದಿಂದ ಉದ್ಯಮ ಶುರುಮಾಡಿದ ಭಾರತೀಯರಲ್ಲಿ ಧೀರೂಬಾಯ್ ಅಂಬಾನಿ ನಮಗೆ ಮಾದರಿಯಾಗಿದ್ದಾರೆ, ಓಲಾ ಕ್ಯಾಬ್ಸ್​​ನ ಭವೀಶ್, ಹೌಸಿಂಗ್.ಕಾಮ್‍ನ ರಾಹುಲ್ ದೇವ್ ಇನ್ನೂ ಹೆಚ್ಚಿನದ್ದನ್ನು ಸಾಧಿಸಬೇಕಿದೆ. ಹಾಗೆ ನೋಡಿದರೆ ಫ್ಲಿಪ್‍ಕಾರ್ಟ್ ಸಹ ಅಷ್ಟೇನೂ ದೊಡ್ಡದಲ್ಲ.

ಪ್ರಮಾದ 3: ವ್ಯಾಪಾರವನ್ನು ಮೌಲ್ಯಮಾಡುವ ಮಾರ್ಗದರ್ಶಕ, ಸಲಹೆಗಾರ, ಹೂಡಿಕೆದಾರ ಇಲ್ಲದಿರೋದು. ಸಾಂಪ್ರದಾಯಿಕ ಗುಜ್ಜು-ಮಾರ್ವಾಡಿ ಶಿಕ್ಷಣದಂತೆ ನಾನು ನಿಧಿ ಸಂಗ್ರಹದ ವಿರೋಧಿಯಾಗಿದ್ದೆ. ನೀವು ದೈನಂದಿನ ಜೀವನದಲ್ಲಿ ಮುಳುಗಿಹೋಗಿದ್ದರೆ ಉದ್ಯಮವನ್ನು ನಡೆಸೋದು ಕಷ್ಟವಾಗುತ್ತದೆ ಅಲ್ಲದೇ ವ್ಯಾಪಾರದ ಹಾದಿಯನ್ನು ನೀವು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಒಬ್ಬರು ಮಾರ್ಗದರ್ಶಕರನ್ನು ಹೊಂದುವುದು ಒಳ್ಳೆಯದು.

ಪ್ರಮಾದ 4: ಗುರಿ ಮತ್ತು ಮೌಲ್ಯವಿಲ್ಲದೇ ಲಾಭದ ಹಿಂದೆ ಹೋಗೋದು. ವ್ಯಾಪಾರದ ಅಡಿಪಾಯದಲ್ಲಿ ಸಮಯ, ಹಣ ಮತ್ತು ಪರಿಶ್ರಮವನ್ನು ಹಾಕದೇ ನಾವು ಮೊದಲ ದಿನದಿಂದಲೇ ಲಾಭದತ್ತ ಮುಖ ಮಾಡ್ತೀವಿ. ಇದನ್ನು ಯುವ ಉದ್ಯಮಿಗಳು ಗಮನಿಸಬೇಕು. ಅರೆಕಾಲಿಕ ಮತ್ತು ಸ್ವತಂತ್ರ ಕೆಲಸ ಮಾಡೋದು ವ್ಯಾಪಾರ ಮಾಡೋದಕ್ಕಿಂತ ಭಿನ್ನ.

ಜನವರಿ 2014: ನಮ್ಮ ವ್ಯಾಪಾರವನ್ನು ನೊಂದಾಯಿಸಿಕೊಳ್ಳೋ ಹಂತದಲ್ಲಿದ್ದೆವು. ಆಗ ಹೊಸ ಸಮಸ್ಯೆಗಳು ಪ್ರಾರಂಭವಾದವು. ನಾವು ವಿಭಿನ್ನ ಕಾರ್ಯ ನೀತಿ ಮತ್ತು ಗುರಿಯನ್ನು ಹೊಂದಿದ್ದೆವು. ವ್ಯಾಪಾರದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ನಾವು ಕಂಡುಕೊಂಡ ಮಾರ್ಗವೂ ಬೇರೆಯದ್ದೇ ಆಗಿತ್ತು.

ಪ್ರಮಾದ 5: ಜವಾಬ್ದಾರಿ ಹಂಚಿಕೆ ಮತ್ತು ಅದರ ವ್ಯಾಖ್ಯಾನ ಇಲ್ಲದಿದ್ದುದು. ಸಹ ಸಂಸ್ಥಾಪಕರು ಕಡ್ಡಾಯವಾಗಿ ಪೂರಕ ಕೌಶಲ್ಯ ಹೊಂದಿರಬೇಕು ಮತ್ತು ಅವರಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಬೇಕು.

ಪ್ರಮಾದ 6: ನಮ್ಮಲ್ಲಿ ನಮಗೇ ನಂಬಿಕೆ ಇಲ್ಲದಿದ್ದಾಗ. ಅನುಭವ ಮಾತ್ರ ಮುಖ್ಯ ಎಂದು ತಿಳಿದಿದ್ದೆ. ಆದ್ರೆ ಜೀವನ ಮತ್ತು ವ್ಯಾಪಾರದಲ್ಲಿ ಬೇಕಿರೋದು ತಾರ್ಕಿಕ ನಿರ್ಧಾರ ತೆಗೆದುಕೊಳ್ಳೋದು, ಅಪಾಯವನ್ನು ಕಡಿಮೆ ಮಾಡಿಕೊಳ್ಳುವುದು ಮತ್ತು ಪರಿಣಾಮಗಳನ್ನು ಎದುರಿಸುವುದೂ ಮುಖ್ಯ ಎಂದು ನಂತ್ರ ತಿಳಿಯಿತು.

ಫೆಬ್ರವರಿ 2014: ಉದ್ಯಮದಲ್ಲಿ ಎಷ್ಟು ಸಾಧ್ಯವೋ ಅಷ್ಟು ಈಕ್ವಿಟಿ ಹೊಂದಬೇಕಿತ್ತು. ಕೆಲಸಗಾರರಿಗೆ ಷೇರು ಹೊಂದಲು ಅವಕಾಶ ಕೊಡೋದು ಬೇಡ ಅನ್ನೋದ್ರಲ್ಲಿ ಆರಂಭಿಕ ಒಡಕು ಶುರುವಾಯಿತು. ವ್ಯಾಪಾರ ಹೆಚ್ಚುತ್ತಿದ್ದಂತೆ ಕೆಲಸಗಾರರ ಅವಶ್ಯಕತೆ ಇತ್ತು. ಸ್ವತಂತ್ರವಾಗಿ ಕೆಲಸ ಮಾಡೋರನ್ನು ತೆಗೆದುಕೊಳ್ಳೋದು ಇಲ್ಲವೇ ಪಾಲುದಾರಿಕೆ ಕೊಟ್ಟು ತಂಡವನ್ನು ಕಟ್ಟೋದು ನಮ್ಮ ಮುಂದಿದ್ದ ಆಯ್ಕೆಗಳಾಗಿತ್ತು.

ಪ್ರಮಾದ 7: ತಂಡವನ್ನು ಕಟ್ಟೋದರ ಬದಲು ಸ್ವತಂತ್ರ ಕೆಲಸಗಾರರನ್ನು ತೆಗೆದುಕೊಂದ್ದು. ಬಹುಷಃ ಇದು ನಾವು ಮಾಡಿದ ಅತಿ ದೊಡ್ಡ ಪ್ರಮಾದ. ನಮ್ಮ ವ್ಯಾಪಾರದ ಮೌಲ್ಯ ತಿಳಿಯಲು ಸಹಾಯವಾಗುವ ನಮ್ಮದೇ ಒಂದು ತಂಡವನ್ನ ಕಟ್ಟೋದರ ಬದಲು ಸುಲಭವಾಗಿ ಕಾರ್ಯಸಾಧಿಸಲು ಸ್ವತಂತ್ರ ಕೆಲಸಗಾರರನ್ನ ಗೊತ್ತುಮಾಡಿಕೊಂಡ್ವಿ.

“ಸ್ವಲ್ಪ ಹೆಚ್ಚಿನದ್ದನ್ನು ಪಡೆಯಲು ಹೆಚ್ಚಿನ , ಒಳ್ಳೆಯ ಕೆಲಸವನ್ನು ಕಳೆದುಕೊಳ್ಳಬೇಕು”- ಎಡ್ವರ್ಡ್ ಎಚ್.ಹಾರಿಮನ್

ಏಪ್ರಿಲ್ 2014- ಆರಂಭದ ಮುಕ್ತಾಯ: ಬಹಳಷ್ಟು ಕೆಲಸಗಳ ನಂತ್ರ ಮತ್ತು ತರಗತಿಗಳನ್ನು ಕಳೆದುಕೊಂಡ ಮೇಲೆ ನಮ್ಮ ಉತ್ಪನ್ನ ಮಾರಾಟಕ್ಕೆ ಸಿದ್ಧವಾಗಿತ್ತು. ನನ್ನ ಕೊನೆ ಸೆಮಿಸ್ಟರ್ ಪರೀಕ್ಷೆಗಳಿತ್ತು. ಅದೇ ಸಮಯದಲ್ಲಿ ಮಾರಾಟ ಸಂಬಂಧಿ ಸಭೆಯಲ್ಲೂ ಭಾಗಿಯಾಗಬೇಕಿತ್ತು. ಇದರಿಂದ ಸಮಸ್ಯೆ ಮತ್ತೆ ಶುರುವಾಯ್ತು.

ಮೊದಲ 100 ಗ್ರಾಹಕರು ಸುಲಭವಾಗಿ ಸಿಗುತ್ತಾರೆ ಅನ್ನೋ ನಂಬಿಕೆಯಲ್ಲಿದ್ದೆ. ಆದ್ದರಿಂದ ಬ್ರಯಾನ್ ಟ್ರೇಸಿ ಅವರ 24 ಸೇಲ್ಸ್ ಕ್ಲೋಸಿಂಗ್ ಟೆಕ್ನಿಕ್ ನೋಡಿ ಮಾರಾಟ ಶುರುಮಾಡಿದೆ. ದಿನಕ್ಕೆ ಮೂರು ಗಂಟೆ ಪ್ರಯಾಣ ಮಾಡಿ ನಿಗದಿತ ಗ್ರಾಹಕರಿಗೆ ನಮ್ಮ ಕಲ್ಪನೆಯನ್ನು ಮಾರಾಟ ಮಾಡುತ್ತಿದ್ದೆ. ನಾವು 10ಲಕ್ಷಕ್ಕೂ ಹೆಚ್ಚು ಮೌಲ್ಯದ ಶಿಕ್ಷಣ ಸಾಧನವನ್ನು ಮೊದಲ ತಿಂಗಳಲ್ಲಿ ಮಾರಾಟ ಮಾಡಿದ್ವಿ. ನಮ್ಮ ವಹಿವಾಟನ್ನು ವಿಸ್ತರಿಸಲು ಈಗ ನಮಗೆ ಹಣ ಬೇಕಿತ್ತು.

ಪ್ರಮಾದ 8: ಕಾನೂನಾತ್ಮಕ ಒಪ್ಪಂದ ಮಾಡಿಕೊಂಡು ಜನರನ್ನು ನಂಬಿ

ಜೂನ್ 2014- ಜೂನ್ ತಿಂಗಳಲ್ಲಿ ವ್ಯಾಪಾರ ಚೆನ್ನಾಗಿ ಆಗಿತ್ತು. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿಕೊಂಡಿದ್ದರು. ಅಲ್ಲದೇ ನಮ್ಮ ಮೊದಲ ಕೇಂದ್ರ ಚಿಕ್ಕದಾಗಿ ಕಾಣಿಸುತ್ತಿತ್ತು. ನಮ್ಮ ಎರಡನೇ ಕೇಂದ್ರವನ್ನು ಹತ್ತಿರದಲ್ಲೇ ಶುರುಮಾಡಿ ಐವರನ್ನು ಕೆಲಸಕ್ಕೆ ತೆಗೆದುಕೊಂಡ್ವಿ.

ಜುಲೈ 2014- ಅಂತ್ಯದ ಆರಂಭ: ಸಹ ಸಂಸ್ಥಾಪಕರಲ್ಲಿನ ಭಿನ್ನಾಭಿಪ್ರಾಯ ಒಟ್ಟಿಗೆ ಕೆಲಸ ಮಾಡದಷ್ಟು ಬೆಳೆದಿತ್ತು. ಇದನ್ನು ಮುಕ್ತಾಯ ಮಾಡೋ ನಿರ್ಧಾರಕ್ಕೆ ಬಂದೆವು. ಮತ್ತೊಬ್ಬರ ಪಾಲುದಾರಿಕೆಯನ್ನು ಕೊಳ್ಳಲು ಯಾರೊಬ್ಬರೂ ಶಕ್ತರಾಗಿರಲಿಲ್ಲದ ಕಾರಣ ನಾವು ಪ್ಯಾಪಾರವನ್ನು ಮೂರನೇ ವ್ಯಕ್ತಿಗೆ ಅರ್ಧ ನಗದು ಉಳಿದರ್ಧ ರಾಯಧನದ ಒಪ್ಪಂದದೊಂದಿಗೆ ಮಾರಾಟ ಮಾಡಿದೆವು. ಅಲ್ಲಿಗೆ ವಾಲ್ನಟ್ ಜನವರಿ 2015ಕ್ಕೆ ಮುಚ್ಚಿತು.

ಯಾರೊಂದಿಗಾದ್ರೂ ವ್ಯಾಪಾರ ಮಾಡುವುದು ಮದುವೆ ಮಾಡಿಕೊಂಡಂತೆ. ಪಾಲುದಾರರ ಆಯ್ಕೆಯಲ್ಲಿ ಎಚ್ಚರಿಕೆಯಿಂದಿರಬೇಕು ಮತ್ತು ಸುಖ-ಕಷ್ಟದ ಸಮಯದಲ್ಲಿ ಅವರೊಂದಿಗೇ ಇರಬೇಕು.

ಅಂದಿನಿಂದ:

ನನ್ನ ಮೊದಲ ವ್ಯಾಪಾರ ಅನುಭವದಲ್ಲಿ ನಾನು ಸೋತರೂ ಅದರಿಂದ ಯಾವುದೇ ಕಾಲೇಜು ಶಿಕ್ಷಣ ಕಲಿಸದ್ದನ್ನು ನಾನು ಕಲಿತುಕೊಂಡೆ. ಅದರ ಕೆಲ ಪಾಠಗಳು-

ಪ್ರಾರಂಭ: ಏನನ್ನು ಮಾಡಬೇಕು ಅಂದುಕೊಂಡಿರುತ್ತೀರೋ ಅದನ್ನು ಪ್ರಾರಂಭಿಸಿ. ನೀವಿದ್ದ ಕಡೆಗೇ ವಿಷಯಗಳು ಬೀಳಲು ಶುರುವಾಗುತ್ತವೆ. “ಬಾಗಿಲಿನ ಹೊರಗೆ ಉಳಿದವನಿಗೆ ತನ್ನ ಮುಂದಿನ ಪ್ರಯಾಣ ಕಠಿಣವಾಗಿರುತ್ತದೆ” - ಡಚ್ ಗಾದೆ.

ಗುರಿಯನ್ನು ಇಟ್ಟುಕೊಳ್ಳಿ: ಹಣಕ್ಕಾಗಿ ಅಥವಾ ಕಡಿಮೆ ಸಮಯದ ಪ್ರತಿಫಲಕ್ಕಾಗಿ ಏನನ್ನೂ ಮಾಡಬೇಡಿ. ದೊಡ್ಡ ಸಮಸ್ಯೆಯನ್ನು ಹುಡುಕಿ ನಿಜವಾದ ಪ್ರಭಾವ ಬೀರಿ. ಶತಕೋಟಿ ಡಾಲರ್ ಕಂಪನಿಯಾಗಿಸೋದು ನಿಮ್ಮ ಗುರಿ ಆಗಿಲ್ಲದಿದ್ದರೆ ಅದನ್ನು ಪ್ರಾರಂಭಿಸಬೇಡಿ.

ಮಾರಾಟ ಎಲ್ಲಕ್ಕೂ ಪರಿಹಾರ: ಮಾರಾಟ ಮತ್ತು ಕೋಲ್ಡ್ ಕಾಲ್‍ಗಳನ್ನು ನಾನು ಇಷ್ಟಪಡುತ್ತಿರಲಿಲ್ಲ. ಆದ್ರೆ ವಾಲ್ನಟ್ ನನ್ನನ್ನು ಒಳ್ಳೆಯ ಮಾರಾಟಗಾರನನ್ನಾಗಿ ಮಾಡಿದೆ. ‘ಮಾರಾಟ ಎಲ್ಲ ವ್ಯಾಪಾರ ಸಮಸ್ಯೆಗಳಿಗೆ ಪರಿಹಾರ ಮತ್ತು ಎಲ್ಲ ಉದ್ಯಮಿಗಳು ತಂತ್ರವನ್ನು ಕಲಿಯಬೇಕು’ ಎಂದು ಮಾರ್ಕ್ ಕ್ಯುಬನ್ ಹೇಳಿದ್ದು ಸರಿ.

ವ್ಯಾಪಾರದಲ್ಲಿ ತಂಡ ಪ್ರಮುಖ ಆಸ್ತಿ: ಮೊದಲ ಕೆಲವು ಕೆಲಸಗಾರರನ್ನು ತೆಗೆದುಕೊಳ್ಳೋ ನಿಮ್ಮ ನಿರ್ಧಾರ ಪ್ರಮುಖವಾಗಿರುತ್ತೆ. ಸಂಸ್ಥೆಗೆ ಸಾಂಸ್ಕøತಿಕ ಆಕಾರ ಕೊಡುತ್ತದೆ ಮತ್ತು ಭವಿಷ್ಯದ ಸಾಮರ್ಥ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ ಆಯ್ಕೆಯಲ್ಲಿ ಎಚ್ಚರದಿಂದಿರಿ.

ಹಣ ಮಾಡುವುದು ಸುಲಭ: ವ್ಯಾಪಾರ ಮಾಡೋದು ಸುಲಭ ಅಲ್ಲ!

ತಾಳ್ಮೆಯಿಂದಿರಿ: ಸ್ಟಾರ್ಟ್‍ಅಪ್‍ಗಳಲ್ಲಿ ಪ್ರತಿ ವಾರದಲ್ಲೂ ಹೊಸ ಸಮಸ್ಯೆಗಳು ಉದ್ಭವಿಸುತ್ತದೆ. ಆದ್ದರಿಂದ ತಾಳ್ಮೆಯಿಂದ ಇರೋದನ್ನು ಕಲಿಯಿರಿ.

ಕಷ್ಟಪಟ್ಟು ಕೆಲಸ ಮಾಡಿ: ನನ್ನ ಕೊನೆ ಸೆಮಿಸ್ಟರ್ ಪರೀಕ್ಷೆ ಬಿಟ್ಟು ನಾನು ಎಲ್ಲ ಸಮಯವನ್ನು ಮಾರಾಟಕ್ಕೆ ಮೀಸಲಿಟ್ಟು ವಾರಕ್ಕೆ 120 ಗಂಟೆ ಕೆಲಸ ಮಾಡಿದ್ದೆ. ನಿಜಕ್ಕೂ ಇದು ಉಪಯೋಗಕಾರಿಯಾಗಿತ್ತು. ಅನುಭವದ ನಂತ್ರ ನಾನು ಉತ್ತಮ ವ್ಯಾಪಾರಸ್ತನಾದೆ.

“ಉಪ್ಪಿಗಿಂತ ಪ್ರತಿಭೆಗೆ ಬೆಲೆ ಕಡಿಮೆ. ಕಷ್ಟಪಟ್ಟು ಮಾಡೋ ಕೆಲಸ ಪ್ರತಿಭಾವಂತನನ್ನು ಯಶಸ್ವಿ ವ್ಯಕ್ತಿಯಿಂದ ಬೇರ್ಪಡಿಸುತ್ತದೆ”. - ಸ್ಪೀಫನ್ ಕಿಂಗ್

ನಾನು ಸಂಕೇತವನ್ನು ಕಲಿತೆ: ಜಾವಾಸ್ಕ್ರಿಪ್ಟ್ ನಲ್ಲಿ ಕಾರ್ಯಗಳನ್ನು ಸೇರಿಸಿ ಎಚ್‍ಟಿಎಂಎಲ್ ನಲ್ಲಿ ನಮ್ಮ ಮೊದಲ ವೆಬ್‍ಸೈಟ್ ಮಾಡಿದ್ವಿ. ಈ ಕಾರ್ಯದ ನಂತ್ರ ನಾನು ತಂತ್ರಜ್ಞಾನ ಅಥವಾ ಸಂಕೇತಗಳನ್ನು ಅಭಿವೃದ್ಧಿಪಡಿಸಲು ಎಂದೂ ಭಯ ಪಟ್ಟಿಲ್ಲ.

ಅನುಭೂತಿ: ವ್ಯವಹರಿಸುವಾಗ ಜನರನ್ನು ನಾನು ಸಹಾನುಭೂತಿಯಿಂದ ನೋಡಲು ಕಲಿತೆ. ಯಾಕಂದ್ರೆ 12ವರ್ಷದ ಮಕ್ಕಳ ಪೋಷಕರು ಅವರ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡಿರುತ್ತಾರೆ.

ಇಷ್ಟೆಲ್ಲಾ ಕಲಿತ ನಂತ್ರ ನಾನು ನನ್ನ ಮುಂದಿನ ಉದ್ಯಮ ಮೆಡ್ ಗಾಗಿ ಕೆಲಸ ಮಾಡುತ್ತಿದ್ದೇನೆ. ನಾವೀಗ ಕೆಲಸಗಾರರನ್ನು ತೆಗೆದುಕೊಳ್ತಿದ್ದೀವಿ.