ಶೈಕ್ಷಣಿಕ ಉದ್ಯಮಿಗಳ ಸಹಾಯಕ್ಕೆ ಕೈ ಜೋಡಿಸಿದ ವಿಲ್​​ಗ್ರೋ ಮತ್ತು ಡೆಲ್ ಫೌಂಡೇಶನ್

ಟೀಮ್​​ ವೈ.ಎಸ್​​

8th Nov 2015
  • +0
Share on
close
  • +0
Share on
close
Share on
close

ಶಿಕ್ಷಣ ಮತ್ತು ಕೌಶಲ್ಯ ತರಬೇತಿ ಕ್ಷೇತ್ರಗಳಲ್ಲಿ ನವ್ಯೋದ್ಯಮ ಆರಂಭಿಸುತ್ತಿರುವ ಉದ್ಯಮಿಗಳಿಗೆ ನೆರವಾಗಲು ವಿಲ್​​ಗ್ರೋ ಮುಂದಾಗಿದೆ. ಮೈಕೆಲ್ ಅಂಡ್ ಸುಸಾನ್ ಡೆಲ್ ಫೌಂಡೇಶನ್ ಜೊತೆಗೆ ಒಪ್ಪಂದಕ್ಕೆ ಬಂದಿರುವ ವಿಲ್​​ಗ್ರೋ , ಡೆಲ್ ಫೌಂಡೇಶನ್​​ನಿಂದ ಹಣಸಹಾಯ ಪಡೆಯಲಿದೆ. ಕನಿಷ್ಠ ಒಂದು ಡಜನ್ ಸಾಮಾಜಿಕ ಉದ್ದಿಮೆಗಳಿಗೆ ಸಹಾಯ ನೀಡಲು ಯೋಜನೆ ರೂಪಿಸಿದೆ.

image


ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹವಾದ, ಬಹು ವಿಧದ ಅಂತರವಿದೆ. ಕೆಲವರಿಗೆ ಇದು ದೂರುಗಳನ್ನು ನೀಡಲು ನೆಪವಷ್ಟೇ ಇನ್ನೂ ಕೆಲವರಿಗೆ ಇದು ಅವಕಾಶಗಳ ಆಗರ. ಹೊಸತನಗಳನ್ನು ಸೃಷ್ಟಿಸಲು, ಸಂಶೋಧನೆಗಾಗಿ ಇರುವ ಸಮದ್ರ.

ತಳಮಟ್ಟದ ಆದಾಯ ಹೊಂದಿರುವ ವಿದ್ಯಾರ್ಥಿಗಳನ್ನು ಗಣನೆಗೆ ತೆಗೆದುಕೊಂಡರೆ ಈ ವ್ಯವಸ್ಥೆ ಮತ್ತಷ್ಟು ಸಂಕೀರ್ಣವಾಗುತ್ತದೆ. ಬಹುತೇಕ ಕ್ಷೇತ್ರಗಳಲ್ಲಿ ಸಮರ್ಪಕ ಮೂಲಸೌಕರ್ಯದ ಕೊರತೆ ಅತಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದರೂ, ಸೇವೆಗಳ ಗುಣಮಟ್ಟ ನಿಜಕ್ಕೂ ಚಿಂತೆಗೆ ಕಾರಣವಾಗಿದೆ. ಕಳಪೆ ಗುಣಮಟ್ಟದ ತರಬೇತಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಗೈರು ಹಾಜರಿ ಮೊದಲಾದ ವಿಚಾರಗಳು ಶೈಕ್ಷಣಿಕ ವ್ಯವಸ್ಥೆಯನ್ನು ಬಹುವಾಗಿ ಬಾಧಿಸುತ್ತಿವೆ.

ಸಾಮಾಜಿಕ-ಆರ್ಥಿಕ ಪಿರಮಿಡ್​​ನಲ್ಲಿ ಅತ್ಯಂತ ಕೆಳಹಂತದಲ್ಲಿರುವ ವಿದ್ಯಾರ್ಥಿಗಳಿಗೆ ನೆರವು ನೀಡಲು ವಿಲ್​ಗ್ರೋ ನಿರ್ಧರಿಸಿದೆ. ಈ ಸಮುದಾಯಕ್ಕೆ ಸೀಡ್ ಫಂಡ್ ಆಗಲೀ, ಇನ್ಕ್ಯುಬೇಟರ್ಸ್​ಗಳಾಗಲಿ, ಏಂಜೆಲ್ ಇನ್ವೆಸ್ಟರ್​​ಗಳಾಗಲಿ ಯಾರೂ ನೆರವು ನೀಡುತ್ತಿಲ್ಲ. ಹೀಗಾಗಿ, ಆರ್ಥಿಕವಾಗಿ ಕೆಳವರ್ಗದಲ್ಲಿರುವ ಜನರಿಗೆ ಸಹಾಯ ಹಸ್ತ ನೀಡಲು ವಿಲ್​​ಗ್ರೋ ಮುಂದಾಗಿದೆ. “ಈ ಸಮುದಾಯದ ಜೊತೆಗೆ ಕೆಲಸ ಮಾಡುವುದು ತುಂಬಾ ಕಷ್ಟ. ಆರ್ಥಿಕ ವಾಪಸಾತಿಯಲ್ಲಿ ಭಾರೀ ವ್ಯತ್ಯಾಸವಾಗುವ ಕಾರಣ, ನಮಗೆ ಅಲ್ಲಿ ಕೆಲಸ ಮಾಡಲು ತುಂಬಾ ಸವಾಲುಗಳು ಎದುರಾಗುತ್ತವೆ” ಎನ್ನುತ್ತಾರೆ ಗೀತಾ ಗೋಯೆಲ್. ಗೀತಾ ಅವರು ಡೆಲ್ ಫೌಂಡೇಶನ್ ನ ಹೂಡಿಕೆ ವಿಭಾಗದ ನಿರ್ದೇಶಕರಾಗಿದ್ದಾರೆ. ಗುಣಮಟ್ಟ, ಗ್ರಾಹಕ ಕೇಂದ್ರಿತ, ಶಿಕ್ಷಣ ಕೇಂದ್ರಿತ ಸಾಮಾಜಿಕ ಉದ್ದಿಮೆಗಳನ್ನೇ ಇದಕ್ಕೆ ಆರಿಸಿಕೊಳ್ಳಲಾಗುವುದು ಎನ್ನುತ್ತಾರವರು.

image


ಈ ರೀತಿಯ ನಿರ್ದಿಷ್ಟ ಹಾಗೂ ನಿರ್ದೇಶಿತ ಹಣಕಾಸನ್ನು ಶಿಕ್ಷಣ ಸಂಸ್ಥೆಗಳಿಗೆ ಮತ್ತು ವೃತ್ತಿ ತರಬೇತಿ ಸಂಸ್ಥೆಗಳಿಗೆ ಒದಗಿಸುವ ಕೆಲಸ ಭಾರತದಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ. ಉದ್ಯಮಿಗಳಿಗೆ ಇದು ನಿರಂತರ ಫಂಡಿಂಗ್ ಪಡೆಯುವ ಸುದೀರ್ಘ ಮಾರ್ಗವೂ ಅಗಿದೆ. ವಿಲ್​ಗ್ರೋ ಮೂಲಕ ಹಾಗೆಯೇ ಮುಂದಕ್ಕೆ ಬೇರೆ ಸಮಾನ ಮನಸ್ಕ ಸಂಸ್ಥೆಗಳ ಮೂಲಕ ಸಹಾಯ ಪಡೆಯುವುದರಿಂದ ಉದ್ಯಮಿಗಳು ಕೇವಲ ತಮ್ಮ ಕಾರ್ಯಾನುಷ್ಠಾನದತ್ತಲೇ ಗಮನಹರಿಸಬಹುದು, ಎನ್ನುತ್ತಾರೆ ವಿಲ್​ಗ್ರೋ ಇಂಡಿಯಾ ಅಧ್ಯಕ್ಷ ಪಿ.ಆರ್. ಗಣಪತಿ.

ಈ ಮೂಲಕ ಉದ್ಯಮಿಗಳು ಸುಮಾರು 65 ಲಕ್ಷ ರೂಪಾಯಿಗಳವರೆಗೆ ಮೂಲಧನವನ್ನು ಪಡೆಯಬಹುದು. ಆ ಬಳಿಕವೂ ತಮ್ಮ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಬೇರೆ ಮೂಲಗಳಿಂದಲೂ ಸಹಾಯ ಪಡೆಯಬಹುದಾಗಿದೆ.

Want to make your startup journey smooth? YS Education brings a comprehensive Funding and Startup Course. Learn from India's top investors and entrepreneurs. Click here to know more.

  • +0
Share on
close
  • +0
Share on
close
Share on
close

Our Partner Events

Hustle across India