ಜೀವನ ನಡೆಸುವ ಅನಿವಾರ್ಯತೆಯ ದಾರಿಯಲ್ಲಿ ಸಿಕ್ಕ ಯಶಸ್ಸು

ಆರಾಧ್ಯ

ಜೀವನ ನಡೆಸುವ ಅನಿವಾರ್ಯತೆಯ ದಾರಿಯಲ್ಲಿ ಸಿಕ್ಕ ಯಶಸ್ಸು

Friday January 22, 2016,

2 min Read

ಜೀವನ ನಡೆಸಲು ದುಡಿಮೆಯ ಅನಿವಾರ್ಯತೆ ಇದ್ದ ಗೀತಾ ಶಿವಕುಮಾರ್ ಮಾವಳ್ಳಿಯ ತಮ್ಮ ಮನೆಯಲ್ಲಿ ಚಿಕ್ಕದಾಗಿ ಅವರೆಕಾಯಿ ತಿಂಡಿಗಳ ವ್ಯಾಪಾರ ಶುರು ಮಾಡಿಕೊಂಡರು. ಪರಿಚಯವಿದ್ದ ತಮ್ಮ ಸ್ನೇಹಿತರಿಂದ 35 ಸಾವಿರ ರೂಪಾಯಿ ಸಾಲ ಪಡೆದು, ಕೋಲಾರದ ಸ್ನೇಹಿತರೊಬ್ಬರಿಂದ ಮಿಕ್ಸರ್​ ಮಾಡುವುದನ್ನು ಕಲಿತು ಪುಟ್ಟ ವ್ಯಾಪಾರ ಶುರುಮಾಡಿದರು. ಸಣ್ಣ ಪುಟ್ಟ ಅಂಗಡಿಗಳಿಗೆ ಖುದ್ದು ತಾವೇ ಹೋಗಿ ಮಿಕ್ಸರ್​ ಅನ್ನು ನೀಡಿ ಬರುತ್ತಿದ್ದ, ಗೀತಾ ಶಿವಕುಮಾರು ಎರಡೇ ವರ್ಷದಲ್ಲಿ ರುಚಿರುಚಿಯಾದ ಹಾಗೂ ಉತ್ತಮ ಗುಣಮಟ್ಟದ ಅನೇಕ ಬಗೆಯ ಮಿಕ್ಸರ್​​ಗಳನ್ನು ಮಾಡುವುದನ್ನು ಕಲಿತರು ಜೊತೆಗೆ ಅವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚಾಯಿತು. ಈ ಹಿನ್ನಲೆ ಒಂದು ಪುಟ್ಟ ಅಂಗಡಿ ತರೆದು ತಾವು ಮಾಡಿದ ತಿಂಡಿಗಳನ್ನ ವ್ಯಾಪಾರ ಮಾಡಲು ಶುರು ಮಾಡಿದ್ರು. ಕಾಲ ಕ್ರಮೇಣ ಗುಣಮಟ್ಟ ಚೆನ್ನಾಗಿದೆ ಎನ್ನುವ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಬೇಡಿಕೆ ಬಂತು. ಒಂದೇ ವರ್ಷದಲ್ಲಿ ಕೌಂಟರ್ ಆರಂಭಿಸಿ, ಅವರೆಕಾಳಿನಿಂದ ಮಾಡಿದ ಉತ್ಪನ್ನಗಳ ಮೇಳವನ್ನು ಆರಂಭಿಸಿದ್ರು.

16ನೇ ವರ್ಷದ ಅವರೆಕಾಯಿ ಮೇಳವನ್ನ ಬಹಳ ಯಶಸ್ವಿಯಾಗಿ ಉದ್ಘಾಟನೆ ಮಾಡಿದ ಗೀತಾ ಶಿವಕುಮಾರ್ ಬಹಳ ಹೆಮ್ಮೆ ಪಡುತ್ತಾರೆ. ಇನ್ನು ತಾವು ಅಂಗಡಿ ಪ್ರಾರಂಭ ಮಾಡಿದಾಗ ಇದ್ದ ಕೆಲಸಗಾಗರು ಇಂದಿಗೂ ತಮ್ಮ ಬಳಿ ಕೆಲಸ ಮಾಡುತ್ತಿದ್ದಾರೆ. ಅವರೇ ಈ ಮೇಳ ಯಶಸ್ವಿಯಾಗಲು ಕಾರಣ, ಜೊತೆಗೆ ಈ ಅವರೇ ಮೇಳಾಕ್ಕಾಗಿ ಸುಮಾರು 200ಕ್ಕೂ ಹೆಚ್ಚಿನ ಜನರು ಕೆಲಸ ಮಾಡುತ್ತಿರುವುದು ಖುಷಿಯ ಸಂಗತಿ ಎನ್ನುತ್ತಾರೆ. ಅವರೆಕಾಯಿ ಮೇಳಕ್ಕಾಗಿ ಸಿಲಿಕಾನ್ ಸಿಟಿ ಮಂದಿ ಬಹಳ ಕಾತುರದಿಂದ ಕಾಯುತ್ತಿರುತ್ತಾರೆ.

image


ಚುಮುಚುಮು ಚಳಿ ಬೆಂಗಳೂರಿಗರನ್ನು ಆವರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಅವರೇಕಾಯಿ ಮೇಳ ಇಂದಿನಿಂದ ಶುರುವಾಗುತ್ತದೆ. ಮಾಗಡಿ, ಹುಣಸೂರು, ಮೈಸೂರು, ಕೋಲಾರ ಸೇರಿದಂತೆ ರಾಜ್ಯದ ವಿಧೆಡೆಗಳಿಂದ ಬಂದ ಅವರೆಕಾಯಿ ಸಿಲಿಕಾನ್ ಸಿಟಿ ಜನ್ರ ಬಾಯಲ್ಲಿ ವಿಧವಿಧ ಭಕ್ಷ್ಯಗಳಲ್ಲಿ ಸೇರಿ ನೀರೂರಿಸಿತ್ತು. ಅವರೆಕಾಯಿಯಿಂದ ಮಾಡಿದ ಜಹಾಂಗೀರು, ಹಿತಕಬೇಳೆ ಹಲ್ವಾ, ಕಾಜು ಬರ್ಫಿ, ಸ್ವೀಟ್ ಬೂಂದಿ, ಕಟ್ಲೆಟ್​​ಗಳು ಬಹಳ ವಿಶೇಷತೆಯಾಗಿದೆ..

ವರ್ಷಕ್ಕೊಮ್ಮೆ ನಡೆಯುವ ಅವರೆ ಮೇಳ ನಗರಿಗರಿಗೆ ಅವರೆಕಾಯಿಯಿಂದ ಮಾಡಬಹುದಾದ ಹೊಸ ಹೊಸ ಖಾದ್ಯಗಳನ್ನ ಪರಿಚಯಿಸುತ್ತದೆ. ಈ ನಿಟ್ಟಿನಲ್ಲಿ ಅವರೆಕಾಯಿ ಮೇಳದಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಸುಮಾರು 9 ಟನ್ನಷ್ಟು ಅವರೆಕಾಯಿಯನ್ನು ತರಿಸಲಾಗಿತ್ತು. ಅವರೆಕಾಯಿಯಿಂದ ಹೋಳಿಗೆ, ನಿಪ್ಪಟ್ಟು, ಉಸುಳಿ, ಕೋಡುಬಳೆ, ಜಾಮೂನು, ಪಾಯಸ, ವಡೆಗಳಷ್ಟೇ ಅಲ್ಲದೆ ಮೇಳದ ಸಂದರ್ಭದಲ್ಲಿ ಹಿತಕಬೇಳೆ ಹೋಳಿಗೆ, ದೋಸೆ, ಸಾರು, ಉಪ್ಪಿಟ್ಟು, ಹನಿ ಜಿಲೇಬಿ, ಹಿತಕಬೇಳೆ ಅಕ್ಕಿ/ರಾಗಿ ರೊಟ್ಟಿ, , ಹಿತಕಬೇಳೆ ಎಳ್ಳವರೆ ಪಾಯಸ, ಮೊಸರು ಕೋಡುಬಳೆ, ಹಿತಕಬೇಳೆ ಮಸಾಲೆ ವಡೆ, ಖಾರ ಹಿತಕಬೇಳೆ, ಪುದೀನ ಹಿತಕಬೇಳೆ, ಅವರೆಕಾಳು ಚಿತ್ರಾನ್ನ, ಬೆಳ್ಳುಳ್ಳಿ ಹಿತಕಬೇಳೆ, ಗೋಡಂಬಿ ಹಿತಕಬೇಳೆ, ಅವಲಕ್ಕಿ ಮಿಕ್ಸ್, ಬೆಣ್ಣೆ ಉಂಡೆ ಹಿತಕಬೇಳೆ, ಕಾಂಗ್ರೆಸ್ ಮಿಕ್ಸ್, ಹಲ್ವ, ಪೂರಿ, ಒತ್ತು ಶಾವಿಗೆ ಅವರೆಕಾಳು ಹೀಗೆ ಅವರೆಕಾಳಿನಿಂದ ತಯಾರಿಸಲಾದ ವಿವಿಧ ಭಕ್ಷ್ಯಗಳು ಗ್ರಾಹಕರಿಗೆ ಖುಷಿ ನೀಡಿದ್ದವು. ವರ್ಷದಿಂದ ವರ್ಷಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವರೆಕಾಯಿ ಬಗೆಗೆ ಅವರಿಗಿರುವ ಪ್ರೀತಿಯನ್ನು ತೋರುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವು ಅವರೆಕಾಯಿ ಮೇಳ ಪ್ರಾರಂಭವಾಗಿದ್ದು, ಸುಮಾರು 30ಕ್ಕೂ ಹೆಚ್ಚು ವಿವಿಧ ಖಾದ್ಯಗಳನ್ನ ಸಿದ್ಧ ಮಾಡಿಕೊಂಡು ಸಿಲಿಕಾನ್ ಸಿಟಿ ಮಂದಿಯನ್ನ ತನ್ನತ್ತ ಕೈಬಿಸಿ ಕೆರೆಯುತ್ತಿದೆ.. ಆದ್ರೆ ಈ ಬಾರಿ ಅವರೆ ಮೇಳದಲ್ಲಿ ಖ್ಯಾದಗಳ ರುಚಿಯ ಜೊತೆಗೆ ಅದರ ಬೆಲೆಯ ಬಿಸಿಯು ಸಹ ಗ್ರಾಹಕರಿಗೆ ತಟ್ಟಲಿದೆ ಅಂತ ಹೇಳಬಹುದು..