ಜ್ಯೂಟ್ ಬ್ಯಾಗ್ ಕಾಲದ ನಂತ್ರ, ಈಗ ಬಾಳೆನಾರಿನ ಬ್ಯಾಗ್ ..
ವಿಸ್ಮಯ
ಫ್ಯಾಷನ್ ಲೋಕನೇ ಹಾಗೇ ದಿನದಿಂದ ದಿನಕ್ಕೆ ಹೊಸ ಹೊಸ ಟ್ರೆಂಡ್ ಬರ್ತಾನೆ ಇರುತ್ತೆ.. ಇನ್ನು ಎಲ್ಲ ಕಾಲಕ್ಕೂ ಬೇಕಾಗುವ ಟ್ರೆಂಡಿ ಐಟಂಗಳು ಕೂಡ ಮಾರುಕಟ್ಟೆಗೆ ಬರ್ತಾನೆ ಇದೆ.. ಇಷ್ಟು ದಿನ ಜ್ಯೂಟ್‍ನಿಂದ ತಯಾರಿಸಿದ ಬ್ಯಾಗ್‍ಗಳು ಹೆಚ್ಚು ಚಾಲ್ತಿಯಲ್ಲಿ ಇತ್ತು.. ಈಗ ಬಾಳೆನಾರಿನಿಂದ ಮಾಡಿದ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.. ಅರೇ ಇದೇನಾಪ್ಪ ಬಾಳೆ ನಾರಿನಿಂದ ಯಾವ ರೀತಿಯಲ್ಲಿ ಉತ್ಪನ್ನಗಳನ್ನು ತಯಾರಿಸಬಹುದು ಅನ್ನೋ ಅನುಮಾನ ಬರುತ್ತೆ ಅಲ್ವಾ.. ಆದ್ರೆ ಇಂತಹದೊಂದು ಬಾಳೆನಾರಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸದ್ದು ಮಾಡ್ತಿದೆ..
ಬಾಳೆನಾರಿನಿಂದ ಮಾಡಿದ ಉತ್ಪನ್ನಗಳು ನೋಡೊಕ್ಕೆ ವೈರ್‍ಗಳ ರೀತಿ ಕಾಣಿಸಿದ್ರೂ, ಇದು ವೈರ್‍ನಿಂದ ಮಾಡಿದ್ದು ಅಲ್ಲ.. ಬದಲಿಗೆ ಬಾಳೆ ನಾರಿನಲ್ಲಿ ತಯಾರಿಸಿದ ಆಕರ್ಷಕ ವಿನ್ಯಾಸದ ಉತ್ಪನ್ನಗಳು ಈಗ ಲಗ್ಗೆ ಇಟ್ಟಿವೆ.. ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಹಾಕಿವೆ.. ಇನ್ನು ಇದು ತಯಾರು ಆಗೋದು ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಲಕ್ಕವ್ವನಹಳ್ಳಿಯಲ್ಲಿ.. ಗ್ರಾಮದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು ಬಾಳೆ ನಾರಿನಿಂದ ತಯಾರಿಸಿದ ಉತ್ಪನ್ನಗಳು ಸ್ವಾವಲಂಬನೆ ಬದುಕಿಗೂ ದಾರಿ ದೀಪವಾಗಿದೆ.
ಇದನ್ನು ಓದಿ: ಬೆಂಗಳೂರಿನಲ್ಲೊಬ್ಬ ಅಪ್ಪಟ ಕ್ರಿಕೆಟ್ ಅಭಿಮಾನಿ...
ಗುಡಿ ಕೈಗಾರಿಕೆ ವಸ್ತುಗಳನ್ನು ಸಿದ್ಧಪಡಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಂಡಿರುವುದು ಅವರ ಸಾಧನೆಯ ಹಾದಿಯನ್ನು ತೋರಿಸುತ್ತದೆ.. ಇನ್ನು ನಾರಿನಿಂದ ಯಾವ ಉಪಯೋಗವೂ ಇಲ್ಲ. ಗೊಬ್ಬರ ಮತ್ತು ಕಸ ಮಾತ್ರವಷ್ಟೇ ಲಭ್ಯ ಎಂದಷ್ಟೇ ತಿಳಿದುಕೊಂಡಿದ್ದವ್ರು ಹೆಚ್ಚು.. ಆದರೆ ಬಾಳೆನಾರಿನ ಹೊಸ ರೂಪಗಳನ್ನು ಅನಾವರಣಗೊಳಿಸಿದ್ದಾರೆ.
ಬಾಳೆ ನಾರಿನಲ್ಲಿ ಯಾವೆಲ್ಲ ಉತ್ಪನ್ನಗಳು..?
ಕಾಟನ್ ಬ್ಯಾಗ್, ಜ್ಯೂಟ್ ಬ್ಯಾಗ್, ಸಿಲ್ಕ್ ಬ್ಯಾಗ್‍ಗಳು ಸೇರಿದಂತೆ ಬೇರೆ ಬ್ಯಾಗ್‍ಗಳಿಗೂ ಸೆಡ್ಡು ಹೊಡಿಯುವ ಬಾಳೆ ನಾರಿನ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆಗಳಿವೆ.. ಇನ್ನು ಬಾಳೆ ನಾರಿನಿಂದ ಚೆಂದದ ಕೈ ಚೀಲಗಳು, ನೀರಿನ ಬಾಟೆಲ್‍ಗಳ ಚೀಲ, ಮ್ಯಾಟ್‍ಗಳು, ಹ್ಯಾಂಡ್ ಬ್ಯಾಗ್‍ಗಳು, ಫೈಲ್ ಕವರ್‍ಗಳು, ನೆಲಹಾಸುಗಳು, ಅಲಂಕಾರಿಕ ದೀಪಗಳು ಸೇರಿದಂತೆ 100 ಬಗೆಯ ಉತ್ಪನ್ನಗಳು ಕಾಣಬಹುದು..
ಬಾಳೆ ಉತ್ಪನ್ನಗಳು ಅಮೇರಿಕಕ್ಕೆ..!
ಬಾಳೆ ನಾರಿನಲ್ಲಿ ತಯಾರಿಸಿದ ಉತ್ಪನ್ನಗಳನ್ನು ಅಮೆರಿಕಾಗೆ ನಿರಂತರವಾಗಿ ರಫ್ತು ಮಾಡಲಾಗುತ್ತಿದೆ. ಆಗಾಗ ಫ್ರಾನ್ಸ್,ನಮಿಬಿಯಾಗೂ ನಾರಿನ ಉತ್ಪನ್ನಗಳು ರವಾನೆ ಆಗುತ್ತಿವೆ.. ಜೊತೆ ಜೊತೆಗೆ ಎಲ್ಲಿ ಎಲ್ಲಿ ಮೇಳಗಳು ಆಯೋಜನೆ ಮಾಡಲಾಗುತ್ತೆ ಅಲ್ಲಿ ಹೋಗಿ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡ್ತಾರೆ.. ಎಲ್ಲರೂ ದೇಸಿ ಉತ್ಪನ್ನಗಳು ನೋಡಿ ಮೆಚ್ಚಿಕೊಂಡುಕೊಳ್ಳತ್ತಾರೆ ಅಂತಾರೆ ಹೆಬ್ಬಾಳ್. ಇನ್ನು ಮಾರುಕಟ್ಟೆಗೆ ತಕ್ಕಂತೆ ಹೊಸ ಹೊಸ ನವೀಕರಣ, ಹೊಸ ವಿನ್ಯಾಸದ ಉತ್ಪನ್ನಗಳನ್ನು ತಯಾರಿ ನಡೆಸತ್ತಾರೆ..
ಏನ್ ಹೇಳತ್ತಾರೆ ಗ್ರಾಹಕರು..?
ಇನ್ನು ಗ್ರಾಹಕರು ಈ ಫ್ರೆಂಡ್ಲಿ ನೇಚರ್ ಎಂಬ ಹೆಸ್ರಲ್ಲಿ ಸಂಪೂರ್ಣ ಆರ್ಗನಿಕ್ನಿಂದ ಆಗಿದ್ದು ಬಳಕೆಗೆ ಉತ್ತಮ ಅಂತಾರೆ ರೇಖಾ ಅವರು.. ನೋಡೊಕ್ಕೂ ಚೆನ್ನಾಗಿದೆ.. ಎಲ್ಲ ರೀತಿ ಸಮಾರಂಭಗಳಿಗೂ ಮ್ಯಾಚ್ ಆಗುತ್ತೆ ಹ್ಯಾಂಡ್ ಬ್ಯಾಗ್‍ಗಳು.. ಜೊತೆಗೆ ಮನೆಗೆ ಬೇಕಾಗುವ ವಸ್ತುಗಳು ಇರೋದ್ರಿಂದ ಸಾಂಪ್ರದಾಯಿಕ ಲುಕ್ ಕೊಡುತ್ತೆ ಅಂತಾರೆ ಅವರು.. ಬೆಲೆ ಸ್ವಲ್ಪ ದುಬಾರಿ ಆದರೂ, ಬೇರೆ ಉತ್ಪನ್ನಗಳಿಗಿಂತ ಇದು ಹೆಚ್ಚು ಎಷ್ಟೋ ಒಳ್ಳೆಯದ್ದು.. ನಮ್ಮ ದೇಸಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಗ್ತಿದೆ ಅಂತಾರೆ.. ಒಟ್ಟಾರೆ ಉಪಯೋಗಕ್ಕೆ ಬರೋಲ್ಲವೆಂದು ಮೂಲೆಗುಂಪಾಗಿದ್ದ ಬಾಳೆನಾರು.. ಇಂದು ಅಂತರಾಷ್ಟ್ರೀಯ ಮಟ್ಟಕ್ಕೂ ಕಳುಹಿಸುವ ಉತ್ಪನ್ನಗಳಾಗಿ ಬದಲಾಗಿವೆ.. ಕಸದಿಂದ ರಸವನ್ನು ಮಾಡಬಹುದು ಅನ್ನೊಕ್ಕೆ ಒಳ್ಳೆ ಉದಾಹರಣೆ..