ಆವೃತ್ತಿಗಳು
Kannada

ಮನಸ್ಸಿದ್ದರೆ ಮಾರ್ಗ- ಶ್ರಮ ಇದ್ರೆ ಪ್ರತಿಫಲ

ಟೀಮ್​ ವೈ.ಎಸ್​.ಕನ್ನಡ

YourStory Kannada
19th Dec 2016
Add to
Shares
10
Comments
Share This
Add to
Shares
10
Comments
Share

ಬದುಕಿನಲ್ಲಿನ ಒಂದು ಘಟನೆಗಳು ಇಡೀ ಬದುಕನ್ನು ಬದಲಿಸಬಹುದು. ಹೊಸ ಕನಸಿಗೆ ರೂಪ ಕೊಡಬಹುದು. ಆಗೋದೇ ಇಲ್ಲ ಅಂತ ಕೈ ಬಿಟ್ಟ ಕೆಲಸವನ್ನು ಮತ್ತೆ ಮುಂದುವರೆಯುವ ಹಾಗೆ ಮಾಡಬಹುದು. ಅಷ್ಟರಮಟ್ಟಿಗೆ ತಾಕತ್ತು ಎಲ್ಲರಿಗೂ ಇರುತ್ತದೆ. ರೂಪ್ಲಿಯ ಸಂಸ್ಥಾಪಕಿ ನತಾಶಾ ಜೈನ್ ಕಥೆಯೂ ಅಷ್ಟೇ. ನತಾಶಾ ಒಂದು ದಿನ ರೆಸ್ಟೋರೆಂಟ್ ಒಂದರಲ್ಲಿ ತಮ್ಮ ಚೆಕ್ ಗಾಗಿ 20 ನಿಮಿಷಗಳ ಕಾಯಬೇಕಾಯಿತು. ಚೆಕ್​ಗಾಗಿ ಕಾಯೋದು ಮತ್ತು ಹಣ ಪಾವತಿ ಮಾಡಲು ತುಂಬಾ ಸಮಯ ಕಾದಿದ್ದು ಮನಸ್ಸಿಗೆ ಕಿರಿಕಿರಿ ಹುಟ್ಟಿಸಿತ್ತು. ಹೇಗಾದರೂ ಮಾಡಿ ತುಂಬಾ ವೇಗವಾಗಿ ಪಾವತಿ ಮಾಡುವ ಒಂದು ಸುವ್ಯವಸ್ಥಿತ ಪ್ರಕ್ರಿಯೆ ಆಗಿ ಪರಿವರ್ತನೆ ಮಾಡಬೇಕು ಎಂದು ಆಲೋಚಿಸಿದರು. ಆವಾಗ ಹುಟ್ಟಿದ್ದೇ ರೂಪ್ಲಿ.

ಆಫ್​ಲೈನ್, ಸ್ಪೇಸ್ ಪಾವತಿಗೆ ಪರಿಹಾರವಾಗಿ ರೂಪ್ಲೀಹುಟ್ಟಿತ್ತು. ರೂಪ್ಲೀ ಗ್ರಾಹಕರಿಗೆ ಅದ್ಭುತ ಸೇವೆ ನೀಡಬಲ್ಲ ಕಲ್ಪನೆಯಾಗಿದೆ. ಕಾರ್ಡ್, ಕೈಚೀಲ ಅಥವಾ ನಗದು ಇಲ್ಲದೆ ಹಣ ಪಾವತಿ ಮಾಡಲು ಇರುವ ಸುಲಭ ಸೇವೆಯಾಗಿ ಮಾರ್ಪಟ್ಟಿದೆ.

ಅಂದಹಾಗೇ ನತಾಶ ಪ್ರಯಾಣ ಸುಲಭವಾಗಿ ಇರ್ಲಿಲ್ಲ. ಈ ಉದ್ಯಮದಲ್ಲಿ ನತಾಶಗೆ ಎರಡು ರೀತಿಯ ಸವಾಲು ಎದುರಾಗಿತ್ತು. ಮೊದಲನೆಯದು ಅವಳಿಗೆ ಕೇವಲ 26 ವರ್ಷವಾಗಿದ್ದ ಕಾರಣ ಆರಂಭಿಕ ಉದ್ಯಮವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಎರಡನೆಯದು ಅವಳ ಸುತ್ತ ಮುತ್ತ ಇರುವ ಜನರಿಗೆ ನತಾಶಾ ಭಾರತದಲ್ಲಿ ಒಂದು ಸ್ವತಂತ್ರ ಸಾಹಸೋದ್ಯಮ ವನ್ನು ಆರಂಭಿಸುವ ನಿರ್ಧಾರದ ಬಗ್ಗೆ ಚಿಂತೆಯಾಗಿತ್ತು. ಏಕಂದರೆ ಸ್ವಲ್ಪ ಸಮಯ ಅವಳು ಸಿಲಿಕಾನ್ ವ್ಯಾಲಿ ಯಲ್ಲಿ ವಾಸಿಸುತ್ತಿದ್ದರು.

image


ಯಾವುದೇ ಮಹಿಳಾ ಉದ್ಯಮಿಗೆ 26ನೇ ವಯಸಿನಲ್ಲಿ ಉದ್ಯವನ್ನು ಆರಂಭಿಸುವುದು ನಿಜವಾಗಲೂ ಕಷ್ಟದ ಸಂಗತಿ. ಯಾಕಂದ್ರೆ ಸಾಹಸೋದ್ಯಮದ ಕಡೆಗೆ ನೀವು ಗಂಭೀರವಾಗಿ ಸಾಗುವಾಗ ಹಲವು ಜನರಿಂದ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ. ಕೆಲಸ ಮಾಡುತ್ತಿರುವ ನಿಮ್ಮ ಉದ್ಯಮ ದಲ್ಲಿ ಸಾಕಷ್ಟು ನಂಬಿಕೆ ಮತ್ತು ಸಮರ್ಪಣೆ ಇದೆ ಎಂಬುದನ್ನು ನೀವು ನಿಮ್ಮ ಗೆಳೆಯರಿಗೆ ಮತ್ತು ಕುಟುಂಬದವರಿಗೆ ಸಾಬೀತು ಮಾಡಲು ಸಾಕಷ್ಟು ಕಷ್ಟವಾಗುತ್ತದೆ.

ಇದನ್ನು ಓದಿ: ಒಂದು ಕೆಲಸ- ಹಲವು ಕನಸು- ಇದು ಸ್ವಚ್ಛಭಾರತದ ಗೆಲುವು

ನತಾಶ ಸ್ಟ್ಯಾನ್​ಫೋರ್ಡ್​ನಲ್ಲಿ ಓದುತ್ತಿರುವಾಗ ಸ್ನೇಹಿತರ ಗುಂಪಿನಿಂದಲೇ ತನ್ನ ಕನಸಿ ಮೊದಲ ಪ್ರರೇಣೆ ಪಡೆದುಕೊಂಡಿದ್ದರು. ನತಾಶಾ ಶಾಲಾ ದಿನಗಳಿಂದಲೂ ಸ್ವತಂತ್ರವಾಗಿ ಏನಾದರೂ ಮಾಡಬೇಕು ಎಂಬ ಕಲ್ಪನೆಯನ್ನು ಹೊಂದಿದ್ದರು. ತನ್ನ ಉದ್ಯಮದಲ್ಲಿ ತಂತ್ರಜ್ಞಾನವನ್ನು ಬಲಿಸಿಕೊಳ್ಳಬೇಕು ಎಂಬುದನ್ನು ಅರಿತಿದಿದ್ದರು. ಪಾವತಿ ಪ್ರಕ್ರಿಯೆಯಲ್ಲಿ ಬದಲಾವಣೆ ತರುವ ಅಪ್ಲಿಕೇಶನ್ ರಚಿಸುವ ಕೆಲಸ ಮಾಡಲಾರಂಭಿಸಿದರು. ಸದ್ಯಕ್ಕೆ ನತಾಶ ಅಪ್ಲಿಕೇಶನ್ ಮತ್ತು ಅನ್ವೇಷಣೆ ದೊಡ್ಡ ಮಟ್ಟದಲ್ಲಿ ಉಪಯೋಗಕ್ಕೆ ಬರುತ್ತಿಲ್ಲ. ಆದ್ರೆ ಭವಿಷ್ಯದಲ್ಲಿ ರೂಪ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ ಅಂತ ಆತ್ಮವಿಶ್ವಾಸ ನತಾಶಗಿದೆ.

ನತಾಶಾಳ ಮಾದರಿ ವ್ಯಕ್ತಿಗಳು

ಚಿಕ್ಕ ವಯಸ್ಸಿನಲ್ಲೇ ದೊಡ್ಡ ಕನಸು ಕಂಡ ನತಾಶಗೆ ಸ್ಪೂರ್ತಿ ನೀಡಲು ಹಲವರಿದ್ದರು. ವೃತ್ತಿಪರತೆಯಲ್ಲಿ ಅವಳಿಗೆ ಅಮೆರಿಕನ್ ಟೆಕ್ನಾಲಜೀ ಎಕ್ಸಿಕ್ಯುಟಿವ್ ಶರ್ರೈಲ್ ಸ್ಯಾಂಡ್​ಬರ್ಗ್, ಯಾಹೂನಾ ಅಧ್ಯಕ್ಷರು ಮತ್ತು ಸಿಇಓ, ಮರಿಸ ಮೇಯರ್ ಮುಂತಾದವರ ಕಥೆಗಳು ನತಾಶ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು.ಇವರೆಲ್ಲರೂ ತಂತ್ರಜ್ಞಾನದ ಮೇಲೆ ಬೀರಿರುವ ಪ್ರಭಾವ ನತಾಶಗೆ ಹೊಸ ಕನಸು ಹುಟ್ಟುವಂತೆ ಮಾಡಿದೆ. ಒಟ್ಟಿನಲ್ಲಿ ನತಾಶ ಕಂಡ ಕನಸಿಗೆ ಹೊಸ ಟಚ್ ಸಿಗುತ್ತಿದೆ.

ಇದನ್ನು ಓದಿ:

1. ಸಿಎಂ ಭದ್ರತೆಯ ಹೊಣೆ ಹೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿ..

2. ಪ್ರಧಾನಿಯ ಕನಸಿಗೆ ಮತ್ತಷ್ಟು ಬಣ್ಣ- ಬನಾರಸ್​ ವೈದ್ಯೆಯ ಬೇಟಿ ಬಚಾವೋ, ಬೇಟಿ ಪಡವೋಗೆ ವಿಶಿಷ್ಟ ಸೇವೆ..

3. Posಗಳಿಗೆ ದಿಢೀರ್​ ಬೇಡಿಕೆ- ಬ್ಯಾಂಕ್​ಗಳಿಗೆ ಹೆಚ್ಚಿದ ತಲೆನೋವು

Add to
Shares
10
Comments
Share This
Add to
Shares
10
Comments
Share
Report an issue
Authors

Related Tags