ಊಟ ಅಂದಮೇಲೆ ಅದು ಬಾಯಿ ಚಪ್ಪರಿಸುವಂತೆ ಇರಬೇಕು. ಹೊಟ್ಟೆ ತುಂಬುವುದರ ಜೊತೆಗೆ ಆರೋಗ್ಯವನ್ನು ಕಾಪಾಡುವ ಊಟವಾದ್ರೆ, ದೇಹಕ್ಕೂ ಹಿತ, ಹೊಟ್ಟೆಗೂ ಹಿತ, ಮನಸ್ಸಿಗೂ ಮುದ. ಆದರೆ, ಇತ್ತೀಚಿನ ದಿನಗಳಲ್ಲಿ ಸ್ವಾದಿಷ್ಟಕರ ಊಟ ಸಿಗುವುದೇ ಕಷ್ಟವಾಗಿ ಹೋಗಿದೆ. ನಾಯಿ ಕೊಡೆಯಂತೆ ಹೋಟೆಲ್‌ಗಳು ತಲೆ ಎತ್ತಿರುವುದರಿಂದ, ಗ್ರಾಹಕರಿಗೆ ಉತ್ತಮ ಹೋಟೆಲ್ ಆಯ್ದುಕೊಳ್ಳುವುದೇ ಕಷ್ಟವಾಗಿ ಹೋಗಿದೆ.
ಅದರಲ್ಲೂ ಪಾಶ್ಚಿಮಾತ್ಯ ದೇಶಗಳ ತಿಂಡಿ ತಿನಿಸು ಕಾಲಿಟ್ಟ ಮೇಲಂತೂ ನಮ್ಮ ಜೀವನ ಶೈಲಿ ಬದಲಾಗುವುದರ ಜೊತೆಗೆ, ಸಂಸ್ಕೃತಿ, ತಿಂಡಿ-ತಿನಿಸುಗಳು ಕಾಲಕ್ಕೆ ತಕ್ಕಂತೆ ಬದಲಾಗಿ ಹೋಗಿದೆ. ಫಿಜಾ, ಬರ್ಗರ್, ನ್ಯೂಡಲ್ಸ್ಗಳ ಅಬ್ಬರದ ನಡುವೆ ನಮ್ಮ ಆಹಾರ ಪದ್ಧತಿಯೇ ವಿಭಿನ್ನವಾಗಿ ಹೋಗಿದೆ.
ಮಾಂಸಹಾರಿಗಳಿಗಂತೂ ಆಯ್ಕೆಗಳು ಹೆಚ್ಚೇ ಇದೆ. ಪ್ರಾಣಿ ಹಿಂಸೆಯನ್ನು ವಿರೋಧಿಸುವ ಸಸ್ಯಾಹಾರಿಗಳಿಗೆ ಶುದ್ಧ ಸಸ್ಯಾಹಾರ ಪದಾರ್ಥಗಳು ದೊರೆಯುವುದು ಕ್ಲಿಷ್ಟಕರವಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇಕಡ 30ರಷ್ಟು ಮಂದಿ ಶುದ್ಧ ಸಸ್ಯಾಹಾರಿಗಳಿದ್ದು, ಅವರಿಗೆ ಡಯಟ್ ಪದಾರ್ಥಗಳು ಸಿಗುವುದು ಸ್ವಲ್ಪ ಕಷ್ಟವೇ ಆಗಿದೆ. ಆದರೆ, ಬೆಂಗಳೂರಿಗರು ಈ ವಿಚಾರದಲ್ಲಿ ಹೆಚ್ಚು ಅದೃಷ್ಠವಂತರೇ ಸರಿ. ಯಾಕಂದರೆ, ಹೈಟೆಕ್ ಪ್ರದೇಶಗಳಲ್ಲಿ ಒಂದಾದ ಕೋರಮಂಗಲದಲ್ಲಿ ಶುದ್ಧ ಸಸ್ಯಾಹಾರದ ಜೊತೆಗೆ ಸ್ವಾದಿಷ್ಟಕರ ಆಹಾರ ಪೂರೈಸುವ ಹೋಟೆಲ್ವೊಂದು ತೆರೆದಿದೆ. ಅದರ ಹೆಸರು ಕ್ಯಾರೋಟ್ಸ್.
ಹೌದು, ತಾಜಾಕರ ಕ್ಯಾರೆಟ್ ಮಾದರಿಯನ್ನೇ ಹೋಲುವ ಸಸ್ಯಾಹಾರಿ ಹೋಟೆಲ್ ಕ್ಯಾರೋಟ್ಸ್. ಇದು ಸಂಪೂರ್ಣ ಸಸ್ಯಹಾರಿಯಾಗಿರುವ ರೆಸ್ಟೋರೆಂಟ್, ರುಚಿ ಹಾಗೂ ಶುಚಿತ್ವದ ವಿಚಾರದಲ್ಲಿ ಈ ರೆಸ್ಟೋರೆಂಟ್ ಇತರ ಹೋಟೆಲ್ಗಳಿಗಿಂತ ಮುಂದಿದೆ. ಕ್ಯಾರೋಟ್ಸ್ ನಲ್ಲಿ ಬಯಸಿದಂತಹ ಆಹಾರೋತ್ಪನ್ನಗಳು ಸಿಗಲಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವುದರಿಂದ ಎಲ್ಲರಿಗೂ ಈ ರೆಸ್ಟೋರೆಂಟ್ ಹತ್ತಿರವಾಗಿದೆ.
ಇಂದಿನ ದಿನಕ್ಕೆ ಮಾತ್ರ ಸೀಮಿತವಾಗದ ಈ ರೆಸ್ಟೋರೆಂಟ್ ನಾಳಿನ ಉತ್ತಮ ಆರೋಗ್ಯವನ್ನು ಹೊಂದಲು ಸಹಕಾರಿಯಾಗಿದೆ. ಜೀವನ ಶೈಲಿಗಳಿಗೆ ಪೂರಕವಾಗಿ, ಈ ಸಸ್ಯಾಹಾರಿ ಹೋಟೆಲ್ ಆರಂಭಿಸಲಾಗಿದೆ. ಇಂದಿನ ಬೇಕು-ಬೇಡಗಳನ್ನು ಪೂರೈಸುವುದರ ಜೊತೆಗೆ, ನಿಮ್ಮ ಆರೋಗ್ಯವನ್ನು ಸದೃಢವಾಗಿ ಇಡಲಿದೆ.
ಊಟ ಅಂದ ಮೇಲೆ ಮನಸ್ಸಿಗೆ ನೆಮ್ಮದಿ ತರುವುದರ ಜೊತೆಗೆ ಹೊಟ್ಟೆಯನ್ನು ಕೂಡ ತುಂಬಿಸುವಂತಿರಬೇಕು. ನಿತ್ಯ ಜಂಜಾಟಗಳಿಂದ ಹೊರಬಂದು ಉತ್ತಮ ಆಹಾರವನ್ನು ಸೇವಿಸಬಹುದು.
ಕ್ಯಾರೆಟ್ಸ್ ರೆಸ್ಟೋರೆಂಟ್ ಆರಂಭವಾಗಿದ್ದು ಹೇಗೆ?
ಜರ್ಮನಿಯಲ್ಲಿರುವ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಪರಿಕಲ್ಪನೆಯಲ್ಲಿ ಆರಂಭಗೊಂಡಿದ್ದೇ ಕ್ಯಾರೆಟ್ಸ್. ಇದರ ಸ್ಥಾಪಕರು ಕೃಷ್ಣಮೂರ್ತಿ. ಜರ್ಮನ್ ರೆಸ್ಟೋರೆಂಟ್ ಮಾದರಿಯಲ್ಲೇ ಬೆಂಗಳೂರಿನಲ್ಲಿ ತೆರೆಯುವ ಬಯಕೆಯನ್ನು ಹೊಂದಿದ್ದರು. 6 ತಿಂಗಳ ಹಿಂದಿನ ಈ ರೆಸ್ಟೋರೆಂಟ್ ಆರಂಭಕ್ಕೆಅಪರಿಚಿತ ದಂಪತಿಗಳೇ ಕಾರಣ. ಆ ದಂಪತಿಗಳು ಮನಃಪೂರ್ವಕವಾಗಿ ಆಹಾರ ಸೇವಿಸಿದರು. ಬಿಲ್ ಕೊಟ್ಟು ಹೋಗುವಾಗ ಮಾನಸಿಕ ಬೆಂಬಲ ನೀಡಿದರು. ಇದು ಮಾನಸಿಕ ಸ್ಥೈರ್ಯವನ್ನು ತುಂಬುವುದರ ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸಿತ್ತು ಎನ್ನುತ್ತಾರೆ ಇದರ ಮಾಲೀಕರು.
ಒಂದು ಶುದ್ಧ ಹಾಗೂ ಉತ್ತಮ ಸಸ್ಯಾಹಾರಿ ರೆಸ್ಟೋರೆಂಟ್ ಆರಂಭವಾಗಲು ಈ ಮಾನಸಿಕ ಸ್ಥೈರ್ಯ ಪ್ರೇರಣೆ ಆಯಿತು. ಸದ್ಯ ಕ್ಯಾರೋಟ್ಸ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರೆಸ್ಟೋರೆಂಟ್‌ಗೆ ದಿನೇ ದಿನೇ ಅಪಾರ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿದ್ದಾರೆ. ಈ ಮೂಲಕ ಸಸ್ಯಾಹಾರಿ ರೆಸ್ಟೋರೆಂಟ್‌ಗಳ ಮೆನು ಸಂಖ್ಯೆಯೂ ಹೆಚ್ಚಾಗಿದೆ. ಹೊಸತವನ್ನು ಆರಂಭಿಸಲು ಈ ಬೆಳವಣಿಗೆ ಸ್ಪೂರ್ತಿಯೂ ಆಗಿದೆ. ಹೋಟೆಲ್ ಆರಂಭಿಸಿದಾಗ ಇಷ್ಟೊಂದು ಉತ್ತಮ ಬೆಂಬಲವನ್ನು ನಾನು ನಿರೀಕ್ಷಿಸಿರಲಿಲ್ಲ ಅನ್ನುತ್ತಾರೆ ರೆಸ್ಟೋರೆಂಟ್ ಮಾಲೀಕರಾದ ಕೃಷ್ಣಮೂರ್ತಿ.
ರೆಸ್ಟೋರೆಂಟ್ ಅಂದ ಮೇಲೆ ಆರೋಗ್ಯಕರ ತಿಂಡಿ ತಿನಿಸುಗಳ ಜೊತೆಗೆ ಗ್ರಾಹಕರ ಮನ ಗೆಲ್ಲುವ ಸಿಬ್ಬಂದಿಯೂ ಇದ್ದರೆ ಚೆನ್ನ. ಇತರ ರೆಸ್ಟೋರೆಂಟ್ ಗಳಿಗೆ ಹೋಲಿಸಿದ್ರೆ, ಕ್ಯಾರೆಟ್ಸ್ ಒಂದು ಹೆಜ್ಜೆ ಮುಂದಿದೆ. ಇದು ಉತ್ತಮ ನೌಕರ ವರ್ಗದಿಂದ ಕೂಡಿದೆ. ಕಾರ್ಯ ನಿರ್ವಹಿಸುವವರೆಲ್ಲಾ ಸುಶಿಕ್ಷಿತರೇ ಆಗಿದ್ದಾರೆ. ಎಲ್ಲರೂ ಕಷ್ಟಪಟ್ಟು ದುಡಿಯುವವರಾಗಿದ್ದು, ಗ್ರಾಹಕರನ್ನು ತಮ್ಮ ಕುಟುಂಬದಂತೆ ನೋಡಿಕೊಳ್ಳುತ್ತಾರೆ. ಒಂದು ಬಾರಿ ಈ ರೆಸ್ಟೋರೆಂಟ್ ಗೆ ಕಾಲಿಟ್ಟವರು ಮತ್ತೆ ಮತ್ತೆ ಬರಬೇಕು ಅಂತ ಅನ್ನಿಸುತ್ತದೆ.
ಈ ರೆಸ್ಟೋರೆಂಟ್ ಆರಂಭಿಸಿದ ಕೃಷ್ಣಮೂರ್ತಿ ಒಬ್ಬ ಶ್ರಮಜೀವಿ. ಈಗಿನ ಐಡಿಯಾಗಳಿಗೆ, ಕಾಲಕ್ಕೆ ಅನುಗುಣವಾಗಿ ಈ ಸಸ್ಯಾಹಾರಿ ರೆಸ್ಟೋರೆಂಟ್‌ಗೆ ಹೊಸ ಮೆರಗು ನೀಡಲಾಗುತ್ತಿದೆ. ಯಾವುದೇ ಒಬೀರಾಯನ ಕಾಲಕ್ಕೆ ಸೀಮಿತವಾಗದೆ ಹೊಸತನಗಳನ್ನು ಅಳವಡಿಸಲಾಗುತ್ತಿದೆ. ಆರೋಗ್ಯವಂತ ಸಮಾಜವನ್ನು ಸೃಷ್ಠಿಸಲು ಮುಂದಾಗಲಾಗಿದೆ. ಕೇವಲ ವ್ಯಾಪಾರಿ ಮನೋಧೋರಣೆಯನ್ನು ಹೊಂದಿಲ್ಲದೆ, ಸ್ವಾಸ್ಥ, ಸುಂದರ ಸಮಾಜವನ್ನು ರೂಪಿಸಲು ಮುಂದಾಗಲಾಗಿದೆ. ಅಂದುಕೊಂಡ ಗುರಿಯನ್ನು ತಲುಪಿರುವ ಸಂತೃಪ್ತಿಯನ್ನು ಕ್ಯಾರೆಟ್ಸ್ ರೆಸ್ಟೋರೆಂಟ್ ಸಂಸ್ಥಾಪಕ ಕೃಷ್ಣಮೂರ್ತಿ ಹೊಂದಿದ್ದಾರೆ.
ಗ್ರಾಹಕರ ಮನಸ್ಸನ್ನು ಸಂತೋಷಪಡಿಸುವ ಸಲುವಾಗಿ ಈ ಕ್ಯಾರೋಟ್ಸ್ ರೆಸ್ಟೋರೆಂಟ್‌ಗೆ ಹೊಸ ರೂಪ ನೀಡಲಾಗುತ್ತಿದೆ. ಸಸ್ಯಾಹಾರಿ ತಿನಿಸುಗಳಲ್ಲೂ, ಆಧುನಿಕ ಆಹಾರ ಪದ್ಧತಿಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಪಿಜ್ಜಾ, ಪಾಸ್ತಾ, ಬರ್ಗರ್ ಮತ್ತು ಸ್ಯಾಂಡ್ ವಿಚ್ ನಂತಹ ಆಹಾರಗಳನ್ನು ಪರಿಚಯಿಸಲು ತೀರ್ಮಾನಿಸಲಾಗಿದೆ. ಅಲ್ಲದೇ ಐಟಿ ಪಾರ್ಕ್, ಮಾಲ್ ಗಳಲ್ಲಿ ಫುಡ್ ಕೌಂಟರ್ ಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಒಂದು ಸಾಮಾನ್ಯ ರೆಸ್ಟೋರೆಂಟ್ ಆಗಿ ಆರಂಭಗೊಂಡ ಕ್ಯಾರೆಟ್ಸ್ ಇವತ್ತು ಹೆಮ್ಮರವಾಗಿ ಬೆಳೆದಿದೆ. ಇಡೀ ಪ್ರಕ್ರಿಯೆಯಲ್ಲಿ ಬಹಳಷ್ಟು ಮಂದಿ ಕೈ ಜೋಡಿಸಿದ್ದಾರೆ. ಕೃಷ್ಣಮೂರ್ತಿ ಕೈಯನ್ನು ಬಲಪಡಿಸಿದ್ದಾರೆ. ಒಂದು ರೆಸ್ಟೋರೆಂಟ್ ಸಾಮಾಜಿಕ ಸಂಸ್ಥೆಯಾಗಿ ಪರಿವರ್ತಿತವಾಗಿದೆ. ಶುದ್ಧ, ಹಾಗೂ ರುಚಿಕರ ಆಹಾರವನ್ನು ನೀಡಿದರೆ, ಎಂತಹವರ ಮನಸ್ಸನ್ನು ಗೆಲ್ಲಬಹುದು ಎಂಬುದಕ್ಕೆ ಸಾಕ್ಷಿ ಕ್ಯಾರೋಟ್ಸ್ ರೆಸ್ಟೋರೆಂಟ್.