‘ಆಯಾ’ನೂ ಇಲ್ಲ ‘GAIA’ನೂ ಇಲ್ಲ..!

ಆರ್​​.ಪಿ.

‘ಆಯಾ’ನೂ ಇಲ್ಲ ‘GAIA’ನೂ ಇಲ್ಲ..!

Tuesday November 17, 2015,

3 min Read

ಪ್ರಯಾಣವೊಂದರಲ್ಲಿ ಮಧ್ಯವಯಸ್ಕ ಮಹಿಳೆಯನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಸೌಂದರ್ಯ ವರ್ಧಕಗಳ ಮೇಲೆ ಹೆಚ್ಚಾಗಿ ಖರ್ಚುಮಾಡುತ್ತಿದ್ದ ಹೊರತಾಗಿಯೂ ತನ್ನ ಬಗ್ಗೆ ತನಗೇ ಉತ್ತಮ ಅಭಿಪ್ರಾಯ ಹೊಂದಲು ಅಸಮರ್ಥಳಾಗಿದ್ದ ನನಗೆ ಡಾಲಿ ಕುಮಾರ್ ಆರೋಗ್ಯವಂತ ಜೀವನ ನಡೆಸಿದರೆ ಮಾತ್ರ ನಿಜವಾದ ಸೌಂದರ್ಯ ಒಳಗಿನಿಂದ ಬರುತ್ತದೆ ಎಂಬುದನ್ನು ಕಲಿಸಿಕೊಟ್ಟರು.

ನೀವು ಆರೋಗ್ಯವಂತರಾಗಿರಲ್ಲದಿದ್ದರೆ, ಎಷ್ಟೇ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಹುಟ್ಟುಹಾಕಿದ್ರೂ ಪ್ರಯೋಜನವಿಲ್ಲ. ಆದ್ದರಿಂದ ನಾನು ಸೌಂದರ್ಯವನ್ನು ಮೀರಿ ಹೋಗಲು ಬಯಸಿದ್ದೆ, ಎಂದು ಹೇಳ್ತಾರೆ ಡಾಲಿ ಕುಮಾರ್. ಇಷ್ಟು ವರ್ಷ ಕೆಲಸ ಮಾಡ್ತಿದ್ದ ಸೌಂದರ್ಯ ವಲಯವನ್ನು ಬಿಟ್ಟು ತನ್ನದೇ ಉದ್ಯಮ ಪ್ರಯಾಣವನ್ನು ಪ್ರಾರಂಭಿಸಲು ಡಾಲಿಗೆ ಇಷ್ಟು ಸಾಕಾಗಿತ್ತು. ಇಂದು ಭಾರತದ ಆರೋಗ್ಯ ಮತ್ತು ಕ್ಷೇಮ ವಲಯದ ಆಹಾರ ಬ್ರಾಂಡ್‍ಗಳಲ್ಲಿ ಮುಂಚೂಣಿಯಲ್ಲಿರುವ GAIA ಉದ್ಯಮವನ್ನು ಪ್ರಾರಂಭಿಸಿದರು.

image


ಗ್ರೀಕ್‍ನಲ್ಲಿ GAIA ಅಂದ್ರೆ ಭೂತಾಯಿ ಎಂದು. ಹೆಸರಿಗೆ ತಕ್ಕಂತೆ ಡಾಲಿ ಕುಮಾರ್‍ರ ಉತ್ಪನ್ನಗಳು ನೈಸರ್ಗಿಕ ಪದಾರ್ಥಗಳಿಂದ ಮಾಡಲ್ಪಟ್ಟವು. “ಭೂಮಿಗೆ ಪುನರುತ್ಪಾದನೆಯ ಶಕ್ತಿಯಿದೆ. ಅದೇ ರೀತಿ ಮನುಷ್ಯನ ದೇಹಕ್ಕೂ ಇದೇ ಶಕ್ತಿ ಇದೆ. ನನಗಿನ್ನೂ ಚಿಕ್ಕವಯಸ್ಸು ಎಂದು ಜನರಿಗೆ ಅಭಿಪ್ರಾಯಪಡಲು ನಮ್ಮ ಉತ್ಪನ್ನ ಸಹಾಯಕವಾಗಲಿದೆ” ಎಂದು ಡಾಲಿ ಹೇಳುತ್ತಾರೆ.

2009ರಲ್ಲಿ ಸಾಧಾರಣವಾಗಿ ಆರಂಭವಾದ GAIA ಆರು ವರ್ಷಗಳ ಅವಧಿಯಲ್ಲಿ ಭಾರತದಾದ್ಯಂತ ತಮ್ಮ ಅಸ್ತಿತ್ವವನ್ನು ಸಾಬೀಪಡಿಸಲು ಸಾಧ್ಯವಾಗಿದೆ. ಹೆಚ್ಚಿನ ಸಂಪನ್ಮೂಲ, ಬಂಡವಾಳ ಮತ್ತು ದೊಡ್ಡಮಟ್ಟದ ಕಾರ್ಯಾಚರಣೆ ಮಾಡುವ ಕೆಲ್ಲಾಗ್ಸ್, ನೆಸ್ಲೆನಂತಹ ಎಂಎನ್‍ಸಿ ಕಂಪನಿಗಳ ಮಾರುಕಟ್ಟೆ ಮಧ್ಯೆಯೂ ಡಾಲಿ ಇದನ್ನು ಸಾಧಿಸಿ ತೋರಿಸಿದ್ದಾರೆ.

ಮೇಲೇರುತ್ತಿದ್ದ ಡಾಲಿ ವೃತ್ತಿಜೀವನದ ಗ್ರಾಫ್

ತನ್ನ ಬ್ರಾಂಡ್‍ನ ಯಶಸ್ವಿ ಬೆಳವಣಿಗೆಗೆ ತನ್ನ ವೃತ್ತಿ ಜೀವನದ ಮೌಲ್ಯಗಳಾದ ನಾವಿನ್ಯತೆಗೆ ಅಧಿಕ ಗಮನ, ಗುಣಮಟ್ಟ, ಕೆಲಸದಲ್ಲಿ ಉತ್ಸಾಹ, ಜನರ ಮೇಲಿನ ಅನುಭೂತಿಗೆ ಧನ್ಯವಾದ ಅರ್ಪಿಸುತ್ತಾರೆ. GAIA ಡಾಲಿಗೆ ತನ್ನದೇ ವ್ಯಕ್ತಿತ್ವ ಮತ್ತು ತತ್ವದ ವಿಸ್ತರಣೆಯಾಗಿದೆ. ಮತ್ತು ಆಕೆಯ ವತ್ತಿಜೀವನ ನಿರ್ವಹಣಾ ತರಬೇತಿಯಿಂದ GAIA ಸ್ಥಾಪಕಿಯಾದ ರೀತಿಯಲ್ಲೇ ಬ್ರಾಂಡ್ ಸಹ ಬೆಳವಣಿಗೆ ಸಾಧಿಸುತ್ತಿದೆ.

1972ರಲ್ಲಿ ಹುಟ್ಟಿದ ಡಾಲಿ, ನಾಗಪುರ ಯೂನಿವರ್ಸಿಟಿಯಲ್ಲಿ ಬ್ಯಾಚುಲರ್ಸ್ ಆಫ್ ಟೆಕ್ನೊಲಜಿ ಇನ್ ಕಾಸ್ಮೆಟಿಕ್ ಎಂಜಿನಿಯರಿಂಗ್ ಮುಗಿಸಿದರು. ತನ್ನ ವೃತ್ತಿಯನ್ನು ನಿರ್ವಹಣಾ ತರಬೇತಿಯಿಂದ ಪ್ರಾರಂಭಿಸಿದ ಡಾಲಿಗೆ ಕೆಲ ಸಮಯದಲ್ಲೇ ಕಲರ್‍ಬಾರ್ ಕಾಸ್ಮೆಟಿಕ್ಸ್​​ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆಕೆ ಹೊಸ ಪೀಳಿಗೆಯ ಸೌಂದರ್ಯ ವರ್ಧಕ ಬ್ರಾಂಡ್ ಮಾರಾಟತಂತ್ರ ಮತ್ತು ಬೆಳವಣಿಗೆಯಲ್ಲಿ ಗುಪ್ತವಾಗಿರೋ ಉದ್ಯಮದ ಸ್ಪೂರ್ತಿಯನ್ನು ಕಂಡುಕೊಂಡರು.

ಕಲರ್‍ಬಾರ್‍ನ ಸಿಒಒ ಆದ ನಂತ್ರ ಡಾಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ 2008ರಲ್ಲಿ GAIA ಪ್ರಾರಂಭಿಸಿದರು. ಆಗಿನಿಂದ ತಮ್ಮGAIA ಬ್ರಾಂಡ್‍ಅನ್ನು ಕಟ್ಟಿದ್ದು ಮಾತ್ರವಲ್ಲದೇ ತಾನು ಡೈರೆಕ್ಟರ್ ಆಗಿರೋ ಮಾತೃ ಕಂಪನಿ ಕಾಸ್ಮಿಕ್ ನ್ಯುಟ್ರಾಕೋಸ್‍ನಲ್ಲಿ ಉತ್ಪಾದನೆಯನ್ನೂ ಪ್ರಾರಂಭಿಸಿದರು. ಸಧ್ಯ ಕಾಸ್ಮಿಕ್ ನ್ಯುಟ್ರಕೋಸ್‍ನಲ್ಲಿ ಆರೋಗ್ಯ ಪೂರಕ ಆಹಾರ, ಪ್ಯಾಕೇಜ್ ಆಹಾರ ಮತ್ತು ಪರ್ಸನಲ್ ಕೇರ್ ವಸ್ತುಗಳ ಉತ್ಪಾದನೆ ಮತ್ತು ದೇಶದ ಪ್ರಮುಖ ಬ್ರಾಂಡ್‍ಗಳ ಲೇಬಲಿಂಗ್‍ಅನ್ನು ಖಾಸಗಿಯಾಗಿ ಮಾಡಲಾಗುತ್ತದೆ.

ನನ್ನ ವೃತ್ತಿ ಬಗ್ಗೆ ನಾನು ಆಲೋಚನೆಯನ್ನೇ ಮಾಡಿರಲಿಲ್ಲ. ನಾನು ಬೆಳೆದಂತೆ ಸೌಂದರ್ಯವರ್ಧಕ ವ್ಯಾಪಾರ ನನಗೆ ಬೇಸರ ತರಿಸಿತ್ತು. ಜನರಿಗೆ ಆರೋಗ್ಯವನ್ನು ಕೊಡುವ ಯಾವುದೇ ಬ್ರಾಂಡ್ ಇಲ್ಲ ಎಂದು ನನಗೆ ಅರಿವಾಗಿತ್ತು. ಅಲ್ಲಿದ್ದ ಸಾಕಷ್ಟು ಅಂತರವನ್ನು ಮುಚ್ಚಲು ನಾನು ರೋಗನಿರೋಧಕ ಆರೋಗ್ಯ ರಕ್ಷಣೆಯಲ್ಲಿ ಕೆಲಸ ಮಾಡತೊಡಗಿದೆ. ಇದರಿಂದ ಈಗ ಆರೋಗ್ಯ ಪೂರಕ ಮತ್ತು ಪರ್ಯಾಯ ವಸ್ತುಗಳನ್ನು ಕೊಡುತ್ತಿದ್ದೇನೆ. ದೇಶದ ಜನರು ಹೃದಯಾಘಾತಕ್ಕೆ ಒಳಗಾದಾಗ ದೊಡ್ಡಮಟ್ಟದ ಹಣವನ್ನು ಚೆಲ್ಲಲು ತಯಾರಿದ್ದಾರೆ. ಆದ್ರೆ ಅವರಿಗೆ ರೋಗನಿರೋಧಕ ಆಹಾರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಡಾಲಿ ಅಳಲು ತೋಡಿಕೊಳ್ತಾರೆ.

image


ದಾರಿಯುದ್ದಕ್ಕೂ ಸವಾಲುಗಳು

ಮೊದಲ ಪೀಳಿಗೆಯ ಉದ್ಯಮಿ ಡಾಲಿ ಕುಮಾರ್ ತಮ್ಮ ವ್ಯಾಪಾರದ ಮೊದಲ ದಿನಗಳನ್ನು ನೆನಪಿಸಿಕೊಳ್ತಾರೆ. ತನ್ನ ಕನಸನ್ನು ಜನರಿಗೆ ಮಾರಾಟ ಮಾಡಲು ಸರಿಯಾದ ಪ್ರತಿಭೆಯನ್ನು ಆಕರ್ಷಿಸುವುದು ಡಾಲಿಗೆ ದೊಡ್ಡ ಸವಾಲಾಗಿತ್ತು. ತನ್ನ ಕಂಪನಿಗೆ ಸರಿಯಾದ ಜನರು ಸಿಕ್ಕಮೇಲೆ “ನಾನು ದೇವರ ಆಶೀರ್ವಾದಿಂದ ಹುಟ್ಟಿದವಳೆಂದು ಹೇಳಲೇಬೇಕು” ಎನ್ನುತ್ತಾರೆ ಡಾಲಿ. ಆಗ ಕಂಪನಿಗೆ ಬಂದವರು ಈಗಲೂ ಡಾಲಿಯ ಜತೆಗಿದ್ದಾರೆ.

2009-10ರಲ್ಲಿ GAIA ಬ್ರಾಂಡ್ ಮಾರುಕಟ್ಟೆಗೆ ಲಗ್ಗೆಯಿಟ್ಟರೂ ಎರಡನೇ ವರ್ಷದಿಂದ ಉತ್ತಮ ವ್ಯಾಪಾರ ಮಾಡಲು ಪ್ರಾರಂಭಿಸಿತು. ದೇಶದಾದ್ಯಂತ ಸುಮಾರು 20ಸಾವಿರಕ್ಕೂ ಹೆಚ್ಚು ಅಂಗಡಿಗಳಲ್ಲಿ GAIA ಉತ್ಪನ್ನಗಳು ದೊರಕುತ್ತವೆ. “ಚಿಲ್ಲರೆ ವ್ಯಾಪಾರ ಬಹಳ ಕಷ್ಟವಾದದ್ದು” ಎನ್ನುತ್ತಾರೆ ಡಾಲಿ. ಪ್ರಾರಂಭಿಕ ದಿನಗಳಲ್ಲಿ ಡಾಲಿ ಮತ್ತು ಕಂಪನಿ ಇತರೆ ಕೆಲಸಗಾರರು ಚಿಲ್ಲರೆ ಮಳಿಗೆಗಳಿಗೆ ಹೋಗಿ ಉತ್ಪನ್ನದ ಬಗ್ಗೆ ಮತ್ತು ಜನರ ಬಗ್ಗೆ ತಿಳಿದುಕೊಳ್ಳತೊಡಗಿದರು. “ಇದು ಬರುತ್ತೆ ಹಾಗೇ ಹೋಗುತ್ತೆ ಅನ್ನೋ ಉತ್ಪನ್ನದ ರೀತಿ ಇದೆ, ಹೆಸರೂ ಹಾಗೇ ಇದೆ ಎಂದು ಗ್ರಾಹಕರಿಂದ ಪ್ರತಿಕ್ರಯೆ ಸಿಕ್ಕರೆ, ಇದು ಹೊಸದಾದ್ರೂ ಪರವಾಗಿಲ್ಲ, ಜನರು ತೆಗೆದುಕೊಂಡು ಹೋಗ್ತಿದ್ದಾರೆ ಎಂದು ಮಾರಾಟ ವಲಯದಿಂದ ಬಂದ ಮಾತು ನಮ್ಮನ್ನು ಉತ್ತೇಜಿಸುತ್ತಿತ್ತು. ನಿಧಾನವಾಗಿ ಚಿಲ್ಲರೆ ವ್ಯಾಪಾರಿಗಳು ನಮ್ಮ ಉತ್ಪನ್ನಗಳನ್ನು ದಾಸ್ತಾನು ಇಡತೊಡಗಿದರು ಮತ್ತು ಗ್ರಾಹಕರು ಉತ್ಪನ್ನವನ್ನು ಖರೀದಿ ಮಾಡತೊಡಗಿದರು” ಎನ್ನುತ್ತಾರೆ ಡಾಲಿ.

ವಿಸ್ತರಣೆ ಯೋಜನೆ

ಸಕ್ಕರೆ ಖಾಯಿಲೆ ಇರುವವರಿಗೆ ವಿಶೇಷವಾದ ಹಗುರವಾದ ಉತ್ಪನ್ನಗಳನ್ನು ತಯಾರು ಮಾಡಲು GAIA ಯೋಜನೆ ರೂಪಿಸಿದೆ. ಕ್ರೀಡಾಪಟುಗಳಿಗೂ ವಿಶೇಷ ಆಹಾರ ಬಿಡುಗಡೆಗೆ ಯೋಜನೆ ಸಿದ್ದವಾಗಿದೆ.

ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕೆಂಬ ಉತ್ಸಾಹ ಇರುವವರು ನನ್ನ ರೋಲ್ ಮಾಡೆಲ್‍ಗಳು ಎನ್ನುತ್ತಾರೆ ಡಾಲಿ. ಯಶಸ್ಸಿನ ಶಿಖರವನ್ನು ತಲುಪಲು ಉತ್ಸಾಹ, ಶಿಸ್ತು ಮತ್ತು ಕಠಿಣ ಶ್ರಮ ಈ ಮೂರೂ ಪ್ರಮುಖ ಅಂಶಗಳು ಎನ್ನುತ್ತಾರೆ ಡಾಲಿ. ತಾನು ಸಮತೋಲಿತವಾದ ಶಾಂತಿಯುವವಾದ ಜೀವನದ ಜತೆ ಅತ್ಯುತ್ತಮ ಶ್ರಮದ ಜೀವನ ನಡೆಸುತ್ತಿದ್ದೇನೆ ಎಂದು ಹೇಳುತ್ತಾರೆ. ತಮ್ಮ ವೃತ್ತಿ ಜೀವನದ ಜತೆ ಕುಟುಂಬದ ಹಾರೈಕೆಯನ್ನೂ ಮಾಡುವ ತನ್ನ ತಾಯಿ ಮತ್ತು ಅತ್ತೆಯವರೂ ಸಹ ಡಾಲಿಗೆ ಸ್ಪೂರ್ತಿಯಾಗಿದ್ದಾರೆ.

ಪತಿ ಎಂಎನ್‍ಸಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ರೆ, ಮಗ 12ನೇ ತರಗತಿ ಮುಗಿಸಿ ಬ್ಯುಸಿನೆಸ್ ಸ್ಕೂಲ್‍ನಲ್ಲಿ ಕಲಿಯಲು ವಿದೇಶಕ್ಕೆ ಹೋಗಿದ್ದಾನೆ. ಡಾಲಿ ತನ್ನ ಅಪಾರ ಕೆಲಸದ ನಡುವೆಯೂ ಸಂಗೀತವನ್ನು ಆಲಿಸಲು ಇಷ್ಟಪಡುತ್ತಾರೆ.

ಎಕ್ಸೆರ್ಸೈಸ್ ಮತ್ತು ಯೋಗ ಆಕೆಯ ಇತರೆ ಪ್ರೇರಣೆ. “ಇದೆಲ್ಲದಕ್ಕಿಂತಾ ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣ, ಜನರ ಭೇಟಿ ಮತ್ತು ಸಂಸ್ಕøತಿ ಅನ್ವೇಷಣೆಯನ್ನು ನಾನು ಆನಂದಿಸುತ್ತೇನೆ” ಎನ್ನುತ್ತಾರೆ ಡಾಲಿ.

ಆಕೆ ಕೇವಲ ಬೋಧಿಸುತ್ತಾರೆ ಎಂದುಕೊಳ್ಳುವವರಿಗೊಂದು ಸೂಚನೆ. ‘ಫೀಲ್ ಯಂಗರ್, ಲೀವ್ ಲಾಂಗರ್’ ಎಂಬ ತನ್ನ ಬ್ರಾಂಡ್ ತತ್ವವನ್ನು ಉತ್ತಮ ಆರೋಗ್ಯಯುಕ್ತ ಜೀವನವನ್ನು ನಡೆಸೋದರ ಮೂಲಕ ಡಾಲಿ ಆಚರಿಸುತ್ತಿದ್ದಾರೆ.