10,000 ಸಾಲದಿಂದ ಕೋಟ್ಯಾಧಿಪತಿಯಾದ ದಿಲೀಪ್ ಶಾಂಘ್ವಿ ಕಥೆ..!
ಟೀಮ್ ವೈ.ಎಸ್. ಕನ್ನಡ
ಸಾಧಕರ ಒಂದೊಂದು ಹಾದಿ ಕೂಡ ವಿಭಿನ್ನವಾಗಿರುತ್ತದೆ. ಒಬ್ಬರು ತನ್ನದೇ ಆಲೋಚನೆಗಳಿಂದ ದೊಡ್ಡ ಉದ್ಯಮಿ ಆದ್ರೆ, ಮತ್ತೊಬ್ಬರಿಗೆ ಎಲ್ಲಿಂದಲೋ ಬಂದ ಸಹಾಯವೇ ಬೆಳವಣಿಗೆಯ ಹಾದಿ ಆಗಿರುತ್ತದೆ. ಇನ್ನು ಕೆಲವರಿಗೆ ಅದೃಷ್ಟದ ಜೊತೆಗೆ ಶ್ರದ್ಧೆ ಮತ್ತು ಪರಿಶ್ರಮ ಜೀವನವನ್ನು ಬದಲಿಸಿರುತ್ತದೆ. ಆದ್ರೆ ದಿಲಿಪ್ ಶಾಂಘ್ವಿ ಅನ್ನುವ ಉದ್ಯಮಿಯ ಕಥೆಯೇ ವಿಭಿನ್ನ.
ದಿಲೀಪ್ ಶಾಂಘ್ವಿಯವರ ತಂದೆ ಔಷಧಿ ವ್ಯಾಪಾರದ ಉದ್ಯಮದಲ್ಲಿದ್ದರು. ಅಪ್ಪನಿಂದ ದಿಲೀಪ್ 10,000 ರೂಪಾಯಿಗಳ ಸಾಲವನ್ನು ಪಡೆದು ಔಷಧ ಕಂಪನಿಯನ್ನು ಸ್ಥಾಪಿಸಿದ್ರು. ಆದ್ರೆ ಈಗ ದಿಲೀಪ್ ಶಾಂಘ್ವಿ ಭಾರತದ 2ನೇ ಅತೀ ಶ್ರೀಮಂತ ಉದ್ಯಮಿ. ಅಷ್ಟೇ ಅಲ್ಲ ಶ್ರೇಷ್ಟ ಉದ್ಯಮಿಗಳ ಸಾಲಿನಲ್ಲಿ ದಿಲೀಪ್ ಶಾಂಘ್ವಿ ಹೆಸರು ಕೂಡ ಇದೆ.
ದಿಲೀಪ್ ಹುಟ್ಟಿದ್ದು ಮುಂಬೈನಲ್ಲಿ. ಸ್ವಲ್ಪ ಸಮಯದ ನಂತ್ರ ದಿಲೀಪ್ ತಂದೆ ಕೊಲ್ಕತ್ತಾಕ್ಕೆ ಶಿಫ್ಟ್ ಆದ್ರು. ದಿಲೀಪ್ ಆರಂಭದಲ್ಲಿ ತನ್ನ ತಂದೆಯ ಹೋಲ್ ಸೇಲ್ ಔಷಧಿ ವ್ಯಾಪಾರಕ್ಕೆ ಹೆಗಲು ಕೊಟ್ಟಿದ್ದರು. ಕೊಲ್ಕತ್ತಾ ಯೂನಿವರ್ಸಿಟಿಯಿಂದ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದ ಬಳಿಕ ದಿಲೀಪ್ ಕೊಲ್ಕತ್ತಾದಲ್ಲೇ ತನ್ನ ಕಂಪನಿಯನ್ನು ಆರಂಭಿಸಿದರು. ಒಬ್ಬ ಉದ್ಯೋಗಿಯನ್ನು ಕೆಲಸಕ್ಕೆ ಇಟ್ಟುಕೊಂಡು ತಾನೇ ತಯಾರಿಸಿದ ಮನೋವೈದ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಔಷಧಿಯನ್ನು ಮಾರ್ಕೆಟಿಂಗ್ ಮಾಡುತ್ತಿದ್ದರು. ನಂತರ ದಿಲೀಪ್ ಮುಂಬೈಗೆ ವಾಪಾಸ್ ಬಂದ್ರು. ಅಷ್ಟೇ ಅಲ್ಲ ಗುಜರಾತ್ ರಾಜ್ಯದ ವಾಪಿಯಲ್ಲಿ ಮೊದಲ ಫ್ಯಾಕ್ಟರಿಯನ್ನು ಸ್ಥಾಪಿಸಿದರು.
ಇದನ್ನು ಓದಿ: ಎಂಜಿನಿಯರಿಂಗ್ಗೆ ಬೈಬೈ- ಕುದುರೆ ಸವಾರಿಗೆ ಹಾಯ್ ಹಾಯ್- ಹವ್ಯಾಸವೇ ಫುಲ್ ಟೈಂ ಜಾಬ್ ಆದ ಕಥೆ..!
ಸ್ವಂತ ಔಷಧಿ ಕಂಪನಿಯನ್ನು ಸ್ಥಾಪಿಸುವ ಕನಸುಸ ದಿಲೀಪ್ಗೆ ಸಾಕಷ್ಟು ಹಿಂದೆಯೇ ಹುಟ್ಟಿತ್ತು. ತನ್ನ ತಂದೆಗೆ ಔಷಧಿ ವ್ಯಾಪಾರದಲ್ಲಿ ಸಮಯದಲ್ಲೇ ದಿಲೀಪ್ ತನ್ನದೇ ಯಾದ ಔಷಧಿ ಕಂಪನಿಯನ್ನು ಸ್ಥಾಪಿಸುವ ಕನಸು ಕಂಡಿದ್ದರು. ಅಷ್ಟೇ ಅಲ್ಲ ಔಷಧಿ ಹೋಲ್ಸೇಲ್ ವ್ಯವಹಾರವನ್ನು ಸಾಕಷ್ಟು ದಿನ ಮುಂದುವರೆಸಲು ಸಾಧ್ಯವಿಲ್ಲ ಅನ್ನುವುದನ್ನು ಬೇಗನೆ ಅರಿತುಕೊಂಡಿದ್ದರು. ಹೀಗಾಗಿ ತನ್ನದೇ ಕಂಪನಿಯನ್ನು ಸ್ಥಾಪಿಸುವ ಲೆಕ್ಕಾಚಾರ ದೊಡ್ಡದಾಗುತ್ತಾ ಹೋಯಿತು. 1982ರಲ್ಲಿ ದಿಲೀಪ್ “ಸನ್” ಅನ್ನುವ ಕಂಪನಿಯನ್ನು ಆರಂಭಿಸಿದ್ರು. ಅದಕ್ಕೆ ದಿಲೀಪ್ ತನ್ನ ಅಪ್ಪನಿಂದಲೇ ಬಂಡವಾಳವನ್ನು ಕೂಡ ಪಡೆದಿದ್ದರು. ಗುಜರಾತ್ನ ವಾಪಿಯಲ್ಲಿ ತನ್ನ ಗೆಳೆಯನಿಂದ ಕೆಲವು ಮೆಟೇರಿಯಲ್ಗಳನ್ನು ಕೂಡ ಪಡೆದುಕೊಂಡರು. ಕೆಲವು ಗೆಳೆಯರು ಕೂಡ ದಿಲೀಪ್ಗೆ ಸಾಥ್ ನೀಡಿದ್ರು. ಕೊನೆಗೆ ಮನೋವಿಜ್ಞಾನಕ್ಕೆ ಸಂಬಂಧ ಪಟ್ಟ 5 ಔಷಧೀಯ ಉತ್ಪನ್ನಗಳನ್ನು ತಯಾರು ಮಾಡಲು ಆರಂಭಿಸಿದ್ರು. ದಿಲೀಪ್ ಕಂಪನಿ ಇನಿಷಿಯಲ್ ಪಬ್ಲಿಕ್ ಆಪರಿಂಗ್ ಅನ್ನು 1994ರಲ್ಲಿ ಪಡೆದ್ರೆ, 1996ರಲ್ಲಿ 24 ದೇಶಗಳಿಗೆ ತನ್ನ ತನ್ನ ಸೇಲ್ಸ್ ನೆಟ್ವರ್ಕ್ ಅನ್ನು ವಿಸ್ತರಿಸಿದ್ರು.
2011ರಲ್ಲಿ ರ್ಯಾನ್ಬ್ಯಾಕ್ಸಿ ಅನ್ನುವ ಮತ್ತೊಂದು ಔಷಧ ಕಂಪನಿ 2 ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ಪಡೆದು ಈ ಸಾಧನೆ ಮಾಡಿದ ಮೊದಲ ಔಷಧ ಕಂಪನಿ ಅನ್ನುವ ಹೆಗ್ಗಳಿಕೆ ಪಡೆಯಿತು. "ಸನ್ಫಾರ್ಮಾ" 1987ರಲ್ಲಿ ಕಣ್ಣಿಗೆ ಸಂಬಂಧಪಟ್ಟ ಔಷಧಿ ಕ್ರೇತ್ರದಲ್ಲಿ "ಮಿಲ್ಮೆಟ್ ಲ್ಯಾಬ್ಸ್" ಅನ್ನು ಹಿಮ್ಮೆಟ್ಟಿತು. "ಮಿಲ್ಮೆಟ್" 1987ರಲ್ಲಿ ವಿಶ್ವದಲ್ಲೇ 108ನೇ ಶ್ರೇಯಾಂಕ ಪಡೆದಿತ್ತು.
ದಿಲೀಪ್ "ಸನ್ ಫಾರ್ಮಾ"ವನ್ನು ಯುರೋಪ್ ಮತ್ತು ಯು.ಎಸ್. ಮಾರುಕಟ್ಟೆಗಳಿಗೆ ವಿಸ್ತರಿಸಿದ್ರು. ರ್ಯಾನ್ಬಾಕ್ಸಿಯನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದ್ದು ದಿಲೀಪ್ ಉದ್ಯಮಕ್ಕೆ ಹೊಸ ತಿರುವು ನೀಡಿತು. 2012ರಲ್ಲಿ "ಸನ್ ಫಾರ್ಮಾ", "URL ಫಾರ್ಮಾ" ವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಲೈವ್ಮಿಂಟ್ನಲಿ ಬ್ಲೂಮ್ಬರ್ಗ್ ಪ್ರಕಟಿಸಿದ ಡಾಟಾ ಪ್ರಕಾರ ದಿಲೀಪ್ ಶಾಂಘ್ವಿ ಸುಮಾರು 21.7 ಬಿಲಿಯನ್ ಅಮೆರಿಕನ್ ಡಾಲರ್ ಸಂಪಾದನೆ ಹೊಂದಿದ್ದಾರೆ. ಅಷ್ಟೇ ಅಲ್ಲ "ಸನ್ ಫಾರ್ಮಾ"ದಲ್ಲಿ ಸುಮಾರು 60.8 ಶೇಕಡಾ ಷೇರು ಹೊಂದಿದ್ದಾರೆ. "ಸನ್ಫಾರ್ಮಾ" ಭಾರತದ ನಂಬರ್ ವನ್ ಕಂಪನಿ ಆಗಿದ್ದರೆ, ವಿಶ್ವದಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.
“ ಒಬ್ಬ ಉತ್ತಮ ಉದ್ಯಮಿ ಇತರರಿಗಿಂತ ಮುನ್ನವೇ ಅವಕಾಶವನ್ನು ಬಳಸಿಕೊಳ್ಳುತ್ತಾನೆ. ಈಗಿರುವ ಅವಕಾಶಕ್ಕೆ ದುಡ್ಡು ಸುರಿಯುವ ದೈರ್ಯ ಮಾಡುತ್ತಾನೆ. ತನ್ನ ಕನಸನ್ನು ಬೆಳೆಸಿಕೊಳ್ಳಲು ಬಲಿಷ್ಟ ತಂಡವನ್ನು ಕಟ್ಟುತ್ತಾನೆ. ಅಷ್ಟೇ ಅಲ್ಲಪ್ಲಾನ್ಗಳನ್ನು ಚೆನ್ನಾಗಿ ಎಕ್ಸಿಕ್ಯುಟ್ ಮಾಡುತ್ತಾನೆ. ಪ್ರತಿನಿತ್ಯ ಮತ್ತು ಪ್ರತೀ ಕ್ಷಣದಲ್ಲೂ ಹೊಸದನ್ನು ಕಲಿಯುವ ಮನಸ್ಸು ಇಟ್ಟುಕೊಳ್ಳುತ್ತಾನೆ.”
- ದಿಲೀಪ್ ಶಾಂಘ್ವಿ, ಉದ್ಯಮಿ
ಶ್ರದ್ಧೆ, ಪರಿಶ್ರಮ ಮತ್ತು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ದಿಲೀಪ್ ಶಾಂಘ್ವಿಯವರನ್ನು ಶ್ರೇಷ್ಟ ಉದ್ಯಮಿಯನ್ನಾಗಿ ಮಾಡಿದೆ. ಇವತ್ತು ದಿಲೀಪ್ ಸಾಧನೆ ಎಲ್ಲರಿಗೂ ಮಾದರಿ ಆಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.
1. ಕೆಲಸದ ಟೆನ್ಷನ್ ಬಿಟ್ಟು ಬಿಡಿ- ಒಂದು ದಿನ ಕೃಷಿಕರಾಗಿ ಎಂಜಾಯ್ ಮಾಡಿ..!
2. ಡೆಬಿಟ್-ಕ್ರೆಡಿಟ್ ಕಾರ್ಡ್ ಇಲ್ಲದಿದ್ರು ವಹಿವಾಟು ಸಾಧ್ಯ- ಇದು ಡಿಜಿಟಲ್ ಇಂಡಿಯಾ ಕಾನ್ಸೆಪ್ಟ್ ಕನಸು
3. ಸ್ಮಾರ್ಟ್ಫೋನ್ನಲ್ಲೇ ಆರೋಗ್ಯ ಸಮಸ್ಯೆಗೆ ಉತ್ತರ- ಇದು "ಡಾಕ್ಟರ್ಸ್ ಲೈವ್" ಮ್ಯಾಜಿಕ್