ಆವೃತ್ತಿಗಳು
Kannada

ಮೈಸೂರಿನ ರಾಜಕುಮಾರ ಶ್ರೀಕಂಠದತ್ತ ಒಡೆಯರ್ ಅವರ ಕೆಲವೊಂದು ಮಾಹಿತಿಗಳು

Team YS Kannada
20th Jul 2015
Add to
Shares
0
Comments
Share This
Add to
Shares
0
Comments
Share

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಫೆಬ್ರವರಿ 20, 1953 ರಲ್ಲಿ ಜನಿಸಿದರು. ಹಾಗೆಯೇ ಒಡೆಯರ್ ಅವರು ಮೈಸೂರಿನ ರಾಜಕುಮಾರ. ಅವರ ತಂದೆ ಜಯಚಾಮರಾಜೇಂದ್ರ ಒಡೆಯರ್ ತಾಯಿ ತ್ರಿಪುರ ಸುಂದರಿ ಅಮ್ಮನಿ. ಒಡೆಯರ್ ಒಬ್ಬ ಫ್ಯಾಶನ್ ಡಿಸೈನರ್ ಮತ್ತು ಮೈಸೂರ್ ಸಿಲ್ಕ್ ಸೀರೆಯ ಪ್ರವರ್ತಕ. ಅವರ ತಂದೆ ತೀರಿಕೊಂಡ ನಂತರ ಶ್ರೀಕಂಠದತ್ತ ಒಡೆಯರ್ ಅವರು ಮೈಸೂರಿನ ರಾಜಕುಮಾರ ಆಗಿ ಅಧಿಕಾರ ಸ್ವೀಕಾರ ತೆಗೆದುಕೊಂಡರು .

image


ಶ್ರೀಕಂಠದತ್ತ ಒಡೆಯರ್ ಅವರು ತಮ್ಮ ಶಾಲಾ ಶಿಕ್ಷಣವನ್ನು ರಾಯಲ್ ಸ್ಕೂಲ್ ನಲ್ಲಿ ಮುಗಿಸಿದರು. ನಂತರ ಕುದುರೆ ಸವಾರಿಯನ್ನು ಮೈಸೂರಿನ ಗವರ್ನ್‌ಮೆಂಟ್ ರೈಡಿಂಗ್ ಸ್ಕೂಲ್ನಲ್ಲಿ ಮುಗಿಸಿದರು. ಅವರು ತಮ್ಮ ಪಿಯುಸಿ ಶಿಕ್ಷಣವನ್ನು ಮಹಾರಾಜ ಕಾಲೇಜ್ ನಲ್ಲಿ ಪೂರೈಸಿದರು. ಇಂಗ್ಲೀಷ್ ಮತ್ತು ಪೊಲಿಟಿಕಲ್ ಸೈನ್ಸ್ ಮೇಜರ್ ತೆಗೆದುಕೊಂಡು ಬಿಎ ಪದವಿಯನ್ನು ಮುಗಿಸಿದರು. ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಮಾನಸ ಗಂಗೋತ್ರಿ ಮೈಸೂರಿನಲ್ಲಿ ಪೊಲಿಟಿಕಲ್ ಸೈನ್ಸ್ ವಿಭಾಗದಲ್ಲಿ ಪಡೆದರು. ಅವರು ಕಾಲೇಜು ದಿನಗಳಿಂದಲೂ ಒಳ್ಳೆಯ ಕ್ರಿಕೆಟ್ ಆಟಗಾರರಾಗಿದ್ದರು. ಒಡೆಯರ್ ಅವರು ವೆಸ್ಟರ್ನ್ ಕ್ಲ್ಯಾಸಿಕಲ್ ಮ್ಯೂಸಿಕ್ ಕೂಡ ಕಲಿತಿದಿದ್ದಾರೆ. ಕರ್ನಾಟಿಕ್ ಕ್ಲ್ಯಾಸಿಕಲ್ ಮ್ಯೂಸಿಕ್ ಕೂಡ ಅಭ್ಯಾಸ ಮಾಡಿದ್ದಾರೆ.

ಅವರು ಕಾಲೇಜು ದಿನಗಳಲ್ಲಿ ಯೂನಿವರ್ಸಿಟೀ ತಂಡಕ್ಕೆ ನಾಯಕರಾಗಿ ಕ್ರಿಕೆಟ್ ತಂಡವನ್ನು ಮುನ್ನೆಡಿಸಿದರು. ಒಡೆಯರ್ ಅವರು ಬೆಟ್ಟದ ಕೋಟೆ ಅರಸು ಕುಟುಂಬದ ಪ್ರಮೋದ ದೇವಿಯನ್ನು ವರಿಸಿದರು. ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದು ಗೋಲ್ಡ್ ಮೆಡಲ್ ಪಡೆದಿದ್ದರು.

image


ಒಡೆಯರ್ ನ್ಯಾಶನಲ್ ಕಾಂಗ್ರೆಸ್ ಗೆ ಸದಸ್ಯರಾಗಿದ್ದರು. ಮೆಂಬರ್ ಆಫ್ ಪಾರ್ಲಿಮೆಂಟ್ ಗೆ ನಾಲ್ಕು ಬಾರಿ ಮೈಸೂರು ಪಾರ್ಲಿಮೆಂಟರಿ ಕಾನ್ಸ್ಟಿಟ್ಯೂಯೆನ್ಸೀ ಇಂದ ಸ್ಪರ್ಧಿಸಿದರು. ಆದರೆ ಎರಡು ಬಾರಿ ಮಾತ್ರ ಆಯ್ಕೆ ಆಗಿದ್ದರು. 1984 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. 1991 ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು. ನಂತರ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ವಾಪಸಾದರು. 1994 ಮತ್ತು 1999 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದರು. ಆದರೆ 2004 ಚುನಾವಣೆಯಲ್ಲಿ ಸೋಲು ಕಂಡರು. ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ನ ಪ್ರೆಸಿಡೆಂಟ್ ಆಗಿದ್ದರು.

ಒಡೆಯರ್ ಅವರು 10 ಡಿಸೆಂಬರ್ 2013 ರಂದು ಹೃದಯಾಘಾತದ ಪರಿಣಾಮ ನಿಧನ ಹೊಂದಿದ್ದರು. ಅವರ ಅಂತ್ಯಕ್ರಿಯೆಯನ್ನು ರಾಜ್ಯ ಗೌರವಗಳೊಂದಿಗೆ ಮಧುವನದಲ್ಲಿ ಮಾಡಲಾಯಿತು. ರಾಜ್ಯದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆ ಮಾಡಲಾಯಿತು.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags