ಆವೃತ್ತಿಗಳು
Kannada

ಖಡಕ್ ನಿರ್ಧಾರ ಮಾಡುವ ಯುವ ಐಎಎಸ್ ಆಫೀಸರ್- ಆಹಾರ ಉತ್ಪನ್ನಗಳ ಬಗ್ಗೆ ಕಾಳಜಿ ಮೂಡಿಸುತ್ತಿರುವ ಫುಡ್ ಸೇಫ್ಟಿ ಕಮಿಷನರ್

ಟೀಮ್​ ವೈ.ಎಸ್​. ಕನ್ನಡ

YourStory Kannada
20th Feb 2017
Add to
Shares
14
Comments
Share This
Add to
Shares
14
Comments
Share

ಟಿ.ವಿ. ಅನುಪಮ ಯುವ ಐಎಎಸ್ ಆಫೀಸರ್. ಕೇರಳದಲ್ಲಿ ಫುಡ್ ಸೇಫ್ಟಿ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಕೆ ದೈರ್ಯವಂತೆ. ಕೇರಳ ರಾಜ್ಯದಾದ್ಯಂತ ಕಲಬೆರಕೆ ಆಹಾರಗಳನ್ನು ತಯಾರಿಸುತ್ತಿದ್ದ ಹಲವು ಆಹಾರಾ ತಯಾರಿಕಾ ಸಂಸ್ಥೆಗಳಿಗೆ ದಾಳಿ ನಡೆಸಿ ಅದಕ್ಕೆ ಬೀಗ ಜಡಿದಿದ್ದಾರೆ. ಅಷ್ಟೇ ಅಲ್ಲ ಅಕ್ರಮ ಆಹಾರಾ ತಯಾರಿಕಾ ಸಂಸ್ಥೆಗಳಿಗೆ ಕಡಿವಾಣ ಹಾಕಿದ್ದಾರೆ. ಅನುಪಮ ಕಾರ್ಯವೈಖರಿ ಅನೇಕ ಬಾರಿ ಅವರಿಗೆ ಅಪಾಯ ಮತ್ತು ಬೆದರಿಕೆ ತಂದಿರುವುದು ಸುಳ್ಳಲ್ಲ. ಆದ್ರೆ ಅನುಪಮ ತನ್ನ ಕೆಲಸ ಮತ್ತು ಜವಾಬ್ದಾರಿ ವಿಷಯದಲ್ಲಿ ಎಳ್ಳಷ್ಟೂ ರಾಜಿಯಾಗುವ ಮಾತೇ ಇಲ್ಲ.

image


15 ತಿಂಗಳ ಹಿಂದೆ ಅನುಪಮ ಸಾಕಷ್ಟು ಪ್ರಸಿದ್ದಿ ಪಡೆದ ಆಹಾರಾ ತಯಾರಿಕಾ ಸಂಸ್ಥೆ ಒಂದಕ್ಕೆ ದಾಳಿ ಮಾಡಿದ್ದರು. ಅಲ್ಲಿ ಮನುಷ್ಯ ತಿನ್ನಲೇ ಬಾರದ ರಾಸಾಯನಿಕಗಳನ್ನು ಬೆರೆಸಿ ಆಹಾರ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. ಅನುಪಮ ನಡೆಸಿದ ದಾಳಿಯ ಪರಿಣಾಮ ಎನ್ನುವಂತೆ ಸದ್ಯ ಈ ಆಹಾರ ತಯಾರಿಕಾ ಸಂಸ್ಥೆಗೆ ನಿಷೇಧ ಹೇರಲಾಗಿದೆ. ಈ ದಾಳಿಯ ಬಳಿಕ ಮತ್ತಷ್ಟು ಸತ್ಯಗಳು ಹೊರ ಬಿದ್ದವು. ಹಣ್ಣುಗಳಿಗೆ ಮತ್ತು ತರಕಾರಿಗಳಿಗೆ ಸುಮಾರು 300 ಪಟ್ಟು ಅಧಿಕ ಔಷಧಿಗಳನ್ನು ಸಿಂಪಡಿಸಲಾಗುತ್ತಿತ್ತು. ಇದು ಮನುಷ್ಯನ ದೇಹ ಪ್ರವೇಶಿಸಿದರೆ ಆತನನ್ನು ದೇವರು ಕೂಡ ಕಾಪಾಡುವುದು ಕಷ್ಟ ಅನ್ನುವಷ್ಟರ ಮಟ್ಟಿಗೆ ಆ ಪದಾರ್ಥಗಳು ವಿಷಯುಕ್ತವಾಗಿದ್ದವು. ನ್ಯಾಯಾಲಯದ ಮುಂದೆ ಅನುಮಪ 6000ಕ್ಕೂ ಅಧಿಕ ಕಲಬೆರಕೆ ಆಹಾರಗಳ ಸ್ಯಾಂಪಲ್​ಗಳನ್ನು ದಾಖಲೆಯಾಗಿ ನೀಡಿದ್ದರು. 750ಕ್ಕೂ ಅಧಿಕ ಕೇಸ್​ಗಳು ಅಕ್ರಮ ಮತ್ತು ಕಲಬೆರಕೆ ಆಹಾರಾ ತಯಾರಿಸುವವರ ವಿರುದ್ಧ ದಾಖಲಾಗಿದೆ.

ಇದನ್ನು ಓದಿ: ಶಿಕ್ಷಣ ಜಗತ್ತಿಗೆ ಡಾ.ರಾಜ್ ಫ್ಯಾಮಿಲಿ- ಯುಪಿಎಸ್​ಸಿ ಆಕಾಂಕ್ಷಿಗಳಿಗೆ ಹೊಸ ಕನಸು

2011ರಲ್ಲಿ ಫುಡ್ ಸೇಫ್ಟಿ ಇಲಾಖೆ ಆರಂಭವಾದಾಗ ಇದು ಸರ್ಕಾರದ ಮತ್ತೊಂದು ಕಚೇರಿ ಅಂತಲೇ ಎಲ್ಲರೂ ಭಾವಿಸಿದ್ದರು. ಆರಂಭದಲ್ಲಿ ಬಂದ ಆಫೀಸರ್​​ಗಳಿಗೆ ಆಫೀಸ್ ಸೆಟ್ ಮಾಡುವುದೇ ದೊಡ್ಡ ಕೆಲಸವಾಗಿತ್ತು. ಆದ್ರೆ ಅನುಪಮ ಎಲ್ಲಾ ಸೀನ್​ಗಳನ್ನು ಬದಲಿಸಿಬಿಟ್ಟಿದ್ದಾರೆ. ಫುಡ್ ಸೇಫ್ಟಿ ಡಿಪಾರ್ಟ್​ಮೆಂಟ್ ಏನೇನು ಮಾಡಬಹುದು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

“ಪ್ರತಿದಿನವೂ ಒಂದಿಲ್ಲದಿದ್ದರೆ ಇನ್ನೊಂದು ಸವಾಲುಗಳು ಎದುರಾಗುತ್ತವೆ. ಅದಕ್ಕೆಲ್ಲಾ ರೆಡಿಮೇಡ್ ಉತ್ತರಗಳಿಲ್ಲ. ವಿಷಯುಕ್ತ ರಾಸಾಯನಿಕಗಳ ಬಗ್ಗೆ ನಮಗೆಲ್ಲರಿಗೂ ಗೊತ್ತು. ಆದ್ರೆ ಆ ಸಮಸ್ಯೆಗೆ ಪರಿಹಾರ ಏನು ಅನ್ನುವುದು ಗೊತ್ತಿರಲಿಲ್ಲ. ಜನ ತರಕಾರಿಗಳನ್ನು ಪ್ರತಿದಿನವೂ ಸೇವಿಸುತ್ತಾರೆ. ಅವುಗಳ ಮೇಲೆ ಕೇವಲ ನಿಷೇಧ ಮಾತ್ರ ಸಾಲದು. ಅದಕ್ಕೊಂದು ಪರಿಹಾರ ಬೇಕು. ಎಲ್ಲರಿಗೂ ಸಮಸ್ಯೆ ಬಗ್ಗೆ ಗೊತ್ತಿದೆ. ನಾವು ಇದ ಬಗ್ಗೆ ಮೀಟಿಂಗ್​ಗಳಲ್ಲಿ ಕೇವಲ ಮಾತನಾಡಲಿಲ್ಲ. ಬದಲಿಗೆ ಹಾನಿಕಾರಕ ವಸ್ತುಗಳ ಬಗ್ಗೆ ದಾಖಲೆಗಳನ್ನು ಒದಗಿಸಿದೆವು. ಉಳಿದ ಕೆಲಸವನ್ನು ಸರ್ಕಾರ ಮಾಡಿದೆ. ಜನರು ಕೂಡ ಈಗ ರಾಸಾಯನಿಕ ಮತ್ತು ವಿಷಯುಕ್ತ ಆಹಾರಗಳ ಬಗ್ಗೆ ಕಾಳಜಿವಹಿಸುತ್ತಿದ್ದಾರೆ. ಅವುಗಳ ಪರೀಕ್ಷೆಗಳಿಗೆ ಮುಂದಾಗುತ್ತಿದ್ದಾರೆ ”
ಟಿ.ವಿ. ಅನುಪಮ, ಐಎಎಸ್ ಆಫೀಸರ್

ಆಹಾರ ವಸ್ತುಗಳ ನಿಷೇಧದ ಬಗ್ಗೆ ಅನುಪಮ ಹೆಚ್ಚು ಅರಿತುಕೊಂಡಿದ್ದಾರೆ. ಅನುಪಮ ತನ್ನ ಕರ್ತವ್ಯದ ಅವಧಿಯಲ್ಲಿ ಸಾಕಷ್ಟು ದಾಳಿಗಳನ್ನು ಮಾಡಿದ್ದಾರೆ. ಆದ್ರೆ ಕೆಲವೊಂದು ಜನಸಾಮಾನ್ಯರ ಗಮನವನ್ನು ಹೆಚ್ಚು ಸೆಳೆದಿದೆ. ಇನ್ನು ಕೆಲವು ಆಹಾರಾ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುವ ರಿಪೋರ್ಟ್ ಗಳು ಬಂದಿವೆ. ಅವುಗಳನ್ನು ಜನರೇ ತ್ಯಜಿಸುವ ದಿನ ದೂರವಿಲ್ಲ ಅನ್ನುವ ಆಶಯ ಅನುಪಮಗಿದೆ.

ಅನುಪಮ ಮಾಡಿದ ದಾಳಿಗಳು ಕೇರಳದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಅಂಗಡಿಗಳಲ್ಲಿ ಸಿಗುವ ಆಹಾರಗಳು, ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುವ ವಿಷಯ ಸಾಕಷ್ಟು ಜನರಿಗೆ ತಿಳಿದಿದೆ. ಅಷ್ಟೇ ಅಲ್ಲ ಜನರು ತರಕಾರಿಗಳನ್ನು ತಮ್ಮ ಮನೆಯಲ್ಲೇ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೊರಗಿನ ಆಹಾರಗಳನ್ನು ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಸೇವಿಸುತ್ತಿದ್ದಾರೆ. ಇದಕ್ಕೆ ಸರಕಾರ ಕೂಡ ಪ್ರೋತ್ಸಾಹ ನೀಡುತ್ತಿದೆ. ಇವತ್ತು ಕರ್ನಾಟಕ ಮತ್ತು ತಮಿಳುನಾಡಿನಿಂದ ಕೇರಳಕ್ಕೆ ಪ್ರವೇಶಿಸುತ್ತಿದ್ದ ಶೇಕಡಾ 70ರಷ್ಟು ತರಕಾರಿಗಳಿಗೆ ಕಡಿವಾಣ ಬಿದ್ದಿದೆ.

2010ರಲ್ಲಿ ಅನುಮಪ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದಾಗಲೇ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದರು. ಈಗ ಸರಕಾರಿ ಸೇವಕಿಯಾಗಿ ಸಂಚಲನ ಸೃಷ್ಟಿಸಿದ್ದಾರೆ. ಆದ್ರೆ ಅನುಪಮ ಇವುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.

“ಪ್ರಚಾರ ಪಡೆಯುವ ಬಗ್ಗೆ ನನಗೆ ಆಸಕ್ತಿ ಇಲ್ಲ. ನನ್ನದೇ ಆದ ಫೇಸ್ ಬುಕ್ ಕೂಡ ಇಲ್ಲ. ಟ್ವಿಟರ್ ಮತ್ತು ವೆರಿಫೈಡ್ ಆಫೀಶಿಯಲ್ ಪೇಜ್​ಗಳು ಕೂಡ ಇಲ್ಲ. ಆದ್ರೆ ಕೆಲವೊಮ್ಮೆ ಅಗತ್ಯ ಬಿದ್ದಾಗ ವೆಬ್ ಸೈಟ್​​ಗಳ ಮೂಲಕ ಜನರಿಗೆ ವಿಷಯ ತಿಳಿಸುತ್ತೇನೆ. ನಾನು ಮಾಡುವ ಕೆಲಸಕ್ಕೆ ಇಷ್ಟೊಂದು ಜನ ಬೆಂಬಲ ಸಿಗುತ್ತದೆ ಅನ್ನುವುದನ್ನು ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ.”
ಟಿ.ವಿ. ಅನುಪಮ, ಐಎಎಸ್ ಆಫೀಸರ್

ಒಟ್ಟಿನಲ್ಲಿ ಅನುಪಮ ಮಾಡುತ್ತಿರುವ ಕೆಲಸ ಜನರ ಯೋಚನೆ ಮತ್ತು ಲೈಫ್ ಸ್ಟೈಲ್ ಅನ್ನು ಕೂಡ ನಿಧಾನವಾಗಿ ಬದಲಿಸುತ್ತಿದೆ. ಮೋಸವನ್ನೇ ಬಂಡವಾಳ ಮಾಡಿಕೊಂಡವರ ಜನ್ಮ ಜಾಲಾಡುತ್ತಿದ್ದಾರೆ. 

ಇದನ್ನು ಓದಿ:

1. ತೆರೆ ಹಿಂದೆ ಡಾಕ್ಟರ್​...ಸಿನಿಮಾದಲ್ಲಿ ಆ್ಯಕ್ಟರ್​​..!

2. ಗರ್ಭಧಾರಣೆಯ ಪ್ರತಿ ಸಮಯದಲ್ಲೂ ನಿಮ್ಮ ಸಂಗಾತಿ ಈ ಆ್ಯಪ್

3. ಭಾರತೀಯ ಮೂಲದ ಬ್ರಿಟನ್ ಪೊಲೀಸ್ ಅಧಿಕಾರಿಗೆ ಶೌರ್ಯ ಪ್ರಶಸ್ತಿ..

Add to
Shares
14
Comments
Share This
Add to
Shares
14
Comments
Share
Report an issue
Authors

Related Tags