ಫೋಟೋಗಳೇ ಮಾತಾಗಿ ಕಥೆ ಹೇಳುತ್ತವೆ..!

ಟೀಮ್​ ವೈ.ಎಸ್​. ಕನ್ನಡ

ಫೋಟೋಗಳೇ ಮಾತಾಗಿ ಕಥೆ ಹೇಳುತ್ತವೆ..!

Wednesday April 12, 2017,

2 min Read

ಇವತ್ತು ಪ್ರತಿಭೆ ಕೇವಲ ಬಹುಮಾನ ಪಡೆದುಕೊಳ್ಳುವುದಕ್ಕಷ್ಟೇ ಸೀಮಿತವಾಗಿಲ್ಲ. ಅದರಾಚೆಗೂ ಬದುಕು ಕಟ್ಟಿಕೊಳ್ಳುವ ಒಂದು ಆರ್ಥಿಕ ಮೂಲವಾಗಿದೆ. ಕೃತಿ ಭಟ್ ಇದಕ್ಕೊಂದು ಉತ್ತಮ ಉದಾಹರಣೆ. ಕೃತಿ ಹುಟ್ಟಿ ಬೆಳೆದಿದ್ದು ಸಾಂಸ್ಕೃತಿಕ ನಗರಿ ಖ್ಯಾತಿಯ ಮೈಸೂರಿನಲ್ಲಿ. ಎಂಜಿನಿಯರಿಂಗ್ ಮುಗಿಸಿದ್ದು ಐತಿಹಾಸಿಕ ನಗರಿಯ ಎನ್‍ಐಇ ಕಾಲೇಜಿನಲ್ಲಿ. ನಂತರ ಪ್ರತಿಷ್ಠಿತ ಎಂ.ಎನ್​.ಸಿ. ಕಂಪನಿಯಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿ 4 ವರ್ಷ ಕಾರ್ಯ ನಿರ್ವಹಿಸಿದ್ರು. ನಂತರ ಮದುವೆ. ಈಗ ಅಮೇರಿಕಾದಲ್ಲಿ ವಾಸ. ಈ ಹಂತದಲ್ಲೇ ಅವರು ತಮ್ಮನ್ನು ಕಂಡುಕೊಂಡವರು. ತಮ್ಮದಲ್ಲದ ನೆಲದಲ್ಲಿ ತಮ್ಮ ಹೊಸ ಐಡೆಂಟಿಗಾಗಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ.

image


ಕ್ಯಾಮೆರ ಕಣ್ಣು

ಹೌದು..! ಕೃತಿ ಸಾಫ್ಟ್​ವೇರ್ ಎಂಜಿನಿಯರ್ ಅಷ್ಟೇ ಅಲ್ಲ ಅವರೊಬ್ಬ ಪ್ರೊಫೆಷನಲ್ ಫೋಟೋಗ್ರಾಪರ್ ಕೂಡ ಹೌದು. ಪುರುಷರೇ ಡಾಮಿನೇಟ್​ ಮಾಡುತ್ತಿರುವ ಕ್ಷೇತ್ರವಾಗಿರುವ ಬ್ರೈಡಲ್ ಫೋಟೋಗ್ರಫಿಯಲ್ಲಿ ತಮ್ಮದೇ ಕೈ ಚಳಕ ಮೆರೆದಿದ್ದಾರೆ. ಫೋಟೋಗ್ರಫಿಯನ್ನೇ ಸ್ವಯಂ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಮೊಟ್ಟ ಮೊದಲು ದಾವಣಗೆರೆಯಲ್ಲಿ ಕರ್ನಾಟಕ ಮತ್ತು ಗುಜರಾತ್ ಜೋಡಿಯೊಂದರ ಮದುವೆ ಫೋಟೋಗ್ರಫಿ ಮಾಡಿದ್ದರು. ಈ ಮೊದಲ ಪ್ರಾಜೆಕ್ಟ್ ಕೃತಿಯವರಿಗೆ ಹೆಚ್ಚು ಆತ್ಮವಿಶ್ವಾಸ ತುಂಬಿತ್ತು. ಅಲ್ಲಿಂದ ಇಲ್ಲಿಯ ತನಕ ಸಾಕಷ್ಟು ಫೋಟೋ ಶೂಟ್ಸ್, ಈವೆಂಟ್​ಗಳನ್ನು ಕವರ್ ಮಾಡಿದ್ದಾರೆ.

image


ರಿಲ್ಯಾಕ್ಸ್​ನಿಂದ ರಿಲೀಫ್ ತನಕ

ವೃತ್ತಿ ಮಧ್ಯೆ ಬದಲಾವಣೆಗಾಗಿ ಕಲಿತ ಫೊಟೋಗ್ರಫಿ ನಿಧಾನವಾಗಿ ಕೃತಿಯವರಲ್ಲಿ ಆಸಕ್ತಿ ಹೆಚ್ಚಿಸಿತು. ಇದಕ್ಕಾಗಿ ಇಂಟರ್‍ನೆಟ್ ಮೂಲಕ ಸಾಕಷ್ಟು ವಿಷಯ ಸಂಗ್ರಹಿಸಿದರು. ದೊಡ್ಡ ದೊಡ್ಡ ಫೋಟೋಗ್ರಾಫರ್‍ಗಳ ಪೇಜ್ ಫಾಲೋ ಮಾಡಲು ಆರಂಭಿಸಿದ್ರು. ಪ್ರಕೃತಿಯನ್ನು ಹೆಚ್ಚು ಗಮನಿಸತೊಡಗಿದರು. ನಿಧಾನವಾಗಿ ಅವರ ಒಳಗಣ್ಣು ತೆರೆದುಕೊಂಡಿತು. ಒಳ್ಳೊಳ್ಳೆ ಛಾಯಚಿತ್ರ ತೆಗೆದರು. ಗೆಳೆಯರ ಬಳಗ ಪ್ರೋತ್ಸಾಹ ನೀಡಿತು. ಫೋಟೋಗ್ರಫಿಯನ್ನೇ ಉದ್ಯೋಗ ಮಾಡಿಕೊಂಡರು.

image


ಸ್ವಲ್ಪ ಕಷ್ಟ ಜಾಸ್ತಿ ಖುಷಿ

ಹೌದು. "ಆರಂಭದಲ್ಲಿ ನಿಮಗೆ ಇಲ್ಲಿ ಕ್ಲೈಂಟ್ಸ್ ಸಿಗೋದು ಕಷ್ಟವಾಗಬಹುದು ಆದರೆ ನಿರಂತರ ಪ್ರಯತ್ನ, ಒಳ್ಳೆ ಮಾರ್ಕೆಟಿಂಗ್ ಮೂಲಕ ನೀವು ಗೆಲ್ಲಬಹುದು". ಅಂತಾರೆ ಕೃತಿ. ಯಾವುದೇ ಸ್ಟಾರ್ಟ್ ಅಪ್ ಆದ್ರೂ ಆರಂಭದಲ್ಲಿ ಸ್ವಲ್ಪ ಟಫ್ ಅನಿಸಿದ್ರೂ ನಂತರ ಖುಷಿ ತಂದುಕೊಡುತ್ತದೆ ಅಂತಲೂ ಹೇಳ್ತಾರೆ

ಇಂಟರ್‍ನೆಟ್ ಗ್ರಾಹಕರು

ಇಂಟರ್‍ನೆಟ್ ಮೂಲಕ ಹೆಚ್ಚು ಗ್ರಾಹಕರನ್ನು ಹೊಂದಿರುವ ಕೃತಿ. ಫೇಸ್‍ಬುಕ್, ಆನ್‍ಲೈನ್ ಮೂಲಕ ಗ್ರಾಹಕರನ್ನು ಮೀಟ್ ಮಾಡ್ತಾರೆ. ಒಳ್ಳೆಯ ಮಾತುಕಥೆಯ ಮೂಲಕ ಕೆಲಸವನ್ನು ವಿವರಿಸಿ ಎಲ್ಲವನ್ನು ಫೈನಲೈಸ್ ಮಾಡಿ ನಂತರ ಮುಂದುವರೆಯುತ್ತಾರೆ. ಇದು ಅವರ ಸಕ್ಸಸ್ ಸೂತ್ರ.

image


ಮೈ ಸ್ಟೇಟಸ್

ಹೊಸದಾಗಿ ಸ್ಟಾರ್ಟ್​ಅಪ್ ಮಾಡುವವರಿಗೆ ಕೃತಿ ಮಾತು ನಿಜಕ್ಕೂ ಸ್ಪೂರ್ತಿ ತುಂಬುತ್ತದೆ. ಎಲ್ಲವನ್ನು ಒಂದೇ ದಿನದಲ್ಲಿ ಕಲಿಯಲು ಸಾಧ್ಯವಿಲ್ಲ. ನಿರಂತರವಾಗಿ ನಮ್ಮ ಗುರಿಯ ಮೇಲೆ ಕೆಲಸ ಮಾಡುತ್ತಿರಬೇಕು. 

"ಹೈ ಎಂಡ್ ಕ್ಯಾಮೆರಾಗಳು ಅದ್ಭುತ ಚಿತ್ರಗಳನ್ನು ತೆಗೆಯುವುದಿಲ್ಲ, ಆ ಲೆನ್ಸ್ ಹಿಂದೆ ಇರುವ ಕಣ್ಣುಗಳಿಗೆ ಮಾತ್ರ ಆ ಶಕ್ತಿ ಇರುತ್ತದೆ. ಆದ್ದರಿಂದ ಆಲೋಚನೆ ಹೊಸದಿರಲಿ. ಪಾಸಿಟಿವ್ ನಂಬಿಕೆಗಳಿರಲಿ." 
ಕೃತಿ, ಫೋಟೋಗ್ರಾಫಿ ತಜ್ಞೆ

ಸೋ ಇವತ್ತು ಫೋಟೋಗ್ರಫಿ ಕೂಡ ಅತಿ ಹೆಚ್ಚು ಹಣ ನೀಡುವ ಉದ್ಯಮ. ಸ್ವಲ್ಪ ಆಸಕ್ತಿ ಮತ್ತು ಶ್ರದ್ಧೆ ಇಟ್ಟರೆ ಈ ಕ್ಷೇತ್ರದಲ್ಲಿ ಹಣ ಮತ್ತು ಹೆಸರು ಖಂಡಿತಾ ದಕ್ಕುತ್ತದೆ. ಎಲ್ಲೆಲ್ಲೋ ಇನ್ವೆಸ್ಟ್ ಮಾಡೋ ಮುಂಚೆ ಇಲ್ಲಿ ಸ್ವಲ್ಪ ಯೋಚಿಸಿ. 

ಇದನ್ನು ಓದಿ:

1. 10*10 ಚಿಕ್ಕಕೋಣೆಯಿಂದ 1,000 ಕೋಟಿಯ ಮಾಲೀಕನಾದ ತನಕ..!

2. ನಾಯಿಗಳ ಪಾಲಿಗೆ ಸ್ವರ್ಗ- ಬೆಂಗಳೂರಿನಲ್ಲಿದೆ "ಡಾಗ್ಸ್​ಪಾರ್ಕ್​"

3. ಸ್ವೈಪಿಂಗ್​ ಮಷಿನ್​ಗಳಿಗೆ ಸಿಗಲಿದೆ ಬಹುಭಾಷೆಯ ಟಚ್​- ಡಿಜಿಟಲ್​ ಪಾವತಿ ವ್ಯವಸ್ಥೆಗೆ ಹೊಸ ​ಕಿಕ್​