ನೆಮ್ಮದಿಯಿಂದ ನಿದ್ರಿಸಬೇಕಾದ್ರೆ ಮನೆಗೆ ತನ್ನಿ ಇನ್ವಿಸಿಬಲ್ ಬೆಡ್

ಟೀಮ್​ ವೈ.ಎಸ್​. ಕನ್ನಡ

ನೆಮ್ಮದಿಯಿಂದ ನಿದ್ರಿಸಬೇಕಾದ್ರೆ ಮನೆಗೆ ತನ್ನಿ ಇನ್ವಿಸಿಬಲ್ ಬೆಡ್

Thursday March 03, 2016,

3 min Read

ಆಧುನಿಕ ಕಾಲದಲ್ಲಿ ಉದ್ಯೋಗಕ್ಕಾಗಿ ಜನ ಬೇರೆ ಊರುಗಳಿಗೆ ಹೋಗುವ ಅನಿವಾರ್ಯತೆ ಎದುರಾಗಿದೆ. ಒಂದೂರಿನಿಂದ ಇನ್ನೊಂದು ಊರಿಗೆ ಹೋಗುವುದು ತಲೆನೋವಿನ ಕೆಲಸ. ಚಿಕ್ಕ ರೂಮುಗಳಲ್ಲಂತೂ ಸಾಮಾನುಗಳನ್ನು ಇಟ್ಟುಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ಜನಸಾಮಾನ್ಯ ಸಾಮಾನ್ಯವಾಗಿ ಐಷಾರಾಮಿ ಮನೆಗಳಿಗೆ ಜಾಸ್ತಿ ಖರ್ಚು ಮಾಡಲು ಇಷ್ಟ ಪಡುವುದಿಲ್ಲ. ಸಿಂಗಲ್ ಅಥವಾ ಡಬಲ್ ಬೆಡ್ ರೂಂಗಳಲ್ಲಿಯೇ ಎಲ್ಲ ವಸ್ತುಗಳನ್ನು ಸುಂದರವಾಗಿ ಜೋಡಿಸಿಕೊಂಡು, ಜೀವನ ಸಾಗಿಸಲು ಬಯಸುತ್ತಾನೆ.

image


ಟೀನಾ ನಾಜ್ ಅವರಿಗೆ ಕೆಲಸಕ್ಕಾಗಿ ಬೇರೆ ಊರಿಗೆ ಹೋಗುವ ಅನಿವಾರ್ಯತೆ ಎದುರಾಗಿತ್ತು. ಅಲ್ಲಿ ಸಿಂಗಲ್ ಬೆಡ್ ರೂಂನ ಮನೆ ಮಾಡಿದ್ರು. ಅವರ ವಸ್ತುಗಳಿಂದಾಗಿ ಮನೆ ಚಿಕ್ಕದಾಗಿ ಕಾಣ್ತಾ ಇತ್ತು. ಪುಸ್ತಕ,ಸಿಡಿ,ಟಿವಿ,ಅಡುಗೆ ವಸ್ತುಗಳನ್ನು ಎಲ್ಲಿ ಜೋಡಿಸುವುದೆಂಬುದು ಅವರಿಗೆ ತಿಳಿಯುತ್ತಿರಲಿಲ್ಲ. ಯೋಗ ಮಾಡುವ ಅಭ್ಯಾಸವೂ ಅವರಿಗಿದ್ದಿದ್ದರಿಂದ ಪ್ರತಿದಿನ ಎಲ್ಲ ಕುರ್ಚಿಗಳನ್ನು ಬದಿಗಿಟ್ಟು ಯೋಗಾಭ್ಯಾಸ ಮಾಡಬೇಕಿತ್ತು. ಆದ್ರೀಗ ಅವರಿಗೆ ಆ ಕಿರಿಕಿರಿ ಇಲ್ಲ. ಟೀನಾರ ಸಮಸ್ಯೆಗೆ ಮುಕ್ತಿ ನೀಡಿದ್ದು Invisible bed.ಆಶ್ಚರ್ಯ ಪಡಬೇಡಿ. ಇದೊಂದು ಬಹುಉಪಯೋಗಿ ಬೆಡ್. ಒಂದು ಹಾಸಿಗೆಯಾಗಿ,ಟೇಬಲ್ ಆಗಿ,ಕಪಾಟಿನ ರೂಪದಲ್ಲಿ ಇದನ್ನು ಬಳಸಬಹುದಾಗಿದೆ. ಅವಶ್ಯಕತೆ ಇಲ್ಲದ ವೇಳೆ ಇದನ್ನು ಗೋಡೆಯಾಗಿಯೂ ಬದಲಾಯಿಸಬಹುದು. ಹೈಡ್ರಾಲಿಕ್ಸ್ ಅಸಿಸ್ಟ್ ಸಿಸ್ಟಮ್ ಲಿಫ್ಟ್ ಸಹಾಯದಿಂದ ಇದನ್ನು ಸುಲಭವಾಗಿ ತೆರೆದು,ಮುಚ್ಚಿ ಮಾಡಬಹುದಾಗಿದೆ.

ಅಗತ್ಯತೆಗಳೇ ಮನುಷ್ಯನಿಗೆ ಹೊಸದನ್ನು ಮಾಡಲು ಪ್ರೇರಣೆ ಎಂಬ ಒಂದು ಮಾತಿದೆ. ಪ್ರಶಾಂತ್ ಹವಿನ್ಹಲ್ ಹಾಗೂ ಕಿರಣ್ ಕೇಜಿಗೆ ಈ ಮಾತು ಸರಿಯಾಗಿ ಹೊಂದುತ್ತದೆ. ಪ್ರಶಾಂತ್ ಹಾಗೂ ಕಿರಣ್ ಬೆಂಗಳೂರಿನ ನಿವಾಸಿಗಳು. ಬೆಂಗಳೂರಿನ 360 ಚದರ ಅಡಿಯ ಒಂದು ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಾರೆ. ಜಾಗ ಕಡಿಮೆ ಇದ್ದ ಕಾರಣ ಅವರ ಪಿಠೋಪಕರಣಗಳನ್ನು ಸರಿಯಾದ ಜೋಡಿಸಿಡಲು ಸಾಧ್ಯವಾಗ್ತಾ ಇರಲಿಲ್ಲ. ಈ ಬಗ್ಗೆ ಅಧ್ಯಯನ ನಡೆಸಿದಾಗ ಇವರ ತಲೆಗೆ ಬಂದಿದ್ದು Invisible bed ಡಿಸೈನ್. ಜಾಗ ಉಳಿಸುವ ದೃಷ್ಠಿಯಿಂದ ಗೋಡೆಗೆ ಒರಗಿಸಿ ಇಡಬಹುದಾದಂತಹ ಬೆಡ್ಡೊಂದರ ಡಿಸೈನ್ ಮಾಡಿದರು. ಪಶ್ಚಿಮ ದೇಶಗಳಲ್ಲಿ ಇದನ್ನು ಮರ್ಫಿ ಬೆಡ್ ಎಂದು ಕರೆಯುತ್ತಾರೆ. ಇದರ ಜೊತೆಗೆ ಬೆಡ್ ಗೆ ಫಿಟ್ ಆಗುವಂತಹ ಟೇಬಲ್ ಕೂಡ ಡಿಜೈನ್ ಮಾಡಿದರು. ಇದನ್ನು ನೋಡಿದ ಇವರ ಸ್ನೇಹಿತರು ಪ್ರಶಾಂತ್ ಹಾಗೂ ಕಿರಣ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹೊಗಳಿಕೆ ಉದ್ಯೋಗಕ್ಕೆ ಪ್ರೇರಣೆಯಾಯ್ತು.

image


ಇವರು ಬೆಂಗಳೂರಿನ ಕೆ.ಆರ್ ಮಾರ್ಕೆಟ್ ನ ಸಣ್ಣ ಗಲ್ಲಿಯಲ್ಲಿ ಕೆಲಸ ಶುರುಮಾಡಿದ್ರು. ಅಲ್ಲಿದ್ದ ಕಾರ್ಪೆಂಟರ್ ಇವರ ಹೇಳಿದ್ದನ್ನು ಅರ್ಥಮಾಡಿಕೊಳ್ಳುತ್ತಿರಲಿಲ್ಲ. ಇದು ಕಾರ್ಪೆಂಟರ್ ಕೆಲಸವಲ್ಲ, ಫ್ಯಾಬ್ರಿಕೇಟರ್ಸ್ ನಿಂದ ಮಾಡಿಸೋಣ ಎಂಬ ನಿರ್ಧಾರಕ್ಕೆ ಬಂದ ಪ್ರಶಾಂತ್ ಹಾಗೂ ಕಿರಣ್ ,ಅದೃಷ್ಟಕ್ಕೆ ಒಬ್ಬ ಫ್ಯಾಬ್ರಿಕೇಟರ್ಸ್ ಸಿಕ್ಕಿದ್ರು. ಅವರು ತುಂಬಾ ಓದಿರಲಿಲ್ಲ. ಆದ್ರೆ ಈ ಉದ್ಯಮದಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡಿದ್ರು. ಹಾಗಾಗಿ ಸರಿಯಾದ ಮಾಹಿತಿ ನೀಡಿದ್ರೆ ಏನು ಬೇಕಾದ್ರೂ ಮಾಡುವ ಸಾಮರ್ಥ್ಯ ಅವರಿಗಿತ್ತಂತೆ.

ಪ್ರಶಾಂತ್ ಮತ್ತು ಕಿರಣ್ ತಮ್ಮ ಜೊತೆ ಫ್ಯಾಬ್ರಿಕೇಟರ್ಸ್ ಒಬ್ಬರನ್ನು ಸೇರಿಸಿಕೊಂಡರು. ಕೆಲಸಕ್ಕಾಗಿ ಚಿಕ್ಕ ಜಾಗವನ್ನು ಬಾಡಿಗೆಗೆ ಪಡೆದರು. ಆರಂಭದಲ್ಲಿ ಎಲ್ಲರಂತೆ ಇವರಿಗೂ ಕೆಲವು ಸಮಸ್ಯೆಗಳು ಎದುರಾದವು. ದಿನ ಕಳೆದಂತೆ ಇವರ ಸಮಸ್ಯೆ ಬಗೆಹರಿಯುತ್ತ ಬಂತು.2013ರಲ್ಲಿ Invisible bed ಮಾರುಕಟ್ಟೆಗೆ ಬಂತು. ಗುಣಮಟ್ಟದಲ್ಲಿ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಇದನ್ನು ಖುದ್ದು ತಾವೇ ನಿಂತು ತಯಾರಿಸಿದ್ರು ಪ್ರಶಾಂತ್ ಹಾಗೂ ಕಿರಣ್.

image


ಆರಂಭದ ದಿನಗಳಲ್ಲಿ ಬೆಡ್ ಖರೀದಿಸಲು ಬರುವ ಗ್ರಾಹಕರಿಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದ್ದವು. ಇದು ಆರಾಮದಾಯಕವಾಗಿದೆಯಾ? ಇದು ಎಷ್ಟು ದಿನ ಬಾಳಿಕೆ ಬರಬಹುದು? ಇದು ಮುರಿದುಹೋದ್ರೆ? ಎಂದು ಕೇಳುತ್ತಿದ್ದರಂತೆ. ಗುಣಮಟ್ಟದಲ್ಲಿ ಎರಡು ಮಾತಿಲ್ಲ. 20 ಸಾವಿರ ಬಾರಿ ಪರೀಕ್ಷೆಗೊಳಪಡಿಸಿ ಇದನ್ನು ತಯಾರಿಸಲಾಗಿದೆ ಎಂದು ಪ್ರಶಾಂತ್ ಭರವಸೆ ನೀಡುತ್ತಿದ್ದರಂತೆ. ಜೊತೆಗೆ 3 ವರ್ಷಗಳ ಗ್ಯಾರಂಟಿ ಕೂಡ ನೀಡುತ್ತಿದ್ದರಂತೆ. ಆಗಸ್ಟ್ 2013ರಿಂದ ಮಾರುಕಟ್ಟೆಗೆ ಬಂದ ಈ ಬೆಡ್ ಬೇಡಿಕೆ ಪ್ರತಿ ತಿಂಗಳು ಡಬಲ್ ಆಗ್ತಾ ಇತ್ತು. ಚೆನ್ನೈ,ಪಾಂಡಿಚೇರಿ ಹಾಗೂ ಬೆಂಗಳೂರಿನಲ್ಲಿ Invisible bed ವೆಬ್ಸೈಟ್ ಶುರುವಾಯ್ತು.

ಪಿಠೋಪಕರಣ ಕ್ಷೇತ್ರದಲ್ಲಿ ದೊಡ್ಡ ಕಂಪನಿಗಳು ಕೆಲಸ ಮಾಡ್ತಾ ಇವೆ. ಅವರ ಜೊತೆ ಯಾವ ಕಂಪನಿಗಳೂ ಸ್ಪರ್ಧೆ ನೀಡಲು ಸಾಧ್ಯವಿಲ್ಲ. ಅವರ ಗಮನ ಕ್ರಿಯಾತ್ಮಕ ಪಿಠೋಪಕರಣಗಳ ಮೇಲಿದೆ. ತಮ್ಮ ಮನೆಯ ಜಾಗವನ್ನು ಸದುಪಯೋಗಪಡಿಸಿಕೊಳ್ಳುವಂತ ಗ್ರಾಹಕರೇ ಅವರ ಬಳಿ ಇದ್ದಾರೆ. ಈ ಜನರಿಂದಾಗಿ ಆನ್ಲೈನ್ ಮಾರುಕಟ್ಟೆಯಲ್ಲಿ Urban Ladder, Fab Furnishಗೆ ಬಹಳ ಬೇಡಿಕೆ ಇದೆ ಎನ್ನುತ್ತಾರೆ ಪ್ರಶಾಂತ್. ದಕ್ಷಿಣ ಭಾರತಕ್ಕೂ Invisible bed ಲಗ್ಗೆ ಇಟ್ಟಿದ್ದು,ಅವರ ಗಮನ ಈಗ ದೇಶದ ಬೇರೆ ನಗರಗಳತ್ತ ನೆಟ್ಟಿದೆ. ಐದು ವರ್ಷಗಳಲ್ಲಿ 21 ನಗರಗಳಿಗೆ Invisible bed ತಲುಪಿಸುವ ಗುರಿ ಇವರದ್ದಾಗಿದೆ. ಇದಕ್ಕಾಗಿ ಹೂಡಿಕೆದಾರರ ಹುಡುಕಾಟ ನಡೆದಿದೆ.

ಲೇಖಕರು : ಹರೀಶ್

ಅನುವಾದಕರು: ರೂಪಾ ಹೆಗಡೆ