ಸ್ಟಾರ್ಟ್‍ಅಪ್ ರಾಕ್‍ಸ್ಟಾರ್‍ಗಳ ಯಶಸ್ಸು ಮತ್ತು ಸೋಲಿನ ಪಾಠ
ಆರ್.ಪಿ.
ಭೂತ ಮತ್ತು ವರ್ತಮಾನಗಳು
ಶಕ್ತಿಶಾಲಿ ಗಂಗಾ ನದಿಗೆ ಅಡ್ಡಲಾಗಿ ಒಂದು ಬೃಹತ್ ಕಟ್ಟಡ ಕಟ್ಟಿಸೋ ಬಗ್ಗೆ ರಾಯಲ್ ಬ್ರಿಟಿಷ್ ಆರ್ಮಿಯ ಉತ್ತರ ಪ್ರಾಂತ್ಯದ ಯುವ ಪ್ರಧಾನ ದಂಡನಾಯಕ 1847ರಲ್ಲೇ ಯೋಚಸಿದ್ದ. ಇದರಿಂದ ಉತ್ತರ ಭಾರತದ ಬಂಜರು ಭೂಮಿಗೆ ಜೀವ ಕೊಡುವುದು ಆತನ ಗುರಿಯಾಗಿತ್ತು. ಸೋಲಾನಿ ಕಾಲುವೆ ಸಿವಿಲ್ ಎಂಜಿನಿಯರಿಂಗ್‍ನ ಅದ್ಭುತ ಮತ್ತು ಮಾನವ ಶಕ್ತಿ ಬಳಕೆಯ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುವುದರ ಜತೆ ಐಐಟಿ-ರೂರ್ಕೆಲ ಉತ್ತಮ ಹೆಸರು ಮಾಡಲು ಕಾರಣವಾಗಿದೆ.
168 ವರ್ಷಗಳ ನಂತ್ರ ಥಾಮ್ಸನ್ ಕಾಲೇಜ್ ಆಫ್ ಸಿವಿಲ್ ಎಂಜಿನಿಯರಿಂಗ್ ಎಂದು ಕರೆಸಿಕೊಳ್ತಿದ್ದ ಕಾಲೇಜು ಈಗ ಐಐಟಿ-ರೂರ್ಕೆಲಾ ಎಂದು ಹೆಸರುವಾಸಿಯಾಗಿದೆ. ಅಲ್ಲದೇ ದೇಶದ ಅತ್ಯುನ್ನತ ತಂತ್ರಜ್ಞಾನ ಸಂಸ್ಥೆಯಾಗಿ ಬೆಳೆದಿದೆ. ಶಿಕ್ಷಣದಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿರೋ ಐಐಟಿ-ಆರ್ ಹಲವಾರು ವಿಜ್ಞಾನಿಗಳು, ತಂತ್ರಜ್ಞರು, ಮ್ಯಾನೇಜರ್ಸ್, ನಾಯಕರು ಮತ್ತು ಉದ್ಯಮಿಗಳನ್ನು ಕೊಟ್ಟಿದೆ. ಭೌಗೋಳಿಕವಾಗಿ ಸಣ್ಣ ಪ್ರದೇಶವಾದ್ರೂ ಶ್ರಮಜೀವಿಗಳು ಮತ್ತು ಚಿಂತಕರನ್ನೊಳಗೊಂಡ ಸಮುದಾಯವನ್ನು ಹೊಂದಿದೆ.
ಜೋಕರ್‍ಗಳ ಹಿಂಡು
ಐಐಟಿ-ಆರ್ ವಿದ್ಯಾರ್ಥಿಗಳಾದ ಲಲಿತ್ ಮಂಗಲ್ ಮತ್ತು ಸುಮಿತ್ ಜೈನ್‍ರ ಕನಸಿನ ಕೂಸು ಕಾಮನ್‍ಫ್ಲೋರ್.ಕಾಮ್. ದಶಲಕ್ಷ ಡಾಲರ್ ಮೊಬೈಲ್ ಜಾಹೀರಾತು ಸೇವೆ ಕಂಪನಿಯಾದ ಇನ್‍ಮೊಬಿ ಸಹ-ಸಂಸ್ಥಾಪಕ ಮತ್ತು ಸಿಟಿಒ ಆಗಿರೋ 1997ರ ಬ್ಯಾಚ್‍ನ ವಿದ್ಯಾರ್ಥಿ ಮೋಹಿತ್ ಸಕ್ಸೇನಾರ ಕನಸಿನ ಕೂಸು. ಸ್ಟಾರ್ಟ್‍ಅಪ್ ದೈತ್ಯರಾದ ಕಾಮನ್‍ಫ್ಲೋರ್.ಕಾಮ್, ಇನ್‍ಮೊಬಿ, ಆಕ್ಸಿಜೆನ್, ಜೈಪೇ ಗ್ರೂಪ್ ಬಿಟ್ರೆ ಬೆಳವಣಿಗೆ ಹಂತದಲ್ಲಿರೋ ರೇಜರ್‍ಪೇ, ಫುಡ್‍ಪಾಂಡಾ, ಇನ್ಸ್ಟಾಲೈವ್ಲಿ, ರೇಸ್ಎಕ್ಸ್ಪರ್ಟ್ಸ್, ಈಸಿಸೋಲಾರ್ ಸ್ಟಾರ್ಟ್‍ಅಪ್ ಸಮುದಾಯದಲ್ಲಿ ಹೆಸರು ಮಾಡ್ತಿದೆ.
ಸ್ಟಾರ್ಟ್‍ಅಪ್‍ಗಳ ಯಶಸ್ವಿ ಉದ್ಯಮದ ಅಲೆಯಲ್ಲಿ ಐಐಟಿ ಶಿಕ್ಷಣ ಹೆಚ್ಚು ಮುಂಚೂಣಿಯಲ್ಲಿದೆ. ಬಾಂಬೆ, ಡೆಲ್ಲಿ ಮತ್ತು ಖರಗ್‍ಪುರ್ ಐಐಟಿಗಳು ಕ್ಯಾಂಪಸ್ ಸ್ಟಾರ್ಟ್‍ಅಪ್‍ಗಳ ಹುಟ್ಟಿಗೆ ಬೆಚ್ಚನೆಯ ವಾತಾವರಣ ಕಲ್ಪಿಸುತ್ತದೆ. ಮತ್ತೊಂಡೆದೆ ಐಐಟಿ ರೂರ್ಕೆಲಾ ತನ್ನ ವಿಭಿನ್ನ ಜನಸಂಖ್ಯಾ ಶಾಸ್ತ್ರ ಮತ್ತು ಸಾಂಪ್ರದಾಯಿಕ ವಿಶ್ವವಿದ್ಯಾಲದ ಸಂ ಸ್ಕೃತಿ ಹೊಂದಿರೋದ್ರಿಂದ ಇಲ್ಲಿ ಕ್ಯಾಂಪಸ್ ಸ್ಟಾರ್ಟ್‍ಅಪ್‍ಗಳ ಹುಟ್ಟಿಗೆ ಉತ್ತಮ ವಾತಾವರಣ ಅಭಿವೃದ್ಧಿಯಾಗಬೇಕು. ಕ್ಯಾಂಪಸ್‍ನಲ್ಲಿ ಉದ್ಯಮಶೀಲತೆಯ ಸ್ಫೂರ್ತಿ ಬಿತ್ತಲು ಮತ್ತು ಸ್ಟಾರ್ಟ್‍ಅಪ್ ಸಂಸ್ಕೃತಿಯ ಪ್ರಚಾರ ಮಾಡಲು ವಾರ್ಷಿಕ ಸಾಂಸ್ಕೃತಿಕ ಉತ್ಸವ ಥಾಮ್ಸೋ 2015ರಲ್ಲಿ ಐಐಟಿ-ಆರ್ ನ ಎಂಟ್ರೆಪ್ರೆನರ್‍ಶಿಪ್ ಡೆವೆಲಪ್‍ಮೆಂಟ್ ಸೆಲ್ ವೆಂಚರ್ ಅನ್‍ಪ್ಲಗ್ಡ್ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು.
ತಜ್ಞರ ತಂಡ
ಫ್ರಮ್ ಸ್ಪಾರ್ಕ್ ಟು ಫೈರ್ ಎಂಬ ನಾಣ್ಣುಡಿಯಂತೆ ಶುರುವಾದ ತಜ್ಞರ ಚರ್ಚೆ ಐಐಟಿ-ಆರ್‍ನಲ್ಲಿ ಉದ್ಯಮಿಗಳಾಗ ಬಯಸುವವರಿಗೆ ಪ್ರಕಾಶಮಾನವಾದ ಅನುಭವ ನೀಡಿತು. ಐಐಟಿ-ಆರ್‍ನ ಹಲವು ಯಶಸ್ವಿ ಉದ್ಯಮಿಗಳ ಚರ್ಚೆಗಳನ್ನು ವಿದ್ಯಾರ್ಥಿಗಳು ಇಷ್ಟಪಟ್ಟರು. ಚರ್ಚೆಯಲ್ಲಿ ಆಕ್ಸಿಜನ್ ಯುಎಸ್‍ಎ ಇಂಕ್‍ನ ಸ್ಥಾಪಕ ಮತ್ತು ಚೇರ್‍ಮನ್ ಪ್ರಮೋದ್ ಸಕ್ಸೇನಾ, ಇನ್‍ಮೊಬಿ ಸಹ ಸಂಸ್ಥಾಪಕ ಮತ್ತು ಸಿಟಿಒ ಮೋಹಿತ್ ಸಕ್ಸೇನಾ, ಟೆಕ್ನೋಪಾರ್ಕ್ ಅಡ್ವೈಸರ್‍ನ ಚೇರ್‍ಮನ್ ಅರವಿಂದ್ ಸಿಂಘಾಲ್ ಮತ್ತು ಫುಡ್‍ಪಾಂಡಾ ಸಿಇಒ ಮತ್ತು ಸಹ ಸಂಸ್ಥಾಪಕ ಸೌರಭ್ ಕೊಚ್ಚಾರ್ ಪಾಲ್ಗೊಂಡಿದ್ದರು. ಪ್ರಮೋದ್‍ರ ಅನುಭವ, ಮೋಹಿತ್‍ನ ನೈಪುಣ್ಯತೆ, ಸೌರಭ್‍ನ ಉತ್ಸಾಹ ಮತ್ತು ಶಕ್ತಿ ಹಾಗೂ ಅರವಿಂದ್‍ರ ವ್ಯಾಪಾರದ ಅಂತರಾಳದ ಬಗ್ಗೆ ಚರ್ಚೆ ಬೆಳಕು ಚೆಲ್ಲಿತು.
2000 ಡಾಲರ್‍ನಿಂದ ದಶಲಕ್ಷ ಡಾಲರ್‍ವರೆಗೆ
ಹೊಸ ಕಂಪನಿಯನ್ನು ಹುಟ್ಟುಹಾಕಲು ಮಾರುಕಟ್ಟೆಯ ಸರಿಯಾದ ನಿರರ್ಥಕ ಕಂಡುಹಿಡಿಯುವುದು ಪರಿಣಾಮಕಾರಿಯಾದ ಮಾರ್ಗ. ಇನ್‍ಮೊಬಿಯ ಪ್ರಾಥಮಿಕ ದಿನಗಳಲ್ಲಿ ತಮ್ಮ 2000 ಡಾಲರ್ ಉಳಿತಾಯವನ್ನು ಕೇವಲ ಒಂದು ಆಲೋಚನೆಯಿಂದ ಹೇಗೆ ಹಲವು ದಶಲಕ್ಷ ಡಾಲರ್ ಕಂಪನಿಯಾಗಿ ಬದಲಾಯಿಸಿದ್ದು ಎಂದು ಮೋಹಿತ್ ನೆನಪಿಸಿಕೊಳ್ಳುತ್ತಾರೆ. “ನಾವು ಕೆಲಸ ಮಾಡಲು ಆರಿಸಿಕೊಳ್ಳುವ ವಲಯದ ಸಾಮಾಜಿಕ ನಾಡಿಬಡಿತವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಾವು ಶುರುಮಾಡಿದ್ದ ಉದ್ಯಮ ಯಶಸ್ಸು ಕಾಣಲಿಲ್ಲ. ನಾನು ಮತ್ತು ಸಹ ಸಂಸ್ಥಾಪಕ ನಂತ್ರ ಮಾರುಕಟ್ಟೆಯ ನಿರರ್ಥಕವನ್ನು ಅರ್ಥ ಮಾಡಿಕೊಂಡೆವು. ಏಷ್ಯಾದ ದೇಶಗಳಲ್ಲಿ ಮೊಬೈಲ್ ಜಾಹೀರಾತು ವಲಯದಲ್ಲಿ ಮಾರುಕಟ್ಟೆ ಬೆಳೆಸಲು ವಿಫುಲ ಅವಕಾಶ ಮತ್ತು ಅಗತ್ಯತೆಗಳ ಬಗ್ಗೆ ಅರಿವು ಮೂಡಿತು. ಹೀಗಾಗಿ ಇನ್‍ಮೊಬಿ ಹುಟ್ಟಿಕೊಂಡಿತು”.
ಫುಡ್‍ಪಾಂಡಾದ ಸೌರಭ್ ಪ್ರಕಾರ ಒಂದು ಉತ್ಪನ್ನ ಅಥವಾ ಸೇವೆಯ ಪ್ರಾರಂಭಕ್ಕೂ ಮೊದಲು ಸರಿಯಾದ ದೃಷ್ಟಿಕೋನ ಮತ್ತು ಅಗತ್ಯತೆಯ ಸ್ಪಷ್ಟನೆ ಬಗ್ಗೆ ಆಲೋಚಿಸುವುದು ಮುಖ್ಯ. “ನಮ್ಮ ಮೊದಲ ಕಂಪನಿಯ ತಪ್ಪು ಕೂಡ ಇದೇ ಆಗಿತ್ತು. ನಮ್ಮ ಸಂಸ್ಥೆಯು ಮಾರುಕಟ್ಟೆಯ ಯಾವ ಸಮಸ್ಯೆಯನ್ನು ಬಗೆಹರಿಸುತ್ತಿದೆ ಅನ್ನೋ ಪ್ರಶ್ನೆಗೆ ನಮಗೇ ಉತ್ತರ ಸಿಗಲಿಲ್ಲ” ಎಂದು ಪ್ರಿಂಟ್‍ವೆನ್ಯೂ.ಕಾಮ್‍ನ ಸಹ ಸಂಸ್ಥಾಪಕ ಹೇಳ್ತಾರೆ. “ಆಗಲೇ ನಾನು ಸಂಸ್ಥೆಯನ್ನು ಮುಚ್ಚಿ ಮತ್ತೆ ತಳಮಟ್ಟದಿಂದ ಪ್ರಾರಂಭಿಸುವ ಬಗ್ಗೆ ನಿರ್ಧಾರ ಮಾಡಿದೆ. ಆದ್ರೆ ಮಾರುಕಟ್ಟೆಯ ವಾಸ್ತವವನ್ನು ಗ್ರಹಿಸಿದ ಮೇಲೆ ನಾನು ಸಂಪೂರ್ಣವಾಗಿ ಹೊಸ ದಿಕ್ಕಿನಲ್ಲಿ ಆಲೋಚಿಸಬೇಕಾಯಿತು” ಎಂದು ಹೇಳ್ತಾರೆ.
ಗೋಡೆಗೆ ಮತ್ತೊಂದು ಇಟ್ಟಿಗೆ
ಸ್ಟಾರ್ಟ್‍ಅಪ್‍ನ ಯಶಸ್ಸಿನಿಂದ ಹಿಡಿದು ತಮ್ಮ ಆಲೋಚನೆಯ ಸಾಕಾರಕ್ಕೆ ನಿಧಿ ಸಂಗ್ರಹಣೆಯವರೆಗೂ ಹಲವಾರು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವುದು ಕಾಲೇಜು ವಿದ್ಯಾರ್ಥಿಯ ಪ್ರಮುಖ ಸಂಶೋದನೆಯಾಗಿರುತ್ತೆ. ಆದರೂ ಯಶಸ್ವಿ ಸಂಸ್ಥೆಯನ್ನು ಸ್ಥಾಪಿಸಲು ಸಾಮಾನ್ಯ ವಿಧಾನವೆಂದ್ರೆ ವೇಗದ ಆಲೋಚನೆ ವiತ್ತು ಚತುರ ಕೆಲಸ.
“ಇಂದು ಉದ್ಯಮ, ಸಮಯದ ವಿರುದ್ಧದ ಓಟವಾಗಿದೆ. ತಂತ್ರಜ್ಞಾನ ಯುಗದಲ್ಲಿ ಹೊಸ ಬದಲಾವಣೆಗಳನ್ನು ಮತ್ತು ಪ್ರವೃತ್ತಿಗಳನ್ನು ಆದಷ್ಟು ಬೇಗ ಅಳವಡಿಸಿಕೊಳ್ಳಬೇಕು” ಎಂದು ಹೇಳ್ತಾರೆ ಆಕ್ಸಿಜೆನ್ ವಾಲೆಟ್‍ನ ಪ್ರಮೋದ್. “ದಿನ ಕಳೆದಂತೆ ತಂತ್ರಜ್ಞಾನ ಉದ್ಯಮ ಬದಲಾಗುತ್ತದೆ. ಈ ಸಂದರ್ಭದಲ್ಲಿ ಉದ್ಯಮಿಯೊಬ್ಬ ತನ್ನ ಕಾರ್ಯವಿಧಾನವನ್ನು ಬದಲಾಯಿಸಿ, ಹೊಸ ತಂತ್ರಜ್ಞಾನವನ್ನು ಪ್ರಯತ್ನಿಸುವುದು ಮೊದಲಿಗಿಂತಲೂ ನಿರ್ಣಾಯಕ. ಸ್ಟಾರ್ಟ್‍ಅಪ್‍ಗೆ ಹಣ ಸಂಗ್ರಹದ ಬಗ್ಗೆ ಉದ್ಯಮಿ ಹೆಚ್ಚಿನ ಗಮನಹರಿಸಬಾರದು. ನಿಧಿ ಸಂಗ್ರಹಣೆಯೇ ಉದ್ಯಮದ ಪ್ರಮುಖ ಉದ್ದೇಶವೂ ಆಗಬಾರದು”.
ಯಶಸ್ಸು ಮತ್ತು ಸೋಲಿನ ಮಧ್ಯೆ ಎಲ್ಲವೂ ಇದೆ
ಸರಿಯಾದ ಪ್ರೇಕ್ಷಕರನ್ನು ತಲುಪುವ ಸೇವೆಯನ್ನು ಹುಟ್ಟುಹಾಕುವುದು ಹಾಗೂ ವಿಶಿಷ್ಟ ಮತ್ತು ವಿಶ್ವಾಸಾರ್ಹವಾಗಿರುವುದು ಯಶಸ್ವಿ ಉದ್ಯಮದ ತಳಹದಿ. “ನೀವು ಜಾಣನೆಂದು ನಿಮಗೆ ಅನಿಸಿದ್ರೆ, ಜಾಣತನದಿಂದಲೇ ಏನಾದರೂ ಮಾಡಿ” ಎಂದು ಅರವಿಂದ್ ಹೇಳಿದ್ದು ಆ ಸಂಜೆಯ ಶಕ್ತಿಯುತ ಮಾತಾಗಿತ್ತು. ಶ್ರೇಷ್ಠ ನಿರ್ಣಾಯಕತೆಯ ಪ್ರಾಮುಖ್ಯತೆ ಮತ್ತು ಪರಿಪೂರ್ಣತೆಯ ದಾಹ ಆತನ ಕೆಲಸ ಬೇಡುತ್ತದೆ.
ಇತ್ತೀಚಿನ ಹಲವಾರು ಉದ್ಯವಮಗಳ ಸೋಲಿಗೆ ಶಿಸ್ತು ಇಲ್ಲದಿರೋದು ಮತ್ತೊಂದು ಪ್ರಮುಖ ಕಾರಣವಾಗಿದೆ. “ಅವರ ಆಲೋಚನೆ ಉತ್ತಮವಾಗಿದ್ದರೂ ಸಹ ಉದ್ಯಮಕ್ಕೆ ಹಣದ ಒಳಹರಿವನ್ನು ನಿಭಾಯಿಸಲು ಹೆಚ್ಚಿನ ಸ್ಟಾರ್ಟ್‍ಅಪ್ ಸ್ಥಾಪಕರಿಗೆ ಸಾಧ್ಯವಾಗದೇ ಇದ್ದುದರಿಂದ ಮತ್ತು ತಪ್ಪು ಹೂಡಿಕೆಗಳಿಂದ ಹಲವಾರು ಉದ್ಯಮಗಳು ಬಾಗಿಲು ಹಾಕಿವೆ” ಎಂದು ಹೇಳ್ತಾರೆ ಸೌರಭ್. ವಿರೋಧಾಭಾಸ ಮತ್ತು ಸಂದಿಗ್ಧತೆಯಿಂದ ಕೂಡಿದ ಹೇಳಿಕೆಯನ್ನು ನೀಡಿದ ನಂತ್ರ ಪ್ರಮೋದ್ ತನ್ನ ಚರ್ಚೆಯನ್ನು ಹೀಗೆ ಮುಕ್ತಾಯ ಮಾಡ್ತಾರೆ, “ಬೇಸರ ಅಂದ್ರೆ, ಜೀವನದಲ್ಲಿ ಸೋಲಿಗೆ ವಿನ್ಯಾಸ ಮಾಡಲಾಗೋದಿಲ್ಲ”.
ಮೌಲ್ಯ ಮಾಡಬೇಕಾ - ಬೇಡವಾ
ಎಲಾನ್ ಮಸ್ಕ್ ಅಥವಾ ಮಾರ್ಕ್ ಜುಕರ್‍ಬರ್ಗ್ ನಂತೆ ಆಗಬೇಕೆನ್ನೋದು ತಮ್ಮ ಉದ್ಯಮದ ಬಗ್ಗೆ ಉತ್ಪ್ರೇಕ್ಷೆಯಿಂದ ಹೇಳಿಕೊಂಡು ತಾರಾಪಟ್ಟ ಗಿಟ್ಟಿಸಿಕೊಳ್ಳುವ ಎಲ್ಲಾ ಉದ್ಯಮಿಗಳ ಆಸೆಯಾಗಿರುತ್ತದೆ. ಆದ್ರೆ ವಾಸ್ತವದಲ್ಲಿ ತಮ್ಮ ಆಲೋಚನೆಯ ಸಂಭಾವ್ಯತೆಯನ್ನು ಅತಿಯಾಗಿ ಅಂದಾಜು ಮಾಡುವುದು 10 ರಲ್ಲಿ 9 ಸ್ಟಾರ್ಟ್‍ಅಪ್‍ಗಳು ಸೋಲುವುದಕ್ಕೆ ಕಾರಣವಾಗಿದೆ. ಹೆಚ್ಚಿನ ಹೊಸ ಸ್ಟಾರ್ಟ್‍ಅಪ್‍ಗಳು ಮೌಲ್ಯಮಾಪನಕ್ಕೆ ಹೆಚ್ಚಿನ ಜಾಗ ಕೊಡದಿರೋದ್ರಿಂದ ಸೋಲು ಕಾಣುತ್ತಿದೆ. ಇಂತಹ ಕಂಪನಿಗಳು ಸಾಲ ತೀರಿಸಲು ಹೂಡಿಕೆಗಾಗಿ ಪರಡಾದುವುದನ್ನೂ ನಾವು ನೋಡುತ್ತೇವೆ.
ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್‍ಗಳು ಹಳೇ ಆಲೋಚನೆಯನ್ನೇ ಮರುಬಳಕೆ ಮಾಡುತ್ತಿವೆ ಮತ್ತು ಸ್ಥಳೀಯ ಮಾರುಕಟ್ಟೆಯ ಯಾವ ಸಮಸ್ಯೆಯನ್ನು ಬಗೆಹರಿಸುತ್ತೀವಿ ಎಂಬ ನಿಖರ ಯೋಜನೆ ಇಲ್ಲದೆಯೂ ಅವರು ಸಾಕಷ್ಟು ಹೂಡಿಕೆಯನ್ನು ಪಡೆಯುತ್ತಿದ್ದಾರೆ.
“ಎಲ್ಲ ವ್ಯಾಪಾರವನ್ನು ಮೌಲ್ಯ ಮಾಡಲಾಗದು. ವೇಗದ ಬೆಳವಣಿಗೆಯು ಅತಿಯಾದ ಒತ್ತಡ ತರಬಲ್ಲದು ಮತ್ತು ಉದ್ಯಮ ಮುರಿದು ಬೀಳಲು ಕಾರಣವಾಗಬಲ್ಲದು. ಉದ್ಯಮಿಯೊಬ್ಬ ಮೌಲ್ಯಮಾಡುವ ತನ್ನ ನಿರ್ಧಾರಕ್ಕೂ ಮುನ್ನ ಎಚ್ಚರದಿಂದ ಇರಬೇಕು” ಅನ್ನೋದು ಅರವಿಂದ್ ಮಾತು. ಇ-ಕಾಮರ್ಸ್ ವಲಯದ ಬಗ್ಗೆ ಇಂದಿನ ಉದ್ಯಮಿಗಳ ಮನಸ್ಥಿತಿಗೆ ದುಃಖಿಸುತ್ತಾ, ಗೊತ್ತುಗುರಿಯಿಲ್ಲದ ಅವಕಾಶಗಳನ್ನು ಬಿಟ್ಟು ನಿಮ್ಮ ಆಲೋಚನೆಯನ್ನು ಹಿಂಬಾಲಿಸಿ ಎಂದು ಮೋಹಿತ್ ವಿದ್ಯಾರ್ಥಿಗಳಿಗೆ ಸಲಹೆ ನೀಡ್ತಾರೆ.
ಜಪಾನ್‍ನ ಹಳೇ ಗಾದೆ “ಮೊದಲ ಬಾರಿ ಸರಿಯಾದ್ದನ್ನು ಮಾಡಿ” ಎಂದು ಹೇಳ್ತಾ, “ನಿಮ್ಮ ಯೋಚನೆ ಮತ್ತು ಹಣ ವಿನಿಯೋಗದ ಬಗ್ಗೆ ಶಿಸ್ತಿನಿಂದ ಇರಿ. ಅದೇ ಸಮಯದಲ್ಲಿ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಮರುಕಳಿಸದಂತೆ ಕ್ರಮ ತೆಗೆದುಕೊಂಡು ಸರಿಯಾದ ಮಾರ್ಗದಲ್ಲಿ ಮುನ್ನಡೆಯೋದರ ಬಗ್ಗೆ ಭರವಸೆ ಕೊಡಬೇಕು” ಎಂದು ಇನ್‍ಮೊಬಿ ಸಿಟಿಒ ಮೋಹಿತ್ ಹೇಳ್ತಾರೆ.