Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಪೂರ್ತಿ ಕೆಲಸ ಮತ್ತು ಪೂರ್ತಿ ಆಟ, ಇದು ಆನ್ನಲೀಸ್ ಪಿಯರ್ಸ್‍ನ “ನೌ! ಲೆಟ್ಸ್ ಪ್ಲೇ” ನ ಗುರಿ

ಆರ್​​.ಪಿ.

ಪೂರ್ತಿ ಕೆಲಸ ಮತ್ತು ಪೂರ್ತಿ ಆಟ, ಇದು ಆನ್ನಲೀಸ್ ಪಿಯರ್ಸ್‍ನ “ನೌ! ಲೆಟ್ಸ್ ಪ್ಲೇ” ನ ಗುರಿ

Tuesday November 17, 2015 , 3 min Read

“ಇತರೆ ಯಶಸ್ವಿ ಉದ್ಯಮಿಯಂತೆ, ನಾನು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವವಳಾಗಿದ್ದೆ. ಮುಖ್ಯವಾಗಿ ನಿಮಗೇನು ಬೇಕಿದೆ ಎಂದು ನಿಮಗೆ ಗೊತ್ತಿದ್ದರೆ ಅದು ಫಲ ಕೊಡುತ್ತದೆ ಎಂದು ನನ್ನ ನಂಬಿಕೆ. ನಾನು ಹಲವಾರು ತಪ್ಪುಗಳನ್ನು ಮಾಡಿದ್ದೇನೆಂದು ಗೊತ್ತು. ಆದ್ರೆ ಅದೆಲ್ಲದ್ದಕ್ಕೂ ಒಂದು ಕಾರಣವಿದೆಯೆಂದು ನಂಬಿದ್ದೇನೆ ಮತ್ತು ಉತ್ತಮಗೊಳ್ಳಲು ಅದು ಅವಕಾಶ ಕೊಡುತ್ತದೆ” ಎನ್ನುತ್ತಾರೆ ಆನ್ನಲೀಸ್ ಪಿಯರ್ಸ್. ಈಕೆ ನೊಂದಾಯಿತ ವೈದ್ಯೆ ಮತ್ತು ನರ ಭಾಷಾ ಪ್ರೊಗ್ರಾಮಿಂಗ್‍ನ ತರಬೇತುಗಾರ್ತಿ ಹಾಗೂ ಮೊದಲ ಪೀಳಿಗೆಯ ಉದ್ಯಮಿ ಕೂಡ.

ಆನ್ನಲೀಸ್ ಮತ್ತು ರಾಹುಲ್ ಜಾರ್ಜ್ ಜತೆಗೂಡಿ 2011ರಲ್ಲಿ ನೌ! ಲೆಟ್ಸ್ ಪ್ಲೇ ಪ್ರಾರಂಭಿಸಿದರು. ವಿಶೇಷ ಕಲ್ಪನೆಯ ನಾಟಕ ಮತ್ತು ತಂತ್ರವನ್ನು ಸೇರಿಸಿ ಅಭಿವೃದ್ಧಿಪಡಿಸಿದ ಆಟ. ತಂಡವನ್ನು ಕಟ್ಟುವುದು ಮತ್ತು ನಾಯಕತ್ವ ಕಾರ್ಯಕ್ರಮದ ಬಗ್ಗೆ ಆಟದ ಮೂಲಕ ಹೇಳಿಕೊಡುವುದು ಇದರ ಮೂಲಮಂತ್ರ. ಆದ್ರೂ ಅವರಿಗೆ ಇದರ ಫಲಿತಾಂಶ ತೃಪ್ತಿ ಕೊಟ್ಟಿರಲಿಲ್ಲ. ವೈಯಕ್ತಿಕವಾಗಿ ಪ್ರತಿಯೊಬ್ಬರ ಕೆಲಸದ ಮೇಲೂ ಇದು ಪರಿಣಾಮ ಮೂಡಿಸಬೇಕೆಂದು ಅವರ ಯೋಜನೆಯಾಗಿತ್ತು. ಇದಕ್ಕಾಗಿ ಅವರು ಮುಂದಿನ ಹಂತದ ನರ ಭಾಷಾ ಪ್ರೊಗ್ರಾಂಮಿಂಗ್‍ನ ಜ್ಞಾನ ಪಡೆಯಲು ನಿರ್ಧರಿಸಿದರು. ಇದು ಸಹ ಸಂಸ್ಥಾಪಕ ಡಾ. ರಿಚರ್ಡ್ ಬಾಂಡ್ಲರ್‍ನ ಜತೆ ಅಮೆರಿಕದಲ್ಲಿ ಮಾತ್ರ ನೊಂದಾವಣಿಯಾಗಿದೆ.

image


ನೌ! ಲೆಟ್ಸ್ ಪ್ಲೇನ ಪ್ರಾರಂಭ

ಕಾರ್ಪೊರೇಟ್ ವಲಯದಲ್ಲಿ ನಾಟಕವನ್ನು ಬಳಸುವ ರಾಹುಲ್‍ನನ್ನು ಭೇಟಿ ಮಾಡಲು ಒಬ್ಬರು ಏಳು ವರ್ಷಗಳ ಅವಧಿಯಲ್ಲಿ ಹಲವಾರು ಬಾರಿ ಆನ್ನಲೀಸಗೆ ಶಿಫಾರಸ್ಸು ಮಾಡಿದ್ದರು. ಆದ್ರೆ ಆನ್ನಲೀಸ, ರಾಹುಲ್ ಮೊಬೈಲ್ ನಂಬರ್ ಪಡೆದುಕೊಂಡು, ಕಳೆದುಕೊಂಡ್ರು. ಆನ್ನಲೀಸ್​ ಕೆಲಸ ಮಾಡ್ತಿದ್ದ ಪ್ರಾಜೆಕ್ಟ್​​ಗೆ ಆಕೆಯ ಗ್ರಾಹಕ ಒಬ್ಬ ನಟನ ಹುಡುಕಾಟದಲ್ಲಿದ್ದರು. ಇದರಿಂದ ಇಬ್ಬರೂ ಸಂಪರ್ಕಿಸಲು ಅವಕಾಶ ಸಿಕ್ಕಿತು.

“ನಮ್ಮ ಹಲವಾರು ವಿಷಯಗಳಲ್ಲಿ ಸಾಮ್ಯತೆ ಇದ್ದದ್ದು ನನಗೆ ಆಶ್ಚರ್ಯ ತರಿಸಿತ್ತು. ಅದರಲ್ಲೂ ನಮ್ಮ ಓಟದಲ್ಲಿ ನೈಜ ಬದಲಾವಣೆಯ ತರುವ ಉತ್ಸಾಹ ಇಬ್ಬರಲ್ಲೂ ಇತ್ತು” ಎಂದು ಹೇಳ್ತಾರೆ ಆನ್ನಲೀಸ. ಆರಂಭಮಾಡಿದ ನಾಲ್ಕು ವರ್ಷಗಳಲ್ಲಿ ನೌ! ಲೆಟ್ಸ್ ಪ್ಲೇ ಬಹಳ ದೂರ ಸಾಗಿ ಬಂದಿದೆ. ಕಾರ್ಪೊರೇಟ್‍ಗಳಿಗೆ ಮಾನಸಿಕ ತರಬೇತಿ, ಉದ್ಯಮಿಗಳಿಗೆ ತಮ್ಮ ಗುರಿ ತಲುಪಲು ಸಂಪನ್ಮೂಲ ನಡವಳಿಕೆಯ ಅಭಿವೃದ್ಧಿ ಮತ್ತು ಸೀಮಿತಗೊಳಿಸುವ ಆಲೋಚನೆ ಬದಲಾಯಿಸುವ ವಿಷಯದಲ್ಲಿ ನೌ! ಲೆಟ್ಸ್ ಪ್ಲೇ ಕೌಶಲ್ಯಪೂರ್ಣವಾಗಿದೆ.

ಪ್ರೇಕ್ಷಕರಿಗೆ ಅನುಸಾರವಾಗಿ ಅವರು ಹಲವಾರು ಕೆಲಸದ ವ್ಯವಸ್ಥೆಯನ್ನು ಹೊಂದಿದ್ದಾರೆ. ವಾರ್ಷಿಕ ಕ್ಯಾಂಲೆಂಡರ್‍ನಲ್ಲಿ ಕಾರ್ಪೊರೇಟ್ ತರಬೇತಿಗೆ ಸಮಯ ಮೀಸಲಿಟ್ಟಿದ್ದಾರೆ. ವೈಯಕ್ತಿಕವಾಗಿಯೂ ಕೆಲ ಗ್ರಾಹಕರು 3-6 ತಿಂಗಳ ತರಬೇತಿ ಪಡೆಯುತ್ತಿದ್ದಾರೆ. ಸಮೂಹ ಶಿಕ್ಷಣದಲ್ಲಿ 2 ದಿನಗಳ ಕಾರ್ಯಾಗಾರ, ವಿಚಾರ ಗೋಷ್ಠಿಗಳನ್ನು ಆಯೋಜನೆ ಮಾಡಲಾಗುತ್ತದೆ.

ಆಟಗಳ ಮೂಲಕ ಹೇಳಿಕೊಡುವ ಉದ್ಯಮಿ ಆನ್ನಲೀಸ ಹೇಳುವಂತೆ ಆಕೆ ಬಳಸುವ ತಂತ್ರಜ್ಞಾದಿಂದ ಸ್ವಂತವಾಗಿ ಮತ್ತು ವ್ಯಾಪಾರದಲ್ಲಿ ಆಕೆಗೆ ಬಹಳಷ್ಟು ಲಾಭಗಳಾಗಿವೆ. ಬೇರೆ ರೀತಿ ಯೋಚಿಸೋ ಮೂಲಕ ಪರಿಸ್ಥಿತಿಯನ್ನು ಸುಲಭವಾಗಿ ಬದಲಾಯಿಸುವ ಅನುಭವ ನಿಜಕ್ಕೂ ಆಶ್ಚರ್ಯಕರ ಎನ್ನುತ್ತಾರೆ ಆನ್ನಲೀಸ.

ಮಾತು ನಡೆದಾಡುತ್ತಾ

ತಾನು ಸ್ವತಃ ಫಿಟ್ ಆಗಿರೋಕೆ ಆನ್ನಲೀಸ ನರ ಭಾಷಾ ಪ್ರೊಗ್ರಾಮಿಂಗ್ ಮತ್ತು ನೈಸರ್ಗಿಕ ಪರಿಹಾರಗಳನ್ನು ಬಳಸಿದ್ದಾರೆ. 2010ರಲ್ಲಿ ತಾನು ಸೊಂಟದ ಅಳತೆ 40 ಇಂಚು ಮತ್ತು 94 ಕೆಜಿ ಇದ್ದುದಕ್ಕೆ ಹೋಲಿಸಿದರೆ ಈಗ 73 ಕೆಜಿ ಮತ್ತು 32 ಇಂದು ಸೊಂಟದ ಅಳತೆ ಹೊಂದಿದ್ದಾರೆ.

image


ತನ್ನ ಸ್ವಂತ ಅನುಭವದಿಂದ ಸ್ಪೂರ್ತಿಗೊಂಡ ಆನ್ನ, ನೌ! ಲೆಟ್ಸ್ ಪ್ಲೇನ ಉದ್ಯೋಗಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಹಿಳೆಯರಿಗೆ ಉತ್ಸಾಹ ತುಂಬುತ್ತಿದ್ದಾರೆ. ತಮ್ಮ ಆರೋಗ್ಯವನ್ನು ತಾವೇ ಹತೋಟಿಗೆ ತಂದುಕೊಳ್ಳುವಂತೆ ಮಹಿಳೆಯರಿಗೆ ಹುರಿದುಂಬಿಸುವ ಕಾರ್ಯದಲ್ಲಿದ್ದಾರೆ. ಅಲ್ಲದೇ ಇದಕ್ಕಾಗಿ ಫೇಸ್‍ಬುಕ್‍ನಲ್ಲಿ ಸಮುದಾಯವೊಂದನ್ನು ಸೃಷ್ಟಿಸಿದ್ದಾರೆ. ಯುವತಿಯರಿಗೆ ಊಟ, ಓಡಾಟ ಮತ್ತು ಆರೋಗ್ಯದ ಬಗ್ಗೆ ಯೋಚಿಸುವಂತೆ ಸ್ಪೂರ್ತಿ ತುಂಬುತ್ತಾ ತಿಂಗಳ ಹಾರ್ಮೋನ್ ಏರುಪೇರಿನಲ್ಲಿ ಸಮತೋಲನ ಕಾಣುವಂತೆ ಮಾಡಿದ್ದಾರೆ.

ಆನ್ನಲೀಸ ಒಬ್ಬಾಕೆಯೇ ತರಬೇತುದಾರ್ತಿ

ಆನ್ನಲೀಸ ಮತ್ತು ರಾಹುಲ್ ನೌ! ಲೆಟ್ಸ್ ಪ್ಲೇನ ಇಬ್ಬರೇ ತರಬೇತುದಾರರು. ಆರೋಗ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎಸೆದಾಗ ಅವರು ಯಶಸ್ಸಿನ ಕೈಗಳು ಸದಾ ಕೆಳಗೆ ಎಂದು ನಂಬುತ್ತಾರೆ. ಮೊದಲಿಗೆ ಹಣ ಹೂಡಿಕೆಯ ಬಗ್ಗೆ ಆಲೋಚಿಸಿದರೂ, ತಮ್ಮ ವ್ಯಾಪಾರ ಮಾದರಿಯಲ್ಲಿ ಕಡಿಮೆ ಸಂಖ್ಯೆಗಳು ಹೂಡಿಕೆದಾರರನ್ನು ಸೆಳೆಯಲಾರದು ಎಂದು ಸುಮ್ಮನಾದರು.

ಯೋಜನೆಯ ಮೌಲ್ಯವನ್ನು ವೃದ್ಧಿಸಲು ಮತ್ತು ಹೆಚ್ಚು ಜನರನ್ನು ತಲುಪಲು ಇತರೆ ಸಮಾನ ಮನಸ್ಥಿತಿಯವರಿಗೆ ಪರವಾನಗಿ ನೀಡುವುದು ಮತ್ತು ಉತ್ಸಾಹಿ ಜನರು ತಾವು ಮಾಡುವುದನ್ನು ತಮ್ಮ ಬಳಗದಲ್ಲಿ ಪ್ರಭಾವ ಬೀರುವ ಹಾಗೆ ಮಾಡುವುದು ಅವರ ಯೋಜನೆ. ತಮ್ಮ ಉದ್ಯಮವನ್ನು ಮುಂದುವರೆಸಲು ಅಪಾಯವನ್ನು ಎಳೆದುಕೊಳ್ಳುವ ಹಸಿವಿರುವವರನ್ನು ಎದುರು ನೋಡುತ್ತಿದ್ದಾರೆ.

ನರ ಭಾಷಾ ಪ್ರೊಗ್ರಾಮಿಂಗ್ ಅಂದ್ರೆ ನಿಜಕ್ಕೂ ಏನು

ನರ ಭಾಷಾ ಪ್ರೊಗ್ರಾಮಿಂಗ್ ಸಲಹೆಗಳಿಂದಲೂ ವ್ಯತ್ಯಾಸವನ್ನು ಕಾಣಲು ಕೆಲವರು ವಿಫಲರಾಗಿದ್ದಾರೆ. ಆಘಾತದಲ್ಲೇ ಉಳಿಯಲು ಬಯಸದವರು ಅಥವಾ ಕಷ್ಟದ ಪರಿಸ್ಥಿತಿಯ ಬಗ್ಗೆ ಪದೇ ಪದೇ ಮಾತನಾಡಲು ಇಷ್ಟಪಡದವರು ವ್ಯತ್ಯಾಸ ಕಾಣುತ್ತಿದ್ದಾರೆ. ಅರಿವಿದ್ದೋ ಅಥವಾ ಇಲ್ಲದೆಯೋ ಬದಲಾವಣೆ ತರಲು ಸಮಾನ ಆಯ್ಕೆ ಮತ್ತು ದೃಷ್ಟಿಕೋನವನ್ನು ಹೊಂದಲು ನಾವು ಯಾವ ರೀತಿ ಯೋಚಿಸುತ್ತೇವೆ ಅಥವಾ ಅರ್ಥೈಸುತ್ತೇವೆ ಎಂದು ನಿಮಗೆ ಹೇಳಿಕೊಡಲಾಗುತ್ತದೆ ಎನ್ನುತ್ತಾರೆ ಆನ್ನಲೀಸ.

ನರ ಭಾಷಾ ಪ್ರೊಗ್ರಾಮಿಂಗ್ ಚಿಕಿತ್ಸೆಯಲ್ಲ. ಮತ್ತೊಂದು ರೀತಿಯಲ್ಲಿ ಆಲೋಚಿಸುವುದನ್ನು ಮಾತ್ರ ಇದು ಕಲಿಸುತ್ತದೆ. “ಇದು ಕೆಲ ವ್ಯಕ್ತಿಗಳಿಗೆ ಸುಲಭವಾಗಿ ಸಾಧ್ಯವಾಗಿಲ್ಲ. ಸಹಾಯ ಕೇಳುವುದನ್ನು ಚಿಕಿತ್ಸೆಯೆಂದೇ ಪರಿಗಣಿಸಲಾಗ್ತಿದೆ. ಮೊದಲ ಬಾರಿ ನಮ್ಮನ್ನು ಭೇಟಿ ಮಾಡಿ ತರಬೇತಿಗೆ ಸಹಿ ಮಾಡುವ ಮುನ್ನ ಹಣ ವಿನಿಯೋಗಿಸಿದರೆ ಪ್ರಯೋಜನವಾಗುತ್ತಾ ಅನ್ನೋ ಅನುಮಾನದಲ್ಲೇ ಕೆಲವರು ವಾಪಸ್ ಹೋಗಲು ಮನಸ್ಸು ಮಾಡ್ತಾರೆ” ಎಂದು ಹೇಳ್ತಾರೆ ಆನ್ನಲೀಸ. ಆದ್ರೆ ಹೆಚ್ಚೆಚ್ಚು ಮಹಿಳೆಯರು ತಾವಾಗೇ ಸಹಾಯ ಕೇಳಿಕೊಂಡು ಬರುತ್ತಿರೋದು ಕಂಡು ಆನ್ನಲೀಸ ಈಗ ಖುಷಿಯಾಗಿದ್ದಾರೆ.