ಯುವ ಮಹಿಳಾ ಉದ್ಯಮಿ ಪಲ್ಲವಿ ಕೇಮ್ಲಾರ ಕಟ್ಟೆ-ಮೀಠೆ ಡಿಸೈರ್ಸ್

ಟೀಮ್ ವೈ.ಎಸ್​​.

ಯುವ ಮಹಿಳಾ ಉದ್ಯಮಿ ಪಲ್ಲವಿ ಕೇಮ್ಲಾರ ಕಟ್ಟೆ-ಮೀಠೆ ಡಿಸೈರ್ಸ್

Tuesday November 10, 2015,

3 min Read

ಹಲವು ಆಸ್ಪತ್ರೆಗಳಲ್ಲಿ 5 ಇಂಟರ್ನ್‌ಶಿಪ್, ಕ್ಲಿನಿಕಲ್ ಸೈಕಾಲಜಿ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಮತ್ತು 3 ತಿಂಗಳ ಕಾಲ ಮಾರ್ಕೆಟಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ಇವ್ಯಾವುದೂ ಪಲ್ಲವಿ ಕೇಮ್ಕಾ ಉದ್ಯಮಶೀಲತೆಗೆ ಅಡ್ಡಿಯಾಗಲಿಲ್ಲ.

ಹೀಗಾಗಿ ಒಂದು ಬಾರಿ ಬ್ಲಾಗ್ ಆರಂಭಿಸಿದ ಬಳಿಕ ಅದೇ ಪೂರ್ಣಕಾಲಿಕ ವೃತ್ತಿಯಾಯಿತು. ಕಟ್ಟೆಮೀಟೆ ಡಿಸೈರ್ಸ್ ಎಂಬ ಸಂಸ್ಥೆಯೊಂದಿಗೆ ಪಲ್ಲವಿ ಉದ್ಯಮಿಯಾಗಿ ಪರಿವರ್ತನೆಯಾದರು. ಇದು ಫೆಬ್ರವರಿಯಲ್ಲಿ ಆರಂಭವಾಗಿರುವ ಆನ್‌ಲೈನ್ ಗಿಫ್ಟಿಂಗ್ ಸೊಲ್ಯೂಷನ್ ಇದಾಗಿದೆ.

image


ಮನಶಾಸ್ತ್ರಜ್ಞರಿಂದ ಉದ್ಯಮಶೀಲತೆಯತ್ತ

ಉದ್ಯಮಶೀಲತೆಯ ಚಾಕಚಕ್ಯತೆ ಎಂಬುದು ಪಲ್ಲವಿಯವರಿಗೆ ಅವರ ಜವಳಿ ಉದ್ಯಮಿ ತಂದೆಯಿಂದ ಬಂದ ಬಳುವಳಿ. ಪಲ್ಲವಿಯವರೂ ಕೂಡ ಸ್ವಂತವಾಗಿ ಏನನ್ನಾದರೂ ಮಾಡಲು ಇಚ್ಛಿಸಿದರು. ಆದರೆ ಬಹಳ ಕಾಲ ಏನು ಮಾಡಬೇಕೆಂಬುದೇ ಗೊತ್ತಾಗಿರಲಿಲ್ಲ.

ತಮ್ಮ ಸುತ್ತಮುತ್ತಲಿನ ಸಹಪಾಠಿ ವಿದ್ಯಾರ್ಥಿಗಳನ್ನು ಪಲ್ಲವಿ ಸದಾ ಗಮನಿಸುತ್ತಿದ್ದರು. ಚಿಕ್ಕಂದಿನಲ್ಲೂ ಮನಶಾಸ್ತ್ರಜ್ಞೆಯಾಗುವುದೇ ಅವರ ಆಸಕ್ತಿಯಾಗಿತ್ತು. ಬಹಳಷ್ಟು ಬಾರಿ ಹೆದರಿಕೆಯೂ ಆಗುತ್ತಿತ್ತು. ಮನಶಾಸ್ತ್ರ ಕ್ಷೇತ್ರದಲ್ಲಿ ಕೆಲವರಷ್ಟೇ ಕಷ್ಟಪಟ್ಟು ಕಾರ್ಯನಿರ್ವಹಿಸುತ್ತಿದ್ದರು. ಪ್ರತಿಯೊಂದು ಮಗುವಿನ ಮಾನಸಿಕ ಬೆಳವಣಿಗೆ ಬೇರೆಯೇ ಆಗಿರುತ್ತದೆ. ಇದು ಅವರನ್ನು ಹೆಚ್ಚು ಚಿಂತಿಸುವಂತೆ ಮಾಡಿತು. ಹೀಗಾಗಿ ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಮನಶಾಸ್ತ್ರವನ್ನೇ ಅವರು ಆಯ್ದುಕೊಂಡರು. ಮಗು ಬೆಳೆಯುವ ರೀತಿಯಲ್ಲೇ ಮಗುವಿನ ಭವಿಷ್ಯ ಅಡಗಿದೆ ಎಂಬುದನ್ನು ಪಲ್ಲವಿ ನಂಬುತ್ತಾರೆ. ಪಲ್ಲವಿಯವರ ವಿಚಾರದಲ್ಲೂ ಇದು ನಿಜವಾಗಿದೆ. ಸೃಜನಶೀಲ ವ್ಯಕ್ತಿಯಾಗಿದ್ದ ಪಲ್ಲವಿಯವರಿಗೆ ತಾವಿಚ್ಛಿಸಿದ ಉದ್ಯಮ ಕ್ಷೇತ್ರದಲ್ಲಿ ಮುಂದುವರೆಯಲು ಮನೆಯಲ್ಲಿ ಸೂಕ್ತ ವಾತಾವರಣವೂ ನಿರ್ಮಾಣವಾಗಿತ್ತು.

ಏನೇ ಮಾಡಿದರೂ ನನ್ನ ಕಣ್ಣಳತೆಯಲ್ಲೇ ಏನನ್ನಾದರೂ ಮಾಡಬೇಕೆಂಬುದು ನನ್ನ ಇಚ್ಛೆಯಾಗಿತ್ತು ಮತ್ತು ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಗೆ ಏನು ಉಡುಗೊರೆ ನೀಡಬೇಕೆಂದು ಬಯಸುತ್ತಾನೆ ಎಂಬುದನ್ನು ನಾನು ಸದಾ ಚಿಂತಿಸುತ್ತಿದ್ದೆ. ಹೀಗೆ ನನ್ನ ಕಟ್ಟೆ ಮೀಟೆ ಡಿಸೈರ್ಸ್ ಎಂಬ ಉತ್ಪನ್ನಗಳು ರೂಪುಗೊಂಡವು ಎನ್ನುತ್ತಾರೆ ಪಲ್ಲವಿ. ಸಂಸ್ಥೆಯ ಹೆಸರು ಸದಾ ವಿಭಿನ್ನವಾಗಿ, ವೈಶಿಷ್ಟ್ಯಪೂರ್ಣವಾಗಿರಬೇಕೆಂಬುದು ಅವರ ಬಯಕೆಯಾಗಿತ್ತು. ತಮ್ಮ ಉದ್ಯಮವನ್ನು ಆರಂಭಿಸಲು ಅವರು ಹಿಂದೆಮುಂದೆ ಯೋಚಿಸಲಿಲ್ಲ.

ಪ್ರಯಾಸಕರವಾಗಿದ್ದರೂ ಸೃಜನಶೀಲತೆಯಿಂದ ಕೂಡಿದ ಉದ್ಯಮ

ಎಲ್ಲಾ ಉದ್ಯಮಿಗಳಂತೆ ಪಲ್ಲವಿಯೂ ಉದ್ಯಮದ ಯಾನ ಪ್ರಾಯಾಸದಾಯಕವಾಗಿಯೂ, ಕಷ್ಟಕರವಾಗಿಯೂ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಉದ್ಯಮ ಎಂಬುದು ಪಲ್ಲವಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ನೀಡಿತ್ತು. ಕಲಿಯುವಿಕೆ ಒಂದು ಅದ್ಭುತ ಅನುಭವ ನೀಡಿತ್ತು ಎನ್ನುತ್ತಾರೆ ಪಲ್ಲವಿ.

ಪಲ್ಲವಿ ತಮ್ಮದೇ ಆದ ಸಂಪನ್ಮೂಲ ಮತ್ತು ತಮ್ಮ 3 ತಿಂಗಳ ಉಳಿತಾಯದಿಂದ ಕಟ್ಟೆ ಮೀಟೆ ಡಿಸೈರ್ಸ್ ಆರಂಭಿಸಿದರು. ಅದಕ್ಕೆ ಬೇಕಿದ್ದದು ಸಣ್ಣ ಮಟ್ಟದ ಹೂಡಿಕೆ ಮತ್ತು ಉದ್ಯಮದಿಂದ ಬಂದಿದ್ದೆಲ್ಲವನ್ನೂ ಉದ್ಯಮಕ್ಕೆ ಪುನರ್ ಹೂಡಿಕೆ ಮಾಡುತ್ತಿದ್ದರು.

image


ಉದ್ಯಮಿಯಾಗಬೇಕೆಂಬ ಇಚ್ಛೆಯೊಂದಿಗೆ ಸ್ವಲ್ಪ ಆತ್ಮವಿಶ್ವಾಸದೊಂದಿಗೆ ತಮ್ಮ ಮೊದಲ ಕೆಲಸವನ್ನು ಆರಂಭಿಸಿದವರು ಪಲ್ಲವಿ. ಕೆಲಸ ಬಿಟ್ಟ ಕೆಲ ಕಾಲ ಮುಂದೇನು ಮಾಡಬೇಕೆಂಬುದು ಪಲ್ಲವಿಯವರಿಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಉದ್ಯಮಕ್ಕಾಗಿ ಕೆಲ ಕಾಲ ಯೋಜನೆ ರೂಪಿಸಿದ ಅವರು ನಂತರ ಉದ್ಯಮವನ್ನು ಆರಂಭಿಸಿದರು.

ನಾನು ಹುಟ್ಟಾ ಉದ್ಯಮಿಯಲ್ಲ. ಹೀಗಾಗಿ ಹೇಗೆ ಕಾರ್ಯನಿರ್ವಹಿಸಬೇಕೆಂದು ನನಗೆ ತಿಳಿದಿರಲಿಲ್ಲ. ಹೂಡಿಕೆಯ ಮೂಲವನ್ನು ಹೆಚ್ಚಿಸಿಕೊಳ್ಳುವ ಮೂಲಕ ಉದ್ಯಮವನ್ನು ವಿಸ್ತರಿಸಬೇಕೆಂಬ ಅರಿವಿತ್ತು ಎನ್ನುತ್ತಾರೆ ಪಲ್ಲವಿ. ಸದ್ಯಕ್ಕೆ ರಾಷ್ಟ್ರೀಯ ಮಾರುಕಟ್ಟೆಯನ್ನು ಆವರಿಸಿಕೊಂಡಿರುವ ಬಗ್ಗೆ ಅವರಿಗೆ ಸಂತೋಷವಿದೆ. ಪಲ್ಲವಿಯವರ ಸಂಸ್ಥೆ ಈಗ ರಿಜಿಸ್ಟರ್ ಸೆಲ್ಲರ್ ಆಗಿ ಗುರುತಿಸಿಕೊಂಡಿದ್ದು, ಇ-ಕಾಮರ್ಸ್ ಕ್ಷೇತ್ರದ ಪ್ರಮುಖ ದೈತ್ಯ ಸಂಸ್ಥೆಯಾಗಿ ಬೆಳೆದಿದೆ.

ನಿಮ್ಮ ಅದೃಷ್ಟವನ್ನು ನೀವೇ ರೂಪಿಸಿಕೊಳ್ಳಬೇಕು

ನಿಮ್ಮ ಅದೃಷ್ಟಕ್ಕೆ ನೀವೇ ಕಾರಣ ಅನ್ನುವ ತಾತ್ವಿಕತೆಯನ್ನು ಇತ್ತೀಚೆಗಷ್ಟೇ ಪಲ್ಲವಿ ಅರಿತುಕೊಂಡರು. ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಅವರಿಗೆ ಈ ವಿಚಾರ ಮನವರಿಕೆ ಆಯಿತು. ಪಲ್ಲವಿ ಹೇಳುವಂತೆ ಆ ಪಂದ್ಯದಲ್ಲಿ ಕ್ರೀಡಾಪಟುಗಳು ತಮಗೆ ಸೂಚಿಸಿದ ಕ್ಷೇತ್ರಗಳಲ್ಲಿ ನಿಂತು ಆಟವಾಡುತ್ತಿದ್ದರು. ಅವರವರ ಕ್ಷೇತ್ರಗಳು ಬೇರೆಯಾಗಿದ್ದರೂ ಅವರೆಲ್ಲರ ಗುರಿ ಮಾತ್ರ ತಂಡವನ್ನು ಗೆಲ್ಲಿಸುವುದು ಮಾತ್ರವಾಗಿತ್ತು. ಹೀಗಾಗಿ ಅವರೆಲ್ಲರೂ ಅವರ ತಂಡದ ಅದೃಷ್ಟ ನಿರ್ಧರಿಸುವವರಾಗಿದ್ದರು. ಈ ಉದಾಹರಣೆಯಿಂದ ಬದುಕಿನ ಹೊಸತೊಂದು ಆಯಾಮ ಗುರುತಿಸಿದ ಪಲ್ಲವಿ ತಮ್ಮಲ್ಲಿರುವ ಉದ್ಯಮಿಯಾಗಬಲ್ಲ ಸಾಮರ್ಥ್ಯವನ್ನು ಅಂದಾಜಿಸಿದರು. ಅದರ ನಂತರ ಅವರು ತಮ್ಮನ್ನು ತಾವು ಹುಡುಕಿಕೊಳ್ಳುವ ಪ್ರಯತ್ನವನ್ನು ನಿರಂತರವಾಗಿ ಮಾಡಿದರು.

ಹೂಡಿಕೆ ಪಲ್ಲವಿಯವರಿಗೆ ಎದುರಾದ ಪ್ರಮುಖ ಸವಾಲು. ಆದರೆ ಅದನ್ನು ತಮ್ಮ ಸ್ವಂತ ಉಳಿತಾಯವನ್ನು ಉದ್ಯಮಕ್ಕೆ ಬಳಸಿಕೊಳ್ಳುವ ಮೂಲಕ ಸುಲಭವಾಗಿ ಪರಿಹರಿಸಿಕೊಂಡರು. ಸಂಪ್ರದಾಯವಾದಿ ಕುಟುಂಬದಿಂದ ಬಂದ ಈ ದೆಹಲಿ ಮೂಲದ ಹುಡುಗಿ ಉದ್ಯಮ ಕ್ಷೇತ್ರಕ್ಕೆ ಇಳಿದಿದ್ದು ಆಶ್ಚರ್ಯಕರ ವಿಚಾರವೇ ಸರಿ.

ನಾನು ಸ್ವಂತವಾಗಿ ಏನನ್ನಾದರೂ ಮಾಡಲು ಇಚ್ಛಿಸುತ್ತೇನೆ ಮತ್ತು ನನ್ನದೇ ಆದ ರೀತಿಯಲ್ಲಿ ಕಲಿಯಲು ಬಯಸುತ್ತೇನೆ. ಏಕಾಂಗಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವುದು ನನಗಿಷ್ಟ. ಪ್ರತಿ ತಿಂಗಳು ಒಂದು ಅಥವಾ ಎರಡು ದಿನಗಳ ಕಾಲ ರಜೆಯಲ್ಲಿರಲು ಬಯಸುತ್ತೇನೆ ಎನ್ನುತ್ತಾರೆ 25 ವರ್ಷದ ಪಲ್ಲವಿ ಕೇಮ್ಕಾ. ಮಹಿಳಾ ಉದ್ಯಮಿಯಾಗಿರುವ ತಮ್ಮನ್ನು ಜನ ಹಗುರವಾಗಿ ತೆಗೆದುಕೊಳ್ಳದಿರಲು ತಮ್ಮನ್ನು ತಾವು ಕಠಿಣವಾಗಿ ತೋರಿಸಿಕೊಳ್ಳುತ್ತಾರೆ ಪಲ್ಲವಿ.

ಜೀವನದಲ್ಲಿ ಸ್ಫೂರ್ತಿದಾಯಕವಾಗಿ ಮುನ್ನಡೆಯುತ್ತಿರುವ ಪಲ್ಲವಿಯವರಿಗೆ ಕಟ್ಟೆ ಮೀಟೆ ಡಿಸೈರ್ಸ್ ಸಂಸ್ಥೆ ದೇಶದಲ್ಲೇ ಅತ್ಯುತ್ತಮ ಗಿಫ್ಟಿಂಗ್ ಸೊಲ್ಯುಷನ್ ಆಗಿ ಬೆಳೆಯಬೇಕೆಂಬ ಆಸೆಯಿದೆ.