ಆವೃತ್ತಿಗಳು
Kannada

ಸಂಬಂಧಗಳಿಗೇಕೆ ಕಟ್ಟಳೆಗಳ ಭಯ- ಗಂಟೆಗಳ ಲೆಕ್ಕದಲ್ಲಿ ಅವಿವಾಹಿತರಿಗೆ ರೂಮ್​ ಲಭ್ಯ..!

ಟೀಮ್​ ವೈ.ಎಸ್​. ಕನ್ನಡ

YourStory Kannada
28th Aug 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಸುನೀಲ್ ಮತ್ತು ಅಮೃತಾ, ಯುವ ದಂಪತಿಗಳು. ಆದ್ರೆ ಅವರು ಯಾವುದೇ ಹೊರ ಪ್ರದೇಶಗಳಿಗೆ ಹೋಗುವಂತಿರಲಿಲ್ಲ. ಅದ್ರಲ್ಲೂ ಟ್ರಾವೆಲಿಂಗ್ ಸಂದರ್ಭಗಳಲ್ಲಿ ಅವರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದರು. ಕಾರಣ ಅವರಿಗೆ ಸಂಪ್ರದಾಯದಂತೆ ಮದುವೆ ಆಗಿರಲಿಲ್ಲ. ಹೀಗಾಗಿ ಪ್ರವಾಸದ ವೇಳೆಯಲ್ಲಿ ರೂಮ್ ಪಡೆಯೋದಿಕ್ಕೆ ಅಥವಾ ಹೋಟೆಲ್​ಗಳಲ್ಲಿ ಇವರನ್ನು ಎಲ್ಲರೂ ಅನುಮಾನದಿಂದಲೇ ನೋಡುತ್ತಾ ಇದ್ರು. ಕಾರಣ ಒಂದೇ ಇವರಿಬ್ಬರಿಗೂ ಮದುವೆ ಅನ್ನೋದು ಆಗಿರಲಿಲ್ಲ.

ಭಾರತದಂತಹ ಸಂಪ್ರದಾಯಸ್ಥ ರಾಷ್ಟ್ರಗಳಲ್ಲಿ ಗಂಡು ಹೆಣ್ಣು ಮದುವೆಗೆ ಮುಂಚೆ ಜೊತೆಯಲ್ಲಿ ಕಾಲ ಕಳೆಯುವುದು ಅಕ್ಷಮ್ಯ ಅಪರಾಧ ಅನ್ನೋ ಮನೋಭಾವ ಇದೆ. ಆದರೆ ಈಗ ಪ್ರೇಮಿಗಳ ಸಂಖ್ಯೆ ಹೆಚ್ಚಾಗಿದೆ. ಅವರೆಲ್ಲರೂ ಕಡೇ ಪಕ್ಷ ತಿಂಗಳಿಗೆ ಒಮ್ಮೆಯಾದರೂ ಜೊತೆಯಲ್ಲಿ ಕಾಲ ಕಳೆಯಬೇಕು ಎಂದು ಆಸೆ ಪಡುತ್ತಾರೆ. ಇದಕ್ಕೆ ನಮ್ಮ ಸಮಾಜ ಒಪ್ಪುವುದಿಲ್ಲ, ಅದರ ಜೊತೆಗೆ ಕಿಡಿಗೇಡಿಗಳ ಕಾಟವು ಇರುತ್ತದೆ. ಎಲ್ಲಾದರೂ ಹೋದ್ರೆ ಮಂಗಳ ಸೂತ್ರ ಎಲ್ಲಿದೆ..? ಕತ್ತಿನಲ್ಲಿ ತಾಳಿ ಕಾಣಿಸುತ್ತಿಲ್ಲ, ಅಷ್ಟೇ ಅಲ್ಲ ಮದುವೆ ಆಗಿದೆ ಅಂತ ತೋರಿಸುವ ಪ್ರೂಫ್​ಗಳನ್ನು ಕೂಡ ಕೇಳಿ ಅನುಮಾನದ ಕಣ್ಣು ಹರಿಸುತ್ತಾರೆ.

ಮನೆಗಳಲ್ಲಿ ಪಾಕ್, ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲಾದ್ರೂ ಏಕಾಂತವಾಗಿ ಕಾಲ ಕಳೆಯಬೇಕು ಎಂದರೆ ಮುಜುಗರವಾಗುತ್ತದೆ. ಯಾವುದಾದ್ರೂ ಹೊಟೇಲ್ ಲಾಡ್ಜ್​ಗಳಲ್ಲಿ ರೂಮ್ ಮಾಡೋಣ ಎಂದರೆ ಪೊಲೀಸರು ರೈಡ್ ಮಾಡ್ತಾರೆ ಎಂಬ ಭಯ. ಆದ್ರೆ ಇನ್ನು ಮುಂದೆ ಇಂತಹ ಭಯದಲ್ಲಿ ಕಾಲಕಳೆಯ ಬೇಕಿಲ್ಲ. ಸ್ಟೇ ಅಂಕಲ್ ಅನ್ನೋ ಸ್ಟಾರ್ಟ್ಅಪ್ ಒಂದು “ಸಂಬಂಧ”ಕ್ಕೆ ಒಂದು ಹೊಸ ಅರ್ಥ ಕಲ್ಪಿಸಿದೆ. ರಿಲೇಷನ್ ಶಿಪ್ ಮೋಡ್ ಅನ್ನೋ ಕಾನ್ಸೆಪ್ಟ್​ನಲ್ಲಿ Oyo ರೂಮ್ಸ್ ಅನ್ನೋದನ್ನ ಅವಿವಾಹಿತ ದಂಪತಿಗಳಿಗಾಗಿಯೇ ಮಾಡಿದೆ.

ಇದನ್ನು ಓದಿ: ಐದು ರೂಪಾಯಿಯಿಂದ 60 ಲಕ್ಷದ ವಹಿವಾಟು ತನಕ ನಡೆದು ಬಂದ ದಾರಿ..!

Oyo ರೂಮ್ಸ್ ಅವಿವಾಹಿತರಿಗೆ ಹೊಟೇಲ್​ಗಳಲ್ಲಿ ರೂಂ ಕೊಡುವುದಿಲ್ಲ ಅನ್ನೋ ಟ್ಯಾಗ್​ನ್ನು ಸಂಪೂರ್ಣವಾಗಿ ತೊಡೆದು ಹಾಕುವ ಗುರಿ ಇಟ್ಟುಕೊಂಡಿದೆ. Oyo ರೂಮ್ಸ್ ಮೂಲಕ ಕೆಲವು ಹೊಟೇಲ್​ಗಳನ್ನು ಅವಿವಾಹಿತ ಕಪಲ್​ಗಳಿಗಾಗಿಯೇ ಲಿಸ್ಟ್ ಮಾಡಲಾಗಿದೆ. ಇಂತಹ ಹೊಟೇಲ್​ಗಳಲ್ಲಿ ಅವಿವಾಹಿತ ಕಪಲ್ಸ್​ ಹೋಗಿ ಐ.ಡಿ. ಫ್ರೂಫ್​ಗಳನ್ನು ತೋರಿಸಿದ್ರೆ ಸಾಕು, ಯಾವುದೇ ಪ್ರಶ್ನೆ ಇಲ್ಲದೆ ರೂಮ್​ಗಳನ್ನು ಅಲಾಟ್ ಮಾಡುತ್ತಾರೆ.

“ನಾವು ನಮ್ಮ ಪಾರ್ಟ್​ನರ್​ಗಳ ಪಾಲಿಸಿಗಳ ಬಗ್ಗೆ ಗೌರವ ಹೊಂದಿದ್ದೇವೆ. ನಮ್ಮ ಗ್ರಾಹಕರಿಗೂ ಅಷ್ಟೇ ಗೌರವ ನೀಡುತ್ತೇವೆ. ಹೀಗಾಗಿ ನಮ್ಮ ತಂಡ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಹೆಜ್ಜೆ ಇಟ್ಟಿದೆ. ಭಾರತದಲ್ಲಿ ಯಾವ ಕಾನೂನು ಕೂಡ ಅವಿವಾಹಿತ ಹುಡಗ, ಹುಡುಗಿಗೆ ಹೊಟೇಲ್​ನಲ್ಲಿ ಸ್ಥಳಾವಕಾಶ ನೀಡಬಾರದು ಅನ್ನೋದನ್ನ ಹೇಳುವುದಿಲ್ಲ.”
- ಕವಿಕೃತ್, ಚೀಫ್ ಗ್ರೋತ್ ಆಫೀಸರ್

ಇಷ್ಟಾದ್ರೂ ಕೆಲವು ಹೊಟೇಲ್​ಗಳು ಚೆಕ್ಇನ್ ಸಮಯದಲ್ಲಿ ತೊಂದರೆ ಕೊಡುತ್ತವೆ ಅನ್ನೋದು ಗ್ರಾಹಕರ ಕಂಪ್ಲೇಟ್. ಆದ್ರೆ ಇದನ್ನು ಕೂಡ ನಿವಾರಿಸಲು ನಮ್ಮ ತಂಡ ಶ್ರಮ ಪಡುತ್ತಿದೆ. ವೆಬ್​ಸೈಟ್ ಮತ್ತು ಕಂಪನಿಯ ವೆಬ್​ಸೈಟ್​ನಲ್ಲಿ ಹೊಟೇಲ್ ಪಡೆಯಲು ಬೇಕಾಗಿರುವ ಐ.ಡಿ. ಫ್ರೂಫ್​ಗಳ ಬಗ್ಗೆ ಮಾಹಿತಿಯನ್ನು ನೀಡಿದೆ. ರಿಲೇಷನ್​ಶಿಪ್ ಮೋಡ್​ನ ಲಾಭ ಪಡೆಯಲು ನೀವು ಡೌನ್ಲೋಡ್ ಮಾಡಿಕೊಂಡ ಆ್ಯಪ್​ನಲ್ಲಿ ಮೈ ಅಕೌಂಟ್ ಸೆಕ್ಷನ್​ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.

“ ಗ್ರಾಹಕ ಸ್ನೇಹಿ ಉದ್ದೇಶ ನಮ್ಮದಾಗಿರುವುದರಿಂದ ನಾವು ಸಮಸ್ಯೆಗಳನ್ನು ಹುಡುಕುವ ಮತ್ತು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. OYO ಮೂಲಕ ನಾವು ಸಮಸ್ಯೆ ಇಲ್ಲದ ಹೊಟೇಲ್ ಬುಕ್ಕಿಂಗ್​ನ್ನು ಮಾಡುವ ಭರವಸೆ ನೀಡುತ್ತೇವೆ. ”
- ಕವಿಕೃತ್, ಚೀಫ್ ಗ್ರೋತ್ ಆಫೀಸರ್

ಭಾರತದಲ್ಲಿ ಸುಮಾರು 100 ನಗರಗಳಲ್ಲಿ ಈ ವ್ಯವಸ್ಥೆ ಅವಿವಾಹಿತ ದಂಪತಿಗಳಿಗೆ ಸಿಗಲಿದೆ. ಪ್ರಸ್ತುತ OYO 200 ನಗರಗಳಲ್ಲಿ 70,000 ಹೊಟೇಲ್​ಗಳನ್ನು ಹೊಂದಿದೆ. ಸುಮಾರು 6500 ಪಾರ್ಟ್​ನರ್​ಗಳು OYO ಜೊತೆಗಿದ್ದಾರೆ.

ವಾಸ್ತವದಲ್ಲಿ ಅವಿವಾಹಿತರು ಒಟ್ಟೋಟ್ಟಿಗೆ ಕಾಲ ಕಳೆಯಬಾರದು ಎಂಬ ರೂಲ್ ಎಲ್ಲೂ ಇಲ್ಲ. ಸಂವಿಧಾನದಲ್ಲೂ ಇದರ ಬಗ್ಗೆ ಪ್ರಸ್ತಾಪವಿಲ್ಲ. ಇದರ ಆಧಾರದ ಮೇಲೆ ಈ ವೆಬ್ ರೂಪಗೊಂಡು ಇಂದು ಯಶಸ್ವಿಯಾಗಿದೆ. ಈ ವೆಬ್​ಸೈಟ್​ನಲ್ಲಿ ಬುಕ್ ಮಾಡಿ ಅವಿವಾಹಿತರು ಆರಾಮಾಗಿ ಕಾಲ ಕಳೆಯಬಹುದು.

ಇದನ್ನು ಓದಿ

1. ಲೇಡಿರಾಕ್ ಸ್ಟಾರ್ ಶಚಿನಾ -ಸೌಂಡ್ ಮಾಡ್ತಿದೆ ದಿಬ್ಬರದಿಂಡಿ

2. Video ಕಾಲ್ ಬಗ್ಗೆ ನೋ ಟೆನ್ಶನ್​- 'ಡುಯೋ'ದಿಂದ ಸಿಕ್ತು ಸೊಲ್ಯುಷನ್​​

3. ಮೆಡಿಕಲ್​ಗೆ ಹೋಗೋ ಚಿಂತೆ ಬಿಟ್ಟುಬಿಡಿ- ಆನ್​ಲೈನ್​ನಲ್ಲೇ ಆರ್ಡರ್​ ಮಾಡಿ

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories