ಹೋಟೆಲ್ ಒಂದರ ಲೆಕ್ಕಾಚಾರ, ಇಲ್ಲಿ ಎಲ್ಲವೂ ಕೆಜಿ ಲೆಕ್ಕದಲ್ಲೇ..!
ವಿಸ್ಮಯ
ಹಣ್ಣು, ತರಕಾರಿ, ಬೆಳೆ ಹೀಗೆ ಬೇರೆ ಬೇರೆ ಮನೆಗೆ ಬೇಕಾದ ದಿನಸಿ ಸಾಮಾನುಗಳನ್ನು ಕೆ.ಜಿ.ಯಲ್ಲಿ ಮತ್ತು ಲೀಟರ್ ಲೆಕ್ಕದಲ್ಲಿ ಕೊಂಡುಕೊಳ್ಳತ್ತೀರಾ ಅಲ್ವಾ..?ಅಷ್ಟೇ ಯಾಕೆ ಅಂಗಡಿಯಲ್ಲೂ ಇದೇ ವ್ಯವಸ್ಥೆ ಇರುತ್ತೆ. ಆದ್ರೆ ಇಲ್ಲೊಂದು ಹೋಟೆಲ್ ತಿಂಡಿ ಪ್ಯಾಲೇಸ್ ಹೆಸರಿನಲ್ಲಿ ತಾಜಾ ಆಹಾರವನ್ನು ಕಿಲೋಗ್ರಾಂ ಮತ್ತು ಲೀಟರ್ ಲೆಕ್ಕದಲ್ಲಿ ನೀಡುತ್ತಿದೆ. ತಿಂಡಿ ಪ್ಯಾಲೇಸ್ ಹೊಸದೇನಿದೆ! ಎಂಬ ಅಡಿಬರಹದ ಮುಖಾಂತರ ಜನರನ್ನು ಆಕರ್ಷಿಸುತ್ತಿದೆ. ಅರೇ ಇದೇನಾಪ್ಪ ಹೀಗೂ ಉಂಟೆ?? ಅನ್ನೋ ಅನುಮಾನ, ಆಶ್ಚರ್ಯ, ಎಲ್ಲವೂ ಒಟ್ಟಿಗೆ ಬರದೇ ಇರೋಲ್ಲ ಬಿಡಿ.. ಅಂದಹಾಗೆ ಇದು ನಮ್ಮದೇ ಮೆಟ್ರೋ ಸಿಟಿ ಬೆಂಗಳೂರಿನಲ್ಲಿ ಇರೋ ಹೋಟೆಲ್. ರಾಜರಾಜೇಶ್ವರಿನಗರದಲ್ಲಿ ಹೊಸದಾಗಿ ತಿಂಡಿ ಪ್ಯಾಲೇಸ್ ಆರಂಭವಾಗಿದೆ.
ಈ ಹೋಟೆಲ್ ನ ವಿಶೇಷವೇ ಕೆ ಜಿ ಲೆಕ್ಕದಲ್ಲಿ ಆಹಾರಗಳು ಲಭ್ಯವಿರೋದು. ಗ್ರಾಹಕರಿಗೆ ಅನುಕೂಲಕರ ಬೆಲೆಯಲ್ಲಿ ಕಿಲೋ ಮತ್ತು ಲೀಟರ್ ಲೆಕ್ಕದಲ್ಲಿ ಲಭ್ಯವಿದೆ..ಹೋಲ್ ಸೆಲ್ ರೂಪದಲ್ಲಿ ಇಂತಹೊಂದು ಹೋಟೆಲ್ ಆರಂಭವಾಗಿದೆ. ಇನ್ನು ಇಲ್ಲಿ ಆಹಾರವನ್ನು ಕೊಂಡುಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ..ಗ್ರಾಹಕರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿದೆ..ಪರಿಶುದ್ಧ ನೀರು ಮತ್ತು ಶುದ್ಧ ಸಾಮಗ್ರಿಗಳ ಬಳಕೆಯಿಂದ ತಯಾರಿಸಲಾಗುತ್ತದಂತೆ. ಯೋಗ್ಯ ಪಾತ್ರೆ, ಪರಿಕರಗಳ ಬಳಕೆ ಮಾಡಲಾಗಿದೆ. ಪೌಷ್ಟಿಕಾಂಶ ಕಾಯ್ದುಕೊಳ್ಳಲು ಹಬೆಯಲ್ಲಿ ಬೇಯಿಸಿದ ಅಡುಗೆ ಇಲ್ಲಿ ಸಿಗಲಿದೆ..ಜೊತೆಗೆ ಆಹಾರ ತಜ್ಞರ ಸಲಹೆ ಮೇರೆಗೆ ವೈಜ್ಞಾನಿಕವಾಗಿ ಶುಚಿ ರುಚಿ ಹಾಗೂ ಆರೋಗ್ಯಕರ ಅಡುಗೆ ತಯಾರಿಸಲಾಗುತ್ತೆ.
ಇದನ್ನು ಓದಿ: ವಿದ್ಯೆಗಿಲ್ಲ ಬೇಲಿ ..ಶ್ರದ್ದೆಯೇ ಇಲ್ಲಿ ದಾರಿ..!
ಪ್ಯಾಲೇಸ್ನಲ್ಲಿ ಏನು ಇದೆ..?
ತಿಂಡಿ ಪ್ಯಾಲೇಸ್ ನಲ್ಲಿ 3 ಬಗೆಯಲ್ಲಿ ವಿಸ್ತರಿಸಿ..ಅದ್ರಲ್ಲಿ ಉಪಾಹಾರ, ರಾತ್ರಿ ಊಟ ಜೊತೆಗೆ ಸ್ನ್ಯಾಕ್ಸ್ ಗಳು ದೊರೆಯುತ್ತದೆ. ದೋಸೆ, ಇಡ್ಲಿ ,ಕೇಸರಿ ಬಾತ್, ಖಾರಾ ಬಾತ್ ಸೇರಿದಂತೆ ಎಲ್ಲ ರೀತಿಯ ರೈಸ್ ಬಾತ್ ಜೊತೆಗೆ ಪಕೋಡವರೆಗೂ ಸಿಗಲಿದೆ . ಇನ್ನು ರಾತ್ರಿಯ ಊಟಕ್ಕೆ ಬಗೆಬಗೆಯ ತರಕಾರಿ ಸಾಂಬಾರ್ ಗಳು, ಪಲ್ಯಗಳು, ರಸಂ, ಪಾಯಸ ಲಭ್ಯವಿದೆ. ಇನ್ನು ಸ್ನ್ಯಾಕ್ಸ್ನಲ್ಲಿ ಸಮೋಸ, ಪಕೋಡ,ಮಂಗಳೂರು ಬಜ್ಜಿ, ಮಸಾಲೆ ವಡೆ ಹೀಗೆ ಒಟ್ಟು ಸುಮಾರು ನೂರು ಬಗೆಯಲ್ಲಿ ತಾಜಾ ಆಹಾರಗಳು ಸಿಗಲಿದೆ...
ಪ್ಯಾಲೇಸ್ನ ಸರ್ವಿಸ್ ಎಲ್ಲಿದೆ..?
ಇನ್ನು ಈ ಪ್ಯಾಲೇಸ್ ಹೋಟೆಲ್ ನಲ್ಲಿ ಸಭೆ ಸಮಾರಂಭ, ಬರ್ತ್ ಡೇ, ಶುಭಕಾರ್ಯಗಳಿಗೆ ಮಾಡಿಕೊಡಲಾಗುತ್ತೆ.. ಗ್ರಾಹಕರ ಆಯ್ಕೆಗೆ ತಕ್ಕಂತೆ ಮೆನು ತಯಾರಿಸಲಾಗುತ್ತದೆ. ಈ ಹೋಟೆಲ್ ಸೇವೆ ಬೆಳಗ್ಗೆ 7 ರಿಂದ ಮಧ್ಯಾಹ್ನ 12ರ ವರೆಗೆ ಇದ್ದು..ಮತ್ತೆ ಸಂಜೆ 5 ರಿಂದ ರಾತ್ರಿ 10ರವರಗೆ ಸೇವೆ ಲಭ್ಯವಿದೆ.. ಮನೆಯಲ್ಲಿ ಸಮಾರಂಭಗಳನ್ನು ಆಯೋಜಿಸಿದಾಗ ಈ ಪ್ಯಾಲೇಸ್ ನ ಆಹಾರ ನಿಜಕ್ಕೂ ಉಪಯೋಗವಾಗುತ್ತೆ..
ತಿಂಡಿಯನ್ನು ತಿನ್ನಿರಿ. ಜೊತೆಗೆ ತಿನ್ನಿಸಿರಿ ಎಂಬ ಇವ್ರ ಉದ್ದೇಶ ನಿಜಕ್ಕೂ ಮೆಚ್ಚುವಂತದದ್ದು ಅಂತಾರೆ ರಾಜರಾಜೇಶ್ವರಿನಗರ ನಿವಾಸಿ ಚಂದ್ರ.. ನಮ್ಮ ಈ ಏರಿಯಾದಲ್ಲಿ ಹೊಸದಾಗಿ ಯಾವುದಾದ್ರೂ ಮಳಿಗೆಗಳು ಓಪನ್ ಆಗುತ್ತಲೇ ಇರುತ್ತೆ. ಆದ್ರೆ ಈ ರೀತಿಯ ಹೋಟೆಲ್ ಇದೇ ಮೊದಲು ನೋಡಿದ್ದು. ರುಚಿ ಶುಚಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅಚ್ಚುಕಟ್ಟಾಗಿ ಆಹಾರಗಳನ್ನು ನೀಡೋದ್ರಿಂದ ಖುಷಿ ನೀಡುತ್ತೆ ಅಂತಾರೆ ಚಂದ್ರ. ಇನ್ನು ಸಣ್ಣ ಪುಟ್ಟ ಪಾರ್ಟಿ ಮಾಡುವಾಗ, ಮನೆಯಲ್ಲಿ ಕಾರ್ಯಕ್ರಮ,ಆಫೀಸ್ ಗಳಲ್ಲಿ ಕಾರ್ಯಕ್ರಮ ಇದ್ದಾಗ ಬಹಳ ಯೂಸ್ ಫುಲ್ ಆಗುತ್ತೆ. ಒಂದು ದಿನ ಮುಂಚಿತವಾಗಿ ಹೇಳಿದ್ರೆ ತಿಂಡಿ ರೆಡಿ ಇರುತ್ತೆ. ಎಲ್ಲ ಆರ್ಡರ್ ಗಳನ್ನು ನೀಡಿದ್ರೆ, ಅವ್ರೆ ತಂದು ಕೊಡುತ್ತಾರೆ ಅಂತಾರೆ ನಿತೀನ್. ಔಟ್ ಡೋರ್ ಕೇಟರಿಂಗ್ ಮತ್ತು ಮುಂಗಡ ಬಲ್ಕ್ ಬುಕ್ಕಿಂಗ್ ವ್ಯವಸ್ಥೆ ಕೂಡ ಲಭ್ಯವಿದೆ. ಒಟ್ಟಿನಲ್ಲಿ ಹೊಸ ಹೊಸ ಆಲೋಚನೆಗಳಿಂದ, ವಿಭಿನ್ನ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇರುತ್ತೆ. ಈಗ ಈ ತಿಂಡಿ ಪ್ಯಾಲೇಸ್ ಸೇರ್ಪಡೆಯಾಗಿದೆ.
1. ಅಮ್ಮನ ಕೈಯ್ಯಡುಗೆ ಸವಿಯುವ ಮನಸ್ಸಾಗಿದ್ಯಾ..? ಆನ್‍ಲೈನ್‍ನಲ್ಲೂ ಸಿಗುತ್ತೆ `ಮದರ್ಸ್ ರೆಸಿಪಿ'