ಉದ್ಯಮ+ಉದ್ಯಮಿ+ಗ್ರಾಹಕ= ಟೆಕ್​ಸ್ಪಾರ್ಕ್​..!

ಟೀಮ್​ ವೈ.ಎಸ್​. ಕನ್ನಡ

ಉದ್ಯಮ+ಉದ್ಯಮಿ+ಗ್ರಾಹಕ= ಟೆಕ್​ಸ್ಪಾರ್ಕ್​..!

Thursday September 29, 2016,

2 min Read

ಉದ್ಯಮಿ ಆಗುವುದು ಸುಲಭದ ಮಾತಲ್ಲ. ಉದ್ಯಮಿ ಆಗುವ ಬಗ್ಗೆ ಕನಸು ಕಾಣಬಹುದು. ಆದ್ರೆ ಆ ಕನಸನ್ನು ನನಸು ಮಾಡಿಕೊಳ್ಳೋದಿಕ್ಕೆ ದಾರಿಗಳನ್ನು ಹುಡುಕಬೇಕು. ಯುವರ್ ಸ್ಟೋರಿ ನಿಮ್ಮ ಉದ್ಯಮಕ್ಕೆ ಹೊಸ ಸ್ಪರ್ಶ ನೀಡಬಲ್ಲಂತಹ ಅವಕಾಶವನ್ನು ನೀಡುತ್ತಿದೆ. ನಿಮ್ಮ ಉದ್ಯಮದ ಬೆಳವಣಿಗೆಗೆ ಹೊಸ ದಾರಿಯನ್ನು ತೋರಿಸಲು ಕೂಡ ಸಜ್ಜಾಗಿದೆ.

ಉದ್ಯಮದ ಬೆಳವಣಿಗೆ ನಿಂತಿರುವುದು ಗ್ರಾಹಕ ಮತ್ತು ಉದ್ಯಮಿಯ ನಡುವಿನ ಸಂಪರ್ಕದಲ್ಲಿ ಮತ್ತು ಸಂಹನದಲ್ಲಿ. ಇವೆರಡು ಅತ್ಯುತ್ತಮ ಸ್ಥಿತಿಯಲ್ಲಿ ಇದ್ರೆ ಉದ್ಯಮಿ ಮತ್ತು ಉದ್ಯಮ ಯಶಸ್ವಿ ಆದಂತೆಯೇ. ಟೆಕ್​ಸ್ಪಾರ್ಕ್ ಇಂತಹ ಬೆಳವಣಿಗೆಗೆ ವಿಶ್ವಾಸದ ಜೊತೆಗೆ ಉತ್ಸಾಹವನ್ನು ಕೂಡ ತುಂಬಬಹುದು.

image


ಟೆಕ್​ಸ್ಪಾರ್ಕ್ 2016 ಉದ್ಯಮದ ಬೆಳವಣಿಗೆ, ಉದ್ಯಮದಿಂದ ಬರುವ ಲಾಭಾಂಶ ಮತ್ತು ಗ್ರಾಹಕನ ಸಂತೃಪ್ತಿಯ ಬಗ್ಗೆಯೂ ವಿಸ್ತೃತವಾದ ಜ್ಞಾನವನ್ನು ನೀಡಲಿದೆ. ಟೆಕ್​ಸ್ಪಾರ್ಕ್ 2016 ಯುವರ್​ಸ್ಟೋರಿ ಆಯೋಜಿಸುತ್ತಿರುವ 7ನೇ ಅವತರಣಿಕೆ. ಈಗಾಗಲೇ ಭಾರತಾದ್ಯಂತ ಈ ವರ್ಷ ಟೆಕ್​ಸ್ಪಾರ್ಕ್​ನ್ನು ಯುವರ್​ಸ್ಟೋರಿ ಆಯೋಜಿಸಿದೆ. ಈಗಾಗಲೇ ಟೆಕ್​ಸ್ಪಾರ್ಕ್​ಹೈದ್ರಬಾದ್, ಇಂಧೋರ್, ಕೊಲ್ಕತ್ತಾ, ಮುಂಬೈ, ಪುಣೆ, ಜೈಪುರ, ಚಂಡೀಗಢ, ದೆಹಲಿ, ಚೆನ್ನೈ ಮತ್ತು ಅಹ್ಮದಾಬಾದ್​ಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. “ಟೆಕ್​ಸ್ಪಾರ್ಕ್​- 2016”ರ ಗ್ರಾಂಡ್ ಫಿನಾಲೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬಾರಿಯ ಟೆಕ್​ಸ್ಪಾರ್ಕ್​  ಟೆಕ್ನಾಲಜಿ, ಸಮರ್ಥನೀಯ ಪ್ರಮಾಣ ಮತ್ತು ಸ್ಟಾರ್ಟ್ಅಪ್ ಫಂಡಮೆಂಟಲ್​ಗಳ ಬಗ್ಗೆ ಹೆಚ್ಚು ಒತ್ತು ನೀಡಲಿದೆ.

ಇದನ್ನು ಓದಿ: ಟೆಕ್​ಸ್ಪಾರ್ಕ್​2016ಕ್ಕೆ ಕ್ಷಣಗಣನೆ- ನಿಮ್ಮನ್ನು ಸ್ವಾಗತಿಸುತ್ತಿದೆ ಯುವರ್​ಸ್ಟೋರಿ

ಯುವರ್​ಸ್ಟೋರಿ 2010ರಲ್ಲಿ ಮೊದಲ ಬಾರಿಗೆ ಟೆಕ್​ಸ್ಪಾರ್ಕ್​ ಆಯೋಜಿಸಿತ್ತು. ಇಲ್ಲಿ ತನಕ 16 ವಿಭಿನ್ನ ನಗರಗಳಲ್ಲಿ ಈ ಮಹಾಮೇಳ ನಡೆಸಿದೆ. 540ಕ್ಕೂ ಅಧಿಕ ಭಾಷಣಕಾರರನ್ನು ಪರಿಚಯಿಸಿದೆ. 15000ಕ್ಕೂ ಅಧಿಕ ಜನರು ಟೆಕ್​ಸ್ಪಾರ್ಕ್​ಗೆ ಬೇಟಿ ನೀಡಿದ್ದಾರೆ. ಟೆಕ್​ಸ್ಪಾರ್ಕ್​ ಸ್ಟಾರ್ಟ್ಅಪ್​ಗಳಿಗೆ ಉತ್ತೇಜನ ನೀಡುವುದಲ್ಲಿದೆ ಟೆಕ್ 30 ಅನ್ನೋ ವಿಭಿನ್ನ ಮತ್ತು ಭವಿಷ್ಯದ ಸ್ಟಾರ್ಟ್ಅಪ್​ಗಳ ಪಟ್ಟಿಯನ್ನು ಕೂಡ ತಯಾರಿಸುತ್ತಿದೆ.

ಕಳೆದ 6 ವರ್ಷಗಳಿಂದ ಟೆಕ್​ಸ್ಪಾರ್ಕ್​ ಸ್ಟಾರ್ಟ್ಅಪ್​ಗಳಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿದೆ. ಟೆಕ್​ಸ್ಪಾರ್ಕ್​ನಲ್ಲಿ ಪಾಲ್ಗೊಂಡ 180 ಸ್ಟಾರ್ಟ್ಅಪ್​ಗಳ ಪೈಕಿ ಸುಮಾರು 97 ಸ್ಟಾರ್ಟ್ಅಪ್​ಗಳು ಟೆಕ್ 30 ಲಿಸ್ಟ್​ನಲ್ಲಿ ಸೇರ್ಪಡೆಯಾದ ಬಳಿಕ ಆದಾಯದಲ್ಲಿ ಅಭಿವೃದ್ಧಿ ಕಂಡಿವೆ. ಟೆಕ್​ಸ್ಪಾರ್ಕ್​ ಟೆಕ್ 30 ಲಿಸ್ಟ್ ಸೇರಿದ ಬಳಿಕ ಸುಮಾರು 630 ಮಿಲಿಯನ್ ಡಾಲರ್ ವಿವಿಧ ಸ್ಟಾರ್ಟ್ಅಪ್​ಗಳ ಮೂಲಕ ಹರಿದು ಬಂದಿದೆ. ಈಗ ಮತ್ತೆ ಟೆಕ್ಸ್ಪಾರ್ಕ್ ಹಬ್ಬ ಆರಂಭವಾಗಿದೆ ಬೆಂಗಳೂರಿನ ಯಶವಂತಪುರದಲ್ಲಿ ನಡೆಯುತ್ತಿರುವ ಈ ಗ್ರಾಂಡ್​ಫಿನಾಲೆ ಹೊಸ ಇತಿಹಾಸ ಸೃಷ್ಟಿ ಮಾಡುವುದು ಖಚಿತ.

ಇದನ್ನು ಓದಿ:

1. ಟೆಕ್​ಸ್ಪಾರ್ಕ್​2016ಕ್ಕೆ ಕ್ಷಣಗಣನೆ- ನಿಮ್ಮನ್ನು ಸ್ವಾಗತಿಸುತ್ತಿದೆ ಯುವರ್​ಸ್ಟೋರಿ

2. ಭಾರತದ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು 'ಪತಂಜಲಿ'ಯ ಆಚಾರ್ಯ ಬಾಲಕೃಷ್ಣ

3. ಟೋಲ್​ಗಳಲ್ಲಿ ಇನ್ನುಮುಂದೆ ಪೇಟಿಎಂ ಹವಾ..!