ಡೇಂಜರ್​​..! ಭಯ ಇದ್ರೆ ಇಲ್ಲಿ ಹೋಗಲೇ ಬೇಡಿ..!

ಆರಾಧ್ಯ

ಡೇಂಜರ್​​..! ಭಯ ಇದ್ರೆ ಇಲ್ಲಿ ಹೋಗಲೇ ಬೇಡಿ..!

Monday February 15, 2016,

2 min Read

ಅದೊಂದು ಮನೆ. ಮಕ್ಕಳ ಕತೆಗಳಲ್ಲಿ ಬರುತ್ತಲ್ಲ, ಪಾಳು ಬಿದ್ದ ಮನೆ, ಅಂಥದ್ದೇ ದೊಡ್ಡ ಮನೆ. ಆ ಮನೆಯ ಒಂದು ಬದಿಯಲ್ಲಿ ಆಲದ ಮರವಿದೆ. ಆ ಮರದ ಬಿಳಲುಗಳು ಮನೆಯ ಗೋಡೆಗೆ ಅಂಟಿಕೊಂಡು ಹಾರರ್ ಫೀಲಿಂಗ್ ಉಂಟು ಮಾಡುತ್ತದೆ. ಆ ಮನೆಯೊಳಗೆ ಹೋದರೆ ಕಗ್ಗತ್ತಲು. ಸ್ವಲ್ಪ ದೂರ ಹೋಗುತ್ತಿದ್ದಂತೆ ಯಾರೋ ಜೋರಾಗಿ ಕಿರುಚಿದ ಸದ್ದು. ಅದನ್ನು ದಾಟಿ ಮುಂದೆ ಹೋದರೆ ನೇತಾಡುತ್ತಿರುವ ಅಸ್ಥಿಪಂಜರ. ಭಯದಿಂದಲೇ ಎದುರಿದ್ದ ಬಾಗಿಲು ತೆಗೆದರೆ ಯಾರೋ ಓಡಾಡಿದ ಹಾಗೆ. ಕತ್ತಲಲ್ಲಿ ಕಣ್ಣನ್ನು ಉಜ್ಜಿ ನೋಡಿದರೆ ಅಯ್ಯೋ ಎದುರಿಗೊಂದು ದೆವ್ವ. ಅಯ್ಯೋ ಇದೇನಿದ್ದು ಅಂತೀರಾ.

image


ಇದನ್ನು ಓದಿ

ಧಾರಾವಾಹಿ, ಚಲಚಿತ್ರಗಳ ನಟಿಯಾದ್ರೂ ಯಕ್ಷಗಾನದಲ್ಲಿ ಎತ್ತಿದ ಕೈ..!

ಇದು ಸ್ಕೇರಿ ವಿಲೇಜ್ .. ಬಹಳಷ್ಟು ಜನರಿಗೆ ಸ್ಕೇರಿ ಹೌಸ್ ಗೊತ್ತು. ಮಾಲ್​ನಲ್ಲೋ ಅಥವಾ ಜಾತ್ರೆಯಲ್ಲೋ ಈ ಸ್ಕೇರಿಹೌಸ್ ಇರುತ್ತದೆ. ಭಯಗೊಳಿಸಲೆಂದೇ ಇರುವ ಮನೆ ಅದು. ಧೈರ್ಯ ಇರುವವರು, ಭಯ ಆಗುತ್ತದೋ ಇಲ್ಲವೋ ಎಂದು ಚೆಕ್ ಮಾಡಲು ಬಯಸುವವರು, ಏನಿದೆ ನೋಡೋಣ ಅಂತಂದುಕೊಂಡಿರುವವರು ಎಲ್ಲರೂ ಈ ಸ್ಕೇರಿ ಹೌಸ್​ನೊಳಕ್ಕೆ ಹೋಗಿ ಬರುತ್ತಾರೆ. ಅಂಥವರಿಗೆಲ್ಲರಿಗೂ ಈಗ ಒಂದು ಸಂತೋಷದ ಸಂಗತಿ. ಅಂತಹದೇ ವಿಚಿತ್ರವಾದ ಸ್ಕೇರಿ ವಿಲೇಜ್, ಎಂಬ ಪುಟ್ಟ ದೆವ್ವದ ಹಳ್ಳಿ ನಗರದ ಪ್ರತಿಷ್ಠಿತ ಮಾಲ್ ನಲ್ಲಿ ಸೃಷ್ಟಿಯಾಗಿದೆ.

ಹೌದು ಮಲ್ಲೇಶ್ವರನ ಮಂತ್ರಿ ಮಾಲ್ ನಲ್ಲಿ ಕಳೆದ ದೀಪಾವಳಿಯಿಂದ ಈ ಸ್ಕೇರಿ ವಿಲೇಜ್ ಪ್ರಾರಂಭವಾಗಿದೆ.. ಸ್ಕೇರಿ ಹೌಸ್ ಗಿಂತ ಈ ಹಳ್ಳಿ ಸ್ವಲ್ಪ ವಿಭಿನ್ನವಾಗಿದೆ.. ! ಸ್ಕೇರಿ ಹೌಸ್ ಒಂದು ಪುಟ್ಟ ಮನೆಯಾದರೆ ಸ್ಕೇರಿ ವಿಲೇಜ್ ಭಯ ಹುಟ್ಟಿಸುವ ಒಂದು ಹಳ್ಳಿ. ರಾತ್ರಿ ಹೊತ್ತು ದೆವ್ವಗಳಿವೆ ಅಂತ ಊರು ತುಂಬಾ ಪ್ರಚಾರ ಆಗಿರುವ ಹಳ್ಳಿಗೆ ಹೋದರೆ ಹೇಗಿರುತ್ತದೋ ಹಾಗಿದೆ ಈ ಸ್ಕೇರಿ ವಿಲೇಜ್.

image


ಇನ್ನು ಸ್ಕೇರಿ ಹೌಸ್, ಸ್ಕೇರಿ ಜಂಗಲ್ ಗೆ ಬೇಟಿ ನೀಡರಿರುವ ಎಲ್ಲರಿಗೂ ಈ ಸ್ಕೇರಿ ವಿಲೇಜ್ ಮತ್ತಷ್ಟು ಹೆದ್ದರಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ.. ವಿದೇಶದಲ್ಲಿ ಬಹಳಷ್ಟು ಹೆಸರು ಮಾಡಿರುವ ಈ ಭಯಂಕರ ಗೇಮ್ ಗಳು, ಸಿಲಿಕಾನ್ ಸಿಟಿ ಜನ್ರಿಗೂ ಅದ್ರಲ್ಲೂ ಕಾಲೇಜು ಯುವಕ ಯುವಕಿಯರಿಗೆ ಸಖತ್ ಇಷ್ಟವಾಗಿದೆ.. ಈ ಹಿನ್ನಲೆ ನಗರದಲ್ಲಿ ಪ್ರಥಮ ಬಾರಿಗೆ ಮಂತ್ರಿ ಮಾಲ್ ನಲ್ಲಿ ಈ ಸ್ಕೇರಿ ವಿಲೇಜ್ ಪ್ರಾರಂಭವಾಗಿದೆ.. ಏನೇನಿದೆ, ಆ ಸ್ಕೇರಿ ವಿಲೇಜ್ ನಲ್ಲಿ ಅಂತೀರಾ .. ಇಲ್ಲಿದೆ ನೋಡಿ ಡಿಟೈಲ್ಸ್..

- ದಿಗಿಲುಗೊಳಿಸುವ ರಸ್ತೆಗಳು

- ನಡುಕ ಹುಟ್ಟಿಸುವ ಭಯಂಕರ ಬಾವಿ

- ದೆವ್ವದ ಕಾಟ ಇರುವ ದೊಡ್ಡ ಆಲದ ಮರ

- ಪಿಶಾಚಿಗಳೇ ತುಂಬಿರುವ ಕತ್ತಲ ಮನೆಗಳು

- ಇದ್ದಕ್ಕಿದ್ದಂತೆ ಆಗಮಿಸುವ ದೆವ್ವಗಳು

ಹೀಗೆ ಸ್ಕೇರಿ ವಿಲೇಜಲ್ಲಿ ಭಯ ಹುಟ್ಟಿಸುವ ಸಾಲು ಸಾಲು ಅಚ್ಚರಿಗಳಿವೆ. ಒಂದ್ಸಲ ಸ್ಕೇರಿ ವಿಲೇಲ್​ನೊಳಗೆ ಹೋಗಿ ಬಂದರೆ ಒಂದು ವಿಚಿತ್ರ ಮಾಯಾಲೋಕಕ್ಕೆ ಹೋಗಿ ಬಂದಂತೆ ಅನ್ನಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ..

image


ಇನ್ನು ಈ ಸ್ಕೇರಿ ವಿಲೇಜ್ ಗೆ ಬೇಟಿ ಕೊಟ್ಟ ಕಾಲೇಜು ಯುವಕರು, ಈಗಾಗಲ್ಲೇ ಸ್ಕೇರಿ ಹೌಸ್ ಹಾಗೂ ಸ್ಕೇರಿ ಜಂಗಲ್ ಗೆ ಬೇಟಿ ನೀಡಿದೆ, ಅವುಗಳಿಗಿಂತ ಈ ಸ್ಕೇರಿ ವಿಲೇಜ್ ಸಖತ್ ಥ್ರೀಲಿಂಗ್ ಹಾಗೂ ಭಯಂಕರವಾಗಿದೆ.. ದೆವ್ವಗಳೆ ತುಂಬಿರುವ ಹಳ್ಳಿಯ ಪರಿಚಯ ಈ ಸ್ಕೇರಿ ವಿಲೇಜ್ ನಲ್ಲಿದೆ ಅಂತಾರೆ, ಕಾಲೇಜು ಯುವಕ ಮೋಹನ್ ಕುಮಾರ್​. ಒಟ್ಟಿನಲ್ಲಿ ನಿಮ್ಮ ಧಮ್​ ಟೆಸ್ಟ್​ ಮಾಡೋದಿಕ್ಕೆ ಇದು ಬೆಸ್ಟ್​ ಪ್ಲೇಸ್​..

ಇದನ್ನು ಓದಿ

ಡ್ಯಾನ್ಸ್​​ನಿಂದ ಡಿಸೈನರ್​​ ವರೆಗೂ …

ಪುರೋಹಿತರು ನಕರಾ ಮಾಡ್ತಿದ್ದಾರಾ..? ಡೋಂಟ್​​ವರಿ ಆನ್​​ಲೈನ್​​ನಲ್ಲೇ ಬುಕ್​​ ಮಾಡಿ..!

2013ರ ಮಾರುಕಟ್ಟೆಯ ವಿದ್ಯಮಾನ ಅಂದಾಜಿಸಿ ಕಲಾರಿ ಕ್ಯಾಪಿಟಲ್ ಆರಂಭಿಸಿದ್ದ ಕುಮಾರ್ ಶಿರಲಗಿ