ಕಲೆಯನ್ನು ಉಳಿಸಿ ಬೆಳೆಸುತ್ತಿರುವ 5 ಕೆಫೆಗಳು
ಭಾರತಿ ಭಟ್
ಸೂರ್ಯನನ್ನೇ ಹಳದಿ ಬಿಂದುವಿಗೆ ರೂಪಾಂತರಿಸುವ ಕಲಾವಿದರಿದ್ದಾರೆ. ಇನ್ನು ಕೆಲವರು ತಮ್ಮ ಕಲೆ ಮತ್ತು ಬುದ್ಧಿವಂತಿಕೆಯನ್ನು ಉಪಯೋಗಿಸಿ ಹಳದಿ ಬಿಂದುವನ್ನೇ ಸೂರ್ಯನನ್ನಾಗಿ ರೂಪಾಂತರಿಸುತ್ತಾರೆ’’ ಇದು ಪಬ್ಲೋ ಪಿಕಾಸೋ ಅವರ ಮಾತು. ಇದು ಆರ್ಟ್ ಬ್ಲೆಂಡ್ ಕೆಫೆಯಲ್ಲಿ ಅಕ್ಷರಶಃ ಸತ್ಯವಾಗಿದೆ. ಬಹುತೇಕ ಜನರು ಬಿಸಿ ಬಿಸಿ ವಾತಾವರಣದಿಂದ ತಪ್ಪಿಸಿಕೊಂಡು ಶಾಂತವಾಗಿ ಕುಳಿತು ಮಾತನಾಡಬೇಕೆಂದೇ ಈ ಕೆಫೆಗೆ ಬರ್ತಾರೆ. ಇಲ್ಲಿನ ಗುಣಮಟ್ಟ ಹಾಗೂ ಸೇವೆಯ ವೈವಿದ್ಯತೆಗಳನ್ನು ನೋಡಿ ಅಚ್ಚರಿಪಡ್ತಾರೆ.
ಕಲೆ ಮಿಶ್ರಿತ ಕೆಫೆ...
ಆರ್ಟ್ ಬ್ಲೆಂಡ್ ಕೆಫೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿದೆ. ಪ್ರತೀತಿ ಶುಕ್ಲಾ ಹಾಗೂ ಅರ್ಚನಾ ಗುಪ್ತಾ ಜೊತೆಯಾಗಿ 2014ರ ಫೆಬ್ರವರಿಯಲ್ಲಿ ಈ ಕೆಫೆಯನ್ನು ಆರಂಭಿಸಿದ್ದಾರೆ. ಕಲಾವಿದರು, ಗ್ರಾಹಕರು ಮತ್ತು ಭೋಜನ ಪ್ರಿಯರ ಸಮ್ಮಿಲನ ಇಲ್ಲಿ ಆಗ್ತಿದೆ. ಗ್ರಾಹಕರು ಕೂಡ ತಮ್ಮ ಕಲೆಯನ್ನು ಪ್ರದರ್ಶಿಸಲು ಅವಕಾಶವಿದೆ. ಇಲ್ಲೇ ಚಿತ್ರ ಬಿಡಿಸಿ ಅದನ್ನು ಕೊಂಡೊಯ್ಯಬಹುದು. ಕಾರ್ಯಾಗಾರಗಳಲ್ಲಿ ಇವುಗಳನ್ನು ಪ್ರದರ್ಶನಕ್ಕೂ ಇಡಬಹುದು. 2013ರಲ್ಲಿ ಈ ಕೆಫೆಯನ್ನು ಆರಂಭಿಸಬೇಕೆಂಬ ಪರಿಕಲ್ಪನೆ ಪ್ರತೀತಿ ಹಾಗೂ ಅರ್ಚನಾ ಅವರಲ್ಲಿ ಹುಟ್ಟಿಕೊಂಡಿತ್ತು. ನಿಜಕ್ಕೂ ಇದೊಂದು ವಿಕಾಸದ ಪಯಣ. ಯಾಕಂದ್ರೆ ಒಂದು ಮನೆಯನ್ನು ಕೆಫೆಯನ್ನಾಗಿ ಪರಿವರ್ತಿಸುವುದು ಸುಲಭದ ಮಾತಲ್ಲ. ಕಲೆ ಹಾಗೂ ಹವ್ಯಾಸದ ಜೊತೆಗೆ ತಿನಿಸುಗಳು ಇಲ್ಲಿ ಬೆರೆತಿವೆ. ದೊಡ್ಡ ದೊಡ್ಡ ಪಾರ್ಟಿ, ಕಾರ್ಪೊರೇಟ್ ಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಲ್ಲಿ ಅವಕಾಶವಿದೆ. ಕಲೆಯ ಕಾರ್ಯಾಗಾರ, ಪೇಂಟಿಂಗ್ ಸೆಶನ್ಸ್, ಬೇಸಿಗೆ ಶಿಬಿರ ಇಂಥದ್ದಕ್ಕೆಲ್ಲ ಇದು ಹೇಳಿ ಮಾಡಿಸಿದಂತಹ ತಾಣ. ಬೇರೆ ಬೇರೆ ಅಂಶಗಳಾಗಿ ಇವನ್ನೆಲ್ಲ ವಿಭಾಗಿಸಿದ್ರೂ , ಖಾಯಂ ಗ್ರಾಹಕರು ಮತ್ತು ಕಲಾವಿದರಿಗೆ ಇದೊಂದು ನಿಕಟ ತಾಣವಾಗಿ, ಬೆಚ್ಚನೆಯ ಅನುಭವ ಕೊಡುವಂತಹ ಸ್ಥಳವಾಗಿಯೇ ಇದೆ.
ಲೀಪಿಂಗ್ ವಿಂಡೋಸ್..
ಬಿದಿಶಾ ಬಸು ಲೀಪಿಂಗ್ ವಿಂಡೋಸ್ ಕೆಫೆಯ ಸಂಸ್ಥಾಪಕರು. ಇಲ್ಲಿ ಜನರು ಆರಾಮಾಗಿ ಕುಳಿತು ಸಂಭಾಷಣೆ ನಡೆಸಬಹುದು. ಇಲ್ಲೇ ಗ್ರಂಥಾಲಯವೂ ಇದೆ. ಕಾಮಿಕ್ಸ್, ಗ್ರಾಫಿಕ್ ಕಾದಂಬರಿಗಳನ್ನೆಲ್ಲ ಗ್ರಾಹಕರು ಓದಬಹುದು. ಗ್ರಾಹಕರು ಕಾಮಿಕ್ಸ್ಗಳು ಬೇಕಾದಲ್ಲಿ ಆನ್ಲೈನ್ನಲ್ಲೇ ಆರ್ಡರ್ ಮಾಡಬಹುದು. ಮುಂಬೈನ ಯಾವ ಮೂಲೆಯಲ್ಲಾದ್ರೂ ಸರಿ 24 ಗಂಟೆಗಳೊಳಗೆ ಅದನ್ನು ಡೆಲಿವರಿ ಮಾಡಲಾಗುತ್ತೆ.
ಲೀಪಿಂಗ್ ವಿಂಡೋಸ್ ಅನ್ನು ಆರಂಭಿಸುವ ಸಂದರ್ಭದಲ್ಲಿ ಉದ್ಯಮದ ಬಗ್ಗೆ ಬಿದಿಶಾ ಅವರಿಗೆ ಏನೂ ತಿಳಿದಿರ್ಲಿಲ್ಲ. ಅದ್ರಲ್ಲೂ ಕೆಫೆಗಳ ಬಗ್ಗೆ ಐಡಿಯಾ ಇರಲಿಲ್ಲ. ಆತಿಥ್ಯ ವಿಭಾಗದ ಬಗ್ಗೆಯೂ ಗೊತ್ತಿರಲಿಲ್ಲ. ಈಜು ಬಾರದವರನ್ನು ಆಳಕ್ಕೆ ತಳ್ಳಿದಂತಾಗಿತ್ತು ಅವರ ಸ್ಥಿತಿ. ಆದ್ರೆ ಈಜು ಕಲಿಯಲು ಇದೇ ಉತ್ತಮ ದಾರಿ ಕೂಡ ಆಗಿತ್ತು. ಇದುವರೆಗೂ ಕೆಫೆ ಉದ್ಯಮದಲ್ಲಿ ಅದ್ಭುತ ಅನುಭವವಾಗಿದೆ ಎನ್ನುತ್ತಾರೆ ಬಿದಿಶಾ.
ಸರಯಾ...
ಸರಯಾ ಕೆಫೆ ದೀಕ್ಷಾ ತಿಂಡ್ ಅವರ ಕನಸಿನ ಕೂಸು. ತಾಜಾ ಹಾಗೂ ನೈಸರ್ಗಿಕ ತಿನಿಸುಗಳ ಬಗ್ಗೆ ದೀಕ್ಷಾ ಅವರಿಗಿದ್ದ ಪ್ರೀತಿಯಿಂದ್ಲೇ ಸರಯಾ ಕೆಫೆ ಜನ್ಮ ತಾಳಿದೆ. ಒಂದು ಕಪ್ ಕಾಫಿ ಜೊತೆ ಗ್ರಾಹಕರಿಗೆ ತಮ್ಮ ಐಡಿಯಾಗಳನ್ನೂ ಹಂಚಿಕೊಳಲು ಅವಕಾಶವನ್ನು ಗೋವಾದ ಸರಯಾ ಕೆಫೆ ಕಲ್ಪಿಸಿದೆ. ಕೆಫೆಯ ಹಿಂದಿರುವ ಗಾರ್ಡ್ನ್ನಿಂದಲೇ ತಾಜಾ ತಿನಿಸುಗಳನ್ನು ಗ್ರಾಹಕರಿಗೆ ಪೂರೈಸಲಾಗುತ್ತೆ. ವಿವಿಧ ಕಲಾವಿದರು, ಸಾಹಿತಿಗಳು, ಸಂಗೀತಗಾರರು ಸರಯಾದ ಆರ್ಟ್ ಗ್ಯಾಲರಿಯಲ್ಲಿ ತಮ್ಮ ಸೃಜನಶೀಲನೆಯನ್ನು ಪ್ರದರ್ಶಿಸಬಹುದು. ಇನ್ನು ಕಲಾವಿದರು ವೈಯಕ್ತಿಕವಾಗಿ ಕಾರ್ಯಾಗಾರಗಳ ಮೂಲಕ ತಮ್ಮ ಕಲೆಯನ್ನು ಪ್ರದರ್ಶಿಸಲು ಸಹ ಇಲ್ಲಿ ವೇದಿಕೆ ಕಲ್ಪಿಸಲಾಗಿದೆ.
ಕಾಶಾ ಕಿ ಆಶಾ...
ಕಾಶಾ ವಂದೆ, ಕಾಶಾ ಕಿ ಆಶಾದ ಸಂಸ್ಥಾಪಕರು. ಪಾಂಡಿಚೇರಿಯ ಜನತೆಗೆ ಅವರ ಕರಕುಶಲ ಉತ್ಪನ್ನಗಳ ಪ್ರದರ್ಶನಕ್ಕೆ ಇದೊಂದು ವೇದಿಕೆ. ಕಾಶಾ ಕಿ ಆಶಾದ ಟೆರೆಸ್ ಮೇಲೆ ಸ್ಥಳೀಯ ಮಹಿಳೆಯರ ತಂಡ ಬುಟಿಕ್ ಹಾಗೂ ರೆಸ್ಟೋರೆಂಟನ್ನು ನಡೆಸುತ್ತೆ. 10 ವರ್ಷಗಳ ತನ್ನ ಸೇವೆಯ ಮೂಲಕ ಕಾಶಾ ಕಿ ಆಶಾ, ಭಾರತವೇ ಒಂದು ಕಲೆ ಎಂಬ ಭಾವನೆಯನ್ನು ಮೂಡಿಸಿದೆ. ದಕ್ಷಿಣ ಭಾರತದ ಆತಿಥ್ಯ, ಸಂಪ್ರದಾಯದ ಮೂಲಕ ಅಲ್ಲಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡ್ತಿದೆ. ಗ್ರಾಹಕರು ಇಲ್ಲೇ ರಿಲ್ಯಾಕ್ಸ್ ಮಾಡಬಹುದು, ಬೇಡ ಎನಿಸಿದ್ರೆ ಶಾಪಿಂಗ್ ಕೂಡ ಮಾಡ್ಬಹುದು. ಕಾಶಾ ಕಿ ಆಶಾ ಪಾಂಡಿಚೇರಿಯ ಗುಪ್ತ ನಿಧಿ ಅನ್ನೋ ಮಾತಿದೆ.
ಮಿಸೆಸ್ ಮ್ಯಾಗ್ಪೀ ...
ಇದು ಸೋಹಿನಿ ಬಸು ಅವರೇ ಹುಟ್ಟು ಹಾಕಿದ ಕೆಫೆ. ಜನಸಾಮಾನ್ಯರಿಗೆ ಇಷ್ಟವಾದ ಅಡ್ಡಾ. ಕೋಲ್ಕತ್ತಾದ ಅತ್ಯಂತ ಹೆಸರುವಾಸಿ ಕಾಫಿ ಹೌಸ್ ಇದು. ಇಲ್ಲಿ ಕೇಕ್ ಜೊತೆ ಕಾಫಿ ಸವಿಯುವ ಅವಕಾಶ ಗ್ರಾಹಕರಿಗೆ ಸಿಗ್ತಾ ಇದೆ. ಅತ್ಯಂತ ನವೀನ ಹಾಗೂ ಪ್ರಭಾವಶಾಲಿ ಪರಿಸರವನ್ನು ನಿರ್ಮಾಣ ಮಾಡುವ ಮೂಲಕ ಮಿಸೆಸ್ ಮ್ಯಾಗ್ಪೀ ಜನರನ್ನು ಸೆಳೆಯುತ್ತಿದೆ.