Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ನಿಮ್ಮ ಕಥೆ; ನಿಮ್ಮ ವೇದಿಕೆ ಇದು yourstory.com

ಶ್ರುತಿ

ನಿಮ್ಮ ಕಥೆ; ನಿಮ್ಮ ವೇದಿಕೆ ಇದು yourstory.com

Tuesday November 10, 2015 , 2 min Read

ಯುವರ್ ಸ್ಟೋರಿ ಹೆಸರೇ ಅದ್ಭುತ. ಇದರ ಕಲ್ಪನೆಯೂ ವರ್ಣಾತೀತ. ಹೆಸರೇ ಹೇಳುವಂತೆ ಇದು ಸಾಧನೆಯ ಕಥೆಯನ್ನು ಹೇಳುವ ತಾಣ. ಬದಲಾವಣೆಯ ಹರಿಕಾರರು, ಉದ್ಯಮಿಗಳು, ಹೊಸತನಕ್ಕೆ ಹೆಸರಾದವರು, ಕಠಿಣ ನಿರ್ಧಾರದ ಮೂಲಕ ಸಾಧನೆಯನ್ನು ಮಾಡಿದವರು, ಹೂಡಿಕೆದಾರರು, ತಮ್ಮ ಯಶೋಗಾಥೆಯನ್ನು ಹೇಳುವ ಸಲುವಾಗಿಯೇ ಆರಂಭಗೊಂಡಿದ್ದೇ yourstory.

image


Yourstory.com ಅನ್ನು 2008ರಲ್ಲಿ ಆರಂಭಿಸಿದವರು ಶ್ರದ್ಧಾ ಶರ್ಮಾ. ಇವರ ಕಲ್ಪನೆಯ ಕೂಸಾಗಿ ಜನ್ಮ ತಾಳಿದ ಈ ಡಾಟ್ ಕಾಮ್ ಸಮಾಜದಲ್ಲಿ ಪರಿವರ್ತನೆ ತರಲು ಹೆಜ್ಜೆ ಇಟ್ಟಿದೆ. ಈ ಅಕ್ಟೋಬರ್ ದಿಂದ ಯುವರ್ ಸ್ಟೋರಿಯು ಭಾರತದ ದೇಶಿಯ ಭಾಷೆಗಳಲ್ಲಿ ಸ್ಟೋರಿಗಳನ್ನು ಪ್ರಕಟಿಸುವ ಮೂಲಕದೇಶದ ಮೊದಲ ತಾಂತ್ರಿಕ ಉತ್ಪನ್ನ ಅನ್ನುವ ಶ್ರೇಯಸ್ಸಿಗೆ ಪಾತ್ರವಾಗಿದೆ.

ಸದ್ಯ ಇಂಗ್ಲಿಷ್ ಆವತರಣಿಕೆಯ Yourstory.com ಶೀಘ್ರದಲ್ಲೇ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಯುವ ಜನಾಂಗವನ್ನು ಪ್ರೇರೆಪಿಸುವ ಜೀವನದಲ್ಲಿ ಏನಾದರೂ ಸಾಧಿಸಲು ಉತ್ತೇಜಿಸುವ, ಜೀವನವನ್ನೇ ಬದಲಿಸುವ ಕಥೆಗಳನ್ನು ನಿಮ್ಮ ಮುಂದಿರಿಸಲಿದೆ. ಭಾರತೀಯ ಭಾಷೆಗಳಾದ ಹಿಂದಿ, ತೆಲುಗು, ಬಂಗಾಲಿ, ಕನ್ನಡ, ತಮಿಳು, ಹಾಗೂ ಮಠಾರಿ ಭಾಷೆಗಳಲ್ಲಿ ತನ್ನ ಸೇವೆಯನ್ನು ಸೆಪ್ಟಂಬರ್​​ನಲ್ಲಿ ಆರಂಭಿಸಿತ್ತು. ಗುಜರಾತಿ, ಓರಿಯಾ ಮತ್ತು ಮಲೆಯಾಳಂ ಭಾಷೆಗಳಲ್ಲಿ ಅಕ್ಟೋಬರ್​​ನಲ್ಲಿ ವೆಬ್​​ಪೋರ್ಟಲ್​​ ಕಾರ್ಯ ಆರಂಭಿಸಿತ್ತು. ದೀಪಾವಳಿಗೆ ಅಸ್ಸಾಮಿ, ಪಂಜಾಬಿ ಮತ್ತು ಉರ್ದು ಭಾಷೆಗಳಲ್ಲಿ yourstory ಲಭ್ಯವಿದೆ.

Yourstory.comನ ಗುರಿ ಇಷ್ಟಕ್ಕೆ ಅಂತ್ಯವಾಗುವುದಿಲ್ಲ ಮುಂದಿನ 2017ರೊಳಗೆ ಆನ್ ಲೈನ್‌ನಲ್ಲೇ ಸರಿಸುಮಾರು 500 ದಶಲಕ್ಷ ಭಾರತೀಯರನ್ನು ಗ್ರಾಹಕರನ್ನಾಗಿ ಹೊಂದುವ ಗುರಿಯನ್ನು ಶ್ರದ್ಧಾ ಶರ್ಮಾ ನೇತೃತ್ವ ತಂಡ ಹೊಂದಿದೆ. ಈ ಮೂಲಕ ದೇಶದ ಇತಿಹಾಸದಲ್ಲೇ ಒಂದು ಅಪ್ರತಿಮ ಸಾಧನೆ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದೆ.

ದೇಶದಲ್ಲಿ ಇವತ್ತು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ನಾನಾ ರೀತಿ ಅಡೆತಡೆಗಳಿವೆ. ನೂರೆಂಟು ವಿಘ್ನಗಳೂ ಸಹಾ ಇವೆ. ತಮ್ಮ ಭಾವನೆಯನ್ನು ವ್ಯಕ್ತಪಡಿಸಬೇಕೇ? ಅಥವಾ ಬೇಡವೇ? ಅನ್ನೋ ಭಯ ಇಲ್ಲರಿಗೂ ಇದ್ದೇ ಇದೆ. ಟೀಕೆ-ಟಿಪ್ಪಣಿ, ವಾದ-ಪ್ರತಿರೋಧ ವ್ಯಕ್ತವಾಗುವ ಭೀತಿಯಿಂದ ಅನೇಕ ಮಂದಿ ಹೇಳಬೇಕಾಗಿರುವುದನ್ನು ಹೇಳಲು ಸಾಧ್ಯವಾಗದೇ ಚಡಪಡಿಸುತ್ತಿದ್ದಾರೆ. ಆದರೆ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಯುವರ್ ಸ್ಟೋರಿ ನಿಮಗೊಂದು ವೇದಿಕೆ ಒದಗಿಸುತ್ತದೆ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು, ಅನಿಸಿದ್ದನ್ನು ಹೇಳಲು ವೇದಿಕೆಯೊಂದನ್ನು ಸೃಷ್ಟಿಸಿದೆ.

ಪ್ರತಿಯೊಬ್ಬ ಭಾರತೀಯನೂ ಕೂಡ ತನ್ನದೇ ಭಾಷೆಯಲ್ಲಿ ಯುವರ್ ಸ್ಟೋರಿಗೆ ಯಶೋಗಾಥೆಗಳನ್ನು ಕಳುಹಿಸಬಹುದಾಗಿದೆ. ಲಕ್ಷಾಂತರ ಭಾರತೀಯರು ತಮ್ಮ ಕತೆಗಳನ್ನು ಬರವಣಿಗೆ ಮೂಲಕ, ಧ್ವನಿ ಕಳುಹಿಸುವುದರ ಮೂಲಕ ಅಥವಾ ವೀಡಿಯೋ ಮಾಡುವುದರ ಮೂಲಕ ಹಂಚಿಕೊಳ್ಳಬಹುದಾಗಿದೆ. 

Yourstory.com ಕನಸುಗಳನ್ನು ಶ್ರದ್ಧಾ ಶರ್ಮಾ ಬಿಚ್ಚಿಡುತ್ತಾರೆ. ಇದೊಂದು ಪರಿವರ್ತನೆಯ ಉದ್ಯಮವೆಂದು ನಾವು ನಂಬುತ್ತೇವೆ. ಇದು ಇಂಗ್ಲೀಷ್ ಭಾಷೆಯ ಬಳಕೆದಾರರಿಗೆ ಮಾತ್ರವಲ್ಲದೆ, ಲಕ್ಷಾಂತರ ಭಾರತೀಯರು ಕೂಡಾ ತಮ್ಮ ಸ್ವಂತ ಭಾಷೆಯಲ್ಲಿ ಸಂವಹಿಸಲು ಇಷ್ಟ ಪಡುವವರಿಗೂ ಉಪಯುಕ್ತವಾಗಿದೆ. ಪ್ರಜಾಪ್ರಭುತ್ವದಲ್ಲಿ ಇದೊಂದು ಕತೆಯ ಕ್ರಾಂತಿಗೆ ನಾಂದಿ ಎಂದು ಹೇಳಬಹುದು. ಎಲ್ಲರೂ ಇಲ್ಲಿ ತಮ್ಮ ಕತೆಯನ್ನು ಹೇಳಿಕೊಳ್ಳಬಹುದು. ಶೇರ್ ಮಾಡಬಹುದು ಹಾಗೂ ಬರೆಯಬೇಕು ಅನ್ನುವವರಿಗೆ ಒಂದು ಸೂಕ್ತ ವೇದಿಕೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಯುವರ್ ಸ್ಟೋರಿ ಸಂಸ್ಥಾಪಕಿ ಶ್ರದ್ಧಾ ಶರ್ಮಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

image


ಪ್ರತಿ ಕತೆಗಳನ್ನು ಮಾಡುವಾಗ ಅದರ ವಿಷಯವು ಅಸಾಧಾರಣವಾಗಿರಬೇಕು ಎನ್ನುವುದು ನಮ್ಮ ಕನಸು ಆಗಿತ್ತು, ನಾವೀಗ ಹಲವಾರು ಪರಿಣಾಮ ಕಥೆಗಳನ್ನ ನೋಡಿದ್ದೇವೆ. ಮತ್ತು ಪ್ರತಿ ಭಾರತೀಯನ ಮನೆಗೆ ಬರಲು ಸಿದ್ಧರಾಗಿದ್ದೇವೆ. ಜನತೆ ನಮ್ಮ ಈ ಕನಸಿಗೆ ಬೆಂಬಲ ನೀಡಬೇಕು ಮತ್ತು ಹೃದಯದಿಂದ ನಮ್ಮಲ್ಲಿ ನಂಬಿಕೆ ಇಡಿ ಅನ್ನುತ್ತಾರೆ ಶ್ರದ್ಧಾ ಶರ್ಮಾ.

ಈ ನಂಬಲು ಅಸಾಧ್ಯವಾದ ಪ್ರಯಾಣದಲ್ಲಿ ನನ್ನ ಮೇಲೆ ಹಲವಾರು ಹೂಡಿಕೆದಾರರು ನಂಬಿಕೆ ಇಟ್ಟಿದ್ದಕ್ಕೆ ನಾನು ಕೃತಜ್ಞತೆ ಇಟ್ಟಿದ್ದೇನೆ. ಭವಿಷ್ಯದಲ್ಲಿ ದಿನದಲ್ಲಿ ಇನ್ನಷ್ಟು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಇದು ಸಹಕಾರಿಯಾಗಲಿದೆ ಎನ್ನುತ್ತಾರೆ Yourstory.comನ ಸಂಸ್ಥಾಪಕಿ ಶ್ರದ್ಧಾಶರ್ಮಾ.

2008ರಲ್ಲಿ ಪ್ರಾರಂಭಗೊಂಡ ಯುವರ್ ಸ್ಟೋರಿ ಇಲ್ಲಿಯವರೆಗೂ ಸುಮಾರು 20,000 ಉದ್ಯಮಿಗಳ ಕತೆಗಳನ್ನು ಪ್ರಕಟಿಸಿದೆ. ಯುವರ್ ಸ್ಟೋರಿ ಸಹೋದರಿ ಸಂಸ್ಥೆಗಳಾದ Herstory, Socialstory, YS TV, YS Reaserch ಮತ್ತು YS Page ಇವುಗಳು ಸುಮಾರು 60 ದಶಲಕ್ಷ ಓದುಗರನ್ನು ಸಂಪಾದಿಸಿದೆ. ಯುವರ್ ಸ್ಟೋರಿ ಭಾರತದಲ್ಲಿ ಪ್ರಮುಖವಾದ ಬಿಲ್ಡರ್ ಆಗಿದೆ. YS Meetups, TechSparks, MobileSparks ಮತ್ತು SheSparks ಇವುಗಳು 220 ಕಾರ್ಯಕ್ರಮಗಳನ್ನು ಆಯೋಜಿಸಿ ಜನಮನ್ನಣೆ ಗಳಿಸಿದೆ. ಇದು ಸುಮಾರು 1.7 ಮಿಲಿಯನ್ ಜನರ ಮೇಲೆ ನೇರ ಪರಿಣಾಮ ಬೀರಿದೆ.