Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ವೃದ್ಧರ ಹಸಿವು ನೀಗಿಸುವ ಡಾಕ್ಟರ್- ವಯೋವೃದ್ಧರ ಪಾಲಿಗೆ ಅನ್ನದಾತ ಈ ಮೋದಿ..!

ಟೀಮ್​ ವೈ.ಎಸ್. ಕನ್ನಡ

ವೃದ್ಧರ ಹಸಿವು ನೀಗಿಸುವ ಡಾಕ್ಟರ್- ವಯೋವೃದ್ಧರ ಪಾಲಿಗೆ ಅನ್ನದಾತ ಈ ಮೋದಿ..!

Wednesday April 12, 2017 , 2 min Read

ಹಸಿದವರಿಗೆ ಅನ್ನ ನೀಡಿದ್ರೆ, ಅದಕ್ಕೆ ದೊಡ್ಡ ಪುಣ್ಯದ ಕೆಲಸ ಬೇರೆ ಇಲ್ಲ. ಹೀಗಂತ ಹಿರಿಯರು ಹೇಳಿದ್ದಾರೆ. ಈ ಮಾತು ನಿಜಕ್ಕೂ ಅರ್ಥಪೂರ್ಣವಾಗಿದೆ. ಹಸಿದವನ ಹೊಟ್ಟೆ ತಣಿಸಿದ್ರೆ ಅದು ಪುಣ್ಯದ ಕೆಲಸ. ಆದ್ರೆ ಈ ಕೆಲಸವನ್ನು ವರ್ಷಗಳಿಂದ ಎಡೆಬಿಡದೆ ಮಾಡಿಕೊಂಡು ಬರುತ್ತಿದ್ದಾರೆ ಡಾ. ಉದಯ್ ಮೋದಿ. ಡಾ. ಉದಯ್ ಮೋದಿ ತನ್ನ "ಶ್ರವಣ್ ಟಿಫಿನ್ ಸೇವಾ ಸಂಸ್ಥೆ"ಯ ಜೊತೆ ಮುಂಬೈ ನಗರದ ಮಿರ ಭಯಂದರ್ ಏರಿಯಾದ ಸುಮಾರು 200ಕ್ಕೂ ಅಧಿಕ ಹಿರಿಯ ಜೀವಗಳಿಗೆ ಅನ್ನ ನೀಡುತ್ತಿದ್ದಾರೆ. ಅರಂಭದಲ್ಲಿ ಉದಯ್ ತನ್ನ ಆಸ್ಪತ್ರೆ ಬಳಿ ಅಡುಗೆ ಮಾಡಿಕೊಳ್ಳಲು ಅಶಕ್ತರಾಗಿದ್ದ ವೃದ್ಧ ದಂಪತಿಗಳಿಗೆ ಊಟ ನೀಡುವ ಕೆಲಸ ಶುರುಮಾಡಿದ್ರು. ಆದ್ರೆ ಈ ಕೆಲಸ ಡಾ. ಉದಯ್ ಮೋದಿಗೆ ಸಾಕಷ್ಟು ತೃಪ್ತಿ ನೀಡಿತ್ತು. ಅಷ್ಟೇ ಅಲ್ಲ ಮತ್ತಷ್ಟು ಜನರ ಹೊಟ್ಟೆ ತುಂಬಿಸಲು ಸ್ಫೂರ್ತಿ ನೀಡಿತ್ತು.

image


“ ಒಮ್ಮೆ ಒಬ್ಬರು ವಯೋವೃದ್ಧರು, ನನ್ನ ಆಸ್ಪತ್ರೆಗೆ ಪ್ಯಾರಾಲಿಟಿಕ್ ಸ್ಟ್ರೋಕ್ ಆಗಿದ್ದ ತನ್ನ ಹೆಂಡತಿಗೆ ಔಷಧಿ ತೆಗೆದುಕೊಳ್ಳಲು ಬಂದಿದ್ದರು. ಆತನ ಕಥೆ ಕೇಳಿ ನನಗೆ ಶಾಕ್ ಆಯಿತು. ಅಡುಗೆ ಮಾಡಿಕೊಳ್ಳಲು ಶಕ್ತಿ ಇಲ್ಲದ ವೃದ್ಧ ದಂಪತಿಗಳನ್ನು ಅವರ ಮಕ್ಕಳು ಮನೆಯಿಂದ ಹೊರಕ್ಕೆ ಹಾಕಿದ್ದರು. ಅವರ ಕಥೆ ಕೇಳಿ ನನ್ನ ಮನಸ್ಸು ಕರಗಿತು. ಅವರ ಹಸಿವು ನೀಗಿಸುವ ನಿರ್ಧಾರ ಕೈಗೊಂಡೆ. ಅಷ್ಟೇ ಅಲ್ಲ ಕಷ್ಟದಲ್ಲಿರುವ ವೃದ್ಧರಿಗೆ ಊಟ ನೀಡುವ ನಿರ್ಧಾರ ಮಾಡಿದೆ. ”
- ಡಾ. ಉದಯ್ ಮೋದಿ, ಸಮಾಜ ಸೇವಕ

ಕೆಲವು ದಿನಗಳ ಕಾಲ ಆ ವೃದ್ಧ ದಂಪತಿಗಳಿಗೆ ಡಾ. ಉದಯ್ ಮೋದಿ ಊಟ ನೀಡಿ ಸಲುಹಿದ್ರು. ಈ ಮಧ್ಯೆ ಡಾ. ಉದಯ್ ಮೋದಿ ಪತ್ನಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ವಯಸ್ಸಾದವರ ಹೊಟ್ಟೆ ತುಂಬಿಸುವಂತೆ ಪ್ರೇರಣೆ ನೀಡಿದ್ರು.

ಆರಂಭದ ದಿನಗಳಲ್ಲಿ ಡಾ. ಉದಯ್ ಮೋದಿಯವರ ಪತ್ನಿ ಅಡುಗೆ ಕೆಲಸವನ್ನು ನಿಭಾಯಿಸುತ್ತಿದ್ದರು. ಆದ್ರೆ ಈಗ 200ಕ್ಕೂ ಅಧಿಕ ಜನರಿಗೆ ಊಟ ಹಾಕುತ್ತಿರುವುದರಿಂದ ಅಡುಗೆ ಕೆಲಸಕ್ಕಾಗಿ ಕೆಲಗಾರರನ್ನು ನೇಮಿಸಿಕೊಂಡಿದ್ದಾರೆ. ಡಯಾಬಿಟಿಕ್ ಪೇಷಂಟ್​ಗಳಿಗಾಗಿ ವಿಶೇಷ ಅಡುಗೆಯೂ ತಯಾರಾಗುತ್ತದೆ. ಡಾ. ಉದಯ್ ಮೋದಿಯವರು ಪ್ರತಿದಿನವೂ ತಮ್ಮ ಮನೆಯಲ್ಲಿ ತಯಾರಾಗುವ ಆಹಾರವನ್ನು ತಾವೇ ಖುದ್ದಾಗಿ ಪರಿಶೀಲನೆ ಮಾಡಿ, ಅದನ್ನು ಹಂಚಲು ಏರ್ಪಾಡು ಮಾಡುತ್ತಾರೆ.

ಇದನ್ನು ಓದಿ: "ಬಾಲೆ"ಇದು ವುಮೆನ್ ಹುಡ್ ಸೆಲೆಬ್ರೇಷನ್

ಡಾ. ಉದಯ್ ಮೋದಿಯವರಿಗೆ ತನ್ನ ತಂದೆಯೇ ಈ ಕೆಲಸ ಮಾಡಲು ಸ್ಫೂರ್ತಿ. ಡಾ. ಉದಯ್ ಮೋದಿಯವ ತಂದೆ ತಮ್ಮ ಏರಿಯಾದ ಸುತ್ತಮುತ್ತ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಉಚಿತವಾಗಿ ಚಪ್ಪಲಿಗಳನ್ನು ಹಂಚುತ್ತಿದ್ದರು. 3 ದಶಕಗಳ ಹಿಂದೆ ಡಾ. ಉದಯ್ ಮೋದಿಯವರ ತಂದೆ ಸಮಾಜ ಸೇವೆ ಇಳಿದಿದ್ದರು.

“ ನನ್ನ ತಂದೆ ಪೋಸ್ಟ್ ಆಫೀಸ್​ನಲ್ಲಿ ಕೆಲಸ ಮಾಡುತ್ತಿದ್ದಾಗ ಕಡಿಮೆ ಸಂಬಳ ಪಡೆಯುತ್ತಿದ್ದರು. ಆದ್ರೆ ಅದರಲ್ಲೇ ಉಳಿತಾಯ ಮಾಡುತ್ತಿದ್ದರು. ಇದು ಸುಮಾರು 1987ರ ಕಥೆ. ನಮ್ಮ ಏರಿಯಾದಲ್ಲಿ ಸಾಕಷ್ಟು ಕಟ್ಟಡ ಕೆಲಸಗಾರರು ಚಪ್ಪಲಿಗಳಿಲ್ಲದೆ ಬರಿಗಾಲಿನಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ತಂದೆ ಅವರಿಗೆಲ್ಲಾ ಚಪ್ಪಲಿಗಳನ್ನು ತಂದುಕೊಡುತ್ತಿದ್ದರು. ಆಗ ಕೆಲಸಗಾರರ ಮುಖದಲ್ಲಿ ಆಗುತ್ತಿದ್ದ ಖುಷಿಯನ್ನು ನಾನು ಗಮನಿಸುತ್ತಿದ್ದೆ ”
- ಡಾ. ಉದಯ್ ಮೋದಿ, ಸಮಾಜ ಸೇವಕ

ಡಾ. ಉದಯ್ ಮೋದಿಯವರು ಕಳೆದ 10 ವರ್ಷಗಳಿಂದ ಈ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ ಹೋರಾಟಗಾರರ ನೆರವಿನಿಂದ ಆಪತ್ತಿನಲ್ಲಿರುವವರಿಗೆ ಚಿಕಿತ್ಸೆಯ ವ್ಯವಸ್ಥೆಯನ್ನು ಕೂಡ ಮಾಡುತ್ತಿದ್ದಾರೆ. ತಮ್ಮ ಸಾಮಾಜಿಕ ಕೆಲಸಕ್ಕೆ ಹಣದ ಕೊರತೆಯೂ ಕಾಡುತ್ತದೆ. ಆದ್ರೆ ಉದಯ್ ಮೋದಿಯವರು ಬಿಡುವಿದ್ದಾಗ ಟಿವಿ ಸೀರಿಯಲ್​ಗಳಲ್ಲಿ ಅಭಿನಯಿಸಿ ಸಾಮಾಜಿಕ ಕಾರ್ಯಕ್ಕೆ ಖರ್ಚಾಗುವ ಹಣವನ್ನು ಸಂಪಾದಿಸುತ್ತಾರೆ. ಮುಂದಿನ ದಿನಗಳಲ್ಲಿ ವೃದ್ಧಾಶ್ರಮ ಕಟ್ಟುವ ಕನಸು ಕಾಣುತ್ತಿದ್ದಾರೆ, ಡಾ. ಉದಯ್ ಮೋದಿ. ಉದಯ್ ಮೋದಿಯವರ ಕೆಲಸ ಎಲ್ಲರಿಗೂ ಮಾದರಿ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. 10*10 ಚಿಕ್ಕಕೋಣೆಯಿಂದ 1,000 ಕೋಟಿಯ ಮಾಲೀಕನಾದ ತನಕ..! 

2. ಅಡಕೆ ಕೊಯ್ಲಿನ ಚಿಂತೆ ಬಿಡಿ- ಹೊಸ ಯಂತ್ರದ ಬಗ್ಗೆ ತಿಳಿದುಕೊಳ್ಳಿ..!

3. ಪ್ರವಾಸಿಗರನ್ನು ಸೆಳೆಯಲು ವರ್ಚುವಲ್​ ರಿಯಾಲಿಟಿ- ರಾಮನಗರದಲ್ಲಿ "ಶೋಲೆ"ಮರು ಸೃಷ್ಟಿ..!