ಆವೃತ್ತಿಗಳು
Kannada

ಬ್ಯುಸಿನೆಸ್ ಬಗ್ಗೆ ಒಳ್ಳೆ ಐಡಿಯಾ ಇದ್ಯಾ..? ಇನ್ಯಾಕೆ ತಡ, ಉದ್ಯಮ ಆರಂಭಿಸಿ

ಟೀಮ್​​ ವೈ.ಎಸ್​​.ಕನ್ನಡ

YourStory Kannada
30th Nov 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ನಿಮ್ಮ ಐಡಿಯಾಗಳೆಲ್ಲ ನಿಜಕ್ಕೂ ಗ್ರೇಟ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ಭಾರತದಲ್ಲಿ ಉದ್ಯಮಿಗಳಿಗಿರುವ ನೆರವನ್ನು ಬಳಸಿಕೊಂಡು, ಬ್ಯುಸಿನೆಸ್ ದುನಿಯಾಕ್ಕೆ ಎಂಟ್ರಿ ಕೊಡುವ ಸಂದರ್ಭದಲ್ಲಿ ನೀವು ತೆಗೆದುಕೊಳ್ಳಬೇಕಾದ ನಿರ್ಧಾರ ಯಾವುದು? ನೀವು ಈಗಾಗ್ಲೇ ಆರಂಭಿಸಿರುವ ಕೆಲಸಕ್ಕೆ ಮಿತಿ ಎಷ್ಟು? ಯಾವ ರೀತಿಯ ಆಪ್ತ ಸಲಹಾ ಸಮಿತಿಯ ಅಗತ್ಯ ನಿಮಗಿದೆ ಅನ್ನೋದು ಕೂಡ ಅತ್ಯಂತ ಮುಖ್ಯ.

image


"ಕೆಲವರು ಅಂದುಕೊಂಡಿದ್ದೆಲ್ಲ ತಾನಾಗಿಯೇ ಆಗಲಿ ಎಂದುಕೊಳ್ತಾರೆ, ಇನ್ನು ಕೆಲವರು ಆಗುತ್ತೆ ಅನ್ನೋ ಆಶಾವಾದದಲ್ಲಿರುತ್ತಾರೆ, ಇನ್ನು ಕೆಲವರು ಅದು ಸಾಧ್ಯವಾಗುವಂತೆ ಮಾಡುತ್ತಾರೆ'' ಅನ್ನೋದು ಮೈಕೆಲ್ ಜೋರ್ಡನ್ ಅವರ ಮಾತು. ಇನ್‍ಕ್ಯುಬೇಟರ್, ವೇಗವರ್ಧಕ, ದೇವತೆಗಳ ಹೂಡಿಕೆ, ಬೀಜ ಬಂಡವಾಳ ಹೂಡಿಕೆ, ಸಾಹಸೋದ್ಯಮ ಬಂಡವಾಳ ಎಲ್ಲವನ್ನೂ ಬಳಸಿಕೊಂಡು ತಮ್ಮ ಉದ್ಯಮದ ಪರಿಕಲ್ಪನೆ ಸಾಕಾರಗೊಳ್ಳುವಂತೆ ಮಾಡುವ ಕೆಲ ಮಾರ್ಗಗಳು ಇಲ್ಲಿವೆ.

ಉದ್ಯಮಕ್ಕೆ ಇನ್‍ಕ್ಯುಬೇಟರ್ ಯಾವುದು..?

ಇನ್‍ಕ್ಯುಬೇಟರ್‍ಗಳ ಮೂಲ ಉದ್ದೇಶ ಅಂದ್ರೆ ಹೊಸ ಉದ್ಯಮದ ಸೃಷ್ಟಿ ಮತ್ತು ಸಲಹೆ. ಇನ್‍ಕ್ಯುಬೇಟರ್ ಬಂಡವಾಳ ಹೂಡಿಕೆಯ ಮೂಲವಲ್ಲ. ಅವರು ಬಾಡಿಗೆಗಳನ್ನು ಸಂಗ್ರಹಿಸುತ್ತಾರೆಯೇ ಹೊರತು ಅಗತ್ಯವಾಗಿ ಆರಂಭಿಕ ಷೇರುಗಳನ್ನು ಗಳಿಸುವುದಿಲ್ಲ.

1. ಮೂಲಸೌಕರ್ಯಗಳ ಬೆಂಬಲ (ಕಚೇರಿ, ಸ್ಥಳ ಇತ್ಯಾದಿ)

2. ನೆಟ್‍ವರ್ಕಿಂಗ್‍ಗೆ ವೇದಿಕೆ ಸೃಷ್ಟಿ

3. ಇತರ ಬೆಂಬಲ ಸೇವೆ , ನಿರ್ದಿಷ್ಟ ಇನ್‍ಕ್ಯುಬೇಟರ್‍ಗಳಿಂದ

ಇವನ್ನೆಲ್ಲ ಇನ್‍ಕ್ಯುಬೇಟರ್ ಒದಗಿಸುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದ್ರೆ ನಿಮ್ಮಲ್ಲಿ ಯಾವುದಾದ್ರೂ ಪರಿಕಲ್ಪನೆ ಇದ್ದಲ್ಲಿ, ಅದನ್ನು ಕಾರ್ಯರೂಪಕ್ಕೆ ತರಲು ಸ್ಥಳಾವಕಾಶ ಬೇಕು. ಸಹೋದ್ಯೋಗಿಗಳ ಬೆಂಬಲ ಅತ್ಯಗತ್ಯ. ಸ್ವಲ್ಪ ಬಂಡವಾಳ ಇರಲೇಬೇಕು.

ಉದ್ಯಮದ ಎಕ್ಸೆಲರೇಟರ್ ಯಾವುದು..?

ಎಕ್ಸೆಲರೇಟರ್ ಅನ್ನೋದು ಇನ್‍ಕ್ಯುಬೇಟರ್‍ಗೆ ಸರಿಸಮನಾದದ್ದು. ಇವೆರಡರ ಮಧ್ಯೆ ಕೊಂಚ ಭಿನ್ನತೆ ಇದೆ ಅಷ್ಟೆ. ಈ ಕ್ಷೇತ್ರದಲ್ಲಿ ನಿಮ್ಮ ಸಮಯ ಸೀಮಿತ ಅವಧಿಯದ್ದು. ಕೆಲ ವಾರಗಳಿಂದ ಕೆಲ ತಿಂಗಳುಗಳವರೆಗೆ ಇರಬಹುದಷ್ಟೆ. ಅಪ್ಲಿಕೇಷನ್ ಪ್ರಕ್ರಿಯೆಯನ್ನು ಇದು ಒಳಗೊಂಡಿದೆ. ಎಕ್ಸೆಲರೇಟರ್‍ಗಳು ಆರಂಭಿಕ ಪಾಲನ್ನು ಸ್ವಾಧೀನಪಡಿಸಿಕೊಳ್ಳುತ್ತವೆ. ಶೇ. 5 - 15 ರಷ್ಟು ಈಕ್ವಿಟಿಯನ್ನು ತನ್ನದಾಗಿಸಿಕೊಳ್ಳುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದ್ರೆ, ನಿಮ್ಮ ಪರಿಕಲ್ಪನೆ ಹಾಗೂ ಸಮಯಾವಧಿ ಬಗ್ಗೆ ನಿಮಗೆ ಸ್ಪಷ್ಟತೆ ಇದ್ರೆ, ನೀವು ಒಬ್ಬ ಸಲಹೆಗಾರರ ಹುಡುಕಾಟದಲ್ಲಿದ್ರೆ ಎಕ್ಸೆಲರೇಟರ್ ಮೊರೆ ಹೋಗುವುದು ಅನಿವಾರ್ಯ.

ಉದ್ಯಮ ದೇವತೆ ಯಾರು..?

ಉದ್ಯಮ ಆರಂಭಿಸುವ ಸಂದರ್ಭದಲ್ಲಿ ಬಂಡವಾಳವನ್ನು ಒದಗಿಸುವ ವ್ಯಕ್ತಿಯನ್ನು ಹೂಡಿಕೆಯ ದೇವತೆ ಎಂದು ವಿಕಿಪಿಡೀಯಾ ಬಣ್ಣಿಸಿದೆ. ಇದು ಪರಿವರ್ತಿಸಬಹುದಾದ ಸಾಲಪತ್ರ ಅಥವಾ ಮಾಲೀಕತ್ವದ ಷೇರುಗಳ ರೂಪದಲ್ಲಿರುತ್ತದೆ. ಇವರನ್ನು ಉದ್ಯಮ ದೇವತೆ, ಅನೌಪಚಾರಿಕ ಹೂಡಿಕೆದಾರರು ಮತ್ತು ಏಂಜೆಲ್ ಫಂಡರ್ ಅಂತ ಕೂಡ ಕರೆಯಲಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದ್ರೆ, ಈಗಾಗ್ಲೇ ನೀವು ಉತ್ಪಾದಿಸಿರುವ ಬಂಡವಾಳಕ್ಕಿಂತಲೂ ಕೊಂಚ ಅಧಿಕ ಹಣದ ಅವಶ್ಯಕತೆಯಿದ್ದಾಗ, ನೀವೇನನ್ನೂ ಕಳೆದುಕೊಳ್ಳುವುದಿಲ್ಲ ಎಂಬುದನ್ನು ಸಾಲಗಾರರಿಗೆ ಖಾತ್ರಿ ಮಾಡಬೇಕು.

image


ಬೀಜ ಬಂಡವಾಳ ಎಂದರೇನು..?

ಸಾಮಾನ್ಯವಾಗಿ ಬೀಜ ಬಂಡವಾಳ ಕಂಪನಿಯ ಸಂಸ್ಥಾಪಕರ ವೈಯಕ್ತಿಕ ಆಸ್ತಿ ಅಥವಾ ಸ್ನೇಹಿತರು ಮತ್ತು ಕುಟುಂಬದವರಿಂದ ದೊರೆತಿರುತ್ತದೆ. ಅದು ಕೂಡ ಸಣ್ಣ ಮೊತ್ತದ ಹಣವಾಗಿರುತ್ತದೆ ಕಾರಣ, ಉದ್ಯಮ ಇನ್ನೂ ಆರಂಭಿಕ ಮತ್ತು ಪರಿಕಲ್ಪನೆಯ ಹಂತದಲ್ಲಿರುತ್ತದೆ. ಪೂರ್ವ ಆದಾಯ ಹಂತದಲ್ಲಿರುವ ಇಂತಹ ಉದ್ಯಮಗಳಿಗೆ ಸಂಶೋಧನೆ ಮತ್ತು ಬೆಳವಣಿಗೆಗಾಗಿ, ಆರಂಭಿಕ ಪ್ರಕ್ರಿಯೆಗಳ ವೆಚ್ಚ ಸರಿದೂಗಿಸಲು ಬೀಜ ಬಂಡವಾಳದ ಅಗತ್ಯವಿರುತ್ತದೆ. ಒಂದು ಉತ್ಪನ್ನ ಅಥವಾ ಸೇವೆ ಆದಾಯ ಗಳಿಸಲು ಆರಂಭಿಸುವವರೆಗೆ ಉದ್ದಿಮೆ ಬಂಡವಾಳದಾರರ ಗಮನಸೆಳೆಯಲು ಬೀಜ ಬಂಡವಾಳ ಬೇಕೇಬೇಕು. ಸಂಕ್ಷಿಪ್ತವಾಗಿ ಹೇಳುವುದಾದ್ರೆ, ನಿಮ್ಮ ಬಳಿ ಒಂದೊಳ್ಳೆ ಐಡಿಯಾ ಮತ್ತು ಹಣ ಇದ್ರೆ ಉದ್ಯಮವನ್ನು ಮುನ್ನಡೆಸಿ.

ಸಾಹಸೋದ್ಯಮ ಬಂಡವಾಳ ಎಂದರೇನು..?

ಸಾಹಸೋದ್ಯಮ ಬಂಡವಾಳ ಅನ್ನೋದು ಅತಿ ಹೆಚ್ಚು ಬೆಳವಣಿಗೆಯ ಸಾಮರ್ಥ್ಯವುಳ್ಳ ಕಂಪನಿಗೆ ಆರಂಭಿಕ ಹಂತದಲ್ಲಿ ಪೂರೈಕೆ ಮಾಡಿದ ಬಂಡವಾಳ. ತಾನು ಹೂಡಿಕೆ ಮಾಡಿದ ಕಂಪನಿಗಳಿಂದ ಈಕ್ವಿಟಿ ಮಾಲೀಕತ್ವವನ್ನು ಪಡೆಯುವ ಮೂಲಕ ಸಾಹಸೋದ್ಯಮ ಬಂಡವಾಳ ಹೂಡಿಕೆದಾರ ಹಣ ಗಳಿಸುತ್ತಾನೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಮ್ಮ ಉದ್ಯಮ ಅತಿ ಹೆಚ್ಚು ಲಾಭದಾಯಕ ಎನಿಸಿದಲ್ಲಿ ಸಾಹಸೋದ್ಯಮ ಬಂಡವಾಳದಾರರ ಮೊರೆ ಹೋಗಿ.

ಯಾವುದರ ಅಡಿಯಲ್ಲಿ ನೀವು ಬರುತ್ತೀರಾ? ನಿಮಗೆ ಯಾವ ರೀತಿಯ ಬಂಡವಾಳದ ಅಗತ್ಯವಿದೆ ಎಂಬುದನ್ನು ನಿರ್ಧರಿಸುವ ನಕಾಶೆ ಕೂಡ ಇಲ್ಲಿದೆ. ಒಂದೊಳ್ಳೆ ಐಡಿಯಾ, ಪರಿಕಲ್ಪನೆ, ಅದಕ್ಕೆ ಬೇಕಾದ ಹಣ ನಿಮ್ಮಲ್ಲಿದ್ರೆ ಇನ್ಯಾಕೆ ತಡ, ಉದ್ಯಮವನ್ನು ಶುರು ಮಾಡಿ. ಆರಂಭದಲ್ಲಿ ಎದುರಾಗುವ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ.

ಲೇಖಕರು: ಕೊರೈನ್​​ ಸ್ಯಾಂಟೊಸ್​​​​​​​​

ಅನುವಾದಕರು: ಭಾರತಿ ಭಟ್​​​

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories