ವಲಸೆ ಕಾರ್ಮಿಕರ ಸಾಮಾನುಗಳನ್ನು ಉಚಿತವಾಗಿ ಹೊರುತ್ತಿರುವ 80 ರ ಕೂಲಿ

ಭಾರತ ಸರ್ಕಾರ ಶ್ರಮಿಕ ರೈಲುಗಳ ಸೇವೆ ಆರಂಭಿಸಿದಾಗಿನಿಂದಲೂ ಮುಜಿಬಲ್ಲ ರೆಹಮಾನ್‌ ಮನೆಗೆ ಮರಳುತ್ತಿರುವ ವಲಸಿಗರಿಗೆ ಸಹಾಯ ಮಾಡುತ್ತಿದ್ದಾರೆ.

ವಲಸೆ ಕಾರ್ಮಿಕರ ಸಾಮಾನುಗಳನ್ನು ಉಚಿತವಾಗಿ ಹೊರುತ್ತಿರುವ 80 ರ ಕೂಲಿ

Thursday June 04, 2020,

1 min Read

ಕೊರೊನಾ ಮಾಹಾಮಾರಿಯಿಂದ ವಲಸೆ ಕಾರ್ಮಿಕರಿಗೆ ಆಗುತ್ತಿರುವ ಕಷ್ಟ ನೋಡಿ ಸಹಾಯ ಮಾಡಲು ಹಲವರು ಮುಂದೆ ಬರುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಲಕ್ನೋ ರೈಲು ನಿಲ್ದಾಣದಲ್ಲಿ ಕೂಲಿ ಆಗಿ ಕೆಲಸ ಮಾಡುತ್ತಿರುವ 80 ರ ಮುಜಿಬಲ್ಲ ರೆಹಮಾನ್‌.


ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಕೂಲಿ ಕೆಲಸಗಾರರು, ವಲಸೆ ಕಾರ್ಮಿಕರು ಮನೆ ತಲುಪಲು ಹೆಣಗಾಡುತ್ತಿರುವಾಗ, ಮುಜಿಬಲ್ಲ ಅಂತಹ ಪ್ರಯಾಣಿಕರ ಸಾಮಾನುಗಳನ್ನು ಉಚಿತವಾಗಿ ಹೊತ್ತು ಸಾಗಿಸುತ್ತಿದ್ದಾರೆ.


ಮುಜಿಬಲ್ಲ ರೆಹಮಾನ್‌ (ಚಿತ್ರಕೃಪೆ: ಹಿಂದೂಸ್ತಾನ್‌ ಟೈಮ್ಸ್‌)




ವಲಸಿಗರು ಊರಿಗೆ ಮರಳುವಂತೆ ಸಹಾಯವಾಗಲು ಭಾರತ ಸರ್ಕಾರ ವಿಶೇಷ ಶ್ರಮಿಕ ರೈಲುಗಳ ಸೇವೆಯನ್ನು ಆರಂಭಿಸಿದಾಗಿನಿಂದಲೂ ಮುಜಿಬಲ್ಲ ಅವರು ಈ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಹಪಾಠಿಗಳಲ್ಲಿ ಪ್ರೀತಿಯಿಂದ ‘ಸುಫಿ ಸಂತʼ ಎಂದೇ ಖ್ಯಾತವಾಗಿರುವ ಇವರು 6 ಕಿ.ಮೀ. ನಡೆದು ನಿಲ್ದಾಣ ಸೇರುತ್ತಾರೆ ಮತ್ತು ಪ್ರತಿದಿನ 8 ರಿಂದ 10 ಗಂಟೆ ಕೆಲಸಮಾಡುತ್ತಾರೆ.


ವಾರ್ತಾ ಸಂಸ್ಥೆಯಾದ ಎಎನ್‌ಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಫೇಸ್‌ ಮಾಸ್ಕ್‌ ಹಾಗೂ ಕೆಂಪು ಬಟ್ಟೆ ಧರಿಸಿ, ರೈಲಿಗಾಗಿ ಕಾಯುತ್ತಿರುವುದನ್ನು ಕಾಣಬಹುದು.







“ವಲಸಿಗರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯವೆಂದೆ ಭಾವಿಸುತ್ತೇನೆ. ಪರಿಸ್ಥಿತಿ ಸುಧಾರಿಸಿದ ಮೇಲೆ ನಾನು ಹಣಗಳಿಸಬಹುದು, ಆದರೆ ಈಗ ನಾನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಬಯಸುತ್ತೇನೆ,” ಎಂದರು ಮುಜಿಬಲ್ಲ, ವರದಿ ದಿ ಲಾಜಿಕಲ್‌ ಇಂಡಿಯನ್‌.


ಉಚಿತವಾಗಿ ಸಾಮಾನುಗಳನ್ನು ಹೊರುತ್ತಿರುವುದಲ್ಲದೇ, ದೂರದ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಆಹಾರ ಮತ್ತು ಊಟವನ್ನು ನೀಡುತ್ತಿದ್ದಾರೆ.


ಇವರ ಈ ಕಾರ್ಯ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದು, ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಮುಜಿಬಲ್ಲ ಅವರಿಗೆ ಅವರ ಕೆಲಸವನ್ನು ಹೊಗಳುತ್ತಾ - “ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಿಮ್ಮ ಈ ನಿಸ್ವಾರ್ಥ ಸೇವೆ ಯಾವಾಗಲೂ ಸ್ಮರಣೀಯವಾಗಿರುತ್ತದೆ,” ಎಂದು ಪತ್ರ ಬರೆದಿದ್ದಾರೆ.

ಕೋವಿಡ್‌-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಲಾಭರಹಿತ, ನಾಗರಿಕ ಸಮಾಜ ಸಂಸ್ಥೆಗಳು ಅಥವಾ ಪ್ರಧಾನ ಮಂತ್ರಿ ನಿಧಿಯಂತಹ ರಾಷ್ಟ್ರೀಯ ಉಪಕ್ರಮಗಳು ಜನರಿಗೆ ಸಹಾಯ ಮಾಡಲು ಮುಂದೆ ಬಂದಿರುವುದು ಮಾತ್ರವಲ್ಲದೇ, ಮುಜಿಬುಲ್ಲಾ ಅವರಂತಹ ವ್ಯಕ್ತಿಗಳು ಇಂತಹ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಚಿಕ್ಕ ಪುಟ್ಟ ಕೆಲಸಗಳಿಂದಲೆ ಸಾಕಷ್ಟು ಭರವಸೆಯನ್ನು ತುಂಬುತ್ತಿದ್ದಾರೆ.