ಇಂಟರ್ನೆಟ್ ಇಲ್ಲದೆಯೂ ಮೊಬೈಲ್ನಲ್ಲಿ ಹಣದ ವರ್ಗಾವಣೆ-ಇನ್ಫೋಸಿಸ್ನ ಮಾಜಿ ಉದ್ಯೋಗಿಯ ವಿಭಿನ್ನ, ವಿನೂತನ ತಂತ್ರಜ್ಞಾನ
ಟೀಮ್ ವೈ.ಎಸ್. ಕನ್ನಡ
ತಂತ್ರಜ್ಞಾನ ದಿನದಿಂದ ದಿನಕ್ಕೆ ಅಪ್ಡೇಟ್ ಆಗುತ್ತಲೆ ಇದೆ. ಇವತ್ತು ಇದ್ದ ಟೆಕ್ನಾಲಜಿ ನಾಳೆ ಇರುತ್ತೆ. ಆದ್ರೆ ಅದು ಸಾಕಷ್ಟು ಅಭಿವೃದ್ಧಿ ಆಗುತ್ತದೆ. ಬ್ಯಾಂಕಿಂಗ್ ವಿಚಾರದಲ್ಲಂತೂ ತಂತ್ರಜ್ಞಾನದ ಅಭಿವೃದ್ಧಿ ಸಾಕಷ್ಟು ಆಗುತ್ತಿದೆ. ಎಟಿಎಂನಿಂದ ಹಿಡಿದು ಮೊಬೈಲ್ ಬ್ಯಾಂಕಿಂಗ್ ತನಕ ಎಲ್ಲವೂ ಸೂಪರ್ ಫಾಸ್ಟ್ ಆಗಿ ಬೆಳೆಯುತ್ತಿದೆ. ಈಗ ಬ್ಯಾಂಕಿಂಗ್ ವಿಚಾರದಲ್ಲಿ ಮತ್ತಷ್ಟು ಬೆಳವಣಿಗೆ ಆಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಮೊಬೈಲ್ ಬ್ಯಾಂಕಿಂಗ್ನ್ನು ಇಂಟರ್ನೆಟ್ ಇಲ್ಲದೆಯೂ ಮಾಡಬಹುದ. ಇಂತಹ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿದ್ದು ಬೆಂಗಳೂರಿನವರೇ.
ನೀವು ಯಾವುದಾರು ಅಂಗಡಿಗೆ ಹೋಗಿ ವಸ್ತುಗಳನ್ನು ಪರ್ಚೇಸ್ ಮಾಡಿರ್ತಿರಾ ಅಂತ ಅಂದುಕೊಳ್ಳಿ. ನಿಮ್ಮ ಜೇಬಿನಲ್ಲಿ ದುಡ್ಡಿಲ್ಲ. ಅಂಗಡಿಯಾತನ ಬಳಿ ಸ್ವೈಪಿಂಗ್ ಮೆಷಿನ್ ಇದ್ರೆ ಓ.ಕೆ. ಇಲ್ದೇ ಇದ್ರೆ ಎಟಿಎಂಗೆ ಹೋಗಿ ಹಣ ಡ್ರಾ ಮಾಡಿ ಆತನಿಗೆ ಕೊಡಬೇಕು. ಆದರೆ ಬೆಂಗಳೂರಿನ ಇನ್ಫೋಸಿಸ್ನ ಮಾಜಿ ಉದ್ಯೋಗಿ ಕುಮಾರ್ ಅಭಿಷೇಕ್ ಎಂಬುವವರು ಇಂಟರ್ನೆಟ್ ಇಲ್ಲದೆ ಮೊಬೈಲ್ನಿಂದ ನಿಮ್ಮ ಹಣವನ್ನು ಅಂಗಡಿಯವರಿಗೆ ವರ್ಗಾಯಿಸಬಹುದಾದ ತಂತ್ರಜ್ಞಾನ ಕಂಡುಹಿಡಿದಿದ್ದಾರೆ.
ಹೌದು, ಇದು ಅಚ್ಚರಿ ಆಗಿದ್ದರೂ ಸತ್ಯ. ನಿಮ್ಮ ಬಳಿಯಿರುವ ಸ್ಮಾರ್ಟ್ಫೋನ್ ಥವಾ ಸಾಮಾನ್ಯ ಮೊಬೈಲ್ನಿಂದಲೇ ಇದನ್ನು ಮಾಡಬಹುದು. ಅದು ಕೂಡ ಇಂಟರ್ನೆಟ್ ಇಲ್ಲದೆಯೂ ಸಾಧ್ಯ. ಈ ನೂತನ ತಂತ್ರಾಂಶದ ಹೆಸರು ಟೋನ್ ಟ್ಯಾಗ್. ಟೋನ್ ಟ್ಯಾಗ್ ಮೂಲಕ ಅಂಗಡಿ ಮಾಲೀಕರಿಗೆ ದುಡ್ಡನ್ನು ವರ್ಗಾಯಿಸಬಹುದು. ಅಂಗಡಿಗಳಲ್ಲಿ ಏನನ್ನಾದ್ರು ಕೊಂಡು ಕೊಂಡಾಗ ಜೇಬಲ್ಲಿ ದುಡ್ಡು ಇಲ್ಲದೇ ಇದ್ದಾಗ ಅಥವಾ ಅಂಗಡಿಯಾತ ಚಿಲ್ಲರೆ ಇಲ್ಲ ಎಂದು ಚಾಕಲೇಟ್ ನೀಡಿದಾಗ, ಅನುಭವಿಸುವ ಕಿರಿಕಿರಿಯನ್ನು ತಪ್ಪಿಸಲು ಈ ಟೋನ್ ಟ್ಯಾಗ್ ತಂತ್ರಾಂಶ ನೆರವಾಗಲಿದೆ.
ಇಂಟರ್ನೆಟ್ ಇಲ್ಲದೆ ಆ್ಯಪ್ ಡೌನ್ಲೋಡ್
ಟೋನ್ಟ್ಯಾಗ್ ಆ್ಯಪ್ನ್ನು ಅನ್ನು ಗ್ರಾಹಕರು ಇಂಟರ್ನೆಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಒಂದುವೇಳೆ ನಿಮ್ಮ ಮೊಬೈಲ್ನಲ್ಲಿ ಇಂಟರ್ನೆಟ್ ವ್ಯವಸ್ಥೆ ಇಲ್ಲದೇ ಹೋದರೆ , ಟೋನ್ಟ್ಯಾಗ್ನ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ, ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಟೋನ್ ಟ್ಯಾಗ್ ತಂತ್ರಜ್ಞಾನ ಅಳವಡಿಸಿರುವ ಕಡೆಗಳಲ್ಲೆಲ್ಲ ನಗದು ರಹಿತ ವರ್ಗಾವಣೆ ಮಾಡಬಹುದು.
ಖಾಸಗಿ ಬ್ಯಾಂಕುಗಳ ಜೊತೆ ಒಪ್ಪಂದ
ಟೋನ್ ಟ್ಯಾಗ್ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈಗಾಗಲೇ ಖಾಸಗಿ ವಲಯದ ಹಲವಾರು ಬ್ಯಾಂಕ್ಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಇದರ ಅನುಕೂಲ ದೊರೆಯುತ್ತಿದೆ.
" 2013ರಲ್ಲಿ ಅಸ್ತಿತ್ವಕ್ಕೆ ಬಂದ ಟೋನ್ ಟ್ಯಾಗ್ ಸ್ಟಾರ್ಟಪ್ ಮೂರು ವರ್ಷಗಳಲ್ಲೇ ಸಾಕಷ್ಟು ಅಭಿವೃದ್ಧಿ ಗಳಿಸಿದೆ. ಅಷ್ಟೇ ಅಲ್ಲದೆ ದೇಶದ ಬೃಹತ್ ಕಂಪನಿ ರಿಲಯನ್ಸ್ ಕ್ಯಾಪಿಟಲ್ ವೆಂಚರ್ನಿಂದ 2015ರಲ್ಲಿ 1 ಕೋಟಿ ಡಾಲರ್ ಬಂಡವಾಳವನ್ನು ಪಡೆಯುವ ಮೂಲಕ ದೇಶದ ಇತರೆ ಸ್ಟಾರ್ಟ್ಅಪ್ಗಳು ಅಚ್ಚರಿ ಪಡುವಂತೆ ಮಾಡಿದೆ. ಈ ಸ್ಟಾರ್ಟಪ್ 30ಕ್ಕೂ ಹೆಚ್ಚು ಬ್ರ್ಯಾಂಡ್ ಸ್ಟೋರ್ಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದು, ನಗದು ರಹಿತ ಹಣಕಾಸು ವರ್ಗಾವಣೆ, ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಪುಷ್ಟಿ ತುಂಬಲಿದೆ"
- ಕುಮಾರ್ ಅಭಿಷೇಕ್, ಟೋನ್ ಟ್ಯಾಗ್ ಸಂಸ್ಥಾಪಕ
ಯಾವುದೆ ಮೊಬೈಲ್ ಮೂಲಕ ಹಣ ವರ್ಗಾವಣೆ
ಈಗಿನ ನಗದು ರಹಿತ ವರ್ಗಾವಣೆಗಳಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಪೇಟಿಎಂನಂತಹ ಆ್ಯಪ್ಗಳನ್ನು ಬಳಸಬೇಕು. ಸ್ವೈಪಿಂಗ್ ಮೆಷಿನ್ನಲ್ಲಿ ಮ್ಯಾಗ್ನಟಿಕ್ ವೇವ್ಸ್ ತಂತ್ರಜ್ಞಾನ ಬಳಕೆಯಾಗುತ್ತಿದೆ. ಅಲ್ಲಿ ಕಾರ್ಡ್ಗಳನ್ನು ಉಜ್ಜಬೇಕು. ಇನ್ನೊಂದು ವಿಧದಲ್ಲಿ ಎನ್ಎಫ್ಸಿ ಟೆಕ್ನಾಲಜಿಯಲ್ಲಿ ರೇಡಿಯೊ ತರಂಗಗಳನ್ನು ಅಧರಿಸಿ ನಗದು ರಹಿತ ವರ್ಗಾವಣೆ ಮಾಡಬಹುದು. ಹೀಗಿದ್ದರೂ ಸ್ಮಾರ್ಟ್ಫೋನ್ಗ ಅಗತ್ಯ ಆ ಮೆಷಿನ್ಗಿರುತ್ತದೆ. ಆದರೆ ಟೋನ್ ಟ್ಯಾಗ್ನ ಧ್ವನಿಯಾಧಾರಿತ ತಂತ್ರಜ್ಞಾನದಲ್ಲಿ ಇದಾವುದರ ಅಗತ್ಯ ಇರುವುದಿಲ್ಲ. ನಿಮ್ಮ ಯಾವುದೇ ಮೊಬೈಲ್ ಮೂಲಕ, ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾಯಿಸಬಹುದು.
ಸೌಂಡ್ವೇವ್ ಟೆಕ್ನಾಲಜಿ
ಇನ್ಫೋಸಿಸ್ನಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಅಭಿಷೇಕ್ ಕಂಪನಿಯಿಂದ ಹೊರಬಂದು ಇಂತಹ ಒಂದು ವಿಭಿನ್ನ ಅಪರೂಪದ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ. ಕಂಪನಿ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಇದು ಸಾಕಷ್ಟು ಜನಪ್ರಿಯವಾಗುತ್ತಿದ್ದು, ಕೇವಲ ಮೊಬೈಲ್ನಿಂದ ಹೊಮ್ಮುವ ಧ್ವನಿ ತರಂಗಗಳ ಮೂಲಕವೇ ಹಣಕಾಸು ವರ್ಗಾವಣೆಯನ್ನು ಇಲ್ಲಿ ಮಾಡಬಹುದು. ಒಟ್ಟಿನಲ್ಲಿ ನಿಮಗೆ ಇಂಟರ್ನೆಟ್ ಹಾಕಿಸಿಕೊಳ್ಳಲು ಕಷ್ಟವಾದರೆ, ನಿಮ್ಮ ಜೇಬಿನಲ್ಲಿ ಹಣ ಇಲ್ಲದೇ ಹೋದರೆ ಈ ಟೋನ್ ಟ್ಯಾಗ್ ಆ್ಯಪ್ ಇದ್ದರೆ ಸಾಕು ನಿಮಗೆ ಏನು ಬೇಕಾದರು ಕೊಳ್ಳಬಹುದು.
1. ಪ್ರಯಾಣಿಕರ ಮನ ಗೆಲ್ಲೋದಿಕ್ಕೆ ಹೊಸ ಪ್ಲಾನ್- ಬಿಎಂಟಿಸಿಯಿಂದ ಹೊಸ ಟೆಕ್ನಾಲಜಿ
2. ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಅಪ್ಪಟ ಕನ್ನಡ ರಂಗಭೂಮಿ ಪ್ರತಿಭೆ
3. 15 ಲಕ್ಷದ ನೌಕರಿ ತೊರೆದು ಹಳೆ ಸೆಲೂನ್ ಗೆ ಹೊಸ ಟಚ್ ನೀಡಿದ ಸ್ನೇಹಿತರು